Homeಮುಖಪುಟಉದ್ಯೋಗ ನಷ್ಟದ ಪರಿಣಾಮ ಚಿನ್ನದ ಮೇಲಿನ ಸಾಲದಲ್ಲಿ ಶೇ. 77ರಷ್ಟು ಹೆಚ್ಚಳ

ಉದ್ಯೋಗ ನಷ್ಟದ ಪರಿಣಾಮ ಚಿನ್ನದ ಮೇಲಿನ ಸಾಲದಲ್ಲಿ ಶೇ. 77ರಷ್ಟು ಹೆಚ್ಚಳ

- Advertisement -
- Advertisement -

ಕೋವಿಡ್‌ ಹಿನ್ನೆಲೆಯಲ್ಲಿ ಜಾರಿಗೊಳಿಸಲಾದ ರಾಷ್ಟ್ರವ್ಯಾಪಿ ಲಾಕ್‌ಡೌನ್‌ ಪರಿಣಾಮ ಉಂಟಾದ ಉದ್ಯೋಗ ನಷ್ಟ, ಸಂಬಳದಲ್ಲಿ ಕಡಿತ, ವೈದ್ಯಕೀಯ ಸೇವೆಯ ಭಾರೀ ಶುಲ್ಕ ಮೊದಲಾದ ಆರ್ಥಿಕ ಬಿಕ್ಕಟ್ಟಿನ ಪರಿಣಾಮ ಚಿನ್ನದ ಮೇಲಿನ ಸಾಲದ ಪ್ರಮಾಣವು ಹೆಚ್ಚಳ ಕಂಡಿದೆ ಎಂದು ದಿ ಇಂಡಿಯನ್‌ ಎಕ್ಸ್‌ಪ್ರೆಸ್‌ ವರದಿ ಮಾಡಿದೆ.

2020ರ ಜುಲೈನಿಂದ 2021ರ ಜುಲೈ ಅವಧಿಯಲ್ಲಿ ಶೇ. 77ರಷ್ಟು ಚಿನ್ನದ ಮೇಲಿನ ಸಾಲ ಏರಿಕೆಯಾಗಿದೆ. ಚಿಲ್ಲರೆ ಸಾಲಕ್ಕೆ ಸಂಬಂಧಿಸಿದ ಚಿನ್ನದ ಸಾಲವು ಶೇ. 77.4 ಹೆಚ್ಚಳ ಕಂಡಿದ್ದು, 27,223 ಕೋಟಿ ರೂ.ಗಳಿದ್ದದ್ದು, 62,412 ಕೋಟಿ ರೂ. ಏರಿಕೆ ಕಂಡಿದೆ. ಚಿನ್ನದ ಮೇಲಿನ ಸಾಲದ ಮೂಲಕವೇ ಸ್ಟೇಟ್ ಬ್ಯಾಂಕ್‌ ಆಫ್‌ ಇಂಡಿಯಾವು ಶೇ. 338.76 ಅಭಿವೃದ್ಧಿ ಸಾಧಿಸಿದೆ ಎನ್ನಲಾಗಿದೆ.

“ಸಾಲವನ್ನು ಪಡೆಯಲು ಜನರು ಸುಲಭದ ಮಾರ್ಗವನ್ನು ಹಿಡಿಯುತ್ತಾರೆ. ಚಿನ್ನವನ್ನು ಒತ್ತೆ ಇಡುವ ಮೂಲಕ ಸಾಲವನ್ನು ಸುಲಭವಾಗಿ ಪಡೆಯಬಹುದು. ಸಾಲ ವಸೂಲಾತಿಯೂ ಬ್ಯಾಂಕ್‌ಗಳಿಗೆ ಸುಲಭವಾಗುವುದರಿಂದ ಚಿನ್ನದ ಮೇಲಿನ ಸಾಲಕ್ಕೆ ಹೆಚ್ಚಿನ ಅವಕಾಶವನ್ನು ನೀಡಲಾಗುತ್ತಿದೆ” ಎಂದು ರಾಷ್ಟ್ರೀಕೃತ ಬ್ಯಾಂಕ್‌ವೊಂದರ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇದನ್ನೂ ಓದಿ: ಆಗಸ್ಟ್‌ನಲ್ಲಿ 15 ಲಕ್ಷ ಭಾರತೀಯರ ಉದ್ಯೋಗ ನಷ್ಟ; ಶೇ. 8.32ಕ್ಕೇರಿದ ನಿರುದ್ಯೋಗ ಪ್ರಮಾಣ

ಹತ್ತು ಸಾವಿರ ಕೋಟಿ ರೂ. ವಹಿವಾಟು ಕ್ರೆಡಿಟ್‌ ಕಾರ್ಡ್‌ನಲ್ಲಿ ನಡೆದಿದ್ದು, ಕ್ರೆಡಿಟ್ ಕಾರ್ಡ್‌‌ಗಳ ಬಳಕೆ ಶೇ. 9.8ಕ್ಕೆ ಏರಿಕೆಯಾಗಿದೆ. 2020ರ ಹಿಂದಿನ 12 ತಿಂಗಳಲ್ಲಿ ಕ್ರೆಡಿಟ್ ಕಾರ್ಡ್ ಬಳಕೆ ಶೇ. 8.6ರಷ್ಟಿತ್ತು. ಚಿಲ್ಲರೆ ವ್ಯವಹಾರದಲ್ಲಿ ಸಾಲವು 2.88 ಲಕ್ಷ ಕೋಟಿ ರೂ.ಗಳಿಂದ 28.58 ಲಕ್ಷ ಕೋಟಿ ರೂ.ಗಳಿಗೆ ಜಿಗಿತ ಕಂಡಿದೆ ಎಂಬುದನ್ನು ಆರ್‌ಬಿಐನ ಇತ್ತೀಚಿನ ದತ್ತಾಂಶ ಹೇಳುತ್ತದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೈಂಗಿಕ ಕಿರುಕುಳ ಆರೋಪಿ ಬ್ರಿಜ್ ಭೂಷಣ್ ಸಿಂಗ್ ಬದಲಿಗೆ ಮಗನಿಗೆ ಟಿಕೆಟ್ ಕೊಟ್ಟ ಬಿಜೆಪಿ

0
ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪ ಹೊತ್ತಿರುವ ಉತ್ತರ ಪ್ರದೇಶದ ಕೈಸರ್‌ಗಂಜ್ ಲೋಕಸಭಾ ಕ್ಷೇತ್ರದ ಹಾಲಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರನ್ನು ಕೈಬಿಟ್ಟು, ಪುತ್ರ ಕರಣ್ ಭೂಷಣ್ ಸಿಂಗ್‌ಗೆ...