Homeರಾಷ್ಟ್ರೀಯಮತಾಂತರಕ್ಕೆ ಮುಂಚೆ ಜಿಲ್ಲಾಧಿಕಾರಿಗೆ ಮಾಹಿತಿ ನೀಡಬೇಕು ಎನ್ನುವುದು ಸಂವಿಧಾನ ಬಾಹಿರ: ಮತಾಂತರ ಕಾಯ್ದೆ ಕುರಿತು ಮಧ್ಯಪ್ರದೇಶ...

ಮತಾಂತರಕ್ಕೆ ಮುಂಚೆ ಜಿಲ್ಲಾಧಿಕಾರಿಗೆ ಮಾಹಿತಿ ನೀಡಬೇಕು ಎನ್ನುವುದು ಸಂವಿಧಾನ ಬಾಹಿರ: ಮತಾಂತರ ಕಾಯ್ದೆ ಕುರಿತು ಮಧ್ಯಪ್ರದೇಶ ಹೈಕೋರ್ಟ್‌

- Advertisement -
- Advertisement -

ರಾಜ್ಯದ ಮತಾಂತರ ವಿರೋಧಿ ಕಾನೂನಿನಡಿಯಲ್ಲಿ ವ್ಯಕ್ತಿಯೊಬ್ಬರು ಮತಾಂತರಗೊಳ್ಳುವ ಮೊದಲು ಜಿಲ್ಲಾಡಳಿತಕ್ಕೆ ತಿಳಿಸಬೇಕು ಎಂಬ ನಿಯಮವೂ ಪ್ರಾಥಮಿಕವಾಗಿ ಅಸಂವಿಧಾನಿಕವಾಗಿದೆ ಎಂದು ಮಧ್ಯಪ್ರದೇಶ ಹೈಕೋರ್ಟ್ ಗುರುವಾರ ಹೇಳಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. ಮತಾಂತರ ಕಾಯ್ದೆಯ ಈ ನಿಯಮವನ್ನು ಉಲ್ಲಂಘಿಸುವವರ ವಿರುದ್ಧ ಕ್ರಮ ಕೈಗೊಳ್ಳದಂತೆ ನ್ಯಾಯಾಲಯವು ರಾಜ್ಯದ ಅಧಿಕಾರಿಗಳಿಗೆ ತಡೆ ನೀಡಿದೆ.

‘ಮಧ್ಯಪ್ರದೇಶದ ಧಾರ್ಮಿಕ ಸ್ವಾತಂತ್ರ್ಯ ಕಾಯಿದೆ-2021’ ರ ಸೆಕ್ಷನ್ 10 ರ ಪ್ರಕಾರ, ಯಾರಾದರೂ ತಮ್ಮ ಧರ್ಮವನ್ನು ಬದಲಾಯಿಸಲು ಬಯಸಿದರೆ, ತಾನು ಯಾವುದೆ ಬಲವಂತವಾಗಿ, ದಬ್ಬಾಳಿಕೆ, ಅನಗತ್ಯ ಪ್ರಭಾವ ಅಥವಾ ಆಮಿಷದಿಂದ ಮತಾಂತರ ಆಗುತ್ತಿಲ್ಲ ಎಂದು 60 ದಿನಗಳ ಮುಂಚಿತವಾಗಿ ಜಿಲ್ಲಾಧಿಕಾರಿಗೆ ಘೋಷಣೆಯನ್ನುಸಲ್ಲಿಸಬೇಕಾಗಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಈ ನಿಯಮವನ್ನು ಉಲ್ಲಂಘಿಸಿದ ವ್ಯಕ್ತಿಗೆ ಮೂರರಿಂದ ಐದು ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ಕನಿಷ್ಠ 50,000 ರೂ. ದಂಡವನ್ನು ವಿಧಿಸಬಹುದಾಗಿದೆ.

ಇದನ್ನೂ ಓದಿ: ಫ್ಯಾಕ್ಟ್‌ಚೆಕ್‌: ಜನಸಂಖ್ಯೆ ಹೆಚ್ಚಳ, ಮತಾಂತರ ಕುರಿತು ಮೋಹನ್ ಭಾಗವತ್‌ ಮಾತಿನ ಮರ್ಮವೇನು? ವಾಸ್ತವವೇನು?

ಮಧ್ಯಪ್ರದೇಶ ಮತಾಂತರ ವಿರೋಧಿ ಕಾನೂನನ್ನು ಕಳೆದ ವರ್ಷ ಅಧಿಸೂಚನೆ ಮಾಡಲಾಗಿತ್ತು. ಈ ಕಾನೂನು ಯಾರನ್ನಾದರೂ ತಮ್ಮ ಧರ್ಮವನ್ನು ಬದಲಾಯಿಸಲು ಬಲವಂತವಾಗಿ ಮದುವೆಯನ್ನು ಬಳಸಿದ ತಪ್ಪಿತಸ್ಥರಿಗೆ 10 ವರ್ಷಗಳವರೆಗೆ ಜೈಲು ಶಿಕ್ಷೆಗೆ ಅವಕಾಶವಿದೆ.

ಮತಾಂತರ-ವಿರೋಧಿ ಕಾನೂನನ್ನು ಕಳೆದ ವರ್ಷ ಅಧಿಸೂಚನೆ ಮಾಡಲಾಗಿತ್ತು. ಈ ಕಾನೂನಿನ ಅಡಿಯಲ್ಲಿ, ಮದುವೆಯ ಕಾರಣಕ್ಕೆ ಬಲವಂತವಾಗಿ ಮತಾಂತರ ಮಾಡಿದ ತಪ್ಪಿತಸ್ಥರಿಗೆ 10 ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸುವ ಅವಕಾಶವಿದೆ.

ಗುರುವಾರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸುಜೋಯ್ ಪಾಲ್ ಮತ್ತು ನ್ಯಾಯಮೂರ್ತಿ ಪ್ರಕಾಶ್ ಚಂದ್ರ ಗುಪ್ತಾ ಅವರ ಪೀಠವು, ಬಲವಂತದ ಮತಾಂತರ ಅಲ್ಲದೆ ತಮ್ಮ ಇಚ್ಛೆಯಂತೆ ಮದುವೆಯಾದ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮ ಜರುಗಿಸದಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದೆ.

ಇದನ್ನೂ ಓದಿ: ಮತಾಂತರ ನಿಷೇಧ ಕಾಯ್ದೆ: ಅಸಹಾಯಕರ ಮೇಲೆ ಪ್ರಹಾರ; ಲಿಂಗಾಯತರಿಗೂ ಗಂಡಾಂತರ

ಮತಾಂತರ ವಿರೋಧಿ ಕಾನೂನಿನ ಸಾಂವಿಧಾನಿಕತೆಯನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆಯನ್ನು ನ್ಯಾಯಾಲಯ ನಡೆಸುತ್ತಿದೆ. ಪ್ರಕರಣದ ವಿಚಾರಣೆ ನಡೆಯುವವರೆಗೆ ಕಾನೂನಿನಡಿಯಲ್ಲಿ ವ್ಯಕ್ತಿಗಳನ್ನು ವಿಚಾರಣೆಗೆ ಒಳಪಡಿಸದಂತೆ ಸರ್ಕಾರವನ್ನು ನಿರ್ಬಂಧಿಸಬೇಕು ಎಂದು ಅರ್ಜಿದಾರರು ನ್ಯಾಯಾಲಯವನ್ನು ಒತ್ತಾಯಿಸಿದ್ದರು.

ಮತಾಂತರ ವಿರೋಧಿ ಕಾಯ್ದೆಯು ನಾಗರಿಕರನ್ನು ವಿಚಾರಣೆಗೆ ಒಳಪಡಿಸಲು “ಕಡಿವಾಣವಿಲ್ಲದ ಮತ್ತು ಅನಿಯಂತ್ರಿತ ಅಧಿಕಾರವನ್ನು” ಅಧಿಕಾರಿಗಳಿಗೆ ನೀಡಿದೆ ಎಂದು ಅರ್ಜಿದಾರರು ವಾದಿಸಿದ್ದಾರೆ. ನಾಗರಿಕರು ಯಾವುದೆ ಧರ್ಮವನ್ನು ಆಚರಿಸುವ ಮತ್ತು ಯಾವುದೆ ಧರ್ಮ ಮತ್ತು ಜಾತಿಯನ್ನು ಲೆಕ್ಕಿಸದೆ ತಮ್ಮ ಆಯ್ಕೆಯ ಸಂಗಾತಿಯನ್ನು ಮದುವೆಯಾಗುವ ಮೂಲಭೂತ ಹಕ್ಕುಗಳಿಗೆ ಈ ಕಾನೂನು ಅಡ್ಡಿ ಮಾಡುತ್ತದೆ ಎಂದು ಅರ್ಜಿದಾರರು ಹೇಳಿದ್ದಾರೆ.

“ಒಬ್ಬ ನಾಗರಿಕನು ತಾನಿರುವ ಧರ್ಮದಿಂದ ಇನ್ನೊಂದು ಧರ್ಮಕ್ಕೆ ಮತಾಂತರ ಮಾಡುವ ಬಗ್ಗೆ ಯಾರಿಗೂ ತಿಳಿಸುವ ಭಾಧ್ಯತೆ ಹೊಂದಿಲ್ಲ” ಎಂದು ಅರ್ಜಿದಾರರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

ಇದನ್ನೂ ಓದಿ: ಇಸ್ಲಾಂ, ಕ್ರಿಶ್ಚಿಯನ್‌ಗೆ ಮತಾಂತರವಾದ ದಲಿತರ ಸ್ಥಿತಿಗತಿ ತಿಳಿಯಲು ರಾಷ್ಟ್ರೀಯ ಆಯೋಗ ರಚಿಸಲು ಸಿದ್ಧತೆ!?

ಈ ನಡುವೆ, ಪ್ರಕರಣದಲ್ಲಿ ನ್ಯಾಯಾಲಯ ಯಾವುದೇ ಮಧ್ಯಂತರ ತೀರ್ಪು ನೀಡುವುದು ಈ ಪ್ರಕರಣದ ಅಂತಿಮ ತೀರ್ಪಿಗೆ ಕಾರಣವಾಗಬಹುದು ಎಂದು ಸರ್ಕಾರ ವಾದಿಸಿದ್ದು, ಕಾಯ್ದೆಯ ಸಾಂವಿಧಾನಿಕತೆಯನ್ನು ಎತ್ತಿ ಹಿಡಿಯುವಂತೆ ನ್ಯಾಯಾಲಯವನ್ನು ಒತ್ತಾಯಿಸಿದೆ.

ಅಂತರ್‌ಧರ್ಮೀಯ ವಿವಾಹಗಳ ವಿರುದ್ಧ ಪ್ರಧಾನಿ ನರೇಂದ್ರ ಮೋದಿಯವರ ಬಿಜೆಪಿಯ ಅಭಿಯಾನವನ್ನು ಅನುಸರಿಸಿ ಈ ಕಾನೂನನ್ನು ತರಲಾಗಿದೆ. ಬಿಜೆಪಿ ಇಂತಹ ವಿವಾಹಗಳನ್ನು ‘‘ಲವ್ ಜಿಹಾದ್” ಎಂದು ಆರೋಪಿಸಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೈಂಗಿಕ ದೌರ್ಜನ್ಯ ಪ್ರಕರಣ : ರೇವಣ್ಣ, ಪ್ರಜ್ವಲ್‌ಗೆ ಎಸ್‌ಐಟಿ ನೋಟಿಸ್

0
ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆಗೆ ಹಾಜರಾಗಲು ಆರೋಪಿಗಳಾದ ಹೆಚ್‌.ಡಿ ರೇವಣ್ಣ ಹಾಗೂ ಪ್ರಜ್ವಲ್ ರೇವಣ್ಣಗೆ ಎಸ್ಐಟಿ ಅಧಿಕಾರಿಗಳು ಇಂದು (ಏ.30) ನೋಟಿಸ್ ಜಾರಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಹಾಸನದ ಹೊಳೆನರಸೀಪುರ ನಗರ...