Homeಮುಖಪುಟತರಾತುರಿಯಲ್ಲಿ 'INDIA' ಸಭೆ ಕರೆದಿಲ್ಲ; ದೀದಿ ಆರೋಪಕ್ಕೆ ಸಂಜಯ್ ರಾವುತ್ ಪ್ರತಿಕ್ರಿಯೆ

ತರಾತುರಿಯಲ್ಲಿ ‘INDIA’ ಸಭೆ ಕರೆದಿಲ್ಲ; ದೀದಿ ಆರೋಪಕ್ಕೆ ಸಂಜಯ್ ರಾವುತ್ ಪ್ರತಿಕ್ರಿಯೆ

- Advertisement -
- Advertisement -

ತರಾತುರಿಯಲ್ಲಿ ‘ಇಂಡಿಯಾ’ ಮೈತ್ರಿಕೂಟದ ಸಭೆ ಕರೆದಿಲ್ಲ; ಪಂಚ ರಾಜ್ಯಗಳ ಚುನಾವಣಾ ಫಲಿತಾಂಶಗಳ ಘೋಷಣೆಗೆ ಮುಂಚೆಯೇ ಸಭೆ ನಿಗದಿಪಡಿಸಲಾಗಿತ್ತು ಎಂದು ಉದ್ಧವ್ ಠಾಕ್ರೆ ಬಣದ ಶಿವಸೇನೆ ಸಂಸದ ಸಂಜಯ್ ರಾವುತ್ ಪ್ರತಿಕ್ರಿಯೆ ನೀಡಿದ್ದಾರೆ.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ನವದೆಹಲಿ ನಿವಾಸದಲ್ಲಿ ನಾಳೆ ನಡೆಯಲಿರುವ ‘ಇಂಡಿಯಾ’ ಮೈತ್ರಿಕೂಟದ ಸಭೆ ಬಗ್ಗೆ ನನಗೆ ಮೊದಲೇ ಮಾಹಿತಿ ಸಿಕ್ಕಿಲ್ಲ, ಸಭೆಯಿಂದ ಹೊರಗುಳಿಯುವುದಾಗಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಘೋಷಿಸಿದ್ದಾರೆ. ‘ಸಭೆ ಬಗ್ಗೆ ನನಗೆ ಮುಂಚಿತವಾಗಿ ತಿಳಿಸಿಲ್ಲ’ ಎಂದು ಅವರು ಆರೋಪಿಸಿದ್ದಾರೆ.

ಈ ಬಗ್ಗೆ ಮಾತನಾಡಿರುವ ರಾವುತ್, ನಾವು ತರಾತುರಿಯಲ್ಲಿ ಸಭೆ ಕರೆದಿಲ್ಲ. ಚುನಾವಣಾ ಫಲಿತಾಂಶ ಘೋಷಣೆಗೂ ಮುನ್ನವೇ ದೆಹಲಿಯಲ್ಲಿ ಸಭೆಗೆ ಯೋಜನೆ ರೂಪಿಸಲಾಗಿತ್ತು. ಅದಕ್ಕೂ 2 ದಿನಗಳ ಮೊದಲು ಉದ್ಧವ್ ಠಾಕ್ರೆ ಜತೆ ಮಲ್ಲಿಕಾರ್ಜುನ ಖರ್ಗೆ ಮಾತನಾಡಿದ್ದಾರೆ. ಅವರೂ ನಾಳಿನ ದೆಹಲಿ ಸಭೆಯಲ್ಲಿ ಭಾಗವಹಿಸಲಿದ್ದಾರೆ’ ಎಂದು ವಿವರಿಸಿದರು.

ಈ ಬಗ್ಗೆ ಮಾತನಾಡಿರುವ ಮಮತಾ ಬ್ಯಾನರ್ಜಿ, ಸಭೆಯ ಬಗ್ಗೆ ಮೊದಲೇ ಮಾಹಿತಿ ಸಿಕ್ಕಿದ್ದಿದ್ದರೆ ನನ್ನ ಪ್ರವಾಸಗಳನ್ನು ಮರುಹೊಂದಿಸುತ್ತಿದ್ದೆ. ಮೈತ್ರಿ ಕೂಟದ ಸಭೆ ಬಗ್ಗೆ ನನಗೆ ಯಾವುದೇ ಮಾಹಿತಿ ಸಿಕ್ಕಿಲ್ಲ. ಆದ್ದರಿಂದಲೇ ನಾನು ಉತ್ತರ ಬಂಗಾಳದಲ್ಲಿ ಕಾರ್ಯಕ್ರಮ ಇಟ್ಟುಕೊಂಡಿದ್ದೇನೆ. ಮೊದಲೇ ಮಾಹಿತಿ ಸಿಕ್ಕಿದ್ದಿದ್ದರೆ ಆ ಕಾರ್ಯಕ್ರಮಗಳನ್ನು ನಿಗದಿಪಡಿಸುತ್ತಿರಲಿಲ್ಲ, ಖಂಡಿತವಾಗಿಯೂ (ಸಭೆಗೆ) ಹೋಗುತ್ತಿದ್ದೆ’ ಎಂದಿದ್ದಾರೆ.

ಮಮತಾ ಬ್ಯಾನರ್ಜಿ ಹೇಳಿಕೆಯನ್ನಿಟ್ಟುಕೊಂಡು ಇಂಡಿಯಾ ಮೈತ್ರಿ ಕೂಟವನ್ನು ಟೀಕಿಸಿರುವ ಬಂಗಾಳದ ಬಿಜೆಪಿ ಅಧ್ಯಕ್ಷ ಸುಕಾಂತ ಮಜುಂದಾರ್, ‘ಭಾರತ ಮೈತ್ರಿಕೂಟಕ್ಕೆ ಭವಿಷ್ಯವಿಲ್ಲ ಎಂದು ಮಮತಾ ಬ್ಯಾನರ್ಜಿ ಅರ್ಥಮಾಡಿಕೊಂಡಿದ್ದಾರೆ. ಅದಕ್ಕಾಗಿಯೇ ಅವರು ಸಭೆಯಿಂದ ಹೊರಗುಳಿಯುತ್ತಿದ್ದಾರೆ’ ಎಂದಿದ್ದಾರೆ.

ನಾಳೆ (ಡಿ. 6) ದೆಹಲಿಯ ಮಲ್ಲಿಕಾರ್ಜುನ ಖರ್ಗೆ ಅವರ ನಿವಾಸದಲ್ಲಿ ಸಭೆ ನಡೆಯಲಿದ್ದು, 2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಎದುರಿಸಲು ಮೈತ್ರಿ ಕೂಟದ ಎಲ್ಲ 28 ಸದಸ್ಯರು ಅಂತಿಮ ಕಾರ್ಯತಂತ್ರ ರೂಪಿಸುವ ಸಾಧ್ಯತೆಯಿದೆ ಎನ್ನಲಾಗಿದೆ. ಮುಖ್ಯವಾಗಿ, ಸೀಟು ಹಂಚಿಕೆಯ ಸುತ್ತಲೂ ಚರ್ಚೆ ನಡೆಸುವ ಸಾಧ್ಯತೆಯಿದೆ. ಇಂಡಿಯಾ ಮೈತ್ರಿ ಕೂಟವು ಇದುವರೆಗೆ ಮೂರು ಸಭೆಗಳನ್ನು ನಡೆಸಿದೆ. ಜೂನ್ 23 ರಂದು ಬಿಹಾರದ ಪಾಟ್ನಾ; ಜುಲೈ 17-18 ರಂದು ಬೆಂಗಳೂರು ಹಾಗೂ ಆಗಸ್ಟ್ 31 ಮತ್ತು ಸೆಪ್ಟೆಂಬರ್ 1 ರಂದು ಮುಂಬೈನಲ್ಲಿ ಸಭೆ ನಡೆಸಲಾಗಿತ್ತು.

ಇದನ್ನೂ ಓದಿ; ಚೌಹಾಣ್-ತೋಮರ್-ಸಿಂಧಿಯಾ: ಯಾರಾಗ್ತಾರೆ ಮಧ್ಯಪ್ರದೇಶದ ಮುಂದಿನ ಮುಖ್ಯಮಂತ್ರಿ?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಅಪಹರಣ ಆರೋಪಕ್ಕೆ ಪುರಾವೆಯಿಲ್ಲ, ರಾಜಕೀಯದ ಷಡ್ಯಂತ್ರದಿಂದ ಬಂಧನ: ಹೆಚ್.ಡಿ ರೇವಣ್ಣ

0
ಲೈಂಗಿಕ ದೌರ್ಜನ್ಯದ ಸಂತ್ರಸ್ತೆ ಎನ್ನಲಾದ ಮನೆ ಕೆಲಸದ ಮಹಿಳೆಯನ್ನು ಅಪಹರಿಸಿದ ಪ್ರಕರಣದಲ್ಲಿ ಎಸ್‌ಐಟಿಯಿಂದ ಬಂಧಿತರಾದ ಬಳಿಕ ಮೊದಲ ಬಾರಿಗೆ ಶಾಸಕ ಹೆಚ್‌.ಡಿ ರೇವಣ್ಣ ಪ್ರತಿಕ್ರಿಯೆ ನೀಡಿದ್ದಾರೆ. ಬೆಂಗಳೂರಿನ ಬೌರಿಂಗ್ ಆಸ್ಪತ್ರೆ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ...