Homeಮುಖಪುಟಕೊಲ್ಕತ್ತಾ ಪಾಲಿಕೆ ಚುನಾವಣೆ: ಬಹುತೇಕ ವಾರ್ಡ್‌ಗಳಲ್ಲಿ ಆಡಳಿತಾರೂಢ ಟಿಎಂಸಿ ಮುನ್ನಡೆ

ಕೊಲ್ಕತ್ತಾ ಪಾಲಿಕೆ ಚುನಾವಣೆ: ಬಹುತೇಕ ವಾರ್ಡ್‌ಗಳಲ್ಲಿ ಆಡಳಿತಾರೂಢ ಟಿಎಂಸಿ ಮುನ್ನಡೆ

- Advertisement -
- Advertisement -

ಪಶ್ಚಿಮ ಬಂಗಾಳದ ಕೊಲ್ಕತ್ತಾ ಮುನ್ಸಿಪಲ್ ಕಾರ್ಪೊರೇಶನ್‌ ಚುನಾವಣೆಯ ಮತ ಎಣಿಕೆ ಆರಂಭವಾಗಿದ್ದು, ರಾಜ್ಯ ಚುನಾವಣಾ ಆಯೋಗದ ಇತ್ತೀಚಿನ ಅಂಕಿಅಂಶಗಳ ಪ್ರಕಾರ ಆಡಳಿತಾರೂಢ ಟಿಎಂಸಿ ಬಹುತೇಕ ವಾರ್ಡ್‌ಗಳಲ್ಲಿ ಮುನ್ನಡೆ ಸಾಧಿಸಿದೆ.

ಕೋಲ್ಕತ್ತಾ ಮುನ್ಸಿಪಲ್ ಕಾರ್ಪೊರೇಷನ್ (ಕೆಎಂಸಿ) 144 ವಾರ್ಡ್‌ಗಳ ಮತ ಎಣಿಕೆ ನಡೆಯುತ್ತಿದೆ. ಮಮತಾ ಬ್ಯಾನರ್ಜಿ ನೇತೃತ್ವದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಪಕ್ಷವನ್ನು ಏಳು ಸ್ಥಾನಗಳಲ್ಲಿ ಈಗಾಗಲೇ ವಿಜಯಶಾಲಿ ಎಂದು ಘೋಷಿಸಲಾಗಿದೆ. ಪ್ರಸ್ತುತ 108 ವಾರ್ಡ್‌ಗಳಲ್ಲಿ ಮುನ್ನಡೆ ಸಾಧಿಸಿದೆ.

ಭಾರತೀಯ ಜನತಾ ಪಕ್ಷ (ಬಿಜೆಪಿ) ನಾಲ್ಕು ಸ್ಥಾನಗಳಲ್ಲಿ, ಕಾಂಗ್ರೆಸ್ ಮತ್ತು ಸಿಪಿಐ(ಎಂ) ತಲಾ ಎರಡು ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದರೆ, ಮೂರು ವಾರ್ಡ್‌ಗಳಲ್ಲಿ ಸ್ವತಂತ್ರ ಅಭ್ಯರ್ಥಿಗಳು ಮುನ್ನಡೆ ಸಾಧಿಸಿದ್ದಾರೆ.

ಇದನ್ನೂ ಓದಿ: ದಕ್ಷಿಣ ಕನ್ನಡ: ಬಿಲ್ಲವರಿಗೆ ದೈವಸ್ಥಾನ ಪ್ರವೇಶ ನಿರಾಕರಣೆ

ಉತ್ತರ ಕೊಲ್ಕತ್ತಾ ವಾರ್ಡ್ ಸಂಖ್ಯೆ 11 ರಲ್ಲಿ ಟಿಎಂಸಿ ಶಾಸಕ ಮತ್ತು ಹಾಲಿ ಕೌನ್ಸಿಲರ್ ಅತೀನ್ ಘೋಷ್ ಮುನ್ನಡೆ ಸಾಧಿಸಿದ್ದಾರೆ. ವಾರ್ಡ್ ಸಂಖ್ಯೆ 13 ರಲ್ಲಿ ಟಿಎಂಸಿಯ ಹಾಲಿ ಕೌನ್ಸಿಲರ್ ಅನಿಂದ್ಯಾ ರೌತ್ ಇತರರಿಗಿಂತ ಮುಂದಿದ್ದರು.

ವಾರ್ಡ್ ಸಂಖ್ಯೆ 22 ಮತ್ತು 23 ರಲ್ಲಿ ಬಿಜೆಪಿ ಮತ್ತು ವಾರ್ಡ್ ಸಂಖ್ಯೆ 45 ರಲ್ಲಿ ಕಾಂಗ್ರೆಸ್ ಮುನ್ನಡೆ ಸಾಧಿಸಿದೆ. ವಾರ್ಡ್ ಸಂಖ್ಯೆ 103, 98 ರಲ್ಲಿ ಸಿಪಿಐ(ಎಂ) ಮುನ್ನಡೆ ಸಾಧಿಸಿದೆ.

ವಾರ್ಡ್ ಸಂಖ್ಯೆ 22 ರಲ್ಲಿ, ಬಿಜೆಪಿಯ ಹಾಲಿ ಕೌನ್ಸಿಲರ್ ಮಿನಾ ದೇವಿ ಪುರೋಹಿತ್ ಮತ್ತು ಟಿಎಂಸಿಯ ಅಭ್ಯರ್ಥಿ ನಡುವೆ ತೀವ್ರ ಪೈಪೋಟಿ ನಡೆಯುತ್ತಿದೆ. ವಾರ್ಡ್ ಸಂಖ್ಯೆ 45 ರಲ್ಲಿ, ಕಾಂಗ್ರೆಸ್‌ನ ಹಾಲಿ ಕೌನ್ಸಿಲರ್ ಸಂತೋಷ್ ಪಾಠಕ್ ಅವರು ತಮ್ಮ ಸಮೀಪದ ಪ್ರತಿಸ್ಪರ್ಧಿ ಟಿಎಂಸಿಗಿಂತ ಮುಂದಿದ್ದಾರೆ.

ಸುಮಾರು 40.5 ಲಕ್ಷ ಮತದಾರರಲ್ಲಿ ಶೇಕಡಾ 63 ರಷ್ಟು ಮತದಾರರು ಪಾಳಿಕೆ ಚುನಾವಣೆಯಲ್ಲಿ ಮತ ಚಲಾಯಿಸಿದ್ದರೂ ಸಹ, ಎರಡು ಬೂತ್‌ಗಳಲ್ಲಿ ಬಾಂಬ್‌ಗಳನ್ನು ಎಸೆಯುವುದು ಸೇರಿದಂತೆ ಹಿಂಸಾಚಾರದ ಘಟನೆಗಳು ನಡೆದಿದ್ದವು.


ಇದನ್ನೂ ಓದಿ: ಕೊಲ್ಕತ್ತಾದಲ್ಲಿ ಹೊಸ ಕಾರ್ಯಕ್ರಮ ಘೋಷಿಸಿದ ಮುನಾವರ್‌ ಫಾರೂಖಿ!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

Fact Check : ದೋಸೆ ಕುರಿತ ರಾಹುಲ್ ಗಾಂಧಿಯ ಭಾಷಣದ ವಿಡಿಯೋ ಎಡಿಟೆಡ್

0
ತಮಿಳುನಾಡಿನಲ್ಲಿ ಕಾಂಗ್ರೆಸ್ ಮತ್ತು ಮಿತ್ರ ಪಕ್ಷ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಆಯೋಜಿಸಿದ್ದ ರ್‍ಯಾಲಿಯಲ್ಲಿ ರಾಹುಲ್ ಗಾಂಧಿ ಮಾಡಿದ್ದು ಎನ್ನಲಾದ ಭಾಷಣದ ವಿಡಿಯೋವೊಂದು ವೈರಲ್ ಆಗಿದೆ. ಹದಿನಾರು ನಿಮಿಷದ ವಿಡಿಯೋದಲ್ಲಿ "ನೀವು, ನನಗೆ ದೋಸೆ...