Homeಅಂತರಾಷ್ಟ್ರೀಯರಷ್ಯಾವನ್ನು ಖಂಡಿಸುವ ನಿರ್ಣಯದಿಂದ ಮತ್ತೆ ದೂರ ಉಳಿದ ಭಾರತ

ರಷ್ಯಾವನ್ನು ಖಂಡಿಸುವ ನಿರ್ಣಯದಿಂದ ಮತ್ತೆ ದೂರ ಉಳಿದ ಭಾರತ

- Advertisement -
- Advertisement -

ಉಕ್ರೇನ್‌ನಲ್ಲಿನ ಸಂಘರ್ಷದ ತೀವ್ರತೆಯ ಬಗ್ಗೆ ಆಳವಾದ ಕಳವಳವನ್ನು ಪುನರುಚ್ಚರಿಸಿದರೂ ಸಹ, ರಷ್ಯಾ ನಡೆಯನ್ನು ಖಂಡಿಸುವ ನಿರ್ಣಯದ ಮತದಾನದಿಂದ ಭಾರತವು ದೂರ ಉಳಿಯಿತು. ನಾಲ್ಕು ಉಕ್ರೇನಿಯನ್‌ ಪ್ರದೇಶಗಳಲ್ಲಿ ರಷ್ಯಾ ಆಯೋಜಿಸಿದ “ಅಕ್ರಮ ಜನಮತಗಣನೆ”ಯನ್ನು ಖಂಡಿಸುವ ನಿರ್ಣಯವನ್ನು ಅಂಗೀಕರಿಸುವ ಮತದಾನ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಗುರುವಾರ ನಡೆಯಿತು.

ಉಕ್ರೇನ್‌ನ ಡೊನೆಟ್ಸ್ಕ್, ಖೆರ್ಸನ್, ಲುಹಾನ್ಸ್ಕ್ ಮತ್ತು ಝಪೊರಿಝಿಯಾ ಪ್ರದೇಶಗಳ ‘‘ಅಕ್ರಮ ಸ್ವಾಧೀನಕ್ಕೆ ಪ್ರಯತ್ನಿಸಲಾಗಿದ್ದು’’ ಇದಕ್ಕೆ ಅಂತರಾಷ್ಟ್ರೀಯ ಕಾನೂನಿನಡಿಯಲ್ಲಿ ಯಾವುದೇ ಮಾನ್ಯತೆ ಇಲ್ಲ ಎಂದು ಘೋಷಿಸಿದ ನಿರ್ಣಯವನ್ನು 193 ಸದಸ್ಯರ ಸಾಮಾನ್ಯ ಸಭೆಯಲ್ಲಿ 143-5 ಮತಗಳಿಂದ ಅಂಗೀಕರಿಸಲಾಯಿತು. ಆದರೆ ಭಾರತ ಸೇರಿದಂತೆ ಮೂವತ್ತೈದು ರಾಷ್ಟ್ರಗಳು ಮತದಾನದಿಂದ ದೂರ ಉಳಿದವು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಮತದಾನದಿಂದ ದೂರ ಉಳಿಯುವ ಬಗ್ಗೆ ವಿವರಣೆ ನೀಡಿದ ವಿಶ್ವಸಂಸ್ಥೆಯ ಭಾರತದ ಖಾಯಂ ಪ್ರತಿನಿಧಿ ರುಚಿರಾ ಕಾಂಬೋಜ್,“ನಮ್ಮ ಉತ್ತಮ ಚಿಂತನೆ ರಾಷ್ಟ್ರೀಯ ಸ್ಥಾನಕ್ಕೆ ಅನುಗುಣವಾಗಿದೆ. ನಿರ್ಣಯದಲ್ಲಿ ಇತರ ಸಮಸ್ಯೆಗಳಿವೆ, ಅವುಗಳಲ್ಲಿ ಕೆಲವನ್ನು ನಿರ್ಣಯದಲ್ಲಿ ಸಮರ್ಪಕವಾಗಿ ತಿಳಿಸಲಾಗಿಲ್ಲ” ಎಂದು ಹೇಳಿದ್ದಾರೆ.

ಇದನ್ನೂ ಓದಿ: ಉಕ್ರೇನ್ ನಿರಾಶ್ರಿತ ಮಕ್ಕಳ ನೆರವಿಗೆ ನೊಬೆಲ್ ಪ್ರಶಸ್ತಿ ಹರಾಜಿಗಿಟ್ಟ ರಷ್ಯಾ ಪತ್ರಕರ್ತ

“ಇದು ಯುದ್ಧದ ಯುಗವಾಗಲು ಸಾಧ್ಯವಿಲ್ಲ ಎಂದು ನನ್ನ ಪ್ರಧಾನಿ ನಿಸ್ಸಂದಿಗ್ಧವಾಗಿ ಹೇಳಿದ್ದಾರೆ. ಮಾತುಕತೆ ಮತ್ತು ರಾಜತಾಂತ್ರಿಕತೆಯ ಮೂಲಕ ಶಾಂತಿಯುತ ಪರಿಹಾರಕ್ಕಾಗಿ ಶ್ರಮಿಸುವ ಈ ದೃಢ ಸಂಕಲ್ಪದೊಂದಿಗೆ, ಭಾರತವು ದೂರವಿರಲು ನಿರ್ಧರಿಸಿದೆ” ಎಂದು ಸೆಪ್ಟೆಂಬರ್ 16 ರಂದು ಸಮರ್‌ಖಂಡ್‌ನಲ್ಲಿ ನಡೆದ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ರಷ್ಯಾಕ್ಕೆ ನೀಡಿದ ಸಂದೇಶವನ್ನು ಉಲ್ಲೇಖಿಸಿ ರುಚಿರಾ ಕಾಂಬೋಜ್ ಹೇಳಿದ್ದಾರೆ.

“ನಾಗರಿಕ ಮೂಲಸೌಕರ್ಯ ಮತ್ತು ನಾಗರಿಕರ ಸಾವುಗಳನ್ನು ಗುರಿಯಾಗಿಸುವುದು ಸೇರಿದಂತೆ ಉಕ್ರೇನ್‌ನಲ್ಲಿ ಸಂಘರ್ಷದ ಉಲ್ಬಣಕ್ಕೆ ಭಾರತವು ತೀವ್ರ ಕಳವಳ ವ್ಯಕ್ತಪಡಿಸಿದೆ. ಭಿನ್ನಾಭಿಪ್ರಾಯಗಳು ಮತ್ತು ವಿವಾದಗಳನ್ನು ಇತ್ಯರ್ಥಪಡಿಸಲು ಮಾತುಕತೆಯು ಏಕೈಕ ಉತ್ತರವಾಗಿದೆ. ಜೊತೆಗೆ ಶಾಂತಿಯ ಮಾರ್ಗಕ್ಕಾಗಿ ರಾಜತಾಂತ್ರಿಕತೆಯ ಎಲ್ಲಾ ದಾರಿಗಳನ್ನು ಮುಕ್ತವಾಗಿಡಲು ನಮಗೆ ಅಗತ್ಯವಿದೆ” ಎಂದು ಕಾಂಬೋಜ್ ಹೇಳಿದ್ದಾರೆ.

ಉಕ್ರೇನ್ ಸಂಘರ್ಷವು ಆಹಾರ ಮತ್ತು ಇಂಧನ ಭದ್ರತೆಯ ಮೇಲೆ, ವಿಶೇಷವಾಗಿ ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಹೇಗೆ ವ್ಯಾಪಕವಾದ ಪರಿಣಾಮಗಳನ್ನು ಬೀರಿದೆ ಎಂಬುದನ್ನು ಸಹ ಕಾಂಬೋಜ್ ಎತ್ತಿ ತೋರಿಸಿದ್ದಾರೆ.

ಇದನ್ನೂ ಓದಿ: ‘ಮತ್ತೊಂದು ದೊಡ್ಡ ತಪ್ಪು’: ನ್ಯಾಟೊ ಸೇರುತ್ತಿರುವ ಫಿನ್‌ಲ್ಯಾಂಡ್‌ & ಸ್ವೀಡನ್‌ಗೆ ರಷ್ಯಾ ಎಚ್ಚರಿಕೆ

ಸೆಪ್ಟೆಂಬರ್‌ನಲ್ಲಿ ನಡೆದ ಸಾಮಾನ್ಯ ಸಭೆಯ ವಾರ್ಷಿಕ ಅಧಿವೇಶನದಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಅವರು ಇತ್ತೀಚೆಗೆ ಮಾಡಿದ ಭಾಷಣವನ್ನು ಕಾಂಬೋಜ್ ಪುನರುಚ್ಚರಿಸಿ, ಭಾರತವು ಶಾಂತಿಯ ಕಡೆಯಲ್ಲಿದ್ದು, ಅಲ್ಲಿಯೆ ದೃಢವಾಗಿ ನಿಲ್ಲುತ್ತದೆ ಎಂದು ಹೇಳಿದ್ದಾರೆ.

ಕಳೆದ ತಿಂಗಳು, ರಷ್ಯಾದ ಜನಾಭಿಪ್ರಾಯ ಮತ್ತು ನಾಲ್ಕು ಉಕ್ರೇನಿಯನ್ ಪ್ರದೇಶಗಳನ್ನು ಅಮಾನ್ಯವೆಂದು ಖಂಡಿಸುವ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಕರಡು ನಿರ್ಣಯದಿಂದ ಭಾರತ ದೂರವಿತ್ತು. ರಷ್ಯಾ, ಬೆಲಾರಸ್, ಉತ್ತರ ಕೊರಿಯಾ, ಸಿರಿಯಾ ಮತ್ತು ನಿಕರಾಗುವಾ ಮಾತ್ರ ನಿರ್ಣಯದ ವಿರುದ್ಧ ಮತ ಚಲಾಯಿಸಿದವು.

ಭಾರತವಲ್ಲದೆ, ಏಷ್ಯಾದ ಹೆಚ್ಚಿನ ಸಂಖ್ಯೆಯ ದೇಶಗಳು ದೂರವಿದ್ದವು. ಅವುಗಳಲ್ಲಿ ಚೀನಾ, ಪಾಕಿಸ್ತಾನ, ಶ್ರೀಲಂಕಾ, ಥೈಲ್ಯಾಂಡ್ ಮತ್ತು ವಿಯೆಟ್ನಾಂ ಸೇರಿದ್ದವು. ಬ್ರಿಕ್ಸ್‌ನ ಯಾವುದೇ ಸದಸ್ಯರು ಪಾಶ್ಚಾತ್ಯ ದೇಶದ ಜೊತೆಗೆ ಮತ ಚಲಾಯಿಸಲಿಲ್ಲ.

ಇದನ್ನೂ ಓದಿ: ದೇಶದ ವಿರುದ್ಧ ಹಿಂಸಾಚಾರಕ್ಕೆ ಕರೆ ನೀಡಿದ ಆರೋಪ: ಇನ್‌ಸ್ಟಾಗ್ರಾಮ್‌‌ಗೆ ನಿರ್ಬಂಧ ಹೇರಿದ ರಷ್ಯಾ

ಜನಾಭಿಪ್ರಾಯ ಸಂಗ್ರಹಣೆ ಮತ್ತು ಸ್ವಾಧೀನವನ್ನು ಕಾನೂನುಬಾಹಿರವೆಂದು ಘೋಷಿಸುವುದರ ಜೊತೆಗೆ, ರಷ್ಯಾವು ತಕ್ಷಣವೇ ಉಕ್ರೇನ್‌ನ ಎಲ್ಲಾ ಭಾಗಗಳಿಂದ ತನ್ನ ಮಿಲಿಟರಿಯನ್ನು ಹಿಂತೆಗೆದುಕೊಳ್ಳಬೇಕೆಂದು ನಿರ್ಣಯವು ಒತ್ತಾಯಿಸಿತು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...