Homeಕರ್ನಾಟಕದಾರಿ ತಪ್ಪಿಸುವ ಹುನ್ನಾರ ಅಡಗಿದೆ/ಆಹಾರ ಪರಂಪರೆ ಮತ್ತು ವಚನ ಚಳವಳಿ

ದಾರಿ ತಪ್ಪಿಸುವ ಹುನ್ನಾರ ಅಡಗಿದೆ/ಆಹಾರ ಪರಂಪರೆ ಮತ್ತು ವಚನ ಚಳವಳಿ

- Advertisement -
- Advertisement -

ಯಾವುದೇ ಆಹಾರ ವ್ಯಕ್ತಿಯ ದೇಹ-ಅಭಿರುಚಿ-ಆರೋಗ್ಯಕ್ಕೆ ಸಂಬಂಧಿಸಿದ ಸ್ವತಂತ್ರ ಆಯ್ಕೆ. ಧಾರ್ಮಿಕ ಫಲಾಪೇಕ್ಷೆಗಳಿಲ್ಲದೆ ಸೊಪ್ಪು-ತರಕಾರಿಗಳಂತೆ ಸಾಕು ಪ್ರಾಣಿಗಳನ್ನು ಬಳಸುವುದು ದಿನನಿತ್ಯದ ಸಾಮಾನ್ಯ ಆಹಾರ ಪದ್ಧತಿ.

ಈ ಪ್ರಜಾಪ್ರಭುತ್ವದಲ್ಲಿ ಯಾರು ಯಾವ ಆಹಾರ ತಿನ್ನಬೇಕೆಂದು ವಿಧಿಸುವುದು/ನಿಷೇಧಿಸುವುದು ಸರ್ವಾಧಿಕಾರಿ ಅವಿವೇಕದ ಪರಮಾವಧಿ. ಈ ಫರ್ಮಾನುಗಳ ಹಿಂದೆ ಜಾತೀಯತೆ/ಮತೀಯ ಅಸಹನೆ/ಅಸ್ಪೃಶ್ಯತಾಚರಣೆಗಳ ಸಮರ್ಥನೆ… ಇತ್ಯಾದಿ ರಾಜಕೀಯ ತಂತ್ರಗಳಿವೆ. ಈ ಷಡ್ಯಂತ್ರಗಳನ್ನು ಮರೆಮಾಚಲು 12ನೇ ಶತಮಾನದ ಶರಣರ ವಚನಗಳನ್ನು ಅವುಗಳ ಸಾಂದರ್ಭಿಕಾರ್ಥ-ಪೂರ್ಣಾರ್ಥ-ಒಟ್ಟು ಆಶಯಗಳ ಹಿನ್ನೆಲೆ ತಪ್ಪಿಸಿ ಬಳಸಿಕೊಳ್ಳುವುದರಲ್ಲಿ ಎಲ್ಲರನ್ನು ದಾರಿ ತಪ್ಪಿಸುವ ಹುನ್ನಾರವಡಗಿದೆ.

ಬಸವಣ್ಣನ ವಚನಗಳಲ್ಲಿ ಮಾಂಸಾಹಾರದ ತಿರುಳು ಹೆಚ್ಚಾಗಿ ಕಂಡುಬಂದಿರುವುದು- ವೈದಿಕರು ಯಜ್ಞ ಯಾಗಾದಿಗಳಲ್ಲಿ ಕೊಡುವ ಜೀವ ಬಲಿ ಮತ್ತು ಸಾಮೂಹಿಕವಾಗಿ ಜನ ಕ್ಷುದ್ರದೇವತೆಗಳ ಆರಾಧನೆಯಲ್ಲಿ ಹಬ್ಬದ ಹರಕೆಗಾಗಿ ಕೊಡುವ ಪ್ರಾಣಿಬಲಿಗಳ ಸಂದರ್ಭಗಳ ಉಲ್ಲೇಖಗಳಲ್ಲಿ, ‘ಹೋಮದ ನೇಮದಲ್ಲಿ ಹೋತನವೆಂಬ ಅನಾಮಿಕರೊಡನಾಡಿ ಗೆಲ್ಲುವುದೇನು…’, ‘ನಾನು ಕೊಲ್ಲೆ, ನೇಣು ಕೊಂದಿತ್ತೆಂಬ ಸೂನೆಗಾರರನೇನೆಂಬೆ’ (ನೇಣು=ಜನಿವಾರ) ಹಿಂಸಾತ್ಮಕ ಕ್ರಿಯೆಗಳ ವಿಪ್ರರನ್ನು ಹೊಲೆತನದ ತಳಕ್ಕೆ ಅನಾಮಿಕರೆಂದು ಸ್ಥಳಾಂತರಿಸಿದ್ದಾರೆ. ಹಾಗೆ ಸಾಮಾನ್ಯ ಜನರ ಕಿರುಕುಳ ದೈವಾರಾಧನೆಯ ಬಲಿ-ಹಿಂಸೆಗಳನ್ನು ಖಂಡಿಸಿ- ‘ಕುರಿ ಬೇಡ, ಮರಿ ಬೇಡ ಬರಿಯ ಪತ್ರೆಯ ತಂದು ಮರೆಯದೆ ಪೂಜಿಸು…’ ಎಂದಿದ್ದಾರೆ.

ಒಟ್ಟು ಧಾರ್ಮಿಕಾಚರಣೆಯ ಮೌಢ್ಯದಲ್ಲಿ ತಮ್ಮ ಇಹ-ಪರ ಸುಖ, ಸಮೃದ್ಧಿ ಭೋಗಭಾಗ್ಯಗಳ ಈಡೇರಿಕೆಗಾಗಿ ಇನ್ನೊಂದು ಜೀವವನ್ನು ಬಲಿಕೊಟ್ಟು ತಮ್ಮ ಮಾಂಸಾಹಾರದ ಬಯಕೆಯನ್ನು ತೀರಿಸಿಕೊಳ್ಳುವ ರೂಢಿಯನ್ನು ಸ್ವಹಿತಕ್ಕಾಗಿ ಅನ್ಯಜೀವವನ್ನು ಕೊಲ್ಲುವ ಹಿಂಸಾರಭಸಮತೆಯನ್ನು ಖಂಡಿಸಿದ್ದಾರೆ.

ಹೀಗಾಗಿ ಬಸವಣ್ಣನ ವಚನಾಭಿವ್ಯಕ್ತಿ ಕೇವಲ ಮಾಂಸಾಹಾರಕ್ಕೆ ಸಂಬಂಧಿಸಿಲ್ಲ. ಉದಾಹರಣೆ, ‘ಸತ್ತುದನನೆಳೆವನೆತ್ತಣ ಹೊಲೆಯ?’
ಹೊತ್ತು ತಂದು ನೀವು ಕೊಲ್ಲುವಿರಿ ‘ಎಂದಿರುವುದು ಹಾಗೆ’ ಎಡದ ಕೈಯಲಿ ಕತ್ತಿ, ಬಲದ ಕೈಯಲಿ ಮಾಂಸ ಬಾಯಲ್ಲಿ ಸುರೆಯ ಗಡಿಗೆ… ಅವರ ಲಿಂಗನೆಂಬೆ- ಸಂಗನೆಂಬೆ’ ಎಂಬಲ್ಲಿ ಸ್ವೀಕಾರಭಾವವಿದೆ.

ಸಸ್ಯಾಹಾರ-ಮಾಂಸಾಹಾರವೆಂಬ ಚರ್ಚೆಗಿಂತ ಬಸವಣ್ಣನ ತೀವ್ರ ಪ್ರತಿಭಟನೆ-ತಿರಸ್ಕಾರಗಳಿರುವುದು ದೇವರು-ಧರ್ಮ-ಶಾಸ್ತ್ರಗಳ ಪ್ರಮಾಣುವಿನಲ್ಲಿ ಬಲಿ-ಹಿಂಸೆಯನ್ನು ಧಾರ್ಮಿಕಗೊಳಿಸುವ/ಮೌಲಿಕಗೊಳಿಸುವ/ತಾತ್ವಿಕಗೊಳಿಸುವ ವೈದಿಕರ ಅಪಾಯಕಾರಿ ಪ್ರವೃತ್ತಿಯನ್ನು ಖಂಡಿಸುವಲ್ಲಿ, ಜತೆಗೆ ಹೀಗಾದಾಗ ಸಮಾಜದ ಅಧಃಪತನದ ಗತಿ ತೀವ್ರವಾಗುತ್ತದಲ್ಲ ಎಂಬ ಆತಂಕ- ಮರುಕ – ಕಾಳಜಿಗಳೂ ಬಸವಣ್ಣನ ದರ್ಶನದಲ್ಲಿದೆ.

ಡಾ.ಲತಾ ಮೈಸೂರು, ಪ್ರಾಧ್ಯಾಪಕರು

ಲಿಂಗಾಯಿತ ಧರ್ಮವು ಮಾಂಸಾಹಾರಿಗಳನ್ನೂ ಒಪ್ಪುವ ಮೂಲಕ ಆಹಾರ ಸಂಸ್ಕೃತಿಯ ವಿಚಾರದಲ್ಲಿ ಪ್ರಜಾತಾಂತ್ರಿಕವಾಗಿರುತ್ತದೆಯೇ ಎಂಬ ಚರ್ಚೆ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಕರ್ನಾಟಕದ ಆಹಾರ ಸಂಸ್ಕೃತಿ ಮತ್ತು ಯಾವುದು ಮೇಲು ಯಾವುದು ಕೀಳು ಎಂಬುದರಲ್ಲೇ ಶ್ರೇಣೀಕರಣವನ್ನು ಪ್ರತಿಪಾದಿಸುವ ಈ ದೇಶದಲ್ಲಿ ಇಂತಹ ಚರ್ಚೆಗಳು ಬರುವುದು, ಬರಬೇಕಾದದ್ದು ಸಹಜ. ಆದರೆ, ಈ ಸದ್ಯ ಅದು ಎದ್ದಿರುವ ಸಂದರ್ಭ ಹಾಗೂ ಅದರ ಟಾರ್ಗೆಟ್ ಸರಿಯಿಲ್ಲ ಎಂಬ ಅನಿಸಿಕೆಗಳೂ ಇವೆ. ಈ ಹಿನ್ನೆಲೆಯಲ್ಲಿ ವಿವಿಧ ಚಿಂತಕರನ್ನು ಪತ್ರಿಕೆಯು ಮಾತಾಡಿಸಿತು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಮಗ ಬೇಗನೆ ಮನೆಗೆ ಬರಲಿ..’; ಭಾವುಕರಾದ ಅಭೀಜಿತ್ ದಿಪ್ಕೆ ಅವರ ಪೋಷಕರು

ಸಿಜೆಪಿ ಸಂಸ್ಥಾಪಕ ಅಭಿಜೀತ್ ದೀಪಿಕೆ ನೇತೃತ್ವದಲ್ಲಿ ನಡೆದ ಅಸಾಧಾರಣ ಅಭಿಯಾನವು ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಯಲ್ಲಿ ಅಂತಿಮವಾಗಿದೆ. ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಅವರ ಪೋಷಕರು ಭಾವುಕರಾಗಿದ್ದಾರೆ. "ಮಗ ಬೇಗನೆ ಮನೆಗೆ...

ಧರ್ಮೇಂದ್ರ ಪ್ರಧಾನ್ ರಾಜೀನಾಮೆ: ಕಾಕ್ರೋಚ್‌ಗಳಿಗೆ ಅಭಿನಂದಿಸಿದ ಸೋನಮ್ ವಾಂಗ್‌ಚುಕ್ – ಪ್ರಕಾಶ್‌ ರಾಜ್

ದೇಶದ ಯುವಜನರ ಹಲವು ದಿನಗಳ ಹೋರಾಟದ ಬಳಿಕ ಮೋದಿ ನೇತೃತ್ವದ ಕೇಂದ್ರ ಸರ್ಕಾರ ವಿದ್ಯಾರ್ಥಿಗಳ ಮುಂದೆ ಮಂಡಿಯೂರಿದೆ; ಸಚಿವ ಸ್ಥಾನಕ್ಕೆ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿದ್ದಾರೆ. ಈ ಗೆಲುವಿಗೆ ಕಾಕ್ರೋಚ್ ಜನತಾ ಪಕ್ಷದ...

ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಜಿರಳೆಗಳ ಹರ್ಷೋದ್ಗಾರ: ದೆಹಲಿ ಪೊಲೀಸರಿಂದ ಸಾರ್ವಜನಿಕ ಕ್ಷಮೆಯಾಚನೆಗೆ ಆಗ್ರಹ

ದೇಶಾದ್ಯಂತ ನಡೆಯುತ್ತಿರುವ ಸಿಜೆಪಿ ಪ್ರತಿಭಟನೆಗಳ ನಡುವೆ ನೀಟ್ ಪತ್ರಿಕೆ ಸೋರಿಕೆಗೆ ಸಂಬಂಧಿಸಿದಂತೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ರಾಜೀನಾಮೆ ನೀಡಿದ್ದು, ದೆಹಲಿಯ ಜಂತರ್‌ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿರುವ ಕಾಕ್ರೋಚ್‌ ಜನತಾ...

ಕಾಕ್ರೋಚ್‌ಗಳಿಗೆ ಮಣಿದ ಮೋದಿ ಸರ್ಕಾರ; ಸಚಿವ ಸ್ಥಾನಕ್ಕೆ ಧರ್ಮೇಂದ್ರ ಪ್ರಧಾನ್‌ ರಾಜೀನಾಮೆ

ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ನೇತೃತ್ವದಲ್ಲಿ ದೇಶಾದ್ಯಂತ ನಡೆಯುತ್ತಿರುವ ಪ್ರತಿಭಟನೆಗಳ ಮಧ್ಯೆ, ನೀಟ್ ಅಕ್ರಮಗಳಿಗೆ ಸಂಬಂಧಿಸಿದಂತೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಇಂದು (ಜುಲೈ 25) ಪ್ರಧಾನ ಮಂತ್ರಿಗಳಿಗೆ ತಮ್ಮ...

ಅಭಿಜೀತ್ ದಿಪ್ಕೆಗೆ ಟೈಫಾಯ್ಡ್; ಪ್ರತಿಭಟನೆ ಮುಂದುವರಿಯಲಿದೆ ಎಂದ ಸಿಜೆಪಿ ಸಂಸ್ಥಾಪಕ

ತನಗೆ ಟೈಫಾಯ್ಡ್ ಇರುವುದು ಪತ್ತೆಯಾಗಿದೆ ಎಂದು ಕಾಕ್ರೋಚ್‌ ಜನತಾ ಪಕ್ಷದ (ಸಿಜೆಪಿ) ಸಂಸ್ಥಾಪಕ ಅಭಿಜೀತ್ ದಿಪ್ಕೆ ಅವರು ಇಂದು ಹೇಳಿದ್ದಾರೆ. "ನನ್ನ ಅನಾರೋಗ್ಯವು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ...

ಮುಸ್ಲಿಮರ ಬಗ್ಗೆ ನಿಂದನಾತ್ಮಕ, ಪ್ರಚೋದನಕಾರಿ ಹೇಳಿಕೆ : ಸಿ.ಟಿ ರವಿ ವಿರುದ್ಧ FIR

ಮುಸ್ಲಿಮರ ವಿರುದ್ಧ ನಿಂದನಾತ್ಮಕ ಹಾಗೂ ಪ್ರಚೋದನಕಾರಿ ಹೇಳಿಕೆ ನೀಡಿದ ವಿಧಾನಪರಿಷತ್ ಸದಸ್ಯ ಸಿ.ಟಿ ರವಿ ವಿರುದ್ಧ ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ನಗರದ ಜಾಮಿಯಾ ಮಸೀದಿಯ ಅಧ್ಯಕ್ಷ ಮುದಸ್ಸಿರ್ ಪಾಷಾ ಅವರು...

ಹತ್ಯಾಕಾಂಡಕ್ಕೆ ಸಮನಾದ NEET ಹಗರಣ ನಡೆಯಲು ಬಿಟ್ಟ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಕೊಡಲಿ

ನೀಟ್ ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳು ಲೀಕ್ ಆದ ನಂತರದ ಬೆಳವಣಿಗೆಗಳನ್ನು ಇಡೀ ದೇಶ ಗಮನಿಸುತ್ತಿದೆ. ಅದರಲ್ಲೂ ವಿಶೇಷವಾಗಿ ಜೂನ್ ಆರಂಭದಿಂದ ಇಲ್ಲಿಯವರೆಗೆ ದೇಶದ ವಿದ್ಯಾರ್ಥಿಗಳು ನಡೆಸುತ್ತಿರುವ ಆಂದೋಲನವನ್ನು ದೇಶದ ಜನತೆ ನೋಡುತ್ತಿದ್ದಾರೆ. ದೇಶದ...

ಸಿಜೆಪಿ ಮತ್ತು ಜೆನ್‌ ಜಿಫಿಕೇಶನ್: ಪ್ರಸ್ತುತ ಬೆಳವಣಿಗೆ, ಭವಿಷ್ಯದ ಸಾಧ್ಯತೆ

ಇತ್ತೀಚಿನ ಬೆಳವಣಿಗೆಗಳು ಕಳೆದ ಒಂದು ತಿಂಗಳಿಂದ ನಡೆಯುತ್ತಿರುವ ಸಿಜೆಪಿ (ಕಾಕ್ರೋಚ್‌ ಜನತಾ ಪಕ್ಷ) ಪ್ರತಿಭಟನೆ ಈಗ ತಾರ್ಕಿಕ ಹಂತಕ್ಕೆ ತಲಪುತ್ತಿದೆ. ಪ್ರಶ್ನೆಪತ್ರಿಕೆ ಸೋರಿಕೆಯ ಕಾರಣಕ್ಕೆ ನೀಟ್‌ನ (ರಾಷ್ಟ್ರೀಯ ಅರ್ಹತಾ ಹಾಗೂ ಪ್ರವೇಶ ಪರೀಕ್ಷೆ) ಮೊದಲ...

SIR ಕರ್ತವ್ಯದ ವೇಳೆ ಶಿಕ್ಷಕಿಗೆ ಹಾರ್ಟ್ ಅಟ್ಯಾಕ್: ಚಿಕಿತ್ಸೆ ಫಲಿಸದೇ ಸಾವು

ಕೇಂದ್ರ ಚುನಾವಣಾ ಆಯೋಗವು ರಾಜ್ಯದಲ್ಲಿ ನಡೆಸುತ್ತಿರುವ ಮತದಾರರ ಪಟ್ಟಿಯ 'ವಿಶೇಷ ಸಮಗ್ರ ಪರಿಷ್ಕರಣೆ' (SIR) ಕೆಲಸದ ಹೆಸರಿನಲ್ಲಿ ಶಿಕ್ಷಕರ ಮೇಲೆ ಹೇರುತ್ತಿರುವ ಅತಿಯಾದ ಮಾನಸಿಕ ಹಾಗೂ ದೈಹಿಕ ಒತ್ತಡಕ್ಕೆ ಮತ್ತೊಬ್ಬ ಶಿಕ್ಷಕಿ ಬಲಿಯಾಗಿದ್ದಾರೆ. ಬೆಂಗಳೂರಿನ...

ಎದೆ ಸೀಳಿದರೆ ಮೂರು ಅಕ್ಷರ ಬರಲ್ಲ, ಮುಲ್ಲಾನಿಗೂ ನೀಟ್‌ಗೂ ಏನು ಸಂಬಂಧ: ಸಿ.ಟಿ ರವಿ ವಿವಾದಾತ್ಮಕ ಹೇಳಿಕೆ

ದೇಶಾದ್ಯಂತ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಹಾಗೂ ಪರೀಕ್ಷಾ ಅಕ್ರಮಗಳ ವಿರುದ್ಧ ವಿದ್ಯಾರ್ಥಿ ಮತ್ತು ಯುವಜನ ಸಂಘಟನೆಗಳು ಬೃಹತ್ ಪ್ರತಿಭಟನೆ ನಡೆಸುತ್ತಿವೆ. ಈ ನಡುವೆ ವಿದ್ಯಾರ್ಥಿಗಳ ಹೋರಾಟವನ್ನು ಕುಹಕವಾಡಿರುವ ವಿಧಾನ ಪರಿಷತ್ ಬಿಜೆಪಿ...