Homeಅಂತರಾಷ್ಟ್ರೀಯVIVO ಬದಲು ಪತಂಜಲಿಯಿಂದ ಐಪಿಎಲ್ ಪ್ರಾಯೋಜಕತ್ವ ಸಾಧ್ಯತೆ!

VIVO ಬದಲು ಪತಂಜಲಿಯಿಂದ ಐಪಿಎಲ್ ಪ್ರಾಯೋಜಕತ್ವ ಸಾಧ್ಯತೆ!

ಹರಿದ್ವಾರ ಮೂಲದ ಪತಂಜಲಿ ಸಮೂಹವು ಸುಮಾರು 10,500 ಕೋಟಿ ರೂ. ವಹಿವಾಟು ಹೊಂದಿದೆ. ಪತಂಜಲಿ ಆಯುರ್ವೇದವು 2018-19ನೇ ಹಣಕಾಸು ವರ್ಷದಲ್ಲಿ 8,329 ಕೋಟಿ ರೂ. ಆದಾಯವನ್ನು ಗಳಿಸಿತ್ತು.

- Advertisement -
- Advertisement -

ಅಕ್ಟೋಬರ್ ನವೆಂಬರ್‌ನಲ್ಲಿ ನಡೆಯಲಿರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಶೀರ್ಷಿಕೆ ಪ್ರಾಯೋಜಕತ್ವಕ್ಕೆ ಬಿಡ್ ಮಾಡಲು ಬಾಬಾ ರಾಮದೇವ್ ಅವರ ಪತಂಜಲಿ ಆಯುರ್ವೇದ ಕಂಪನಿ ಚಿಂತನೆ ನಡೆಸಿದೆ ಎಂದು ಕಂಪನಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಚೀನಾದ ಮೊಬೈಲ್ ತಯಾರಕ ವಿವೊ ಕಂಪನಿ ಪ್ರಾಯೋಜಕತ್ವದಿಂದ ಹೊರಬರಲು ನಿರ್ಧರಿಸಿದ ನಂತರ ಹೊಸದಾಗಿ ಐಪಿಎಲ್‌ನ ಶೀರ್ಷಿಕೆ ಪ್ರಾಯೋಜಕತ್ವಕ್ಕೆ ಬಿಡ್‌ ಕರೆಯಲಾಗುತ್ತದೆ.

ತನ್ನ ಆಯುರ್ವೇದ ಮೂಲದ ಎಫ್‌ಎಂಸಿಜಿ ಉತ್ಪನ್ನಗಳಿಗೆ ರಫ್ತು ಮಾಡುವತ್ತ ಗಮನ ಹರಿಸಿರುವ ಪತಂಜಲಿ, ಐಪಿಲ್ ಟೈಟಲ್ ಪ್ರಾಯೋಜಕತ್ವ ವಹಿಸಿಕೊಂಡಲ್ಲಿ ಜಾಗತಿಕವಾಗಿ ಗಮನ ಸೆಳೆಯಬಹದು ಎಂಬ ಅಂದಾಜು ಮಾಡಿದೆ.

ಪತಂಜಲಿ ವಕ್ತಾರ ಎಸ್ ಕೆ ತಿಜರಾವಾಲಾ ಮಾತನಾಡಿ ಟೈಟಲ್ ಪ್ರಾಯೋಜಕತ್ವ ಪಡೆಯಲು ಪ್ರಯತ್ನಿಸುತ್ತೇವೆ. ವೋಕಲ್ ಫಾರ್ ಲೋಕಲ್ ಮತ್ತು ಭಾರತೀಯ ಬ್ರಾಂಡ್ ಅನ್ನು ಜಾಗತಿಕಗೊಳಿಸುವುದಕ್ಕೆ ಇದು ಸರಿಯಾದ ವೇದಿಕೆಯಾಗಿದೆ ಎಂದು ಪಿಟಿಐಗೆ ಹೇಳಿದ್ದಾರೆ.

ಆದರೆ, ಈ ವಿಷಯದ ಬಗ್ಗೆ ಕಂಪನಿಯು ಇನ್ನೂ ಅಂತಿಮ ತೀರ್ಮಾನವನ್ನು ತೆಗೆದುಕೊಂಡಿಲ್ಲ ಎಂದು ತಿಜರಾವಾಲಾ ಹೇಳಿದ್ದಾರೆ.

ಸೆಪ್ಟೆಂಬರ್ 19 ರಿಂದ ಯುಎಇಯಲ್ಲಿ ನಡೆಯುವ 2020 ರ ಐಪಿಎಲ್‌ಗಾಗಿ ತಮ್ಮ ಪಾಲುದಾರಿಕೆಯನ್ನು ಸ್ಥಗಿತಗೊಳಿಸಲು ವಿವೊ ನಿರ್ಧರಿಸಿತ್ತು.

ಚೀನಾ-ಭಾರತ ಗಡಿ ಬಿಕ್ಕಟ್ಟು ಹಿನ್ನೆಲೆಯಲ್ಲಿ ಚೀನಾದ ಉತ್ಪನ್ನಗಳನ್ನು ಬಹಿಷ್ಕರಿಸುವ ಪ್ರತಿಭಟನೆಗಳು ನಡೆದ ಹಿನ್ನೆಲೆಯಲ್ಲಿ ವಿವೊ ಹಿಂದೆ ಸರಿದಿತ್ತು.

ಶೀರ್ಷಿಕೆ ಪ್ರಾಯೋಜಕತ್ವವು ಐಪಿಎಲ್‌ನ ವಾಣಿಜ್ಯ ಆದಾಯದ ಮಹತ್ವದ ಭಾಗವಾಗಿದೆ. ವಿವೋ ಐಪಿಎಲ್ ಶೀರ್ಷಿಕೆ ಪ್ರಾಯೋಜಕತ್ವದ ಹಕ್ಕುಗಳನ್ನು 2018 ರಿಂದ 2022 ರವರೆಗೆ ಐದು ವರ್ಷಗಳ ಕಾಲ 2,190 ಕೋಟಿ ರೂ. ಕೊಟ್ಟು ಖರೀದಿತ್ತು. ಆದರೆ ತೀವ್ರ ಪ್ರತಿರೋಧ ವ್ಯಕ್ತವಾದಾಗ ಹಿಂದೆ ಸರಿಯಿತು.

ಹರಿದ್ವಾರ ಮೂಲದ ಪತಂಜಲಿ ಸಮೂಹವು ಸುಮಾರು 10,500 ಕೋಟಿ ರೂ. ವಹಿವಾಟು ಹೊಂದಿದೆ. ಪತಂಜಲಿ ಆಯುರ್ವೇದವು 2018-19ನೇ ಹಣಕಾಸು ವರ್ಷದಲ್ಲಿ 8,329 ಕೋಟಿ ರೂ. ಆದಾಯವನ್ನು ಗಳಿಸಿತ್ತು.


ಇದನ್ನು ಓದಿ: ಐಪಿಎಲ್‌ನ ಚೀನಾದ ಪ್ರಾಯೋಜಕತ್ವವನ್ನು ಮರುಪರಿಶೀಲಿಸಿ: ಸ್ವದೇಶಿ ಜಾಗರಣ ಮಂಚ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿ ಭದ್ರಕೋಟೆ ಮಥುರಾದಲ್ಲಿ ಮುಸ್ಲಿಮರಿಗೆ ಮತದಾನ ನಿರಾಕರಣೆ?

0
ಲೋಕಸಭೆ ಚುನಾವಣೆ ಹಿನ್ನೆಲೆ ಈಗಾಗಲೇ ಎರಡು ಹಂತಗಳಲ್ಲಿ ಮತದಾನ ನಡೆದಿದೆ. ಕೆಲ ಕ್ಷೇತ್ರಗಳ ಬೂತ್‌ಗಳಲ್ಲಿ ಮತದಾನದ ದಿನ ಮತಗಟ್ಟೆಗೆ ತೆರಳಿದ್ದ ನಾಗರಿಕರಿಗೆ ತಮ್ಮ ಹೆಸರು ಪಟ್ಟಿಯಿಂದ ನಾಪತ್ತೆಯಾಗಿರುವುದು, ತಪ್ಪಾಗಿ ನಮೂದಿಸಿರುವುದು ಕಂಡುಬಂದಿದೆ. ಮಥುರಾ...