Homeಕರ್ನಾಟಕ'ಕಾಶಿ ಮಥುರಾ ಬಾಕಿ ಹೈ’: ರಾಮಮಂದಿರ ಉದ್ಘಾಟನೆ ದಿನ ಬೆಂಗಳೂರಿನಲ್ಲಿ ಪ್ರಚೋದನಾಕಾರಿ ಘೋಷಣೆ

‘ಕಾಶಿ ಮಥುರಾ ಬಾಕಿ ಹೈ’: ರಾಮಮಂದಿರ ಉದ್ಘಾಟನೆ ದಿನ ಬೆಂಗಳೂರಿನಲ್ಲಿ ಪ್ರಚೋದನಾಕಾರಿ ಘೋಷಣೆ

- Advertisement -
- Advertisement -

ಅಯೋಧ್ಯೆಯಲ್ಲಿ ರಾಮಮಂದಿರದಲ್ಲಿ ಪ್ರತಿಷ್ಠಾಪನೆ ನಡೆಯುತ್ತಿತ್ತು. ಇದೇ ವೇಳೆ ಬೆಂಗಳೂರಿನ ಜಯನಗರದ ಬೀದಿಗಳಲ್ಲಿ ‘ಕಾಶಿ ಮಥುರಾ ಬಾಕಿ ಹೈ’ (ಕಾಶಿ ಮತ್ತು ಮಥುರಾ ಬಾಕಿ ಉಳಿದಿದೆ) ಎಂದು ಪ್ರಚೋದನಾಕಾರಿ ಘೋಷಣೆಗಳನ್ನು ಕೂಗಿರುವುದು ಬಹಿರಂಗವಾಗಿದೆ.

ಧಾರ್ಮಿಕ ಆಚರಣೆಗಳು ಸಾಮಾನ್ಯವಾಗಿ ದೇವಾಲಯಗಳಿಗೆ ಸೀಮಿತವಾಗಿರುತ್ತಿತ್ತು, ಆದರೆ ರಾಮಮಂದಿರ ಉದ್ಘಾಟನೆಯನ್ನು ಬೆಂಗಳೂರಿನ ವಿವಿಧೆಡೆ ಸಾರ್ವಜನಿಕ ಸ್ಥಳಗಳಲ್ಲಿ ಆಚರಿಸಲಾಗಿದೆ. ಜೆಪಿ ನಗರ, ಬನಶಂಕರಿ ಮತ್ತು ಜಯನಗರ ಪ್ರದೇಶಗಳಲ್ಲಿ ಸಣ್ಣ ಟೆಂಟ್‌ಗಳನ್ನು ಹಾಕಲಾಗಿತ್ತು, ವಿಶೇಷ ಪ್ರಾರ್ಥನೆಗಳನ್ನು ನಡೆಸಲಾಗಿತ್ತು ಮತ್ತು ಭಕ್ತಿಗೀತೆಗಳನ್ನು ಹಾಡಲಾಗಿತ್ತು. ಇದೇ ವೇಳೆ ಬೆಂಗಳೂರಿನ ಜಯನಗರದ ಬೀದಿಗಳಲ್ಲಿ ‘ಕಾಶಿ ಮಥುರಾ ಬಾಕಿ ಹೈ’ (ಕಾಶಿ ಮತ್ತು ಮಥುರಾ ಬಾಕಿ ಉಳಿದಿದೆ) ಎಂದು ಪ್ರಚೋದನಾಕಾರಿ ಘೋಷಣೆಗಳನ್ನು ಕೂಗಿರುವುದು ಬಹಿರಂಗವಾಗಿದೆ. ಈ ಬಗ್ಗೆ ಪೊಲೀಸರು ಈವರೆಗೆ ಯಾವುದೇ ಪ್ರಕರಣ ದಾಖಲಿಸಿರುವ ಬಗ್ಗೆ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ.

ಜಯನಗರ ಪೊಲೀಸ್ ಠಾಣೆ ಎದುರಿನ ವಿನಾಯಕ ದೇವಸ್ಥಾನದ ಹೊರಗೆ ಪ್ರಾಣಪ್ರತಿಷ್ಠಾನ ಕಾರ್ಯಕ್ರಮದ ನೇರಪ್ರದರ್ಶನ ನಡೆದಿದೆ. ಕಾರ್ಯಕ್ರಮದಲ್ಲಿ ಕನ್ನಡ ನಟಿ ತಾರಾ ಉಪಸ್ಥಿತರಿದ್ದರು. ಜಯನಗರ ನಿವಾಸಿಯೊಬ್ಬರು ಇದು ಭಾರತದ ಸುವರ್ಣಯುಗ, ಮೋದಿಜಿ ಇದನ್ನು ಸಾಧ್ಯವಾಗಿಸಿದ್ದಾರೆ. ಅಯೋಧ್ಯೆಯಲ್ಲಿ ಮಹಾಮಸ್ತಕಾಭಿಷೇಕವನ್ನು ವೀಕ್ಷಿಸುವುದು ಒಂದು ದೊಡ್ಡ ಗೌರವವಾಗಿದೆ ಆದರೆ ಅದು ಸಾಧ್ಯವಿಲ್ಲ, ಆದ್ದರಿಂದ ಸಮುದಾಯದೊಂದಿಗೆ ಇಲ್ಲಿ ವೀಕ್ಷಿಸುವುದರಿಂದ ಸಂತೋಷವಾಗಿದೆ ಎಂದು ಹೇಳಿದ್ದಾರೆ.

ಕಾಶಿ ಮತ್ತು ಮಥುರಾ ಕುರಿತ ಘೋಷಣೆಯ ಬಗ್ಗೆ ಕೇಳಿದಾಗ, ಕೇಸರಿ ಶಾಲು ಧರಿಸಿದ ನಿವಾಸಿಗಳಲ್ಲಿ ಒಬ್ಬರು, ಇದು ಕೇವಲ ಆರಂಭ. ಅವರು ಅನೇಕ ದೇವಾಲಯಗಳನ್ನು ನಾಶಪಡಿಸಿದರು ಮತ್ತು ಅಯೋಧ್ಯೆಯನ್ನು ನಾವು  ಮರಳಿ ಪಡೆದಿದ್ದೇವೆ. ಆದರೆ ಇದೀಗ, ಈ ಕ್ಷಣವನ್ನು ಆನಂದಿಸುವ ಸಮಯ ಎಂದು ಹೇಳಿದ್ದಾರೆ. ಅಲ್ಲಿದ್ದ ಕೆಲವರು ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜನವರಿ 22ರಂದು ರಜೆ ಘೋಷಿಸಿಲ್ಲ ಎಂದು ಟೀಕಿಸಿದ್ದಾರೆ. ಭಾರತೀಯ ಇತಿಹಾಸದಲ್ಲಿ ಇದು ಮಹತ್ವದ ದಿನವಾಗಿದೆ, ಸರ್ಕಾರ ರಜೆ ಘೋಷಿಸದಿದ್ದರೆ ಹೇಗೆ? ಎಂದು ತನ್ನ ಮಗಳ ಜೊತೆ ಬಂದಿದ್ದ 40 ವರ್ಷದ ಟೆಕ್ಕಿಯೊಬ್ಬರು ಪ್ರಶ್ನಿಸಿದ್ದಾರೆ.

ಎಂಜಿ ರಸ್ತೆಯಲ್ಲಿರುವ ನವರಥನ್ ಜ್ಯುವೆಲ್ಲರ್ಸ್‌ನ ಸಿಬ್ಬಂದಿಗಳು ತಮ್ಮ ಅಂಗಡಿಯ ಮುಂದೆ ರಾಮನ ಮೂರ್ತಿಯನ್ನು ಪ್ರತಿಷ್ಠಾಪಿಸಿದ್ದಾರೆ, ರಸ್ತೆಯಲ್ಲಿ ಪಟಾಕಿ ಸಿಡಿಸುತ್ತಾ, ‘ಜೈ ಶ್ರೀ ರಾಮ್’ ಎಂದು ಘೋಷಣೆ ಕೂಗುತ್ತಾ ನೃತ್ಯ ಮಾಡಿದ್ದಾರೆ. ಮೈಸೂರು ಬ್ಯಾಂಕ್ ವೃತ್ತದ ಬಳಿ ರಾಮ, ಸೀತೆ, ಲಕ್ಷ್ಮಣ, ಹನುಮಾನ್ ವೇಷಧರಿಸಿ ಕಲಾವಿದರು ಮೆರವಣಿಗೆ ನಡೆಸಿದ್ದಾರೆ.

ಅಯೋಧ್ಯೆಯ ರಾಮಮಂದಿರದಲ್ಲಿ ಪ್ರಾಣ ಪ್ರತಿಷ್ಠಾನ ಸಮಾರಂಭವು ಸೋಮವಾರ ಮಧ್ಯಾಹ್ನ 12.20ಕ್ಕೆ ಪ್ರಾರಂಭವಾಗಿ 12.28ಕ್ಕೆ ಪೂರ್ಣಗೊಂಡಿತ್ತು. ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ, ಆರೆಸ್ಸೆಸ್‌ ಮುಖ್ಯಸ್ಥ ಮೋಹನ್ ಭಾಗವತ್, ಉತ್ತರ ಪ್ರದೇಶದ ರಾಜ್ಯಪಾಲ ಆನಂದಿಬೆನ್ ಬೆನ್‌ ಪಟೇಲ್‌, ಯೋಗಿ ಆದಿತ್ಯನಾಥ್‌ ಸೇರಿ ಹಲವರು ಉಪಸ್ಥಿತರಿದ್ದರು.

ರಾಮಮಂದಿರದಂತೆಯೇ ವಾರಣಾಸಿಯ ಜ್ಞಾನವಾಪಿ ಮಸೀದಿ ಮತ್ತು ಮಥುರಾದ ಶಾಹಿ ಈದ್ಗಾ ಮಸೀದಿಯು ವಿವಾದಿತ ಕೇಂದ್ರವಾಗಿದೆ. ವಾರಣಾಸಿ, ಜ್ಞಾನವಾಪಿ ಮಸೀದಿಯು ಕಾಶಿ ವಿಶ್ವನಾಥ ದೇವಸ್ಥಾನದ ಸಮೀಪದಲ್ಲಿದೆ. ಇದನ್ನು ದೇವಾಲಯದ ಅವಶೇಷಗಳ ಮೇಲೆ ನಿರ್ಮಿಸಲಾಗಿದೆ ಎಂದು ಆರೋಪಿಸಲಾಗಿದೆ. ಮಥುರಾ ಪ್ರಕರಣದಲ್ಲಿ 1,670ರಲ್ಲಿ ಚಕ್ರವರ್ತಿ ಔರಂಗಜೇಬನ ಆದೇಶದ ಮೇರೆಗೆ ನಿರ್ಮಿಸಲಾದ ಶಾಹಿ ಈದ್ಗಾ ಮಸೀದಿಯು ಕೃಷ್ಣ ಜನ್ಮಸ್ಥಾನದ ದೇವಸ್ಥಾನದ ಪಕ್ಕದಲ್ಲಿರುವ ಕೃಷ್ಣನ ಜನ್ಮಸ್ಥಳದಲ್ಲಿದೆ ಎಂದು ಹಿಂದೂ ಅರ್ಜಿದಾರರು ನ್ಯಾಯಾಲಯದಲ್ಲಿ ವಾದಿಸಿದ್ದಾರೆ. ಈ ಪ್ರಕರಣಗಳು ಕೋರ್ಟ್‌ನಲ್ಲಿದೆ.

ಇದನ್ನು ಓದಿ: ರಾಮಮಂದಿರದ ಉದ್ಘಾಟನೆಯಲ್ಲಿ ಮೋದಿ: ಕಳವಳ ವ್ಯಕ್ತಪಡಿಸಿ ಹೇಳಿಕೆ ಬಿಡುಗಡೆ ಮಾಡಿದ 22 ಅನಿವಾಸಿ ಸಂಸ್ಥೆಗಳು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಹೇಮಂತ್ ಕರ್ಕರೆ ಆರೆಸ್ಸೆಸ್‌ ನಂಟಿನ ಪೊಲೀಸ್ ಅಧಿಕಾರಿಯ ಗುಂಡಿಗೆ ಬಲಿಯಾಗಿದ್ದು: ವಿಜಯ್ ವಡೆಟ್ಟಿವಾರ್

0
2008ರ ಮುಂಬೈ ಭಯೋತ್ಪಾದಕ ದಾಳಿಯ ಸಮಯದಲ್ಲಿ ರಾಜ್ಯ ಭಯೋತ್ಪಾದನಾ ನಿಗ್ರಹ ದಳದ(ಎಟಿಎಸ್) ಮಾಜಿ ಮುಖ್ಯಸ್ಥ ಹೇಮಂತ್ ಕರ್ಕರೆ ಅವರನ್ನು ಹತ್ಯೆಗೈದಿದ್ದು ಭಯೋತ್ಪಾದಕ ಅಜ್ಮಲ್ ಅಮೀರ್ ಕಸಬ್ ಅಲ್ಲ, ಆರೆಸ್ಸೆಸ್‌ ಜೊತೆ ನಂಟು ಹೊಂದಿದ್ದ...