Homeಕರ್ನಾಟಕಕೋಲಾರ - ಪೊಲೀಸ್‌‌ ಬಲದೊಂದಿಗೆ ಅನಧೀಕೃತವಾಗಿ ಚರ್ಚ್‌ ಧ್ವಂಸ ಮಾಡಿದ ತಹಸಿಲ್ದಾರ್‌: ಆರೋಪ

ಕೋಲಾರ – ಪೊಲೀಸ್‌‌ ಬಲದೊಂದಿಗೆ ಅನಧೀಕೃತವಾಗಿ ಚರ್ಚ್‌ ಧ್ವಂಸ ಮಾಡಿದ ತಹಸಿಲ್ದಾರ್‌: ಆರೋಪ

ನಾವು ಪ್ರಾರ್ಥಿಸುವ ಏಸುವಿನ ಪ್ರತಿಮೆಯನ್ನು ಧ್ವಂಸ ಮಾಡಬೇಡಿ, ಹಾಗೆ ಇಳಿಸಿಕೊಡಿ ಎಂದು ಪರಿಪರಿಯಾಗಿ ವಿನಂತಿಸಿದರೂ, ಪ್ರತಿಮೆಯನ್ನು ಕೆಳಕ್ಕೆ ಬೀಳಿಸಿ ಚೂರು ಚೂರು ಮಾಡಿದ್ದಾರೆ ಎಂದು ಗ್ರಾಮಸ್ಥರು ದೂರಿದ್ದಾರೆ

- Advertisement -
- Advertisement -

ಕೋಲಾರ ಜಿಲ್ಲೆಯ ಮುಳಬಾಗಿಲಿನ ತಹಸಿಲ್ದಾರ್‌ ನೇತೃತ್ವದಲ್ಲಿ ಪೊಲೀಸರ ಬಂದೊಬಸ್ತ್‌ನೊಂದಿಗೆ ಸುಮಾರು 20 ಅಡಿಯ ಕ್ರಿಸ್ತ ಪ್ರತಿಮೆ ಮತ್ತು ಕ್ರೈಸ್ತರ ಪ್ರಾರ್ಥನಾ ಮಂದಿರವನ್ನು ಸೋಮವಾರದಂದು ಜೆಸಿಬಿ ಮೂಲಕ ಕೆಡವಿ ಹಾಕಲಾಗಿದೆ. ತಹಸಿಲ್ದಾರ್‌ ಅವರ ಕ್ರಮಕ್ಕೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದು, ಭೂಮಿಯ ಪ್ರಕರಣವು ಇನ್ನೂ ಹೈಕೋರ್ಟ್‌ನಲ್ಲಿದ್ದು, ಏಕಾಏಕಿಯಾಗಿ ಬಂದು ಚರ್ಚ್‌ ಧ್ವಂಸ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.

ಮುಳಬಾಗಿಲು ತಾಲುಕಿನ ಗೋಕುಂಟೆ ಗ್ರಾಮದ ಸಣ್ಣಗುಡ್ಡವೊಂದರಲ್ಲಿ ಕ್ರಿಶ್ಚಿಯನ್‌ ಸಮುದಾಯವು ಪ್ರಾರ್ಥನಾ ಮಂದಿರವೊಂದನ್ನು ಕಟ್ಟಿಕೊಂಡು ಸುಮಾರು 40 ವರ್ಷದಿಂದ ಪ್ರಾರ್ಥನೆ ನಡೆಸುತ್ತಾ ಬರುತ್ತಿದೆ. ಈ ಜಾಗದಲ್ಲಿ ದೊಡ್ಡದಾದ ಕ್ರಿಸ್ತ ಮೂರ್ತಿಯನ್ನು 2004ರಲ್ಲಿ ಸ್ಥಾಪಿಸಲಾಗಿತ್ತು. “ಈ ಪ್ರಾರ್ಥನಾ ಸ್ಥಳಕ್ಕೆ ಕ್ರಿಶ್ಚಿಯನ್ನರು ಮಾತ್ರವಲ್ಲದೆ, ಎಲ್ಲಾ ಸಮುದಾಯದವರೂ ಬಂದು ಪ್ರಾರ್ಥಿಸಿ ಹೋಗುತ್ತಿದ್ದರು” ಎಂದು ಗ್ರಾಮಸ್ಥರಾದ ಜೆ. ರಾಯಪ್ಪ ಅವರು ನಾನುಗೌರಿ.ಕಾಂ ಜೊತೆ ಮಾತನಾಡುತ್ತಾ ಹೇಳಿದ್ದಾರೆ.

ಈ ನಡುವೆ, ಕ್ರಿಶ್ಚಿಯನ್ನರು 300 ಎಕರೆ ಜಾಗವನ್ನು ಕಬಳಿಸುತ್ತಿದ್ದಾರೆ ಎಂದು ದುಷ್ಕರ್ಮಿಗಳು ಸುಳ್ಳು ಮಾಹಿತಿಯನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಬ್ಬಿಸಿದ್ದರು. ವಾಸ್ತವದಲ್ಲಿ ಪ್ರಾರ್ಥನಾ ಮಂದಿರ ಸರ್ವೇ ನಂಬರ್‌‌ 168 ಮತ್ತು 58 ನಲ್ಲಿ ಇದ್ದು, ಇದರಲ್ಲಿ ಕೇವಲ 3 ಎಕರೆ 26 ಗುಂಟೆ ಅಷ್ಟೇ ಇದೆ ಎಂದು ರಾಯಪ್ಪ ಅವರು ನಾನುಗೌರಿ.ಕಾಂಗೆ ಹೇಳಿದ್ದಾರೆ.

“ಈ ಜಮೀನಿಗೆ ಸಂಬಂಧಪಟ್ಟಂತೆ ನಮ್ಮಲ್ಲಿ ಹಕ್ಕು ಪತ್ರ ಇದೆ, ಪಂಚಾಯತ್‌ನಿಂದ ಖಾತೆ ಮಾಡಿಕೊಟ್ಟಿದ್ದಾರೆ. ತಾಲೂಕು ಪಂಚಾಯತ್‌ನಿಂದ ಇ-ಸೊತ್ತು ಮಾಡಿಕೊಟ್ಟಿದ್ದಾರೆ. ಈ ಎಲ್ಲಾ ದಾಖಲೆಯನ್ನು ಮಾಡಿಕೊಟ್ಟು ದಾಖಲೆ ಸರಿಯಿಲ್ಲ ಎಂದು ಕೇಸು ಹಾಕಲಾಗಿದೆ. ಈ ಹಿನ್ನಲೆಯಲ್ಲಿ ನಾವು ಕೂಡಾ ನ್ಯಾಯಾಲಯದಲ್ಲಿ ದಾವೆ ಹೂಡಿದ್ದೇವೆ” ಎಂದು ಅವರು ತಿಳಿಸಿದ್ದಾರೆ.

“ಜಮೀನಿಗೆ ಸಂಬಂಧಪಟ್ಟಂತೆ ಜನವರಿ 16ರ ಬುಧವಾರದಂದು ಹೈಕೊರ್ಟ್‌ನಲ್ಲಿ ವಿಚಾರಣೆ ಬಾಕಿಯಿದೆ. ವಿಚಾರಣೆ ನ್ಯಾಯಾಲಯದಲ್ಲಿ ಇರುವಾಗ ಸೋಮವಾರದಂದು ತಾಲೂಕು ದಂಡಾಧಿಕಾರಿಗಳು ಜೆಸಿಬಿಯೊಂದಿಗೆ ಏಕಾಏಕಿ ಬಂದು ನ್ಯಾಯಾಲಯದ ಆದೇಶ ಇದೆ ಎಂದು ಹೇಳಿ ಚರ್ಚ್ ಧ್ವಂಸ ಮಾಡಿದ್ದಾರೆ” ಎಂದು ರಾಯಪ್ಪ ಹೇಳಿದ್ದಾರೆ.

“ತಹಸಿಲ್ದಾರ್‌ ಅವರು ನ್ಯಾಯಾಲಯದ ಆದೇಶ ಇದೆ ಎಂದು ಯಾವುದೋ ಚಿತ್ರವನ್ನು ಮೊಬೈಲ್‌ನಲ್ಲಿ ತೋರಿಸಿದ್ದಾರೆ. ಸರ್ಕಾರಿ ಅಧಿಕಾರಿ ನ್ಯಾಯಾಲಯದ ಆದೇಶವನ್ನು ಪತ್ರದ ಮೂಲಕ ತೋರಿಸಬೇಕಲ್ಲವೇ? ಅವರು ಮೊಬೈಲ್‌ನಲ್ಲಿ ತೋರಿಸಿದ ಪತ್ರದಲ್ಲಿ ನ್ಯಾಯಾಲಯದ ಮೊಹರು ಇರಲಿಲ್ಲ, ನ್ಯಾಯಧೀಶರ ಸಹಿ ಇರಲಿಲ್ಲ. ಏಕಾಏಕಿ ಬಂದು ಚರ್ಚ್‌ ಧ್ವಂಸ ಮಾಡಿದ್ದಾರೆ” ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

“ಆರ್ಚ್‌, ಏಸುವಿನ ಪ್ರತಿಮೆ, ಪ್ರಾರ್ಥನಾ ಮಂದಿರವನ್ನು ಧ್ವಂಸ ಮಾಡಿದ್ದಾರೆ. ನಾವು ಅವರಿಗೆ, ಕನಿಷ್ಠ ಪಕ್ಷ ನಾವು ಪ್ರಾರ್ಥಿಸುವ ಏಸುವಿನ ಪ್ರತಿಮೆಯನ್ನು ಧ್ವಂಸ ಮಾಡಬೇಡಿ, ಹಾಗೆ ಇಳಿಸಿಕೊಡಿ ಎಂದು ಪರಿಪರಿಯಾಗಿ ವಿನಂತಿಸಿದೆವು. ಆದರೆ ಅವರು ಅದನ್ನು ಕೇಳದೇ, ಏಸುವಿನ ಪ್ರತಿಮೆಯನ್ನು ಕೆಳಕ್ಕೆ ಬೀಳಿಸಿ, ಚೂರು ಚೂರು ಮಾಡಿದ್ದಾರೆ. ಏಸುವಿನ ಪ್ರತಿಮೆಯ ಅರ್ಧ ಭಾಗವನ್ನು ತಹಸಿಲ್ದಾರ್‌ ಅವರೇ ಟ್ರಾಕ್ಟರ್‌ಗೆ ಹಾಕಿಕೊಂಡು ಹೋಗಿದ್ದಾರೆ” ಎಂದು ಜೆ. ರಾಯಪ್ಪ ಅವರು ಬೇಸರದಿಂದ ಹೇಳಿದ್ದಾರೆ.

ಪ್ರಾರ್ಥನಾ ಮಂದಿರ ಮತ್ತು ಕ್ರಿಸ್ತ ಪ್ರತಿಮೆ ಸರ್ಕಾರಿ ಭೂಮಿಯಲ್ಲಿ ಇರುವುದರಿಂದ, ನ್ಯಾಯಾಲಯದ ಆದೇಶದಂತೆ ಅದನ್ನು ಕೆಡವಲಾಗಿದೆ ಎಂದು ಮುಳಬಾಗಲು ತಹಸಿಲ್ದಾರ್‌‌ ಹೇಳಿದ್ದಾರೆ ಎಂದು ವರದಿಯಾಗಿದೆ. ಈ ಬಗ್ಗೆ ಪ್ರತಿಕ್ರಿಯೆಗಾಗಿ ನಾನುಗೌರಿ.ಕಾಂ ಮುಳಬಾಗಿಲು ತಹಸಿಲ್ದಾರ್‌ ಅವರಿಗೆ ಕರೆ ಮಾಡಿತ್ತಾದರೂ, ಅವರು ಕರೆಯನ್ನು ಸ್ವೀಕರಿಸಿಲ್ಲ.

ಈ ವರದಿಗಳನ್ನೂ ಓದಿ

ಕ್ರಿಶ್ಚಿಯನ್ನರ ಮೇಲೆ ಹಿಂಸಾಚಾರ: ಉತ್ತರ ಪ್ರದೇಶದಲ್ಲೇ ಹೆಚ್ಚು

ರಾಜ್ಯದಲ್ಲಿ ಕ್ರಿಶ್ಚಿಯನ್ನರ ಮೇಲೆ ದಾಳಿ: ಕಳೆದ 11 ತಿಂಗಳಲ್ಲಿ 39 ಪ್ರಕರಣ ದಾಖಲು- ಪಿಯುಸಿಎಲ್‌ ವರದಿ

ಕೋಲಾರ: ಕ್ರಿಶ್ಚಿಯನ್ನರ ಮೇಲೆ ಹಲ್ಲೆ, ಧರ್ಮಗ್ರಂಥಗಳಿಗೆ ಬೆಂಕಿ

ಬೇಲೂರು: ಕ್ರಿಶ್ಚಿಯನ್ನರ ಪ್ರಾರ್ಥನೆಗೆ ಬಜರಂಗದಳ ಕಾರ್ಯಕರ್ತರಿಂದ ಅಡ್ಡಿ, ಮಹಿಳೆಯರಿಂದ ಛೀಮಾರಿ!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ‘ರೋಹಿತ್ ವೇಮುಲಾ ಕಾಯ್ದೆ’ ಜಾರಿ: ಕೆ.ಸಿ ವೇಣುಗೋಪಾಲ್

0
ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಶಿಕ್ಷಣ ಸಂಸ್ಥೆಗಳಲ್ಲಿನ ಜಾತಿ ಮತ್ತು ಕೋಮು ದೌರ್ಜನ್ಯ ತಡೆಯಲು 'ರೋಹಿತ್ ವೇಮುಲಾ ಕಾಯ್ದೆ ಜಾರಿಗೊಳಿಸಲಾಗುವುದು ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್ ಭರವಸೆ ನೀಡಿದ್ದಾರೆ. ಸಾಮಾಜಿಕ ಮತ್ತು...