Homeಅಂತರಾಷ್ಟ್ರೀಯಕುಲಭೂಷಣ್ ಜಾಧವ್ ಪ್ರಕರಣ | ಅರ್ಜಿ ಆಲಿಸಲು ತ್ರಿಸದಸ್ಯ ಪೀಠ ರಚಿಸಿದ ಪಾಕ್ ಕೋರ್ಟ್

ಕುಲಭೂಷಣ್ ಜಾಧವ್ ಪ್ರಕರಣ | ಅರ್ಜಿ ಆಲಿಸಲು ತ್ರಿಸದಸ್ಯ ಪೀಠ ರಚಿಸಿದ ಪಾಕ್ ಕೋರ್ಟ್

50 ವರ್ಷದ ನಿವೃತ್ತ ಭಾರತೀಯ ನೌಕಾಪಡೆಯ ಅಧಿಕಾರಿ ಜಾಧವ್‌ಗೆ 2017 ರ ಏಪ್ರಿಲ್‌ನಲ್ಲಿ ಗೂಢಚರ್ಯೆ ಮತ್ತು ಭಯೋತ್ಪಾದನೆ ಆರೋಪದ ಮೇಲೆ ಪಾಕಿಸ್ತಾನದ ಮಿಲಿಟರಿ ನ್ಯಾಯಾಲಯ ಮರಣದಂಡನೆ ವಿಧಿಸಿದೆ.

- Advertisement -
- Advertisement -

ಮರಣದಂಡನೆ ಶಿಕ್ಷೆಗೆ ಗುರಿಯಾಗಿರುವ ನಿವೃತ್ತ ಭಾರತೀಯ ನೌಕಾಪಡೆಯ ಅಧಿಕಾರಿ ಕುಲಭೂಷಣ್ ಜಾಧವ್ ಅವರಿಗೆ ಕಾನೂನು ಪ್ರತಿನಿಧಿಯನ್ನು ನೇಮಿಸುವಂತೆ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ಆಲಿಸಲು ಪಾಕಿಸ್ತಾನದ ಉನ್ನತ ನ್ಯಾಯಾಲಯವು ಮೂರು ಸದಸ್ಯರ ನ್ಯಾಯಪೀಠವನ್ನು ರಚಿಸಿದೆ.

ಪ್ರಕರಣದ ವಿಚಾರಣೆ ನಡೆಸಲು ದೊಡ್ಡ ನ್ಯಾಯಪೀಠ ರಚಿಸುವಂತೆ ಮುಖ್ಯ ನ್ಯಾಯಮೂರ್ತಿ ಅಥರ್ ಮಿನಲ್ಲಾ ನೇತೃತ್ವದ ಇಬ್ಬರು ಸದಸ್ಯರ ಪೀಠ ಸೋಮವಾರ ಆದೇಶಿಸಿದ ನಂತರ ಇಸ್ಲಾಮಾಬಾದ್ ಹೈಕೋರ್ಟ್ (ಐಎಚ್‌ಸಿ) ಈ ನಿರ್ಧಾರ ಕೈಗೊಂಡಿದೆ.

ಜಾಧವ್ ಪರ ವಕೀಲರನ್ನು ನೇಮಿಸುವಂತೆ ಪಾಕಿಸ್ತಾನ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ಸೋಮವಾರ ಆಲಿಸಿತ್ತು. ಮರಣದಂಡನೆ ಖೈದಿಗೆ ಸಲಹೆಗಾರರನ್ನು ನೇಮಿಸಲು ಭಾರತಕ್ಕೆ “ಮತ್ತೊಂದು ಅವಕಾಶವನ್ನು” ನೀಡುವಂತೆ ಪಾಕಿಸ್ತಾನ ಸರ್ಕಾರಕ್ಕೆ ಆದೇಶಿಸಿದ್ದರಿಂದ ಜಾಧವ್ ಪ್ರಕರಣದಲ್ಲಿ ಮೂವರು ಹಿರಿಯ ವಕೀಲರನ್ನು ’ಅಮಿಸಿ ಕ್ಯೂರಿ’ ಎಂದು ಹೆಸರಿಸಿದೆ.

ಹೊಸ ನ್ಯಾಯಪೀಠದಲ್ಲಿ ಮುಖ್ಯ ನ್ಯಾಯಮೂರ್ತಿ ಅಥರ್ ಮಿನಲ್ಲಾ, ನ್ಯಾಯಮೂರ್ತಿ ಅಮೀರ್ ಫಾರೂಕ್ ಮತ್ತು ನ್ಯಾಯಮೂರ್ತಿ ಮಿಯಾಂಗುಲ್ ಹಸನ್ ರಾಂಜ್‌ಗೆಬ್ ಸೇರಿದ್ದಾರೆ.

ಆಗಸ್ಟ್ 3 ರಂದು ಪ್ರಕರಣದ ವಿಚಾರಣೆ ನಡೆಸಿದ ಹಿಂದಿನ ನ್ಯಾಯಪೀಠಕ್ಕೆ ನ್ಯಾಯಮೂರ್ತಿ ಫಾರೂಕ್ ಅವರನ್ನು ಸೇರಿಸಲಾಯಿತು. ಪ್ರಕರಣದ ಮುಂದಿನ ವಿಚಾರಣೆಯನ್ನು ಸೆಪ್ಟೆಂಬರ್ 3 ಕ್ಕೆ ನಿಗದಿಪಡಿಸಲಾಗಿದೆ.

50 ವರ್ಷದ ನಿವೃತ್ತ ಭಾರತೀಯ ನೌಕಾಪಡೆಯ ಅಧಿಕಾರಿ ಜಾಧವ್‌ಗೆ 2017 ರ ಏಪ್ರಿಲ್‌ನಲ್ಲಿ ಗೂಢಚರ್ಯೆ ಮತ್ತು ಭಯೋತ್ಪಾದನೆ ಆರೋಪದ ಮೇಲೆ ಪಾಕಿಸ್ತಾನದ ಮಿಲಿಟರಿ ನ್ಯಾಯಾಲಯ ಮರಣದಂಡನೆ ವಿಧಿಸಿದೆ.


ಓದಿ: ಕುಲಭೂಷಣ್ ಜಾಧವ್ ಪರ ವಕೀಲರನ್ನು ನೇಮಿಸಲು ಭಾರತಕ್ಕೆ ಮತ್ತೊಂದು ಅವಕಾಶ ನೀಡಿ: ಪಾಕ್ ನ್ಯಾಯಾಲಯ
 


 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಣಿಪುರ ಹಿಂಸಾಚಾರಕ್ಕೆ ಬಲಿಯಾದವರ ಬಗ್ಗೆ ಮೋದಿ ಸರ್ಕಾರಕ್ಕೆ ಸ್ವಲ್ಪವೂ ಸಹಾನುಭೂತಿ ಇಲ್ಲ: ಮಲ್ಲಿಕಾರ್ಜುನ ಖರ್ಗೆ

0
ಮಣಿಪುರದ ಪರಿಸ್ಥಿತಿಯ ಬಗ್ಗೆ ಮೋದಿ ಸರಕಾರ ನಿರಾಸಕ್ತಿಯನ್ನು ಹೊಂದಿದ್ದು, ಪಶ್ಚಾತ್ತಾಪವಿಲ್ಲದಂತೆ ವರ್ತಿಸುತ್ತಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿಯನ್ನು ನಡೆಸಿದೆ. ಈ ಕುರಿತು ಎಕ್ಸ್‌ನಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ...