Homeಕರ್ನಾಟಕ19 ದಿನಗಳಲ್ಲಿ ಮುರಿದು ಬಿದ್ದ ಅಂತರ್ಜಾತಿ ವಿವಾಹ : ಹುಡುಗ ಆಸ್ಪತ್ರೆಯಲ್ಲಿ, ಹುಡುಗಿಗೆ ಮತ್ತೊಂದು ಮದುವೆಗೆ...

19 ದಿನಗಳಲ್ಲಿ ಮುರಿದು ಬಿದ್ದ ಅಂತರ್ಜಾತಿ ವಿವಾಹ : ಹುಡುಗ ಆಸ್ಪತ್ರೆಯಲ್ಲಿ, ಹುಡುಗಿಗೆ ಮತ್ತೊಂದು ಮದುವೆಗೆ ಸಿದ್ಧತೆ

ಬೆಳಗ್ಗೆ ನನ್ನ ಗಂಡನನ್ನು ಕಾಪಾಡಿ ಎಂದು ಬೊಬ್ಬಿರಿಯುತ್ತಿದ್ದ ಹುಡುಗಿ ಸಂಜೆ ಅಷ್ಟೊತ್ತಿಗೆ ಆ ಹುಡುಗನೇ ಬೇಡ ಎಂದು ರೋಧಿಸತೊಡಗಿದ್ದಾಳೆ. ಇತ್ತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ, ಭಯಮಿಶ್ರಿತ ಗೊಂದಲದಲ್ಲಿದ್ದ ಹುಡುಗನ ಕಣ್ಣಂಚು ತೇವ ತೇವ.

- Advertisement -
- Advertisement -

ಗದಗ ಜಿಲ್ಲೆಯ ಲಕ್ಕುಂಡಿ ಗ್ರಾಮದಲ್ಲಿ ಕಳೆದ 20 ದಿನಗಳ ಹಿಂದೆ ಅಂತರ್ಜಾತಿ ವಿವಾಹವಾಗಿದ್ದ ಯುವಜೋಡಿಗಳ ಪ್ರಕರಣ ಸಿನಿಮಿಯ ರೀತಿಯಲ್ಲಿ ಕೊನೆಗೊಂಡಿದೆ. ಕೊನೆಗೂ ಆ ಪ್ರಕರಣದಲ್ಲಿ ಊರ ಹಿರಿಯರು ಎನಿಸಿಕೊಳ್ಳುವ ನೈತಿಕತೆಯ ವಾರಸುದಾರರು ಹುಡುಗ ಹುಡುಗಿಯನ್ನು ಬೇರ್ಪಡಿಸಿ ದುರಂತ ಅಂತ್ಯದ ಷರಾ ಬರೆದಿದ್ದಾರೆ.

ಹುಡುಗ ಗಾಣಿಗ ಸಮುದಾಯದವ. ಹುಡುಗಿ ಮಾದರ ಜಾತಿಗೆ ಸೇರಿದವಳು. ಈ ಯುವಪ್ರೇಮಿಗಳು ಕಳೆದ ಅಕ್ಟೋಬರ್ 24ರಂದು ಕಾನೂನುಬದ್ಧವಾಗಿಯೇ ರಜಿಸ್ಟರ್ ಮದುವೆಯಾಗಿದ್ದರು. ಕೇವಲ ಮದುವೆಯಾಗಿ 19 ದಿನಗಳಲ್ಲೆ ಮುರಿದು ಬಿದ್ದಿದೆ. ಮತ್ತು ಈ ಪ್ರಕರಣ ಗೊತ್ತಿದ್ದರೂ ಏನು ಮಾಡಲಿಕ್ಕಾಗದೇ  ಹಲವಾರು ಜೀವಪರ ಮನಸ್ಸುಗಳು ದಲಿತಪರ ಸಂಘಟನೆಗಳು ಏನೂ ಮಡಲಾಗದೇ ಕೈ ಚೆಲ್ಲಿ ಕುಳಿತಿವೆ.

ನಿಮ್ಮ ಮದುವೆಯನ್ನು ಮಾನ್ಯ ಮಾಡುತ್ತೇವೆ ಬನ್ನಿ ಎಂದು ಊರಿಂದ ತಪ್ಪಿಸಿಕೊಂಡು ದೂರ ಹೋಗಿದ್ದ ಯುವಪ್ರೇಮಿಗಳನ್ನು ಊರಿನ ನೈತಿಕತೆಯ ವಾರಸುದಾರರು ವಾಪಸ್ ಕರೆಸಿಕೊಂಡಿದ್ದರು. ಆದರೆ, ಆದದ್ದೇ ಬೇರೆ. ಹುಡುಗಿಯದ್ದು ಕೀಳುಜಾತಿಯಾದ್ದರಿಂದ ಹುಡುಗಿಯನ್ನು ಮರೆತುಬಿಡಬೇಕೆಂದು ಹುಡುಗನಿಗೆ ವಾರ್ನಿಂಗ್ ಮಾಡಿದ್ದಾರೆ. ಹುಡುಗ ಒಪ್ಪದಿದ್ದುದ್ದಕ್ಕೆ ಅವನನ್ನು ಮೈ ಬಾಯುವ ಹಾಗೆ ಮುಖ ಮೋತಿಯನ್ನದೇ ಬಡಿದು ಹೆದರಿಸಿದ್ದಾರೆ. ಇದು ಗೊತ್ತಾಗುತ್ತಿದ್ದಂತೆ ಕೆಲವು ದಲಿತಪರ ಹೋರಾಟಗಾರರಾದ ನಾಗಮ್ಮ, ರಮೇಶ ಕೋಳೂರು ಮತ್ತಿತರರು ಧಾವಿಸಿ ಬಂದು ಹುಡುಗನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಜೊತೆಗೆ ಎರಡು ಕಡೆಯವರನ್ನು ಪೊಲೀಸ್ ಠಾಣೆಗೆ ಕರೆದೊಯ್ದು ಪ್ರಕರಣಕ್ಕೆ ಸುಖಾಂತ್ಯ ಹಾಡಲು ನೋಡಿದ್ದಾರೆ.

ಆದರೆ, ಅಷ್ಟೊತ್ತಿಗೆಗಾಗಲೇ ನೈತಿಕ ವಾರಸುದಾರರು ಹೆದರಿಸುವಿಕೆ ಮತ್ತು ಪುಸಲಾಯಿಸುವಿಕೆ ಎಷ್ಟರಮಟ್ಟಿಗೆ ಇತ್ತೆಂದರೆ ಸಂಜೆ ಅಷ್ಟೊತ್ತಿಗೆ ನಾನು ಆ ಹುಡುಗನೊಂದಿಗೆ ಬಾಳ್ವೆ ಮಾಡಲು ಸುತಾರಂ ಇಷ್ಟವಿಲ್ಲ. ನನಗೆ ಡೈವೋರ್ಸ್ ಕೊಡಿಸಿ  ಎಂದು ಪೊಲೀಸರ ಮುಂದೆಯೇ ಹುಡುಗಿ ಉಲ್ಟಾ ಹೊಡೆದಿದ್ದಾಳೆ. “ನೀನು ಅವನನ್ನು ಬಿಟ್ಟರೆ ನಿನ್ನನ್ನು ಇವನೊಂದಿಗೆ ಮದುವೆಯ ಮಾಡುತ್ತೇವೆ ಬಿಡು” ಎಂದು ನೈತಿಕತೆಯ ವಾರಸುದಾರರು ಮೊದಲೇ ರೆಡಿ ಇಟ್ಟುಕೊಂಡಿದ್ದ ಸಜಾತಿಯ ವರನನ್ನು ಹುಡುಗಿ ಮುಂದೆ ನಿಲ್ಲಿಸಿದ್ದಾರೆ.  “ಇವನೊಂದಿಗೆ ಮದವೆ ಮಾಡುವ ಜವಾಬ್ಧಾರಿ ನಮ್ಮದು” ಎಂದು ಹುಡುಗಿಗೆ ಧೈರ್ಯ ತುಂಬಿದ್ದಾರೆ. ಕೋಲೆ ಬಸವನಂತ ಆ ಹುಡುಗ ಕೂಡ ತಲೆಯಾಡಿಸಿದ್ದಾನೆ.

ಹೀಗೆ ಸಂಜೆಯ ಹೊತ್ತಿಗೆ ಪೊಲೀಸ್ ಠಾಣೆಯಲ್ಲೆ ಸಿನಿಮಿಯ ರೀತಿಯಲ್ಲಿ ಉಲ್ಟಾ ಹೊಡೆದ ಪ್ರಕರಣ ನೋಡಿದ ಪೊಲೀಸ್ ಇನ್ಸಪೆಕ್ಟರ್ ಸಹ “ಆ ಹುಡುಗ ಹುಡುಗಿಯ ಬದುಕನ್ನು ಬಲಿಪಶು ತೊಗೊತ್ತಿದ್ದಿರಲ್ಲ ನೀವು, ನಾಚಿಕೆಯಾಗಲ್ವಾ, ಈ ಹೊಸ ಹುಡುಗ ಈ ಹುಡುಗಿಯನ್ನು ಮುಂದೆ ಚನ್ನಾಗಿ ಬಾಳಿಸದಿದ್ದರೆ, ಅನುಮಾನಪಡತೊಡಗಿದರೆ ಏನ್ ಮಾಡ್ತಿರಿ ಎಂದು ಎರಡೂ ಕಡೆಯವರನ್ನು ಹತಾಶೆಯಿಂದ ತರಾಟೆಗೆ ತೆಗೆದುಕೊಂಡಿದ್ದಾರೆ.

ಅಂತೂ ಬೆಳಗ್ಗೆ ನನ್ನ ಗಂಡನನ್ನು ಕಾಪಾಡಿ ಎಂದು ಬೊಬ್ಬಿರಿಯುತ್ತಿದ್ದ ಹುಡುಗಿ ಸಂಜೆ ಅಷ್ಟೊತ್ತಿಗೆ ಆ ಹುಡುಗನೇ ಬೇಡ ಎಂದು ರೋಧಿಸತೊಡಗಿದ್ದಾಳೆ. ಇತ್ತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ, ಭಯಮಿಶ್ರಿತ ಗೊಂದಲದಲ್ಲಿದ್ದ ಹುಡುಗನ ಕಣ್ಣಂಚು ತೇವ ತೇವ. ನನ್ನ ಹುಡುಗಿಯನ್ನು ನನಗೆ ಕೊಡಿಸಿದರೆ ಸಾಕು ಎಂದು ಆತ ಅಳತೊಡಗಿದ್ದಾನೆ.

ಗದಗ ಜಿಲ್ಲೆಯ ಲಕ್ಕಲಕಟ್ಟಿ ಗ್ರಾಮದಲ್ಲಿ ಕಳೆದ ಒಂದು ವಾರದ ಹಿಂದೆ ಅಷ್ಟೆ ಅಂತರ್ಜಾತಿ ವಿವಾಹವಾಗಿದ್ದ ಯುವ ದಂಪತಿಗಳ ಜೋಡಿ ಕೊಲೆ ನಡೆದಿತ್ತು. ಅದು ನಡೆದ ಒಂದೇ ವಾರದಲ್ಲಿ ಈಗ ಈ ಪ್ರಕರಣ ನಡೆದಿದೆ. ಹಾಗೆ ನೋಡಿದರೆ ಜಾತಿ ಗೋಡೆಯನ್ನು ಕಿತ್ತೆಸೆದು, ಧರ್ಮದ ಬೇಲಿಗೆ ಕಿವಿಗೊಡದೇ ಹಲವಾರು ಯುವ ಜೋಡಿಗಳು ಪ್ರೀತಿಸಿ ಮದುವೆಯಾಗುವ ಪ್ರಕರಣಗಳು ನಡೆಯುತ್ತಲೇ ಇರುತ್ತವೆ. ಆದರೆ, ಆ ಜೋಡಿಗಳು ನೆಮ್ಮದಿಯಿಂದ ಬಾಳುವೆ ಮಾಡುವ ವಾತಾವರಣ ಉತ್ತರ ಕರ್ನಾಟಕ ಭಾಗದಲ್ಲಿ ಕಂಡು ಬರುವುದಿಲ್ಲ. ಈ ಭಾಗದಲ್ಲಿ ದಲಿತ ಸಂಘರ್ಷ ಸಮಿತಿಗಳು ಸಹ ಅಷ್ಟೊಂದು ಸಕ್ರಿಯವಾಗಿಲ್ಲ.

ಮಾಡದ ತಪ್ಪಿಗೆ ಆತ ತನ್ನ ಹುಡುಗಿಯನ್ನು ಇನ್ನೊಂದು ಹುಡುಗನೊಂದಿಗ ಮದುವೆ ಮಾಡಿಸಲು ಖರ್ಚಿನ ಬಾಬ್ತು ಎಂದು ಮೂರು ಲಕ್ಷ ರೂಪಾಯಿ ತಪ್ಪುದಂಡ ಕೊಡಬೇಕು. ಈ ಹಣದಲ್ಲಿ ಒಂದಿಷ್ಟು ಪಾಲು ಎರಡು ಕಡೆಯ ನೈತಿಕ ವಾರಸುದಾರರಿಗೂ ಹಂಚಿಕೆಯಾಗುತ್ತದೆ ಎಂಬ ಆರೋಪವೂ ಸ್ಥಳಿಯರಿಂದ ಕೇಳಿ ಬಂದಿದೆ.

ಈ ಎರಡು ಪ್ರಕರಣಗಳ ಹಿಂದೆ ನಾವು ನಿಮ್ಮ ಹಿಂದೆ ಇದ್ದೇವೆ ಎಂದು ಧೈರ್ಯ ತುಂಬುವ, ಕರೆತಂದು ಮದುವೆ ಮಾಡಿಸುವ, ಇಂಥ ಯುವಜೋಡಿಗಳ ಮೇಲೆ ಹಲ್ಲೆಗಳು ನಡೆದಾಗ ಬೀದಿಗಿಳಿದು ಪ್ರತಿಭಟನೆ ಮಾಡುವ ಸಂಘಟನೆಗಳ, ಜೀವಪರ ಮನಸ್ಸುಗಳ ಕೊರತೆ ಇದೆ. ಹೀಗಾಗಿ ಇಲ್ಲಿನ ಅಂತರ್ಜಾತಿ ವಿವಾಹಗಳು ದುರಂತ ಅಂತ್ಯ ಕಾಣುತ್ತವೆ ಎಂದು ಗದಗದ ದಲಿತಪರ ಹೋರಾಟಗಾರ ರಮೇಶ ಕೋಳೂರು ನೋವಿನಿಂದ ಹೇಳುತ್ತಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಜಾತೀಯತೆ ಎನ್ನುವುದು ಮೇಲ್ಜಾತಿಯ ಜನರಲ್ಲಿ ಮಾತ್ರವಲ್ಲ, ಬಹುತೇಕ ಜಾತಿಗಳಲ್ಲಿ ತುಂಬಿ ತುಳುಕುತ್ತಿದೆ. ಇದೇ ಈ ದೇಶದ ದುರಂತ.

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...