Homeಮುಖಪುಟ25 ಕೋಟಿ ರೂ.ಗೆ ಪೆಗಾಸಸ್‌ ಖರೀದಿಸುವಂತೆ ನನಗೆ ಪ್ರಸ್ತಾಪ ಬಂದಿತ್ತು: ಮಮತಾ ಬ್ಯಾನರ್ಜಿ

25 ಕೋಟಿ ರೂ.ಗೆ ಪೆಗಾಸಸ್‌ ಖರೀದಿಸುವಂತೆ ನನಗೆ ಪ್ರಸ್ತಾಪ ಬಂದಿತ್ತು: ಮಮತಾ ಬ್ಯಾನರ್ಜಿ

- Advertisement -
- Advertisement -

ಇಸ್ರೇಲಿ ಮೂಲದ ಸಂಸ್ಥೆಯಾದ NSO ಗ್ರೂಪ್‌‌ನವರು ಬೇಹುಗಾರಿಕಾ ಸಾಫ್ಟ್‌ವೇರ್ ಆದ ಪೆಗಾಸಸ್ ಅನ್ನು ಖರೀದಿಸುವಂತೆ ತಮ್ಮ ಸರ್ಕಾರಕ್ಕೆ ಕೆಲವು ವರ್ಷಗಳ ಹಿಂದೆ ಪ್ರಸ್ತಾಪ ಇಟ್ಟಿದ್ದರು ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಹೇಳಿದ್ದಾರೆ. ಆದರೆ ಎನ್‌ಎಸ್‌ಒ ಗ್ರೂಪ್‌ನ ಈ ಪ್ರಸ್ತಾಪವನ್ನು ತಾನು ತಿರಸ್ಕರಿಸಿದ್ದಾಗಿ ಅವರು ಹೇಳಿದ್ದಾರೆ.

ಪಶ್ಚಿಮ ಬಂಗಾಳದ ಮುಖ್ಯಮಂತ್ರಿ, “ಎನ್‌ಎಸ್‌ಒ ತಮ್ಮ ಸಾಫ್ಟ್‌ವೇರ್ (ಪೆಗಾಸಸ್ ಸ್ಪೈವೇರ್) ಅನ್ನು ಮಾರಾಟ ಮಾಡಲು ನಮ್ಮ ಪೊಲೀಸ್ ಇಲಾಖೆಯನ್ನು ಸಂಪರ್ಕಿಸಿದ್ದರು. ಐದು ವರ್ಷಗಳ ಹಿಂದೆಯೇ 25 ಕೋಟಿಗೆ ಬೇಡಿಕೆ ಇಟ್ಟಿದ್ದರು. ಈ ಪ್ರಸ್ತಾಪ ನನಗೆ ಬಂದಿತ್ತು. ಆದರೆ ನಾನು ಅಂತಹ ಸಾಫ್ಟ್‌ವೇರ್‌ಗಳನ್ನು ಖರೀದಿಸಲು ಬಯಸುವುದಿಲ್ಲ ಎಂದು ಎಂದು ಹೇಳಿದೆ” ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.

ಇದನ್ನೂ ಓದಿ: ಪೆಗಾಸಸ್‌: ನ್ಯೂಯಾರ್ಕ್ ಟೈಮ್ಸ್‌ ವರದಿ ಪರಿಶೀಲಿಸುವಂತೆ ಸುಪ್ರೀಂಕೋರ್ಟ್‌‌ಗೆ ಎಡಿಟರ್ಸ್ ಗಿಲ್ಡ್‌‌ ಪತ್ರ

ಇಸ್ರೇಲಿ ಬೇಹುಗಾರಿಕಾ ಸಾಫ್ಟ್‌ವೇರ್‌ ಆಗಿರುವ ಪೆಗಾಸಸ್ ಅನ್ನು ಭಾರತದಲ್ಲಿನ ಕೆಲವು ಜನರ ಕಣ್ಗಾವಲುಗಾಗಿ ಬಳಸಲಾಗಿದೆ ಎಂದು ಆರೋಪಿಸಿ ಸುಪ್ರೀಂಕೋರ್ಟ್‌‌ಗೆ ಸಲ್ಲಿಸಲಾಗಿರುವ ಅರ್ಜಿಗಳನ್ನು ನ್ಯಾಯಾಲಯ ವಿಚಾರಣೆ ನಡೆಸುತ್ತಿರುವಾಗಲೆ ಮಮತಾ ಬ್ಯಾನರ್ಜಿ ಅವರು ಈ ಗಂಭೀರ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ.

“ದೇಶವಿರೋಧಿ ಚಟುವಟಿಕೆಗಳು ಮತ್ತು ಭದ್ರತೆಗಾಗಿ ಅವುಗಳನ್ನು ಬಳಸುವುದು ಬೇರೆಯೆ ವಿಷಯವಾಗಿದೆ. ಆದರೆ ಅದನ್ನು ರಾಜಕೀಯ ಕಾರಣಕ್ಕೆ ಬಳಸಿಕೊಳ್ಳಲಾಗುತ್ತಿದ್ದು, ಅಧಿಕಾರಿಗಳು ಮತ್ತು ನ್ಯಾಯಾಧೀಶರ ಮೇಲೆ ಬಳಸಲಾಗುತ್ತಿದೆ, ಇದು ಸ್ವೀಕಾರಾರ್ಹವಲ್ಲ” ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಇಸ್ರೇಲ್‌ನಿಂದ ಪೆಗಾಸಸ್‌ ಖರೀದಿಸಿದ್ದ ವರದಿ ಬಹಿರಂಗ; ಮೋದಿ ಸರ್ಕಾರದ ವಿರುದ್ದ ವಿಪಕ್ಷಗಳ ಕಿಡಿ!

ಪೆಗಾಸಸ್‌ನ ಸಾಲು ಎಂದರೇನು?

ಕಳೆದ ವರ್ಷ, ಅಂತರರಾಷ್ಟ್ರೀಯ ಮಾಧ್ಯಮ ಒಕ್ಕೂಟವು 300 ಕ್ಕೂ ಹೆಚ್ಚು ಭಾರತೀಯ ಮೊಬೈಲ್ ಫೋನ್ ಸಂಖ್ಯೆಗಳು ಪೆಗಾಸಸ್ ಸ್ಪೈವೇರ್ ಬಳಸಿ ಕಣ್ಗಾವಲು ಮಾಡುವ ಸಂಭಾವ್ಯ ಗುರಿಗಳ ಪಟ್ಟಿಯಲ್ಲಿವೆ ಎಂದು ವರದಿ ಮಾಡಿದೆ.

ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ, ರಾಜಕೀಯ ತಂತ್ರಜ್ಞ ಪ್ರಶಾಂತ್ ಕಿಶೋರ್ ಮತ್ತು ಇಬ್ಬರು ಕೇಂದ್ರ ಸಚಿವರ (ಅಶ್ವಿನಿ ವೈಷ್ಣವ್ ಮತ್ತು ಪ್ರಹ್ಲಾದ್ ಪಟೇಲ್) ಫೋನ್ ಸಂಖ್ಯೆಗಳು ಸೋರಿಕೆಯಾದ ಪಟ್ಟಿಯಲ್ಲಿ ಕಾಣಿಸಿಕೊಂಡಿತ್ತು.

ಆದರೆ 2021ರ ಜುಲೈನಲ್ಲಿ ಕೇಂದ್ರ ಸರ್ಕಾರವು ಈ ಬೇಹುಗಾರಿಕೆ ಆರೋಪಗಳನ್ನು ತಳ್ಳಿಹಾಕಿತ್ತು. ಐಟಿ ಸಚಿವಾಲಯವು ಯಾವುದೆ ‘ಅನಧೀಕೃತ ಅನಧಿಕೃತ ಕಣ್ಗಾವಲು ಮಾಡಲಾಗುತ್ತಿಲ್ಲ’ ಇಲ್ಲ ಎಂದು ಹೇಳಿದೆ.

ಈ ಮಧ್ಯೆ, ಇಸ್ರೇಲಿ ಮೂಲದ ಪೆಗಾಸಸ್‌ ತಯಾರಕ ಸಂಸ್ಥೆಯಾದ NSO ಗ್ರೂಪ್, ತನ್ನ ಸ್ಪೈವೇರ್ ‌ಅನ್ನು ಭಯೋತ್ಪಾದನೆ ಮತ್ತು ಸಂಘಟಿತ ಅಪರಾಧಗಳನ್ನು ಎದುರಿಸಲು ಸರ್ಕಾರಿ ಏಜೆನ್ಸಿಗಳಿಗೆ ಮಾತ್ರ ನೀಡುವುದಾಗಿ ಹೇಳಿದ್ದು, ಇದನ್ನು ತಾವು ಕಟ್ಟುನಿಟ್ಟಾಗಿ ಪಾಲಿಸುತ್ತಿರುವುದಾಗಿ ಸಮರ್ಥಿಸಿಕೊಂಡಿದೆ.

ಇದನ್ನೂ ಓದಿ: ಗೂಡಾಚರ್ಯೆಯ ಪೆಗಾಸಸ್‌‌ ಸ್ಪೈವೇರ್‌‌ಅನ್ನು ಭಾರತ ಖರೀದಿಸಿದೆ: ನ್ಯೂಯಾರ್ಕ್ ಟೈಮ್ಸ್‌ ವರದಿ 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೀಸಲಾತಿ ಹೇಳಿಕೆ: ಆಧಾರ ಸಹಿತ ಸಾಬೀತುಪಡಿಸುವಂತೆ ಪ್ರಧಾನಿ ಮೋದಿಗೆ ಸಿಎಂ ಸಿದ್ದರಾಮಯ್ಯ ಸವಾಲು

0
ಹಿಂದುಳಿದ ಜಾತಿ ಮತ್ತು ದಲಿತರ ಮೀಸಲಾತಿಯನ್ನು ಕಿತ್ತು ಮುಸ್ಲಿಮರಿಗೆ ನೀಡಲು ಕಾಂಗ್ರೆಸ್ ಹೊರಟಿದೆ ಎಂಬ ಹೇಳಿಕೆಯನ್ನು ಆಧಾರ ಸಹಿತ ಸಾಬೀತುಪಡಿಸಬೇಕು. ಇಲ್ಲದಿದ್ದರೆ ದೇಶದ ಜನರ ಕ್ಷಮೆ ಕೇಳಬೇಕು ಎಂದು ಪ್ರಧಾನಿ ನರೇಂದ್ರ ಮೋದಿಯವರಿಗೆ...