Homeಮುಖಪುಟಲಿಂಗಾಯತ ಸಸ್ಯಹಾರಿ ಧರ್ಮವೇ?-ಬಾಲಾಜಿ ಕುಂಬಾರ

ಲಿಂಗಾಯತ ಸಸ್ಯಹಾರಿ ಧರ್ಮವೇ?-ಬಾಲಾಜಿ ಕುಂಬಾರ

- Advertisement -
- Advertisement -

  • ಬಾಲಾಜಿ ಕುಂಬಾರ,ಬೀದರ
  • ರಾಜ್ಯದ ಶಾಲಾ ಕಾಲೇಜಿನ ಬಹುತೇಕ ಹಾಸ್ಟೇಲ್ ಮಕ್ಕಳಿಗೆ, ಗರ್ಭಿಣಿಯರಿಗೆ, ಅಂಗನವಾಡಿ ಮಕ್ಕಳಿಗೆ ಮೊಟ್ಟೆ ಹಾಗೂ ಬಾಳೆಹಣ್ಣು ಜೊತೆಗೆ ಇತರೆ ಪೌಷ್ಟಿಕಾಂಶದ ಕಾಳುಗಳನ್ನೂ ಕೊಡುವುದು ಮೊದಲಿನಿಂದಲೂ ಜಾರಿಯಲ್ಲಿದೆ. ಆದರೆ ಅದನ್ನು ಯಾವತ್ತೂ ಯಾರೂ ವಿರೋಧ ಮಾಡಲಿಲ್ಲ, ಆದರೆ ಈಗ ಸರ್ಕಾರ ಹೈದರಾಬಾದ್‌ ಕರ್ನಾಟಕ ಭಾಗದ ಶಾಲಾ ಮಕ್ಕಳಿಗೆ (ವಾರದಲ್ಲಿ ಮೂರು ದಿನ) ಮೊಟ್ಟೆ ಕೊಡಬೇಕೆಂದು ಜಾರಿಗೊಳಿಸಿದ “ಮೊಟ್ಟೆ ಯೋಜನೆ” ಮೇಲೆ ಕೆಲವು ಸಂಘಟನೆ, ಮಠಾಧೀಶರ ಕಣ್ಣು ಬಿದ್ದಿದೆ. ಮೊಟ್ಟೆ ವಿರುದ್ಧ ಇಷ್ಟೊಂದು ವ್ಯಾಪಕವಾಗಿ ಮೊಟ್ಟೆ ಚಳವಳಿ ಆರಂಭಿಸಲು ಉದ್ದೇಶ ಏನಿರಬಹುದು ಅರ್ಥವಾಗುತ್ತಿಲ್ಲ. ಇದು ಅಷ್ಟೇ ವಿಚಿತ್ರವೂ….ಹಾಸ್ಯಾಸ್ಪದಕ್ಕೂ ಕಾರಣವಾಗಿದೆ.

    ಹೌದು, ನಾನು ಮೊಟ್ಟೆ ತಿನ್ನುತ್ತೇನೆ, ಆದರೆ ನಾನು ಇಲ್ಲಿಯವರೆಗೆ ನಾನು ಯಾವುದೇ, ಮಾಂಸ ಸೇವಿಸಲಿಲ್ಲ (ನಮ್ಮ ಕುಟುಂಬವೂ ಸಸ್ಯಹಾರಿ). ಆದರೆ ನಾನು ಮಾಂಸಹಾರಿಗಳನ್ನು ಎಂದಿಗೂ ತಿರಸ್ಕಾರದಿಂದ ನೋಡಲಿಲ್ಲ. ಅವರು ನನ್ನೆದುರಿಗೆ ಕುಳಿತು ಮಾಂಸ ತಿಂದರೂ ನನಗ್ಯಾವ ತೊಂದರೆಯೂ ಆಗಲ್ಲ. ಅವರು ‘ ಮಾಂಸ ತಿನ್ನಿ’ ಎಂದು ನನಗೆ ಒತ್ತಾಯ ಮಾಡಲ್ಲ. ನೀವು ‘ಮಾಂಸ ಬಿಡಿ’ ಎಂದು ನಾನು ಆಗ್ರಹಿಸುವುದಿಲ್ಲ. ಆಹಾರ ಅವರವರ ವೈಯುಕ್ತಿಕ ಹಕ್ಕು, ಆದರೆ ಇದೇ ತಿನ್ನಿ, ಇದು ಬಿಡಿ ಎಂದು ಪ್ರಶ್ನಿಸುವ, ಹೇರುವ, ವಿರೋಧಿಸುವ ಹಕ್ಕು ಯಾರಿಗೂ ಇಲ್ಲ ಎಂದು ನಂಬಿರುವನು ನಾನು.

    ಇದನ್ನೂ ಓದಿ:ಮಾಂಸಾಹಾರಿ ಸಮುದಾಯಗಳ ರಾಕ್ಶಸೀಕರಣ ನಿಲ್ಲಲಿ

    ಆಹಾರದ ಕುರಿತು ಕಟ್ಟುಪಾಡು ಹೊರಡಿಸಿದ ಯಾವ ಧರ್ಮಗಳು ವ್ಯಾಪಕವಾಗಿ ಬೆಳೆಯಲು ಸಾಧ್ಯವಿಲ್ಲ. ಲಿಂಗಾಯತ ಕೂಡ ಅಷ್ಟೇ, ಕಳ್ಳರನ್ನು, ಸುಳ್ಳರನ್ನು ವೇಶ್ಯೆಯರನ್ನು, ಹೆಂಡ ಮಾರುವರನ್ನು ಸೇರಿ ಇನ್ನಿತರ ಹಲವರನ್ನು ಲಿಂಗಾಯತರನ್ನಾಗಿಸಿ, ಒಬ್ಬ ಪ್ರಜ್ಞಾವಂತ ಮನುಷ್ಯರಾಗಿ ಬದುಕುವಂತೆ ಕಲಿಸಿಕೊಟ್ಟ ಬಸವಣ್ಣ ಹಾಗೂ ಸಮಕಾಲೀನ ಶರಣರ ಮಹೋನ್ನತ ತತ್ವ ಸಿದ್ಧಾಂತದ ಆಶಯಗಳು ಇಂದು ಮತ್ತೆ ಮುನ್ನೆಲೆಗೆ ಬರಬೇಕಾಗಿದೆ. ಆದರೆ ಅವೆಲ್ಲವೂ ಇಂದು ಜಾತಿಯತೆ ದೃಷ್ಟಿಕೋನದಿಂದ ಅಳೆದು – ತೂಗಿ ಇವ್ರು ಲಿಂಗಾಯತರು ಎಂದು ಹೇಳುವ ಪರಿಸ್ಥಿತಿ ನಿರ್ಮಾಣವಾಗಿರುವುದು ದೊಡ್ಡ ದುರಂತ ಅನ್ನಬಹುದು.

    ಮಾಂಸಹಾರಿಗಳು ಕನಿಷ್ಟರು, ಸಸ್ಯಹಾರಿಗಳು ಶ್ರೇಷ್ಠರು ಎಂದು ವಿಂಗಡಿಸುವುದು ಕಂಡರೆ ಇದು ಜಾತಿಯತೆಯ ಭಾಗವೇ ಎಂದೆನಿಸುತ್ತದೆ. ಎಲ್ಲಾ ಲಿಂಗಾಯತರು ಸಸ್ಯಹಾರಿಗಳಲ್ಲ, ಸಸ್ಯಹಾರಿಗಳು ಎಲ್ಲರೂ ಲಿಂಗಾಯತರಲ್ಲ, ಇದರೊಳಗೆ ಮಾಂಸಹಾರಿ ಲಿಂಗಾಯತರೂ ಇದ್ದಾರೆ. ಅಷ್ಟೇ ಯಾಕೆ ಶುದ್ದ ಮಾಂಸಹಾರಿಗಳೂ ಕೂಡ ಬಸವತತ್ವವನ್ನು ಅತಿಯಾಗಿ ಹಚ್ಚಿಕೊಂಡು ಬಸವಾದಿ ಶರಣರನ್ನೇ ಉಸಿರಾಗಿಸಿಕೊಂಡು ಬದುಕುವ ಅದೆಷ್ಟೋ ಕುಟುಂಬಗಳು, ಸಮುದಾಯವೇ ನಮ್ಮಲ್ಲಿದೆ. ಬಹುತೇಕ ಸಸ್ಯಹಾರಿ, ಮಾಂಸಹಾರಿಗಳು ಬಸವಣ್ಣನವರನ್ನು ಬರೀ ಗುರುವಾಗಿ ಸ್ವೀಕರಿಸಿದ್ದಾರೆ ಹೊರತು ಅವರ್ಯಾರು ತತ್ವಕ್ಕೆ ಬದ್ಧರಲ್ಲ. ಒಟ್ಟಿನಲ್ಲಿ ಶರಣರ ಆಶಯಗಳ ವಿರೋಧ ನಡೆ.

    ಇದನ್ನೂ ಓದಿ:‘ಕೆಲವು ಜನರ ಅಹಂ ತಣಿಸಲು ಹೊರಗಡೆ ಮಾಂಸಾಹಾರ ಮಾರಾಟ ಮಾಡಬೇಡಿ ಎನ್ನುತ್ತೀರಿ’: ಚಾಟಿ ಬೀಸಿದ ಗುಜರಾತ್‌ ಹೈಕೋರ್ಟ್‌

    ಮೊಟ್ಟೆ ತಿನ್ನದ ಮಕ್ಕಳಿಗೆ ಪರ್ಯಾಯವಾಗಿ ಬಾಳೆಹಣ್ಣು ಇದೆ, ಆದರೆ ಕೆಲವರು ಮೊಟ್ಟೆ ತಿನ್ನುವರು ಮನೆಯಲ್ಲಿ ತಿಂದು ಬರಲಿ ಅಂತಾರೆ, ಇನ್ನೂ ಕೆಲವರು ಮೊಟ್ಟೆ ತಿನ್ನವರಿಗೆ ಮೊಟ್ಟೆ ಬದಲು ಹಣ ಕೊಡಿ ಅಂತಾರೆ, ಮೊಟ್ಟೆ ಬಾಳೆಹಣ್ಣು ನೀಡುವುದರಿಂದ ಭೇದಭಾವ , ಅಸಮಾನತೆ ಆಗುತ್ತೆ ಅನ್ನುವರು ಇನ್ನೂ ಒಂದಿಷ್ಟು ಮಂದಿ. ತಮ್ಮ ತಮ್ಮ ಸಮುದಾಯದಲ್ಲೇ ನಾವು ಶ್ರೇಷ್ಠರು ಅವರು ಕನಿಷ್ಟರು ಎಂದು ರಕ್ತಸಂಬಂಧ ಬೆಳೆಸಲು ಹಿಂದೇಟು ಹಾಕುವವರು, ತಳವರ್ಗ ಸಮುದಾಯವರನ್ನು ಇನ್ನೂ ಮನೆಯೊಳಗೆ ಬಿಡದೇ ಮೇಲಿಂದ ರೊಟ್ಟಿ ಕೊಡುವ ಅಸ್ಪೃಶ್ಯತೆಗಿಂತ ಮೊಟ್ಟೆ ಬಾಳೆಹಣ್ಣಿನ ನಡುವಿನ ಅಸಮಾನತೆ ದೊಡ್ಡದೇನಲ್ಲ ಬಿಡಿ.

    ನಾವು ಗಟ್ಟಿಯಾಗಿ ಮಾತನಾಡಬೇಕಾಗಿದ್ದು ಹಸಿವಿನ ಬಗ್ಗೆ, ಕ್ರೂರ ಜಾತಿಯತೆ ಬಗ್ಗೆ, ಅದನ್ನು ಬಿಟ್ಟು ಆಹಾರದ ಬಗ್ಗೆ ಅನಗತ್ಯ ವಿಷಯವಲ್ಲ. ಇದರಿಂದಾಗಿ ಲಿಂಗಾಯತ ತತ್ವವನ್ನು ಒಪ್ಪಿಕೊಂಡು, ಅಪ್ಪಿಕೊಂಡು ಸಾಧ್ಯವಾದಷ್ಟು ಮೈಗೂಡಿಸಿಕೊಂಡು ಬದುಕುವ ಮಾಂಸಪ್ರಿಯರಿಗೆ ಗೊಂದಲ ಸೃಷ್ಟಿಸಿದೆ. ಶರಣತತ್ವ ಅಂದ್ರೆ ಶುದ್ದ ಸಸ್ಯಹಾರಿ ಧರ್ಮವೇ? ಎಂಬುದು ಈಗ ಯಕ್ಷ ಪ್ರಶ್ನೆಯಾಗಿಯೇ ಕಾಡುತ್ತಿದೆ. ಲಿಂಗಾಯತ ಸಸ್ಯಹಾರಿ ಧರ್ಮವೇ ಆದರೆ ಈಗಾಗಲೇ ಲಿಂಗಾಯತದಲ್ಲಿ ಇರುವ ಮಾಂಸಹಾರಿ ಉಪಪಂಗಡದವರು ಎಲ್ಲಿ ಹೋಗಬೇಕು? ಆಹಾರದ ಕಟ್ಟುಪಾಡಿನ ಕಾರಣಕ್ಕೇ ಅವರನ್ನು ಲಿಂಗಾಯತರೆಂದು ಪರಿಗಣಿಸಬಾರದೇ?

    ಶರಣರ ಯಾರನ್ನೂ ಕೀಳಾಗಿ, ಕನಿಷ್ಟರು, ಶ್ರೇಷ್ಠರು ಭೇದಭಾವ ಮಾಡಲಿಲ್ಲ. ‘ಎನಗಿಂತ ಕಿರಿಯರಿಲ್ಲ’ ಎಂಬ ಭಾವ ಅದೆಷ್ಟು ಸರಳ..ಸುಂದರ…ಅನನ್ಯ ಅರ್ಥೈಸುತ್ತದೆ. ಯೋಚಿಸೋಣ..!!

    ಇದನ್ನೂ ಓದಿ:ಸಸ್ಯಹಾರಿಯಾಗಿದ್ದ ನಾನು ಬಾಡೂಟಕ್ಕೆ ತೆರೆದುಕೊಂಡದ್ದು ಹೀಗೆ…

    ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

    LEAVE A REPLY

    Please enter your comment!
    Please enter your name here

    - Advertisment -

    31 ವರ್ಷಗಳ ಹಳೇ ಸಾಲ ತೀರಿಸಲು 1200 ಕಿ.ಮೀ ಪ್ರಯಾಣಿಸಿದ ಕೇರಳದ ಇಸ್ಮಾಯಿಲ್

    "ನನ್ನ ಕಣ್ಣುಗಳಿಂದ ಆನಂದಬಾಷ್ಪಗಳು ಉದುರಿದವು. ನನ್ನ ಮನಸ್ಸಿಗೆ ಅದೆಷ್ಟು ನೆಮ್ಮದಿ ಸಿಕ್ಕಿತೆಂದರೆ, ಅದನ್ನು ವಿವರಿಸಲು ಪದಗಳೇ ಸಾಲದು. ಆತನಿಗೂ ಅಷ್ಟೇ ದೊಡ್ಡ ಸಮಾಧಾನ." ಹೀಗೆ ಭಾವುಕರಾಗಿ ನುಡಿಯುತ್ತಾರೆ ಮೊಹಮ್ಮದ್ ಇಸ್ಮಾಯಿಲ್. 1995ರಲ್ಲಿ ಸೌದಿ...

    ಬಂಡಾಯದ ಬಳಿಕ ಟಿಎಂಸಿಗೆ ಮತ್ತೊಂದು ಸವಾಲು : ಪಕ್ಷದ ಬ್ಯಾಂಕ್ ಖಾತೆಗಳು ಫ್ರೀಝ್

    ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ಮೂರು ಬ್ಯಾಂಕ್ ಖಾತೆಗಳಲ್ಲಿರುವ 440 ಕೋಟಿ ರೂಪಾಯಿ ಹಣವನ್ನು ಭಾಗಶಃ ಬಳಸಲು ಕಲ್ಕತ್ತಾ ಹೈಕೋರ್ಟ್ ಅನುಮತಿ ನೀಡಿದ ಮರುದಿನವೇ, ಪಶ್ಚಿಮ ಬಂಗಾಳ ಪೊಲೀಸರು...

    ಮಂದಿರ ನಿರ್ಮಾಣದ ಕ್ರೆಡಿಟ್‌ಗೆ ಇದ್ದ ಯಜಮಾನಿಕೆ, ಕೊಳ್ಳೆ ಹೊಡೆದಾಗ ಯಾಕಿಲ್ಲ ಸೇವಕರೇ?

    ಬಾಲರಾಮನ ಪ್ರಾಣಪ್ರತಿಷ್ಠಾಪನೆಗೆ ಮುನ್ನ ಪ್ರಧಾನಿಯವರು 11 ದಿನಗಳ ಕಾಲ ಕಠಿಣ ಉಪವಾಸ ವ್ರತ ಆಚರಿಸಿದ್ದರು, ಕೇವಲ ಎಳನೀರು ಕುಡಿದರು, ನೆಲದ ಮೇಲೆ ಮಲಗಿದರು ಎಂದು ಇಡೀ ದೇಶಕ್ಕೆ ಸಾರಲಾಗಿತ್ತು. ಅಯೋಧ್ಯೆಯಿಂದ ಹೊಸ ಕಾಲದ...

    ‘ಫ್ರೀ ಪ್ಯಾಲೆಸ್ತೀನ್’ ಘೋಷಣೆಯನ್ನು ತಮಾಷೆ ಮಾಡಿದ ಸೈಫ್ ಅಲಿ ಖಾನ್ – ನಿರೂಪಕಿ ಅನುಪಮಾ ಚೋಪ್ರಾ

    ಸ್ಪ್ಯಾನಿಷ್ ನಟ ಜೇವಿಯರ್ ಬಾರ್ಡೆಮ್ ಅವರ "ಫ್ರೀ ಪ್ಯಾಲೆಸ್ತೀನ್" ಹೇಳಿಕೆ ಕುರಿತು ಸೈಫ್ ಅಲಿ ಖಾನ್ ಮತ್ತು ಚಲನಚಿತ್ರ ಪತ್ರಕರ್ತೆ ಅನುಪಮಾ ಚೋಪ್ರಾ ನಗುತ್ತಿರುವ ಕ್ಲಿಪ್ ಆನ್‌ಲೈನ್‌ನಲ್ಲಿ ವೈರಲ್ ಆಗಿದ್ದು, ನಟನ ಅಸೂಕ್ಷ್ಮ...

    ತೆಲಂಗಾಣ : ಪೋಕ್ಸೋ ಪ್ರಕರಣದ ಆರೋಪಿಯಿಂದ ಸಂತ್ರಸ್ತೆ ಸೇರಿ 6 ಜನರ ಹತ್ಯೆ

    ಪೋಕ್ಸೋ ಪ್ರಕರಣದ ಆರೋಪಿಯೊಬ್ಬ ಸಂತ್ರಸ್ತೆ ಸೇರಿದಂತೆ ಒಟ್ಟು ಆರು ಜನರನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಶಾಬಾದ್ ಮಂಡಲದಲ್ಲಿ ಶುಕ್ರವಾರ (ಜು.10) ರಾತ್ರಿ ನಡೆದಿದೆ. 28 ವರ್ಷ ವಯಸ್ಸಿನ...

    ‘ನನ್ನನ್ನು ಮೌನಗೊಳಿಸಲು, ನೀವು ನನ್ನನ್ನು ಕೊಲ್ಲಬೇಕಾಗುತ್ತದೆ’: ಟಿಎಂಸಿ ಬಿಕ್ಕಟ್ಟಿನ ನಡುವೆ ಬಿಜೆಪಿ ವಿರುದ್ಧ ಮಮತಾ ಬ್ಯಾನರ್ಜಿ ಆಕ್ರೋಶ  

    ಕೋಲ್ಕತ್ತಾ: ಪಶ್ಚಿಮ ಬಂಗಾಳದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (TMC) ಪಕ್ಷದಲ್ಲಿ ಆಂತರಿಕ ಬಿಕ್ಕಟ್ಟು ತಾರಕಕ್ಕೇರಿರುವ ಬೆನ್ನಲ್ಲೇ, ಪಕ್ಷದ ಸುಪ್ರೀಮೋ ಹಾಗೂ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಇತ್ತೀಚಿನ ತಿಂಗಳುಗಳಲ್ಲೇ ಅತ್ಯಂತ ಪ್ರಬಲವಾದ ರಾಜಕೀಯ...

    ಸುಪ್ರೀಂ ಕೋರ್ಟ್‌ನಲ್ಲಿ ಜಡ್ಜ್‌ಗಳನ್ನೇ ‘ನ್ಯಾಯಾಂಗ ಸೇವಕರು’ ಎಂದ ಅರ್ಜಿದರ

    ಸುಪ್ರೀಂ ಕೋರ್ಟ್‌ನಲ್ಲಿ ಶುಕ್ರವಾರ ಅತ್ಯಂತ ನಾಟಕೀಯ ಹಾಗೂ ಆಘಾತಕಾರಿ ದೃಶ್ಯವೊಂದು ತೆರೆದುಕೊಂಡಿದೆ. ಪ್ರಕರಣವೊಂದರ ವಿಚಾರಣೆ ವೇಳೆ ಖುದ್ದಾಗಿ ಹಾಜರಾಗಿದ್ದ ಅರ್ಜಿದಾರನೊಬ್ಬ, ಲಕ್ನೋದ ಪೊಲೀಸ್ ಅಧಿಕಾರಿಯೊಬ್ಬರ ವಿರುದ್ಧ ಎಫ್‌ಐಆರ್ (FIR) ದಾಖಲಿಸಲು ನಾನು ನ್ಯಾಯಪೀಠಕ್ಕೆ...

    ಮದ್ಯದ ಅಮಲಿನಲ್ಲಿ ಸಾರಿಗೆ ಬಸ್‌ ಅಪಹರಿಸಿದ ವ್ಯಕ್ತಿ; 21 ಕಿ.ಮೀ. ಪ್ರಯಾಣದ ನಂತರ ಅಪಘಾತ

    ತೆಲಂಗಾಣದ ಜನಗಾಂವ್ ಬಸ್ ನಿಲ್ದಾಣದಲ್ಲಿ ನಿಂತಿದ್ದ ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ನಿಗಮದ (ಟಿಜಿಎಸ್‌ಆರ್‌ಟಿಸಿ) ಬಸ್‌ ಅನ್ನು ವ್ಯಕ್ತಿಯೊಬ್ಬ ಕುಡಿದ ಮತ್ತಿನಲ್ಲಿ ಕದ್ದಿದ್ದಾನೆ. ನಂತರ ಅದನ್ನು ಸುಮಾರು 21 ಕಿ.ಮೀ. ದೂರ ಓಡಿಸಿ,...

    ಬೆಂಗಳೂರಿನಲ್ಲಿ: ರಸ್ತೆ ಬದಿ ವಾರಗಟ್ಟಲೆ ವಾಹನ ನಿಲ್ಲಿಸಿದರೆ ಜಪ್ತಿ ಮಾಡಿ ‘ಹರಾಜು’ ಹಾಕಲಿದೆ ಸರ್ಕಾರ!

    ಸಿಲಿಕಾನ್ ಸಿಟಿಯ ಟ್ರಾಫಿಕ್ ದಟ್ಟಣೆಗೆ ಮುಕ್ತಿ ಹಾಡಲು ಮತ್ತು ಪಾದಚಾರಿಗಳ ಹಕ್ಕನ್ನು ರಕ್ಷಿಸಲು ರಾಜ್ಯ ಸರ್ಕಾರ ಈಗ ಅತ್ಯಂತ ಕಠಿಣ ಹೆಜ್ಜೆಯನ್ನಿಟ್ಟಿದೆ. ನಗರದ ರಸ್ತೆ ಬದಿ ಹಾಗೂ ಫುಟ್‌ಪಾತ್‌ಗಳಲ್ಲಿ ತಿಂಗಳುಗಟ್ಟಲೆ ಧೂಳು ತಿನ್ನುತ್ತಾ...

    ಸರ್ಕಾರಿ ಶಾಲೆಗಳಲ್ಲಿ 86 ಲಕ್ಷ ವಿದ್ಯಾರ್ಥಿಗಳ ಕುಸಿತ, ಖಾಸಗಿ ಶಾಲೆಗಳತ್ತ ಮುಖ ಮಾಡಿದ 88 ಲಕ್ಷ ಮಕ್ಕಳು: ಕಳವಳಕಾರಿ ವರದಿ

    ನವದೆಹಲಿ: ದೇಶದ ಶಾಲಾ ಶಿಕ್ಷಣ ವ್ಯವಸ್ಥೆಯಲ್ಲಿ ಮಹತ್ತರ ಬದಲಾವಣೆಗಳು ಕಂಡುಬರುತ್ತಿದ್ದು, ಸರ್ಕಾರಿ ಶಾಲೆಗಳ ದಾಖಲಾತಿಯಲ್ಲಿ ಭಾರಿ ಕುಸಿತ ಉಂಟಾಗಿದೆ. 2023–24 ಮತ್ತು 2025–26ರ ಶೈಕ್ಷಣಿಕ ವರ್ಷಗಳ ನಡುವಿನ ಅವಧಿಯಲ್ಲಿ ದೇಶಾದ್ಯಂತ ಸರ್ಕಾರಿ ಶಾಲೆಗಳಲ್ಲಿ...