Homeಮುಖಪುಟಪ್ರಶಾಂತ್ ಭೂಷಣ್ ಮೇಲಿನ ಸುಪ್ರೀಂಕೋರ್ಟ್ ಕ್ರಮ ಅಸಂವಿಧಾನಿಕ: ನ್ಯಾಯಮೂರ್ತಿ ಕರ್ಣನ್‌

ಪ್ರಶಾಂತ್ ಭೂಷಣ್ ಮೇಲಿನ ಸುಪ್ರೀಂಕೋರ್ಟ್ ಕ್ರಮ ಅಸಂವಿಧಾನಿಕ: ನ್ಯಾಯಮೂರ್ತಿ ಕರ್ಣನ್‌

ನ್ಯಾಯಾಧೀಶರು ತಮ್ಮ ಸಂಬಳವನ್ನು ಸಾರ್ವಜನಿಕರ ತೆರಿಗೆಗಳಿಂದ ಪಡೆಯುತ್ತಾರೆ. ಅವರು ಪಾರದರ್ಶಕ ಕಾರ್ಯ ವಿಧಾನವನ್ನು ಅಳವಡಿಸಿಕೊಳ್ಳಬೇಕು.

- Advertisement -
- Advertisement -

ನ್ಯಾಯಾಧೀಶರು ಕಾನೂನಿಗಿಂತ ಮೇಲಲ್ಲ, ಪ್ರಶಾಂತ್ ಭೂಷಣ್ ಅವರ ಮೇಲೆ ಸುಪ್ರೀಂಕೋರ್ಟ್‌ನ ಕ್ರಮ ಅಸಂವಿಧಾನಿಕ ಎಂದು ನಿವೃತ್ತ ನ್ಯಾಯಮೂರ್ತಿ ಸಿ. ಎಸ್. ಕರ್ಣನ್ ಹೇಳಿದ್ದಾರೆ.

ಪ್ರಶಾಂತ್ ಭೂಷಣ್ ಅವರಿಗೆ ಬೆಂಬಲ ವ್ಯಕ್ತಪಡಿಸಿದ ನ್ಯಾಯಮೂರ್ತಿ ಕರ್ಣನ್ ನ್ಯಾಯಾಧೀಶರ ವಿರುದ್ಧದ ಆರೋಪಗಳನ್ನು ಪರಿಶೀಲಿಸಲು ಮುಕ್ತ ವ್ಯವಸ್ಥೆ ಅಗತ್ಯವಿದೆ ಎಂದು ಹೇಳಿದ್ದಾರೆ.

“ನ್ಯಾಯಾಧೀಶರು ಕಾನೂನಿಗಿಂತ ಮೇಲಲ್ಲ. ಅವರು ಇತರ ಸಾರ್ವಜನಿಕ ಸಂಸ್ಥೆಗಳ ಸದಸ್ಯರಂತೆ ಸಾರ್ವಜನಿಕರಿಗೆ ಉತ್ತರಿಸಬೇಕಾಗುತ್ತದೆ. ಪಾರದರ್ಶಕ ಕಾರ್ಯ ವಿಧಾನವನ್ನು ಅಳವಡಿಸಿಕೊಳ್ಳುವುದರ ಜೊತೆಗೆ ಭಾರತೀಯ ಸಂವಿಧಾನವನ್ನು ಅನುಸರಿಸಲು ಅವರು ಬದ್ಧರಾಗಿದ್ದಾರೆ. ಯಾಕೆಂದರೆ ಅವರು ತಮ್ಮ ಸಂಬಳವನ್ನು ಸಾರ್ವಜನಿಕರ ತೆರಿಗೆಗಳಿಂದ ಪಡೆಯುತ್ತಾರೆ” ಎಂದು ನ್ಯಾಯಮೂರ್ತಿ ಕರ್ಣನ್ ಹೇಳಿದ್ದಾರೆ.

ಇದನ್ನೂ ಓದಿ: ಅರ್ನಾಬ್ ಗೋಸ್ವಾಮಿ ಕೈಮುಗಿದು ಕ್ಷಮೆಯಾಚಿಸಲಿ: ಶಿವಸೇನೆ

ಕಾರ್ಯನಿರ್ವಹಿಸುತ್ತಿರುವ ಅಥವಾ ನಿವೃತ್ತ ನ್ಯಾಯಾಧೀಶರ ವಿರುದ್ಧ ಭ್ರಷ್ಟಾಚಾರದ ಆರೋಪಗಳನ್ನು ನಿರ್ವಹಿಸಲು ಪಾರದರ್ಶಕ ವ್ಯವಸ್ಥೆ ಇರುವ ಸಮಯ ಇದಾಗಿದೆ ಎಂದು ಉಲ್ಲೇಖಿಸಿದ್ದಾರೆ.

ಮದ್ರಾಸ್ ಮತ್ತು ಕಲ್ಕತ್ತಾ ಹೈಕೋರ್ಟ್‌ಗಳಲ್ಲಿ ಕಾರ್ಯ ನಿರ್ವಹಿಸಿದ್ದ ನ್ಯಾಯಮೂರ್ತಿ ಕರ್ಣನ್, ಪ್ರಶಾಂತ್‌ ಭೂಷಣ್ ಅವರ ಟ್ವೀಟ್‌ಗಳು ನ್ಯಾಯಾಂಗದಲ್ಲಿ ಚಾಲ್ತಿಯಲ್ಲಿರುವ ಪರಿಸ್ಥಿತಿಯ ಬಗ್ಗೆ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದೆ. ಈ ಮೂಲಕ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ಯ್ರದ ತಮ್ಮ ಸಾಂವಿಧಾನಿಕ ಹಕ್ಕನ್ನು ಚಲಾಯಿಸಿದ್ದಾರೆ ಎಂದು ದಿ ಪ್ರಿಂಟ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ನ್ಯಾಯಮೂರ್ತಿ ಕರ್ಣನ್ 2017 ರಲ್ಲಿ ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ಶಿಕ್ಷೆಗೊಳಗಾಗಿದ್ದರು.


ಓದಿ: ಕ್ಷಮೆಯಾಚಿಸುವುದಿಲ್ಲ, ಖುಷಿಯಿಂದ ಶಿಕ್ಷೆ ಸ್ವೀಕರಿಸುತ್ತೇನೆ: ಪ್ರಶಾಂತ್ ಭೂಷಣ್

ದೇಶದಲ್ಲಿ ಒಂದು ಶೇಖಡ ಜನರಿಗೂ ನ್ಯಾಯ ಸಿಗುತ್ತಿಲ್ಲ; ವಿಡಿಯೋ ನೋಡಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಅಮೇಥಿ ಕಾಂಗ್ರೆಸ್ ಕಚೇರಿ ಮೇಲೆ ದಾಳಿ, ಕಾರ್ಯಕರ್ತನಿಗೆ ಹಲ್ಲೆ: ಬಿಜೆಪಿ ಮುಖಂಡರು ಸೇರಿ 10...

0
ಉತ್ತರ ಪ್ರದೇಶದ ಅಮೇಥಿಯಲ್ಲಿ ಕಾಂಗ್ರೆಸ್ ಪಕ್ಷದ ಕಚೇರಿ ಮೇಲೆ ಭಾನುವಾರ (ಮೇ 5) ಮಧ್ಯರಾತ್ರಿ ಅಪರಿಚಿತ ದುಷ್ಕರ್ಮಿಗಳ ಗುಂಪೊಂದು ದಾಳಿ ಮಾಡಿದೆ. ಪಕ್ಷದ ಕಚೇರಿಯ ಹೊರಗೆ ನಿಲ್ಲಿಸಿದ್ದ ಹಲವು ವಾಹನಗಳನ್ನು ಧ್ವಂಸಗೊಳಿಸಿದ ದುಷ್ಕರ್ಮಿಗಳು,...