Homeಕರ್ನಾಟಕಕೊಡಗು: ವಿದ್ಯಾರ್ಥಿಗಳಿಗೆ ಬಜರಂಗದಳದಿಂದ ಕೇಸರಿ ಶಲ್ಯ ವಿತರಣೆ; ವಿಡಿಯೊ ವೈರಲ್

ಕೊಡಗು: ವಿದ್ಯಾರ್ಥಿಗಳಿಗೆ ಬಜರಂಗದಳದಿಂದ ಕೇಸರಿ ಶಲ್ಯ ವಿತರಣೆ; ವಿಡಿಯೊ ವೈರಲ್

- Advertisement -
- Advertisement -

ಮಡಿಕೇರಿ: ಶಾಲಾ ಕಾಲೇಜುಗಳ ಮಕ್ಕಳಿಗೆ ಕೇಸರಿ ಶಲ್ಯ ವಿತರಿಸುತ್ತಿರುವ ವೀಡಿಯೋ ವೈರಲ್ ಆಗಿದೆ. ಜೊತೆಗೆ ವಿದ್ಯಾರ್ಥಿಗಳಿಗೆ ಕೋಮು ಪ್ರಚೋದನೆಯನ್ನು ಮಾಡಿರುವುದೂ ವಿಡಿಯೊದಲ್ಲಿ ದಾಖಲಾಗಿದೆ.

ಸಿದ್ದಾಪುರ ಸಮೀಪದ ಅಭ್ಯತ್ ಮಂಗಲದಲ್ಲಿ ಬಜರಂಗದಳ ಮತ್ತು ದುರ್ಗಾವಾಹಿನಿಯ ಮುಖಂಡರು ಸೇರಿ ಕೇಸರಿ ಶಲ್ಯ ವಿತರಿಸಿದ್ದಾರೆ ಎಂದು ತಿಳಿದುಬಂದಿದೆ.

“ಸದ್ಯಕ್ಕೆ ಯೂನಿಫಾರ್ಮ್ ಫೋಲೋ ಮಾಡಿ, ಏನೂ ಮಾಡಬೇಡಿ… ಮಧ್ಯಂತರ ಆದೇಶ ಇದೆ. ಶಲ್ಯವನ್ನು ಬ್ಯಾಗೊಳಗೆ ಇಡ್ಕೊಳಿ… ಬ್ಯಾಗೊಳಗೂ ಬೇಡ… ಮನೆಯಲ್ಲಿ ಇಡ್ಕೊಳಿ” ಎಂದು ದುರ್ಗಾವಾಹಿನಿಯ ಮಹಿಳಾ ಪ್ರತಿನಿಧಿಯೊಬ್ಬರು ಹೇಳುತ್ತಿರುವುದನ್ನು ವಿಡಿಯೊದಲ್ಲಿ ಕಾಣಬಹುದು.

ಇದನ್ನೂ ಓದಿರಿ: ಮಡಿಕೇರಿ: ಕೇಸರಿ ಶಾಲು ಧರಿಸಲು ಬಜರಂಗದಳ ನಾಯಕರಿಂದ ಪ್ರಚೋದನೆ; ವಿಡಿಯೊ ವೈರಲ್‌‌

ಪುಟ್ಟ ಮಕ್ಕಳು ಸೇರಿದಂತೆ ವಿದ್ಯಾರ್ಥಿ ಸಮುದಾಯದಲ್ಲಿ ಕೋಮು ವೈರತ್ವವನ್ನು ಪ್ರಚೋದಿಸಿರುವ ಬಜರಂಗದಳ ಹಾಗೂ ದುರ್ಗಾವಾಹಿನಿಯವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಹಿಜಾಬ್‌ ಧರಿಸಿ ಬರುತ್ತಿದ್ದ ವಿದ್ಯಾರ್ಥಿನಿಯರನ್ನು ಹೊರಗಡೆ ನಿಲ್ಲಿಸಿದ ಬಳಿಕ ವಿವಾದ ಮುನ್ನೆಲೆಗೆ ಬಂದಿತ್ತು. ಹಿಜಾಬ್‌ ಮೊದಲಿನಿಂದಲೂ ಧರಿಸಲಾಗುತ್ತಿತ್ತು. ಆದರೆ ಕೇಸರಿ ಶಾಲನ್ನು ಹಿಜಾಬ್‌ ವಿರೋಧಿಯಾಗಿ ಬಳಸಿ ಕಾಲೇಜುಗಳಿಗೆ ಬರಲು ವಿದ್ಯಾರ್ಥಿಗಳು ಆರಂಭಿಸಿದರು. ಇದರ ಹಿಂದೆ ಕೇಸರಿ ಸಂಘಟನೆಗಳ ಪ್ರಚೋದನೆ ಇತ್ತೆಂಬುದಕ್ಕೆ ಈಗಾಗಲೇ ಹಲವು ವರದಿಗಳು ಸಾಕ್ಷಿಯಾಗಿವೆ.

ಉಡುಪಿಯ ಎಂಜಿಎಂ ಕಾಲೇಜಿನ ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ಬರಲು ಹಿಂದೂ ಜಾಗರಣ ವೇದಿಕೆ ಹಾಗೂ ಬಿಜೆಪಿ ಪ್ರಚೋದಿಸಿದ್ದವು. ಕೇಸರಿ ಶಾಲು ಹಾಗೂ ಕೇಸರಿ ಪೇಟವನ್ನು ಹಿಂಜಾವೇ ವಿತರಿಸಿತ್ತು ಎಂಬುದನ್ನು ‘ದಿ ನ್ಯೂಸ್ ಮಿನಿಟ್‌’ ಜಾಲತಾಣ ವರದಿ ಮಾಡಿತ್ತು. (ವರದಿಯನ್ನು ‘ಇಲ್ಲಿ’ ಓದಿರಿ)

ಮಡಿಕೇರಿಯ ಫೀಲ್ಡ್‌ ಮಾರ್ಷಲ್ ಕಾರ್ಯಪ್ಪ ಕಾಲೇಜಿನ ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ಕಾಲೇಜಿಗೆ ಹೋಗುವಂತೆ ಬಿಜೆಪಿ ಬೆಂಬಲಿತ ಹಿಂದುತ್ವ ಮುಖಂಡರು ಪ್ರಚೋದನೆ ಮಾಡುತ್ತಿರುವ ವಿಡಿಯೊ ವೈರಲ್ ಆಗಿತ್ತು. (ವರದಿಯನ್ನು ‘ಇಲ್ಲಿ’ ಓದಿರಿ)


ಇದನ್ನೂ ಓದಿರಿ: ಉಡುಪಿ: ಎಂಜಿಎಂ ವಿದ್ಯಾರ್ಥಿಗಳನ್ನು ಹಿಂಜಾವೇ, ಬಿಜೆಪಿ ಪ್ರಚೋದಿಸಿದ್ದು ಹೀಗೆ…

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

2 COMMENTS

  1. ದೇಶವನ್ನು ಹರಾಜಿಗೆ ಚಾಲನೆ ನೀಡಿ ಯುವ ಶಕ್ತಿಯ ಬಿಸಿ ಆಲೋಚನೆಗಳನ್ನು ದಿಕ್ಕ ತಪಸುತ್ತಿರುವ ಸನಾತನಿಗಳ ಮರ್ಮ ಅರ್ಥವಾಗುತ್ತದೆ.

    ಜನ ಜಾಗೃತಿ ಅಗತ್ಯ

  2. ಮಕ್ಕಳಿಗೆ ಪ್ರಸ್ತುತ ದಿನಗಳಲ್ಲಿ ಯಾವ ರೀತಿಯ ಶಿಕ್ಷಣ ನೀಡಬೇಕೆಂಬ ಉದ್ದೇಶ ಈ ನೋ ಸರ್ಕಾರಕ್ಕೆ ಇಲ್ಲ.. ಆದರೆ ಶಿಕ್ಷಣ ಕ್ಷೇತ್ರದಲ್ಲಿ ರಾಜಕೀಯ ಮಾಡೊಂದು ಎಷ್ಟು ಮಟ್ಟಿಗೆ ಸರಿ. ಶಿಕ್ಷಣ ಕ್ಷೇತ್ರದಲ್ಲಿ ರಾಜಕೀಯ ಪಕ್ಷಗಳು ತಮ್ಮ ಸ್ವಾರ್ಥಕ್ಕಾಗಿ ಮಕ್ಕಳ ಭವಿಷ್ಯದ ಜೊತೆ ಗೆ ಆಟ ಆಡೊಂದು ಸರಿ ಅಲ್ಲ . ಕೋಮುಗಲಭೆ ಧರ್ಮಾಧಾರಿತದೂರಣೆಗಳಿಗೆ ಈ ಶಿಕ್ಷಣ ಕ್ಷೇತ್ರದಲ್ಲಿ ಅವಕಾಶ ಇಲ್ಲ. ಏನು ಗೊತ್ತಿಲ್ಲದ ಈ ಮಕ್ಕಳಿಗೆ ನೀವು ದ್ವೇಷ ಭಾವನೆ ಬಿತ್ತುವುದು ಎಷ್ಟರ ಮಟ್ಟಿಗೆ ಸರಿ…
    ಶಾಲಾ ಕಾಲೇಜುಗಳಿಗೆ ಹೋಗಿ ಕೇಸರಿ ಶಲ್ಯ ವಿತರಣೆ ಮಾಡೂ ನೀವು ನೀವೇ ಜನ್ಮಕೊಂತಹ ಮಕ್ಕಳಿಗೆ ಈ ತರ ಶಲ್ಯ ಹಾಕಿ ಬಿದಿ ಬಿದಿಗೆ ಬಿಡಿ ನೋಡೋಣ ಆ ನಿಮ್ಮ ರಕ್ತದ ತಾಕತ್ತು ಗೊತ್ತಾಗಲಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ಹೆಚ್‌.ಡಿ ರೇವಣ್ಣ ನಾಲ್ಕು ದಿನ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಎನ್ನಲಾದ ಮನೆ ಕೆಲಸದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು  ನಾಲ್ಕು ದಿನಗಳ ಕಾಲ ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ನೀಡಿ...