Homeಮುಖಪುಟಚಿಕ್ಕಮಗಳೂರು ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಕಲ್ಕುಳಿ ಹೆಗಡೆ: ಮತ್ತಷ್ಟು ಸಾಹಿತಿ ಪ್ರಗತಿಪರರ ಬೆಂಬಲ

ಚಿಕ್ಕಮಗಳೂರು ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಕಲ್ಕುಳಿ ಹೆಗಡೆ: ಮತ್ತಷ್ಟು ಸಾಹಿತಿ ಪ್ರಗತಿಪರರ ಬೆಂಬಲ

- Advertisement -
- Advertisement -

ಚಿಕ್ಕಮಗಳೂರು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ಕಲ್ಕುಳಿ ವಿಠಲ್‌ ಹೆಗ್ಡೆಯವರ ಆಯ್ಕೆಯನ್ನು ಬೆಂಬಲಿಸಿ ಮತ್ತಷ್ಟು ಸಾಹಿತಿ ಪ್ರಗತಿಪರರು ದನಿಗೂಡಿಸಿದ್ದಾರೆ.

ಹಿರಿಯ ಸಾಹಿತಿಗಳಾದ ನಾ.ಡಿಸೋಜ, ಮೈಸೂರಿನ ಹಿ.ಶಿ ರಾಮಚಂದ್ರೇಗೌಡ, ಜನ್ನಿ ಜನಾರ್ಧನ್, ಕೆ.ಆರ್‌ ಗೋಪಾಲ ಕೃಷ್ಣ, ವಿಕಾಸ್‌ ಆರ್‌ ಮೌರ್ಯ ಮತ್ತಿತರರು ಯಾವುದೇ ಕಾರಣಕ್ಕೂ ಸಮ್ಮೇಳನಾಧ್ಯಕ್ಷ ಬದಲಾವಣೆ ಸಲ್ಲ ಎಂದು ಒತ್ತಾಯ ಮಾಡಿದ್ದಾರೆ.

ಕಲ್ಕುಳಿ ಹೆಗಡೆಯವರು ಸಮ್ಮೇಳಾನಾಧ್ಯಕ್ಷರಾದ ವಿಚಾರಕ್ಕೆ ಬಲಪಂಥೀಯ ಸಂಘಟನೆಗಳು ವಿರೋಧ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ಈ ಮೊದಲು ಅವರ ಆಯ್ಕೆಯನ್ನು ಸಮರ್ಥಿಸಿ ಹಲವಾರು ಸಾಹಿತಿ-ಪ್ರಗತಿಪರರು ಬಹಿರಂಗ ಪತ್ರ ಬೆಂಬಲಿಸಿದ್ದರು.

ಚಂದ್ರಶೇಖರ್ ಪಾಟೀಲ್ (ಚಂಪಾ), ಡಾ. ಕೆ. ಮರಳುಸಿದ್ದಪ್ಪ, ಜಿ.ರಾಜಶೇಖರ, ದಿನೇಶ್ ಅಮೀನ್‌ಮಟ್ಟು, ಬಿ.ಟಿ.ಲಲಿತಾ ನಾಯ್ಕ್, ಡಾ. ಕಾಳೇಗೌಡ ನಾಗವಾರ, ಜಗದೀಶ್ ಕೊಪ್ಪ, ಯೋಗೇಶ್ ಮಾಸ್ತರ್, ಪ್ರೊ.ಶ್ರೀಕಂಠ ಕೂಡಿಗೆ, ಬಂಜಗೆರೆ ಜಯಪ್ರಕಾಶ್, ಸುರೇಶ್ ಭಟ್ ಬಾಕ್ರಬೈಲ್, ಕಡಿದಾಳು ಶಾಮಣ್ಣ, ಡಾ.ವಿಜಯಮ್ಮ, ಪ್ರೊ. ಎಂ. ಚಂದ್ರಶೇಖರಯ್ಯ, ಡಾ. ರಹಮತ್‌ ತರೀಕೆರೆ, ಪ್ರೋ. ಕೆ ಫಣಿರಾಜ್ ಮತ್ತು ಡಾ. ಉಮಾಶಂಕರ್ ಸೇರಿದಂತೆ ಹಲವರು ಸಹಿ ಹಾಕಿದ್ದರು.

ಇದನ್ನೂ ಓದಿ: ಸಮ್ಮೇಳನಾಧ್ಯಕ್ಷ ಸ್ಥಾನಕ್ಕೆ ಕಲ್ಕುಳಿ ವಿಠಲ್ ಹೆಗ್ಡೆ ಸಂಪೂರ್ಣ ಸಮರ್ಥರು : ಸಾಹಿತಿ-ಪ್ರಗತಿಪರರ ಬಹಿರಂಗ ಪತ್ರ 

ಜೊತೆಗೆ ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಸಹ ಟ್ವೀಟ್‌ ಮಾಡುವ ಮೂಲಕ ಸಿ.ಟಿ ರವಿ ವಿರುದ್ಧ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದರು.

“ತಮ್ಮ‌‌ ಪಕ್ಷದ ರಾಜಕೀಯ ಸಿದ್ಧಾಂತ ಒಪ್ಪದಿರುವವರು ಅಧ್ಯಕ್ಷರಾಗಿರುವ ಕಾರಣಕ್ಕೆ ಚಿಕ್ಕಮಗಳೂರು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅನುದಾನ ನಿರಾಕರಿಸಿರುವ ಸಚಿವ ಸಿ.ಟಿ.ರವಿ ನಿರ್ಧಾರ ಕನ್ನಡ ನಾಡು-ನುಡಿಗೆ ಬಗೆದ ದ್ರೋಹವಾಗಿದೆ. ಕನ್ನಡ ಸಾಹಿತ್ಯ ಪರಿಷತ್‌ನ ಸ್ವಾಯತ್ತತೆಯನ್ನು ಗೌರವಿಸುವುದು ಸರ್ಕಾರದ ಕರ್ತವ್ಯ.” ಎಂದು ಸಿದ್ದರಾಮಯ್ಯ ತಿಳಿಸಿದ್ದರು.

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿ ‘ಸಂವಿಧಾನ ಮತ್ತು ಮೀಸಲಾತಿ’ಯನ್ನು ರದ್ದುಗೊಳಿಸಲು ಬಯಸುತ್ತಿದೆ: ಲಾಲು ಪ್ರಸಾದ್ ಯಾದವ್

0
ಬಿಜೆಪಿ ಸಂವಿಧಾನ ಮತ್ತು ಮೀಸಲಾತಿಯನ್ನು ರದ್ದುಗೊಳಿಸಲು ಬಯಸುತ್ತಿದೆ, ಸರ್ಕಾರಿ ಉದ್ಯೋಗ ಮತ್ತು ಸರ್ಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ಮುಸ್ಲಿಮರು ಕೂಡ ಮೀಸಲಾತಿಯನ್ನು ಪಡೆಯಬೇಕು, ಅವರ ಮೀಸಲಾತಿ ಪರವಾಗಿ ನಾನಿದ್ದೇನೆ ಎಂದು ರಾಷ್ಟ್ರೀಯ ಜನತಾ ದಳ(ಆರ್‌ಜೆಡಿ)...