ನೋಟು ಅಮಾನ್ಯೀಕರಣದ ಉದ್ದೇಶ ದೊಡ್ಡ ಡಿಫಾಲ್ಟರ್‌ಗಳ ಸಾಲ ಮನ್ನಾ: ಕಾಂಗ್ರೆಸ್ ಟೀಕೆ

ನೋಟು ಅಮಾನ್ಯೀಕರಣದ ಉತ್ತಮ ತೆರಿಗೆ ಸಂಗ್ರಹ ಮತ್ತು ಡಿಜಿಟಲ್ ಆರ್ಥಿಕತೆಯತ್ತ ಸಾಗಲು ಕಾರಣವಾಗಿದೆ ಎಂದು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.

ಸರಣಿ ಟ್ವೀಟ್‌ಗಳಲ್ಲಿ ನೋಟು ಅಮಾನ್ಯೀಕರಣದ ಕುರಿತು ಹೇಳಿರುವ ಅವರು “ಭಾರತವನ್ನು ಭ್ರಷ್ಟಾಚಾರದಿಂದ ಮುಕ್ತಗೊಳಿಸುವ ಭರವಸೆಯನ್ನು ಈಡೇರಿಸಲು, ಮೋದಿ ಸರ್ಕಾರವು ನಾಲ್ಕು ವರ್ಷಗಳ ಹಿಂದೆ ನವೆಂಬರ್ 8ರಂದು ನೋಟು ಅಮಾನ್ಯೀಕರಣವನ್ನು ಜಾರಿಗೆ ತಂದಿತು. ಇದರಿಂದ ಕಪ್ಪು ಹಣದ ಮೇಲೆ ಅಭೂತಪೂರ್ವ ದಾಳಿ ನಡೆದಿದೆ. ಈ ಕ್ರಮವು ಉತ್ತಮ ತೆರಿಗೆ ಸಂಗ್ರಹಣೆ ಮತ್ತು ಡಿಜಿಟಲ್ ಆರ್ಥಿಕತೆಯತ್ತ ಸಾಗುವುದಕ್ಕೆ ಕಾರಣವಾಯಿತು” ಎಂದು ಹೇಳಿದ್ದಾರೆ.

ಇದನ್ನೂ ಓದಿ: ಮೋದಿ ಘೋರವಾಗಿ ಸಾಯುತ್ತಾರೆ; ಕರ್ನಾಟಕ ವಿಭಜನೆಯಾತ್ತದೆ: ಬ್ರಹ್ಮಾಂಡ ಗುರೂಜಿ

“ನೋಟು ಅಮಾನ್ಯೀಕರಣದ ನಂತರ ಮೊದಲ ನಾಲ್ಕು ತಿಂಗಳಲ್ಲಿ 900 ಕೋಟಿ ರೂಪಾಯಿ ಬಹಿರಂಗಪಡಿಸದ ಆದಾಯವನ್ನು ವಶಪಡಿಸಿಕೊಳ್ಳಲಾಗಿದೆ. ಕಳೆದ ಮೂರು ವರ್ಷಗಳಲ್ಲಿ 3,950 ಕೋಟಿ ರೂ.ಗಳ ಆಸ್ತಿ ವಶಪಡಿಸಿಕೊಳ್ಳಲಾಗಿದೆ. ನೋಟು ಅಮಾನ್ಯೀಕರಣದ ನಂತರದ ಸಮೀಕ್ಷೆಗಳು ಹಲವಾರು ಕೋಟಿ ಮೌಲ್ಯದ ಬಹಿರಂಗಪಡಿಸದ ಆದಾಯವನ್ನು ಕಂಡುಹಿಡಿಯಲು ಕಾರಣವಾದರೆ, ಆಪರೇಷನ್ ಕ್ಲೀನ್ ಮನಿ ಆರ್ಥಿಕತೆಗೆ ಸಹಕಾರಿಯಾಯಿತು” ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ‘ರಾಜ್ಯದಲ್ಲಿ ಲವ್ ಜಿಹಾದ್ ಕಾನೂನು ತರಲು ಸಾಧ್ಯವಿಲ್ಲ’- ಸಿದ್ದರಾಮಯ್ಯ

“ನೋಟು ಅಮಾನ್ಯೀಕರಣ ಪಾರದರ್ಶಕತೆಯನ್ನು ತಂದುಕೊಟ್ಟಿದೆ ಮತ್ತು ತೆರಿಗೆ ಆಧಾಯವನ್ನು ವಿಸ್ತರಿಸಿದೆ. ಇದು ನಕಲಿ ಕರೆನ್ಸಿಯನ್ನು ನಿಗ್ರಹಿದೆ” ಎಂದು ಮತ್ತೊಂದು ಟ್ವೀಟ್ ನಲ್ಲಿ ಹೇಳಿದ್ದಾರೆ.

ಈ ನಡುವೆ ಕಾಂಗ್ರೆಸ್ ಸಾಮಾಜಿಕ ಮಾಧ್ಯಮ ಅಭಿಯಾನವನ್ನು #SpeakUpAgainstDeMoDisaster ಅನ್ನು ಪ್ರಾರಂಭಿಸಿದೆ. ಪಕ್ಷದ ಸಂಸದ ರಾಹುಲ್ ಗಾಂಧಿ, “ದೊಡ್ಡ ಡೀಫಾಲ್ಟರ್ಗಳ ಸಾಲವನ್ನು ಮನ್ನಾ ಮಾಡುವುದು ನೋಟು ಅಮಾನ್ಯೀಕರಣದ ಮುಖ್ಯ ಉದ್ದೇಶವಾಗಿದೆ” ಎಂದು ಆರೋಪಿಸಿದರು.

ಇದನ್ನೂ ಓದಿ: ವಿದ್ಯುತ್ ಖರೀದಿ ಕಸರತ್ತಿನ ಹಿಂದೆ ಭ್ರಷ್ಟಾಚಾರದ ವಾಸನೆ: ಸಿದ್ದರಾಮಯ್ಯ ಆರೋಪ

ನೋಟು ಅಮಾನ್ಯೀಕರಣ ಕ್ರಮದಿಂದಾಗಿ ಜಿಡಿಪಿ ಬೆಳವಣಿಗೆಯ ದರವು ಶೇಕಡಾ 2.2 ರಷ್ಟು ಕಡಿಮೆಯಾಗಿದೆ. ಉದ್ಯೋಗವು ಶೇಕಡಾ 3 ರಷ್ಟು ಕಡಿಮೆಯಾಗಿದೆ ಎಂದು ಕಾಂಗ್ರೆಸ್ ಪಕ್ಷ ಹೇಳಿದೆ.

2016 ರ ನವೆಂಬರ್ 8ರಂದು ನರೇಂದ್ರ ಮೋದಿ ನೇತೃತ್ವದ ಸರ್ಕಾರವು 500 ಮತ್ತು 1,000 ರೂ.ಗಳ ನೋಟುಗಳ ಕಾನೂನು ಸ್ಥಿತಿಯನ್ನು ರದ್ದುಗೊಳಿಸಿತು. ಇದು ಪ್ರತಿಪಕ್ಷಗಳಿಂದ ತೀವ್ರ ಟೀಕೆಗೆ ಗುರಿಯಾಗಿತ್ತು. ಈ ಕ್ರಮವು ದೇಶದ ಆರ್ಥಿಕತೆಯನ್ನು ಕೆಳಕ್ಕೆ ಇಳಿಸಿತು ಎಂದು ಹೇಳಿದರು.


ಇದನ್ನೂ ಓದಿ: ಕೊರೊನಾ ನಿಯಮ ಉಲ್ಲಂಘಿಸಿದ ರಾಜಕಾರಣಿಗಳ ಬಂಧನ ಯಾಕಿಲ್ಲ?- ರಾಜ್ಯವನ್ನು ತರಾಟೆ ಪಡೆದ ಹೈಕೋರ್ಟ್

Donate

ನ್ಯಾಯದ ಜೊತೆಗಿರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ

ಜನಪರ ಸ್ವತಂತ್ರ ಪತ್ರಿಕೋದ್ಯಮವೇ ನಮ್ಮ ಆಶಯ. ನಿಮ್ಮಗಳ ಬೆಂಬಲವೇ ನಮಗೆ ಬಲ. ನ್ಯಾಯದ ಜೊತೆಗಿರಲು ಬಯಸುವ, ಸತ್ಯಪಥವನ್ನು ತುಳಿಯಲು ಪ್ರೋತ್ಸಾಹಿಸುವವರು ಬೆಂಬಲಿಸಿ. ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ ಪಾವತಿಸಬಹುದು.
ಧನ್ಯವಾದಗಳು

Independent journalism can’t be independent without your support, contribute by clicking below.

ಪ್ರತಿವಾರದ ವಿದ್ಯಮಾನಗಳ ವಿಶ್ಲೇಷಣೆಗಳು, ಅಂಕಣಗಳು ಹಾಗೂ ವಿಶೇಷ ಬರಹಗಳನ್ನು ಓದಲು ನ್ಯಾಯಪಥ ಪತ್ರಿಕೆಗೆ ಚಂದಾದಾರರಾಗಿ. ಚಂದಾ ಹಣವನ್ನು ಪಾವತಿಸಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ.
Avatar
ಕೆ.ಇ. ಸಿದ್ದಯ್ಯ
+ posts

LEAVE A REPLY

Please enter your comment!
Please enter your name here