Homeಕರ್ನಾಟಕಚಂದನವನದ ಸುದ್ದಿ: ಇಬ್ಬರು ವಿಶೇಷ ಚೇತನ ಮಕ್ಕಳನ್ನು ದತ್ತು ಪಡೆದ ನಟಿ ಶ್ರೀಲೀಲಾ

ಚಂದನವನದ ಸುದ್ದಿ: ಇಬ್ಬರು ವಿಶೇಷ ಚೇತನ ಮಕ್ಕಳನ್ನು ದತ್ತು ಪಡೆದ ನಟಿ ಶ್ರೀಲೀಲಾ

- Advertisement -
- Advertisement -

ಕನ್ನಡದ ಭರಾಟೆ, ಕಿಸ್, ತೆಲುಗಿನ ಪೆಳ್ಳಿ ಸಂದಡಿ ಚಿತ್ರಗಳ ಮೂಲಕ ಭರವಸೆ ಮೂಡಿಸಿರುವ ಯುವ ನಟಿ ಶ್ರೀಲೀಲಾ ಈಗ ಇಬ್ಬರು ವಿಶೇಷ ಚೇತನ ಮಕ್ಕಳನ್ನು ದತ್ತು ಪಡೆಯುವ ಮಾನವೀಯ ಕಾರ್ಯದ ಮೂಲಕ ಜನಸಾಮಾನ್ಯರಿಗೂ ಮಾದರಿಯಾಗಿದ್ದಾರೆ.

ನಟಿ ಶ್ರೀಲೀಲಾ ಬೆಂಗಳೂರಿನ ಮಾತೃಶ್ರೀ‌ ಮನೋವಿಕಾಸ ಕೇಂದ್ರದ ಇಬ್ಬರು ದಿವ್ಯಾಂಗ ಮಕ್ಕಳನ್ನ ದತ್ತು ಪಡೆದು ಅಮ್ಮನಾಗಿದ್ದಾರೆ. ಬುದ್ದಿಮಾಂದ್ಯ ಮಕ್ಕಳ ವಸತಿಯುತ ವಿಶೇಷ ಶಾಲೆಗೆ ಭೇಟಿ ನೀಡಿದ್ದ ನಟಿ,  8 ತಿಂಗಳ ಕೂಸು ‘ಗುರು’ ಮತ್ತು ಶೋಭಿತ ಅನ್ನೋ ಹೆಣ್ಣು ಮಗುವನ್ನು ದತ್ತು ಪಡೆದು, ಅವರ ಸಂಪೂರ್ಣ ಜವಾಬ್ದಾರಿಯನ್ನು ಹೊತ್ತಿದ್ದಾರೆ.

ಈ ವೇಳೆ “ಬೈ ಟು ಲವ್” ಚಿತ್ರದ ನಿರ್ದೇಶಕ‌ ಹರಿ ಸಂತೋಷ್ ಶ್ರೀಲೀಲಾ ಅವ್ರಿಗೆ ಸಾಥ್ ನೀಡಿದ್ದಾರೆ.

ಇದನ್ನೂ ಓದಿ: ರಾತ್ರಿ ವೇಳೆ ಅಪರಿಚಿತರಿಂದ ಫೋನ್‌ ಕಾಲ್‌: ನಟಿ ಸಂಜನಾ ತರಾಟೆ

ಇವರು ಅಭಿನಯದ ಬಿಡುಗಡೆಗೆ ಸಿದ್ಧವಾಗಿರುವ ’ಬೈ ಟು ಲವ್’ ಚಿತ್ರದಲ್ಲಿ ಮಗುವಿನ ಜೊತೆ ನಟಿಸಿದ್ದು, ಚಿತ್ರಕ್ಕೂ ಮಕ್ಕಳಿಗೂ ವಿಶೇಷ ನಂಟಿದೆ. ಚಿತ್ರದಲ್ಲಿ ಆ ಮಗುವಿನೊಂದಿಗೆ ಬೆಸೆದಿದ್ದ ಬಂಧ ಮಕ್ಕಳನ್ನು ದತ್ತು ಪಡೆಯುವವರೆಗೂ ಕಡೆದುಕೊಂಡು ಬಂದಿದೆ. ’ಬೈ ಟು ಲವ್’ ಸಿನಿಮಾ ಇವತ್ತಿನ ಪೀಳಿಗೆಗೆ ಬದುಕಿನ ಪಾಠ ಮಾಡಲಿದೆ. ಅಂಥ ವಿಶೇಷ ವಿಚಾರಗಳು ಚಿತ್ರದಲ್ಲಿವೆ ಎನ್ನುತ್ತಾರೆ ಶ್ರೀಲೀಲಾ.

“ಹೀಗೇಲ್ಲಾ ಇರುತ್ತೆ ಅಂತ ಗೊತ್ತಿತ್ತು. ಆದ್ರೆ ಹತ್ತಿರದಿಂದ ನೋಡಿರಲಿಲ್ಲ. ಈ ಜಾಗಕ್ಕೆ ಬಂದಿದ್ದು ನನಗೆ ಹೊಸ ಲೋಕಕ್ಕೆ ಬಂದಂತೆ ಆಗಿದೆ. ಈ ಬಗ್ಗೆ ನಮ್ಮ ಕೈಯಲ್ಲಿ ಆಗುವಷ್ಟು ಜವಾಬ್ದಾರಿ ತೆಗೆದುಕೊಳ್ಳಬೇಕು. ಅಂಗವಿಕಲತೆ ಅಥವಾ ಮೆಡಿಕಲ್ ಕಂಡಿಷನ್‌ ಕಾರಣದಿಂದ ಈ ಮುಗ್ಧ ಮಕ್ಕಳನ್ನು ರೈಲ್ವೇ ಸ್ಟೇಷನ್, ಬಸ್ ಸ್ಟಾಪ್‌, ರಸ್ತೆ ಬದಿಯಲ್ಲಿ ಬಿಟ್ಟು ಹೋಗಿಬಿಡುತ್ತಾರೆ. ಇಂತಹ ಕೆಲಸ ಮಾಡಬಾರದು. ಅಷ್ಟು ಚಿಕ್ಕ ಮಕ್ಕಳಿಗೆ ಹೇಗೆ ಏನಾಗಿದೆ ಅಂತ ತಿಳಿಯುತ್ತದೆ..? ಯಾರು ಎತ್ತಿಕೊಂಡರು ಅವರೇ ಅಮ್ಮ ಎಂದುಕೊಳ್ಳುತ್ತಾರೆ ಅಷ್ಟು ಮುಗ್ಧರು ಇವರು. ಮಕ್ಕಳನ್ನು ನೋಡಿಕೊಳ್ಳುವ ತುಂಬಾ ಜಾಗಗಳಿವೆ. ನಮ್ಮ ಕೈಯಲ್ಲಿ ಆಗುವಷ್ಟು ಸಹಾಯ ಮಾಡಬೇಕು. ಇದಕ್ಕೆ ಲಕ್ಷವೂ, ಸಾವಿರಾರು ರೂಪಾಯಿ ಬೇಕಿಲ್ಲ” ಎಂದಿದ್ದಾರೆ.

“ಇಂತಹ ವಿಷಯ ಇಟ್ಟುಕೊಂಡು ಮಾಡಿರುವ ಚಿತ್ರದಲ್ಲಿ ನಟಿಸಿರುವುದಕ್ಕೆ ನನಗೆ ಹೆಮ್ಮೆಯಿದೆ. ಈಗ ನನಗೆ ನನ್ನ ಜೀವನದ ಗುರಿ ಏನು ಎಂಬುದು ಇಲ್ಲಿ ಅರ್ಥವಾಗಿದೆ. ತಂದೆ ತಾಯಿ ಈ ಮಕ್ಕಳನ್ನು ಬಿಟ್ಟು ಹೋದರೂ ನಾವೆಲ್ಲರೂ ಸೇರಿ ಈ ಮಕ್ಕಳ ಕುಟುಂಬವಾಗೋಣ. ಇನ್ಮುಂದೆ ಗುರು, ಶೋಭು ಇಬ್ಬರು ನನ್ನ ಮಕ್ಕಳು. ಅವರ ಪೂರ್ತಿ ಜವಾಬ್ದಾರಿ ನನ್ನದು” ಎಂದಿದ್ದಾರೆ ನಟಿ ಶ್ರೀಲೀಲಾ.

ನಟ ಧನ್ವೀರ್‌, ಶ್ರೀಲೀಲಾ ನಟನೆಯ ’ಬೈ ಟು ಲವ್’ ಚಿತ್ರ ಇದೇ ಫೆ. 18ಕ್ಕೆ ರಾಜ್ಯದಾದ್ಯಂತ ಬಿಡುಗಡೆಯಾಗುತ್ತಿದೆ.


ಇದನ್ನೂ ಓದಿ: ಟರ್ಬನ್ ಆಯ್ಕೆಯಾಗಿರಬಹುದಾದರೆ, ಹಿಜಾಬ್ ಏಕೆ ಆಗಬಾರದು?: ನಟಿ ಸೋನಮ್ ಕಪೂರ್ ಪ್ರಶ್ನೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಉತ್ತರಪ್ರದೇಶ: ಮಾದಕ ದ್ರವ್ಯ ಕಳ್ಳಸಾಗಣೆ, ಜುಗಾರಿ,  ಭಿಕ್ಷೆ ಬೇಡುವುದನ್ನು ‘ವೃತ್ತಿ’ ಎಂದು ಪಟ್ಟಿ ಮಾಡಿದ...

0
ಯೋಗಿ ಆದಿತ್ಯನಾಥ್‌ ನೇತೃತ್ವದ ಉತ್ತರಪ್ರದೇಶ ಸರಕಾರ ಮತ್ತೆ ಮುಜುಗರಕ್ಕೆ ಈಡಾಗಿದ್ದು, ಉತ್ತರಪ್ರದೇಶ ಪೊಲೀಸ್ ಮೊಬೈಲ್ ಅಪ್ಲಿಕೇಶನ್ UPCOPನಲ್ಲಿ ಬಾಡಿಗೆದಾರರ ಪರಿಶೀಲನೆಗಾಗಿ ವೃತ್ತಿ ಬಗ್ಗೆ ಪಟ್ಟಿ ಮಾಡಿದೆ. ಅವುಗಳಲ್ಲಿ 'ಮಾದಕ ದ್ರವ್ಯಗಳ ಕಳ್ಳಸಾಗಣೆ', 'ಜುಗಾರಿ',  ಮತ್ತು...