ಈ 40 ವಿಷಯಗಳನ್ನು ಮಹಿಳೆ ಹೇಳಿದರೆ ಅದನ್ನು ಎಂದು ‘ಗುಡ್‌ ನ್ಯೂಸ್‌’ ಒಪ್ಪಿಕೊಳ್ಳಿ! | Naanu Gauri
PC: stylist

ಸಾಮಾನ್ಯವಾಗಿ ಭಾರತೀಯ ಕುಟುಂಬಗಳಲ್ಲಿ ಮಹಿಳೆಯಿಂದ ಬಯಸುವ ‘ಗುಡ್‌ ನ್ಯೂಸ್‌’ ಎಂದರೆ, ತಮ್ಮ ಕುಟುಂಬದ ಮಹಿಳೆ ಗರ್ಭಿಣಿಯಾಗುತ್ತಿರುವ ಸುದ್ದಿಯಾಗಿದೆ. ಆದರೆ ಈ ಆಧುನಿಕ ಯುಗಗಳಲ್ಲಿ ಮಹಿಳೆಯ ಜಗತ್ತು ತನ್ನ ಕುಟಂಬ ಮತ್ತು ಮಕ್ಕಳು ಮಾತ್ರ ಆಗಿ ಉಳಿದಿಲ್ಲ. ಮಹಿಳೆಯ ಪ್ರಪಂಚವು ವಿಶಾಲವಾಗಿ ತೆರೆಯುತ್ತಲೆ ಇದೆ.

She The People(ಶಿ ದ ಪೀಪಲ್) ಎಂಬ ಮಹಿಳಾ ಕೇಂದ್ರಿತ ಇಂಗ್ಲಿಂಷ್‌ ವೆಬ್‌ಸೈಟ್‌, ‘ಗುಡ್‌ ನ್ಯೂಸ್‌’ ಎಂದರೆ ಏನೆಂದು ಮಹಿಳೆಯರೊಂದಿಗೆ ಕೇಳಿದೆ. ಅವರ ಪ್ರಶ್ನೆಗೆ ಬಂದ ಅದ್ಬುತ ಉತ್ತರಗಳನ್ನು ಅದು 40 ಅಂಶಗಳಾಗಿ ನೀಡಿದ್ದು, ಈ ವಿಷಯಗಳನ್ನೂ ಸಮಾಜ ಮಹಿಳೆಯರಿಂದ ಬರುವ ‘ಗುಡ್‌ ನ್ಯೂಸ್‌’ ಎಂದು ಸ್ವೀಕರಿಸಲು ಪ್ರಾರಂಭಿಸಬೇಕು ಎಂದು ಅದು ಹೇಳಿದೆ. ವೆಬ್‌ಸೈಟ್‌ಗೆ ಬಂದ ಉತ್ತರಗಳು ನಾನುಗೌರಿ.ಕಾಂ ಓದುಗರಿಗಾಗಿ ಇಲ್ಲಿ ನೀಡುತ್ತಿದ್ದೇವೆ.

 1. ಕೊನೆಗೂ ವಿಚ್ಛೇದನ ಪಡೆಯುತ್ತಿದ್ದೇನೆ ಮತ್ತು ಇಷ್ಟವಿಲ್ಲದ ವಿವಾಹದಿಂದ ಬಿಡುಗಡೆ ಹೊಂದಿದ್ದೇನೆ.
 2. ನನ್ನ ಆಯ್ಕೆಯ ವ್ಯಕ್ತಿಯೊಂದಿಗೆ ಮದುವೆಯಾಗುತ್ತಿದ್ದೇನೆ.
 3. ನನಗೆ ನನ್ನ ಕನಸಿನ ಕೆಲಸ ಸಿಕ್ಕಿತು.
 4. ನಾನು ಬಯಸಿದಷ್ಟು ಸಂಬಳ ಏರಿಕೆಯಾಯಿತು.
 5. ಕೆಲಸ ಇಷ್ಟ ಇಲ್ಲದಿದ್ದರಿಂದ ಅದನ್ನು ತ್ಯಜಿಸಿದೆ.
 6. ನಾನು ಗರ್ಭಿಣಿಯಾಗಿಲ್ಲ.
 7. ನಾನು ಗರ್ಭಿಣಿ.
 8. ನನ್ನ ಸ್ನೇಹಿತರೊಂದಿಗೆ ಪ್ರವಾಸಕ್ಕೆ ತೆರಳುತ್ತಿದ್ದೇನೆ.
 9. ಪರೀಕ್ಷೆಯಲ್ಲಿ ಉತ್ತೀರ್ಣಳಾದೆ.
 10. ಉನ್ನತ ಅಧ್ಯಯನಕ್ಕಾಗಿ ನಾನು ವಿದೇಶಕ್ಕೆ ಹೋಗುತ್ತಿದ್ದೇನೆ.
  ಇದನ್ನೂ ಓದಿ: ಆಧುನಿಕ ಮಹಿಳೆಯರು ಜನ್ಮ ನೀಡಲು ಬಯಸುತ್ತಿಲ್ಲ, ಇದು ಒಳ್ಳೆಯದಲ್ಲ: ಸಚಿವ ಸುಧಾಕರ್‌ ವಿವಾದಾತ್ಮಕ ಹೇಳಿಕೆ
 11. ಇಷ್ಟವಿಲ್ಲದೆ ನನ್ನ ಸಂಗಾತಿಯೊಂದಿಗೆ ನಾನು ಬ್ರೇಕ್‌ ಅಪ್ ಮಾಡಿಕೊಂಡೆ.
 12. ನನ್ನ ಜೀವನದ ಪ್ರೀತಿಯ ವ್ಯಕ್ತಿಯನ್ನು ಕಂಡುಕೊಂಡೆ.
 13. ನಾಯಿಯನ್ನು ದತ್ತು ತೆಗೆದುಕೊಂಡೆ.
 14. ನಾನು ಮನೆಯನ್ನು ಖರೀದಿಸಿದೆ.
 15. ನಾನು ಪ್ರೀತಿಸುವ ವ್ಯಕ್ತಿಗೆ ನಾನು ಪ್ರಪೋಸ್‌ ಮಾಡಿದೆ.
 16. ನಾನು ಪ್ರೀತಿಸುವ ವ್ಯಕ್ತಿ ನನಗೆ ಪ್ರಪೋಸ್ ಮಾಡಿದ.
 17. ನನಗಾಗಿ ಒಂದು ಕಾರನ್ನು ಖರೀದಿಸಿದೆ.
 18. ಮಗುವನ್ನು ದತ್ತು ತೆಗೆದುಕೊಳ್ಳುತ್ತಿದ್ದೇನೆ.
 19. ಅಡುಗೆ ಮಾಡುವುದನ್ನು ಕಲಿತೆ.
 20. ನನಗೋಸ್ಕರ ನನ್ನ ಕುಟುಂಬದ ಎದುರು ನಿಲ್ಲಬಲ್ಲೆ.
  ಇದನ್ನೂ ಓದಿ: ಮುಂದಿನ ಚುನಾವಣೆಯಲ್ಲಿ ಮಹಿಳೆಯರಿಗೆ 30-35 ಸ್ಥಾನ ಮೀಸಲು: ಎಚ್.ಡಿ.ಕುಮಾರಸ್ವಾಮಿ
 21. ನನ್ನ ಮೊದಲ ಪುಸ್ತಕ ಬರೆಯಲು ಆರಂಭಿಸಿದೆ.
 22. ನನ್ನ ಮೊದಲ ಉದ್ಯೋಗದ ಸಂದರ್ಶನಕ್ಕೆ ಹೋಗುತ್ತಿದ್ದೇನೆ.
 23. ಕೊನೆಗೂ ನನ್ನನ್ನು ನಾನು ಪ್ರೀತಿಸಲು ಕಲಿಯುತ್ತಿದ್ದೇನೆ.
 24. ನಾನು ಎಂದಿಗೂ ಮದುವೆಯಾಗುವುದಿಲ್ಲ ಎಂಬ ನಿರ್ಧಾರವನ್ನು ನನ್ನ ಪೋಷಕರು ಒಪ್ಪಿಕೊಂಡಿದ್ದಾರೆ.
 25. ಹೊಸ ಭಾಷೆಯನ್ನು ಕಲಿಯಲು ಆರಂಭಿಸಿದೆ.
 26. ನನಗೆ ಕಿರುಕುಳ ನೀಡಿದ ವ್ಯಕ್ತಿಗೆ ನಾನು ತಕ್ಕ ಪಾಠ ಕಲಿಸಿದೆ.
 27. ಪ್ರತಿದಿನ ಹೆಚ್ಚು ಹೆಚ್ಚು ಪಾಸಿಟಿವ್‌ ಆಗುತ್ತಿದ್ದೇನೆ.
 28. ನಾನು ಜೀವನದಲ್ಲಿ ಏನು ಮಾಡಬೇಕೆಂದು ಯೋಚಿಸಲು ವಿರಾಮ ತೆಗೆದುಕೊಳ್ಳುತ್ತಿದ್ದೇನೆ.
 29. ಮಕ್ಕಳನ್ನು ಬೆಳೆಸಲು ನಾನು ನನ್ನ ಕೆಲಸವನ್ನು ಬಿಟ್ಟೆ.
 30. ನಾನು ಅವಿವಾಹಿತಳಾಗಿದ್ದೇನೆ, ಯಾಕೆಂದರೆ ನನಗೆ ಸರಿಯಾದ ವ್ಯಕ್ತಿ ಸಿಗಲಿಲ್ಲ.
  ಇದನ್ನೂ ಓದಿ: ಸುಪ್ರೀಂ ತೀರ್ಪು ಎಫೆಕ್ಟ್‌‌: ಅವಿವಾಹಿತ ಮಹಿಳೆಯರಿಗೆ ರಾಷ್ಟ್ರೀಯ ರಕ್ಷಣಾ, ನೌಕಾ ಅಕಾಡೆಮಿ ಪರೀಕ್ಷೆಗೆ ಯುಪಿಎಸ್‌ಸಿ ಅನುಮತಿ
 31. ನನ್ನ ಮೊದಲ ಸಂಬಳವನ್ನು ಪಡೆದುಕೊಂಡೆ.
 32. ನನ್ನ ಕುಟುಂಬ ನಾನು ಮತ್ತು ನನ್ನ ಸಂಗಾತಿ ಮಾತ್ರ.
 33. ನನ್ನ ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ನಿಭಾಯಿಸಲು ನಾನು ನನ್ನ ಅತ್ಯುತ್ತಮ ಪ್ರಯತ್ನ ಮಾಡುತ್ತಿದ್ದೇನೆ.
 34. ನಾನು ಕೊನೆಗೂ ವೈದ್ಯನನ್ನು ಭೇಟಿಯಾಗುತ್ತಿದ್ದೇನೆ.
 35. ನನ್ನ ಹೆತ್ತವರ ಬಳಿ ನಾನು ಸಲಿಂಗಕಾಮಿ ಎಂದು ಹೇಳಿದೆ.
 36. ಹೌದು, ನನಗೆ ಲೈಂಗಿಕ ಆಸಕ್ತಿ ಇಲ್ಲ ಮತ್ತು ನಾನು ಅದರ ಬಗ್ಗೆ ನಾಚಿಕೆಪಡುವುದಿಲ್ಲ.
 37. ನಾನು ಲೈಂಗಿಕಾಸಕ್ತಿ ಇಲ್ಲದ ವಿವಾಹದಿಂದ ಹೊರಗಿದ್ದೇನೆ.
 38. ನನ್ನ ‘ಪ್ಯಾಷನ್‌’(passion)ಗಾಗಿ ನನ್ನ ಕೆಲಸವನ್ನು ತ್ಯಜಿಸಿದೆ.
 39. ನಾನು ಶೀಘ್ರದಲ್ಲೇ ನನ್ನ ಸ್ವಂತ ವ್ಯವಹಾರವನ್ನು ಪ್ರಾರಂಭಿಸುತ್ತೇನೆ.
 40. ನಾನು ಸ್ಟೇಜ್ ಫಿಯರ್‌ನಿಂದ(stage fear) ಹೊರಬಂದೆ.

ಇದನ್ನೂ ಓದಿ: ಅಲ್ಬೇನಿಯಾ ದಾಖಲೆ – ದೇಶದ ಸಚಿವ ಸಂಪುಟದಲ್ಲಿ 70.5% ಮಹಿಳೆಯರು!

LEAVE A REPLY

Please enter your comment!
Please enter your name here