Homeಮುಖಪುಟ2023 ರ ನ್ಯೂಯಾರ್ಕ್ ಟೈಮ್ಸ್ 52 ಅತ್ಯುತ್ತಮ ಪ್ರವಾಸಿ ತಾಣಗಳ ಪಟ್ಟಿಯಲ್ಲಿ ಕೇರಳ

2023 ರ ನ್ಯೂಯಾರ್ಕ್ ಟೈಮ್ಸ್ 52 ಅತ್ಯುತ್ತಮ ಪ್ರವಾಸಿ ತಾಣಗಳ ಪಟ್ಟಿಯಲ್ಲಿ ಕೇರಳ

- Advertisement -
- Advertisement -

ಕೊರೊನಾ ಸಾಂಕ್ರಾಮಿಕದಿಂದಾಗಿ ತೀವ್ರ ಹೊಡೆತ ಬಿದ್ದಿದ್ದ ಪ್ರವಾಸೋದ್ಯಮವು ಇದೀಗ ಮತ್ತೆ ಚೇತರಿಸಿಕೊಳ್ಳುತ್ತಿದೆ. 2023ರಲ್ಲಿ ಪ್ರವಾಸ ಮಾಡಲು ಅತ್ಯುತ್ತಮ 52 ಸ್ಥಳಗಳನ್ನು ನ್ಯೂಯಾರ್ಕ್‌ ಟೈಮ್ಸ್‌ ಪಟ್ಟಿ ಮಾಡಿದ್ದು ಅದರಲ್ಲಿ ಕೇರಳವು ಸ್ಥಾನ ಪಡೆದಿದೆ. ಈ ಪಟ್ಟಿಯಲ್ಲಿ ಕಂಡು ಬಂದ ಭಾರತದ ಏಕೈಕ ಪ್ರದೇಶವಾಗಿ ಕೇರಳ ಕಾಣಿಸಿಕೊಂಡಿದೆ.

ನೈಸರ್ಗಿಕ ಸೌಂದರ್ಯಕ್ಕಾಗಿ ‘ದೇವರ ಸ್ವಂತ ನಾಡು’ ಎಂದು ಕರೆಯಲ್ಪಡುವ ಕೇರಳ, ತನ್ನ ರಮಣೀಯ ಪ್ರಕೃತಿ, ಪಾಕಪದ್ಧತಿ ಮತ್ತು ಹಿನ್ನೀರು ಹೆಸರುವಾಸಿಯಾಗಿದೆ. ಕೇರಳದ ಜೊತೆಗೆ ಲಂಡನ್, ಮೊರಿಯೊಕಾ, ಪಾಮ್ ಸ್ಪ್ರಿಂಗ್ಸ್ ಮತ್ತು ಗ್ರೀನ್‌ವಿಲ್ಲೆ ಸೇರಿದಂತೆ ಒಟ್ಟು 52 ಸ್ಥಳಗಳನ್ನು ನ್ಯೂಯಾರ್ಕ್ ಟೈಮ್ಸ್‌‌ ಪಟ್ಟಿ ಮಾಡಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಕೇರಳವು ಕಡಲತೀರಗಳು, ಗಿರಿಧಾಮಗಳು ಮತ್ತು ವಿವಿಧ ಪ್ರಕೃತಿಯ ಸ್ಥಳಾಕೃತಿಗಳಿಂದ ಕೂಡಿದೆ. ಇದು ಎಲ್ಲಾ ರೀತಿಯ ಪ್ರಯಾಣಿಕರನ್ನು ಆಕರ್ಷಿಸುವ ಪ್ರಯಾಣದ ತಾಣವಾಗಿದೆ.

ಸುಮಾರು ಎರಡು ವರ್ಷಗಳ ಕೊರೊನಾ ನಿರ್ಬಂಧಗಳ ನಂತರ ಪ್ರವಾಸೋದ್ಯಮ ಮತ್ತೆ ತೆರೆದುಕೊಳ್ಳುತ್ತುದ್ದು, ಹೆಚ್ಚಿನ ಜನರು ಪ್ರವಾಸ ಹೋಗಲು ಸ್ಥಳಗಳನ್ನು ಹುಡುಕುತ್ತಿದ್ದಾರೆ. ನ್ಯೂಯಾರ್ಕ್ ಟೈಮ್ಸ್‌ ಪಟ್ಟಿಯಲ್ಲಿ ಕೇರಳದ ಪ್ರವಾಸೋದ್ಯಮ ಸಾಮರ್ಥ್ಯವನ್ನು ಗುರುತಿಸಿರುವುದು ರಾಜ್ಯಕ್ಕೆ ವಿಶ್ವದಾದ್ಯಂತ ಜನರನ್ನು ಆಕರ್ಷಿಸುತ್ತದೆ.

ರಾಜ್ಯಕ್ಕೆ ಪ್ರಯಾಣಿಸಲು ಯೋಜಿಸುತ್ತಿದ್ದರೆ ಕೇರಳದ ಹಲವಾರು ಸ್ಥಳಗಳಿದ್ದು, ಅವುಗಳಲ್ಲಿ ಕುಮಾರಕೋಮ್ ತನ್ನ ಸುಂದರವಾದ ಹಿನ್ನೀರಿಗೆ ಪ್ರಸಿದ್ದವಾಗಿದೆ. ಅಲಪ್ಪುಳದ ಕಡಲತೀರಗಳು, ಮುನ್ನಾರ್‌ನ ಮಂಜಿನ ಬೆಟ್ಟಗಳು ಮತ್ತು ಕಣ್ಣೂರು ಮತ್ತು ತಿರುವನಂತಪುರಂನ ಐತಿಹಾಸಿಕ ಸ್ಥಳಗಳು ಸೇರಿವೆ.

ರಾಜ್ಯವು ತನ್ನ ಪಾಕಪದ್ಧತಿಯಲ್ಲಿ ವೈವಿಧ್ಯಮಯ ಸಮುದ್ರಾಹಾರ ಭಕ್ಷ್ಯಗಳು, ಸಸ್ಯಾಹಾರಿ ಭಕ್ಷ್ಯಗಳು, ತಿಂಡಿಗಳು, ಪಾನೀಯಗಳಿಗೆ ಕೂಡಾ ಹೆಸರವಾಸಿಯಾಗಿದೆ. ಕೋಝಿಕ್ಕೋಡ್‌ನ ಉತ್ತರದ ಜಿಲ್ಲೆಯನ್ನು ವಿಶೇಷವಾಗಿ ರಾಜ್ಯದ ಆಹಾರ ನಗರ ಎಂದು ಕರೆಯಲಾಗುತ್ತದೆ. ಇಷ್ಟೆ ಅಲ್ಲದೆ, ಕಲಾಭಿಮಾನಿಗಳಿಗೆ ಕೇರಳ ಆಕರ್ಷನೆಯ ತಾಣವಾಗಿದ್ದು, ಹಲವಾರು ಜಾನಪದ ಆಚರಣೆಗಳನ್ನು ವೀಕ್ಷಿಸಲು ಸಾಧ್ಯವಾಗುತ್ತದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

‘ದ್ವೇಷ’ ಬಿತ್ತುವ ಮೂರನೇ ಅನಿಮೇಟೆಡ್ ವೀಡಿಯೊವನ್ನು ಹಂಚಿಕೊಂಡ ಬಿಜೆಪಿ: ಮೌನವಹಿಸಿರುವ ಚು. ಆಯೋಗ

0
ಲೋಕಸಭೆಯ ಹೊಸ್ತಿಲಲ್ಲಿ ಬಿಜೆಪಿ ಮೀಸಲಾತಿ ಬಗ್ಗೆ ಮುಸ್ಲಿಮರು ಮತ್ತು ಕಾಂಗ್ರೆಸ್‌ನ್ನು ಗುರಿಯಾಗಿಸಿಕೊಂಡು ದ್ವೇಷ ಬಿತ್ತುವ ಮೂರನೇ ವಿಡಿಯೋವನ್ನು ಬಿಡುಗಡೆ ಮಾಡಿದ್ದು, ಈ ಬಗ್ಗೆ ಚು.ಅಯೋಗ ಮಾತ್ರ  ಮೌನವಾಗಿರುವುದು ಕಂಡು ಬಂದಿದೆ. ಕರ್ನಾಟಕ ಬಿಜೆಪಿ, ಮೀಸಲಾತಿ...