Homeಕರ್ನಾಟಕಬಡ ಪೌರ ಕಾರ್ಮಿಕರ ಮೇಲೆ ದರ್ಪ ಮೆರೆದ ಸಚಿವ ಕೃಷ್ಣ ಬೈರೇಗೌಡ : ಸಾರ್ವಜನಿಕ ವಲಯದಲ್ಲಿ...

ಬಡ ಪೌರ ಕಾರ್ಮಿಕರ ಮೇಲೆ ದರ್ಪ ಮೆರೆದ ಸಚಿವ ಕೃಷ್ಣ ಬೈರೇಗೌಡ : ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ

- Advertisement -
- Advertisement -

ಸೇವೆಯನ್ನು ಖಾಯಂಗೊಳಿಸುವಂತೆ ಮನವಿ ಮಾಡಿದ ಬಡ ಪೌರ ಕಾರ್ಮಿಕರೊಂದಿಗೆ ಗ್ರೇಟರ್ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರು ದರ್ಪ ಮೆರೆದಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಶನಿವಾರ (ಸೆ.6) ಬೆಂಗಳೂರಿನ ವಿವಿಧ ಭಾಗಗಳಲ್ಲಿ ಸಚಿವ ಕೃಷ್ಣ ಬೈರೇಗೌಡ ಅವರು ಸ್ವಚ್ಚತೆಯ ತಪಾಸಣೆ ನಡೆಸಿದ್ದಾರೆ. ಈ ವೇಳೆ ಕೆಲ ಪೌರ ಕಾರ್ಮಿಕರು ತಮ್ಮ ಸೇವೆಯನ್ನು ಖಾಯಂಗೊಳಿಸುವಂತೆ ಮನವಿ ಮಾಡಿದ್ದಾರೆ ಎನ್ನಲಾಗಿದೆ. ಇದಕ್ಕೆ ಸಚಿವರು ಪ್ರತಿಕ್ರಿಯಿಸಿದ ರೀತಿಗೆ ಸಾಮಾಜಿಕ ಜಾಲತಾಣಗಳಲ್ಲಿ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕುರಿತ ವಿಡಿಯೋ ವೈರಲ್ ಆಗಿದ್ದು, ವಿಡಿಯೋದಲ್ಲಿ ಸಚಿವರು ಹೇಳಿರುವುದನ್ನು ಕೆಳಗೆ ಅಕ್ಷರ ರೂಪದಲ್ಲಿ ವಿವರಿಸಲಾಗಿದೆ.

ಕಾರ್ಮಿಕರಿಗೆ ಸಚಿವ ಕೃಷ್ಣ ಬೈರೇಗೌಡ… “ಕೆಲಸಕ್ಕೇ ಬರೋದಿಲ್ಲ ಎನಕ್ಕೆ ಪರ್ಮನೆಂಟ್ ಮಾಡ್ಬೇಕು? ಕೆಲಸಕ್ಕೆ ಬಂದ್ರೆ ತಾನೆ ಪರ್ಮನೆಂಟ್ ಮಾಡೋದು. 30% ಜನ ಕೆಲಸಕ್ಕೇ ಬರೋದಿಲ್ಲ. ಯಾರೂ ಅಧಿಕಾರಿಗಳು ಮಾತಾಡುವಂಗಿಲ್ಲ. ದಿನಾ 30% ಜನಕ್ಕೆ ಆರಾಮ ಇರೋದಿಲ್ವಾ? ನಾವೂ ಮನುಷ್ಯರೇ…ಅವರು ಎಲ್ಲಾ ಮನುಷ್ಯರೇ. ಒಂದು ದಿನಕ್ಕೆ 30% ಕೆಲಸಕ್ಕೆ ಬರೋದಿಲ್ಲ ಅಂದ್ರೆ ಹೆಂಗ್ರಿ ಸಿಟಿ ಕ್ಲೀನ್ ಇಟ್ಕೋಬೇಕು? ಜನ ನಮಗೆ ಬಾಯಿಗೆ ಬಂದಂಗೆ ಉಗೀತಾರೆ. ಮನುಷ್ಯ ಅಂದ್ಮೇಲೆ ಎಲ್ಲರಿಗೂ ಜವಬ್ದಾರಿ ಇರ್ಬೇಕು. ಪರ್ಮನೆಂಟ್ ಮಾಡ್ಬೇಕು…ಏನಕ್ಕೆ ಪರ್ಮನೆಂಟ್ ಮಾಡ್ಬೇಕು? ಕೆಲಸಕ್ಕೆ ಬರೋದಿಕ್ಕೆ ಆಸಕ್ತಿ ಇಲ್ಲ ಅಂದ್ರೆ ಯಾಕೆ ಪರ್ಮನೆಂಟ್ ಮಾಡ್ಬೇಕು? ಬರೀ ಅದನ್ನು ಮಾತ್ರ ಕೇಳ್ತೀರಾ ಕೆಲಸ ಮಾಡೋದನ್ನು ಕಲೀರಿ ಫಸ್ಟು, ಮಾತಾಡೊದನ್ನು ಕಲ್ತಿದ್ದೀರಾ. ದಿನಾ 30% ಇಲ್ಲಿ ಕೆಲಸಕ್ಕೇ ಬರೋದಿಲ್ಲ, ಬೇಡದೇ ಇರೋದಿಗೆ ಯಾಕೆ ಪರ್ಮನೆಂಟ್ ಮಾಡ್ಬೇಕು?” ಎಂದಿದ್ದಾರೆ.

ಈ ಮಧ್ಯೆ ಕಾರ್ಮಿಕರು..“ಸರ್ ನಾವು ಸರಿಯಾಗಿ ಕೆಲಸಕ್ಕೆ ಬರುತ್ತಿದ್ದೇವೆ” ಎಂದು ಸಮರ್ಥಿಸಿಕೊಳ್ಳಲು ಪ್ರಯತ್ನಿಸಿದ್ದಾರೆ. ಕಾರ್ಮಿಕರ ಮಾತನ್ನು ತಿರಸ್ಕರಿಸಿದ ಸಚಿವರು, “ನನ್ನತ್ರ ಸುಳ್ಳು ಸುಳ್ಳು ಮಾತನಾಡ್ಬೇಡಿ..ನಾನು ಅಟೆಡೆನ್ಸ್ ರಿಜಿಸ್ಟ್ರಿ ಹಿಡ್ಕೊಂಡು ಮಾತಾಡ್ತಿದ್ದೀನಿ. ಸುಮ್ನೆ ಬಾಯ್ಬಿಟ್ರೆ ಸುಳ್ಳು ಹೇಳ್ಬೇಡಿ. ನಿಮಗೆ ಸಂಬಳಾನೂ ಕೊಡ್ಬೇಕು..ಎಲ್ಲಾನು ಕೊಡ್ಬೇಕು. ಇಲ್ಲಿ ಕೆಲಸಕ್ಕೆ ಮಾತ್ರ ಇಲ್ಲ. ಸಿಟಿ ಗಬ್ಬೆದ್ದು ನಾರ್ತಿದ್ರೆ ನಾವು ಬೈಸ್ಕೋಬೇಕು. ಸ್ವಲ್ಪನಾದ್ರೂ ಮನುಷ್ಯತ್ಯ ಅನ್ನೋದು ಇರ್ಬೇಕು. ಬೆಳಿಗ್ಗೆ ಎದ್ರೆ ದುಡೀಬೇಕು ಅನ್ನೋದು ಇರ್ಬೇಕು. ಏರಿಯಾ ನೋಡಿದ್ರೆ ಗಬ್ಬಾಗಿದೆ. ನಿಮಗೆ ಪರ್ಮನೆಂಟ್ ಬಿಟ್ರೆ ಇನ್ನೇನ್ ಚಿಂತೆಯಿಲ್ಲ. ಪರ್ಮನೆಂಟ್ ಮಾಡದೇ ಇದ್ರೆ ಕೆಲಸಕ್ಕೆ ಬರಂಗಿಲ್ಲ. ಅವರನ್ನು ಮಾತಾಡಿಸಂಗೂ ಇಲ್ಲ. ಸಿಟಿ ನಾರ್ತಾ ಇದ್ರೆ, ಜನ ಬೈತಾ ಇದ್ರೆ ನಾವು ಬೈಸ್ಕೋಬೇಕಾ? ನೋಡೋ ಹಂಗೆ ಇದ್ಯಾ ಇಲ್ಲಿ ಏನಾದ್ರು ಪರಿಸ್ಥಿತಿ. ಬರೀ ಇದೊಂದು ಬಿಟ್ರೆ ಇನ್ನೇನು ಇಲ್ಲ ನಿಮಗೆ. ಮಾಡೋ ಕೆಲ್ಸ ಶ್ರದ್ದೆಯಿಂದ ಮಾಡೋನಾ ಅನ್ನೋದು ಏನಾದ್ರು ಇದ್ಯಾ?” ಎಂದು ತಮ್ಮ ದರ್ಪದ ಮಾತುಗಳನ್ನು ಮುಂದುವರಿಸಿದ್ದಾರೆ.

ಇದಕ್ಕೆ ಕಾರ್ಮಿಕರು, “ಮಾಡ್ತೀವಿ ಸರ್” ಎಂದಾಗ..“ಮಾಡ್ತೀರಾ ಬರೀ ಬಾಯಿ ಮಾತಿನಲ್ಲಿ” ಎಂದು ಹೇಳಿ ಸ್ಥಳದಿಂದ ತೆರಳಿದ್ದಾರೆ.

ಸಚಿವರ ದರ್ಪದ ಮಾತಿನ ಬಗ್ಗೆ ಫೇಸ್‌ಬುಕ್‌ನಲ್ಲಿ ಪ್ರತಿಕ್ರಿಯಿಸಿದ ಪತ್ರಕರ್ತ ಯತಿರಾಜ್ ಬ್ಯಾಲಹಳ್ಳಿ, “ಕೃಷ್ಣಬೈರೇಗೌಡ ಅವರೇ ರಾಜೀನಾಮೆ ಕೊಟ್ಟು ಮನೆಗೆ ಹೋಗಪ್ಪ..” ಎಂದು ಬರೆದುಕೊಂಡಿದ್ದಾರೆ.

ಬರಹಗಾರ ವಿ.ಎಲ್‌ ನರಸಿಂಹಮೂರ್ತಿ (ವಿಎಲ್‌ಎನ್‌) ಪ್ರತಿಕ್ರಿಯಿಸಿ, “ಕೃಷ್ಣ ಬೈರೇಗೌಡರೇ ಭಾರತದಲ್ಲಿ ಒಬ್ಬ ಮನುಷ್ಯ ಕೇವಲ ಒಂದು ವರ್ಷ ಪೌರಕಾರ್ಮಿಕನಾಗಿ ಕೆಲಸ ಮಾಡಿದರೆ ಸರ್ಕಾರ ಅವರಿಗೆ ಇಡೀ ಜೀವಮಾನ ಮನೆಯಲ್ಲಿ ಕೂರಿಸಿ ಸಂಬಳ ಕೊಡಬೇಕು. ಅಷ್ಟು ಹೊಲಸು ಬಾಚಿರುತ್ತಾರೆ. ಭಾರತದಲ್ಲಿ ಮಾತ್ರವೇ ಒಬ್ಬ ಮನುಷ್ಯ ಇನ್ನೊಬ್ಬ ಮನುಷ್ಯನ ಹೇಲು, ಉಚ್ಚೆ ಬಾಚಿದರೆ ಏನೂ ಅನಿಸುವುದೇ ಇಲ್ಲ. ಅಂತಹ ಹೊಲಸು ಮನಸ್ಥಿತಿ ಭಾರತೀಯ ಸಮಾಜದ್ದು. ಭಾರತದ ಪೌರಕಾರ್ಮಿಕರಂತಹ ಹೀನ ವೃತ್ತಿ ಇಡೀ ಜಗತ್ತಿನಲ್ಲೇ ಎಲ್ಲೂ ಇಲ್ಲ. ಪೌರ ಕಾರ್ಮಿಕರ ವೃತ್ತಿಯ ಸ್ವರೂಪ ಎಂತದ್ದು ಎನ್ನುವ ಕನಿಷ್ಠ ತಿಳುವಳಿಕೆ ನಿಮಗೆ ಇದ್ದಿದ್ದರೆ ಇಷ್ಟು ದರ್ಪದಿಂದ ಮಾತನಾಡುತ್ತಿರಲಿಲ್ಲ.”

“ನೀವು ಅಮೇರಿಕಾಗೆ ಹೋಗಿ ಓದಿ ಬಂದಿದ್ದರೂ ಕೋಲಾರದ ಒಕ್ಕಲಿಗರ ದೌವಲತ್ತಿನ ಮನಸ್ಥಿತಿಯಿಂದ ಇನ್ನೂ ಆಚೆ ಬಂದಿಲ್ಲ. ಬೇಗ ಆಚೆ ಬನ್ನಿ..Shame on you” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

“ಸಂವಿಧಾನದ ಆಶಯಗಳಲ್ಲಿ ನಂಬಿಕೆ ಇರುವ ಮನುಷ್ಯ ನಾನಲ್ಲ ಅಂತ ಸ್ಪಷ್ಟವಾಗಿ ಗೌಡರು ತಿಳಿಸಿದ್ದಾರೆ. ಸಾಹೇಬರು – ಬಾಯಲ್ಲಿ ಬಸಪ್ಪ ಎದೇಲಿ ವಿಷಪ್ಪ ಕೆಟಗರಿ ಅನ್ನೋದನ್ನ ಸ್ಪಷ್ಟಪಡಿಸಿದ್ದಾರೆ” ಎಂದು ಸೌಮ್ಯ ಕೋಡೂರು ಬರೆದುಕೊಂಡಿದ್ದಾರೆ.

ಪತ್ರಕರ್ತ ರಾಘವೇಂದ್ರ ಪ್ರತಿಕ್ರಿಯಿಸಿ, “ಮನೆಗಳಲ್ಲಿ ಉತ್ಪತ್ತಿಯಾಗುವ ಕಸವನ್ನು ಎರಡ್ ದಿನ ಕಸದ ಗಾಡಿಗೆ ಹಾಕ್ತಿದ್ರೆ ನಮ್ಮ ಕಿಚನ್ಗಳು ಅಥವಾ ಕಸದ ಪುಟ್ಟಿ ಇಡುವ ಸ್ಥಳ ಗಬ್ಬು ವಾಸನೆ ಬರ್ತಿರತ್ತೆ. ಮೊದ್ಲು ಇದನ್ನ ಹೇಗಾದ್ರು ಮಾಡಿ ಸಾಗಾಕ್ಬೇಕು ಅಂತ ಕಸದ ಗಾಡಿ ಬರೋದನ್ನೆ ಕಾಯ್ತಿರ್ತಿವಿ”

“ಕೆಲವು ಮನೆಯವರು, ಪ್ರತಿ ದಿನ ಕಸವನ್ನ ಗಾಡಿಗೆ ಹಾಕ್ತಾರೆ, ಆದ್ರೆ 50% ಜನ ಎರಡು ಮೂರು ದಿನಕ್ಕೆ, ಬ್ಯಾಚುಲರ್ಸ್ ಗಳು ವಾರಗಟ್ಟಲೆ ಕಸವನ್ನೆ ಹಾಕದೆ ಡಸ್ಟ್ ಬಿನ್ಗಳಲ್ಲಿ ಹುಳುಗಳು ಉತ್ಪತ್ತಿ ಆಗಿರತ್ತೆ, ಅದರ ವಾಸನೆ ಯಾವ ಲೆವೆಲ್ ಗೆ ಇರತ್ತೆ ಇಮೇಜ್ ಮಾಡ್ಕಳಿ. (ಆಸ್ಪತ್ರೆ,ಹೋಟೆಲ್ಲು,ಲಾಡ್ಜುಗಳ ಕಸಗಳದ್ದು ಬೇರೆ ಲೆವೆಲ್ಲು)”

“ಮೊದಲೇ ಹೇಳಿ ಕೇಳಿ ಅದು ಕಸ, ಅದರಲ್ಲಿ ಏನಿರಲ್ಲ ಹೇಳಿ, ಅಡುಗೆ ಮನೆಗಳಲ್ಲಿ ಉಳಿದದ್ದು, ಮಕ್ಕಳು ಕಕ್ಕ ಮಾಡಿದ ಡೈಪರ್ ಗಳು, ಮಹಿಳೆಯರ ತಿಂಗಳ ಪೀರಿಯಡ್ಸ್ ಪ್ಯಾಡ್ಸು, ನೀವು ಒಂದು ಕ್ಷಣ ಅದನ್ನು ನೋಡಲು ಅಸಹ್ಯಪಡುವ, ಅಬ್ಬಬ್ಬಾ ವಾಸನೆ ಎನ್ನುವಂತಹ ಎಲ್ಲವೂ ಅದರಲ್ಲಿ ಇರತ್ತೆ ಹೌದಲ್ವಾ.”

“ಈಗ ಹೇಳಿ ನಿಮಗೆ ಒಂದು ಕ್ಷಣ ಸಹಿಸಲಾಗದ ನಿಮ್ಮ ಸ್ವಂತ ಕಚಡಾವನ್ನ, ಇನ್ನೊಬ್ಬರು ಕೈಯಲ್ಲಿ ಮುಟ್ಟಿ, ಅದನ್ನ ಮತ್ತೆ ವಿಭಾಗ ಮಾಡಿ ವಿಲೇವಾರಿ ಮಾಡ್ತಾರೆ ಎಂದಾದರೆ ಅವರ ಪರಿಸ್ಥಿತಿ, ಅವರ ಆರೋಗ್ಯ ಪರಿಸ್ಥಿತಿ ಹೇಗಿರತ್ತೆ.”

“ನಾವು KC ಜನರಲ್ ಆಸ್ಪತ್ರೆಗೊ, ವಿಕ್ಟೋರಿಯಾ ಆಸ್ಪತ್ರೆಗೊ ಹೋಗ್ಬಂದ್ರೆ ಸ್ನಾನ ಮಾಡಿ ಎಷ್ಟೊತ್ತಾದ್ರು ಇನ್ನು ಔಷಧಿ ಸ್ಮೆಲ್ ಬರ್ತಿರೋ ಫೀಲ್ ಅಗ್ತಿದೆ, ಊಟ ಮಾಡೋಕೆ ಆಗ್ತಿಲ್ಲ ಅಂತ ಕಿರಿ ಕಿರಿ ಮಾಡ್ಕೋತಿರ್ತೀವಿ.”

“ಆದ್ರೆ ನೂರಾರು ಮನೆಯ ಸಾವಿರಾರು ಜನರ ಕಚಡಾವನ್ನ ವಿಲೆವಾರಿ ಮಾಡಿ ಮತ್ತೆ ಹೋಗಿ ಅವರು ತಿಂಡಿ ಊಟ ಮಾಡ್ಬೇಕು, ಆಗ ಅವರಿಗೆ ಹೇಗನ್ನಿಸಬಹುದು ನಮ್ಮಿಂದ ಊಹಿಸಿಕೊಳ್ಳೋಕು ಆಗಲ್ಲಾ ಅಲ್ವಾ. ಅಂತವರನ್ನ ಹೀಗೆ ಬಹಿರಂಗವಾಗಿ ಅವಮಾನ ಮಾಡಿದ ಒಬ್ಬ ಸ್ಟುಪಿಡ್ ಸಚಿವನಿಗೆ ನನ್ನ ಧಿಕ್ಕಾರ.” ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪತ್ರಕರ್ತ ಚಂದ್ರು ತರಹುಣಸೆ, ಸಚಿವ ಕೃಷ್ಣಬೈರೇಗೌಡ ಅವರ ರಾಜೀನಾಮೆಗೆ ಆಗ್ರಹಿಸಿದ್ದಾರೆ. “ಪೌರಕಾರ್ಮಿಕರ ಕುರಿತು ಅಸೂಕ್ಷ್ಮ ಹೇಳಿಕೆ ನೀಡಿದ ಸಚಿವ ಕೃಷ್ಣಭೈರೇಗೌಡ ರಾಜೀನಾಮೆ ನೀಡಬೇಕು” ಎಂದು ಆಗ್ರಹಿಸಿದ್ದಾರೆ.

ನಾಗೇಗವ್ಡ ಕೆ ಎಸ್ ಪ್ರತಿಕ್ರಿಯಿಸಿ, “ಕೃಷ್ಣ ಬೈರೇಗೌಡ ಅವರೇ… ನಿಮ್ಮ ದಕ್ಶತೆಯ ಪ್ಯೂಡಲಿಸಂ ಇಮೇಜ್‌ಗೆ ಸಾವಿರಾರು ಸಾಮಾನ್ಯ ಜನರು ಬೆಂಬಲ ಕೊಡುತ್ತಿದ್ದಾರೆ. ಇದು ಸಾಮಾನ್ಯ ಜನರ ತಪ್ಪಲ್ಲ. ನಾವುಗಳು ಒಂದು ವ್ಯವಸ್ತೆಯಾಗಿ ಸಾಮಾನ್ಯ ಜನರಿಗೆ ಪ್ರಜಾಪ್ರಬುತ್ವ ಅಂದರೆ ಏನು, ಸಂವಿದಾನದ ಮೂಲಬೂತ ಹಕ್ಕುಗಳು ಅಂದರೆ ಏನು ಅಂತಲೇ ಅರಿವು ಮೂಡಿಸಿಲ್ಲ. ಆದರೆ ಈ ಅರಿವು ನಿಮಗೆ ಇರಲೇಬೇಕು ಏಕೆಂದರೆ ನೀವು ಸಂವಿದಾನದ ಮೇಲೆ ವಚನ ಮಾಡಿ ಮಿನಿಸ್ಟರ್ ಆಗಿರೋದು.”

“ನನಗೆ ಗೊತ್ತು. ಸ್ವಾತಂತ್ರ್ಯ ಮತ್ತು ಸಮಾನತೆ, ಪ್ರಜಾಪ್ರಬುತ್ವ ಮತ್ತು ದಕ್ಶತೆ ಒಟ್ಟೊಟ್ಠಿಗೆ ನಿಬಾಯಿಸುವುದು ಅಸ್ಟು ಸುಲಬದ ಕೆಲಸ ಅಲ್ಲ ಅನ್ನುವುದು. ಆದರೆ ನೀವೇ ಸ್ವತಃ ನಾನು ಮಂತ್ರಿಯಾಗಿ ಜನರ ಸೇವೆ ಮಾಡುತ್ತೇನೆ ಎಂದು ಚುನಾವಣೆಯಲ್ಲಿ ನಿಂತು ಗೆದ್ದು ಮಂತ್ರಿಯಾಗಿದ್ದಿರಿ. ಆದ್ದರಿಂದ ನಿಮ್ಮ ಕ್ರಿಯೆಯಲ್ಲಿ ಮಾತ್ರವಲ್ಲ ಅಲೋಚನೆಯಲ್ಲೂ ಪ್ರಜಾಸತ್ತಾತ್ಮಕ ಮೌಲ್ಯಗಳೇ ಇರಬೇಕು ಹೊರತು CEO ಮಾದರಿ ಅಲ್ಲ. ಮೊನ್ನೆ ಪ್ಯೂಡಲ್ ದರ್ಪದಿಂದ ನೀವು ರೇಗಿದ ಆ ಪೌರ ಕಾರ್ಮಿಕರ ಬಳಿ ಕ್ಶಮೆ ಕೇಳುತ್ತಿರಿ ಎಂದು ಆಶಿಸುತ್ತೇನೆ.” ಎಂದು ಬರೆದುಕೊಂಡಿದ್ದಾರೆ.

ಕರ್ನಾಟಕ ವಿದ್ಯಾರ್ಥಿ ಸಂಘಟನೆ (ಕೆವಿಎಸ್) ಕೃಷ್ಣ ಬೈರೇಗೌಡ ಅವರ ನಡೆಯನ್ನು ಖಂಡಿಸಿದೆ, ರಾಜೀನಾಮೆಗೆ ಆಗ್ರಹಿಸಿದೆ.

“ಬೆಂಗಳೂರು ನಗರಾಭಿವೃದ್ಧಿ ಫ್ಯೂಡಲ್ ಸಚಿವರ ಬಗ್ಗೆ ಹತ್ತಾರು ಪೋಸ್ಟ್ ಹಾಕಿದ್ದೀನಿ; ಈಗ ಪೌರ ಕಾರ್ಮಿಕರ ಎದುರು ತನ್ನ ದುರಹಂಕಾರವನ್ನು ಪ್ರದರ್ಶನ ಮಾಡಿದ್ದಾರೆ ಮಹನೀಯರು. ಈತನ ಬಗ್ಗೆ ನನಗೆ ಇನ್ನು ಸದಭಿಪ್ರಾಯ ಮೂಡಲು ಸಾಧ್ಯವೇ ಇಲ್ಲ. ಇನ್ನು ಇಂತಹ ವ್ಯಕ್ತಿಯನ್ನು ಸಮರ್ಥಿಸಿಕೊಳ್ಳುವವರ ಜತೆಗೂ ನನಗೆ ಯಾವುದೇ ಸಂವಾದ ನಡೆಸುವ ಇಚ್ಛೆ ಇಲ್ಲ. ಅಸಹ್ಯದ ಪರಮಾವಧಿ ತಲುಪಿದೆ ಈತನ ನಡವಳಿಕೆ!”ಎಂದು ಪ್ರಕಾಶಕ ಗುರುಪ್ರಸಾದ್ (ಗುರುವೇ) ಹೆಜ್ಜಾಜಿ ಬರೆದುಕೊಂಡಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಜನ್ ಧನ್ ಯೋಜನೆಯಡಿ ತೆರೆಯಲಾದ ಪ್ರತಿ ನಾಲ್ಕನೇ ಬ್ಯಾಂಕ್‌ ಖಾತೆ ನಿಷ್ಕ್ರಿಯ: ಆರ್‌ಟಿಐ ಮಾಹಿತಿ

ಮಾಹಿತಿ ಹಕ್ಕು (ಆರ್‌ಟಿಐ) ಕಾಯ್ದೆಯಡಿ ಲಭ್ಯವಾಗಿರುವ ಉತ್ತರದ ಪ್ರಕಾರ, ಪ್ರಧಾನಮಂತ್ರಿ ಜನ್ ಧನ್ ಯೋಜನೆಯಡಿ ತೆರೆಯಲಾದ ಪ್ರತಿ ನಾಲ್ಕನೇ ಖಾತೆಯು ನಿಷ್ಕ್ರಿಯಗೊಂಡಿದೆ. ಸುಮಾರು 5.72 ಕೋಟಿ ಖಾತೆಗಳಲ್ಲಿ ಶೂನ್ಯ ಬ್ಯಾಲೆನ್ಸ್ ಇದೆ. ಆಗಸ್ಟ್ 12,...

ಗ್ರಾಮೀಣ ಭಾಗದ ಶಾಲಾ ಮಕ್ಕಳಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ 7.5% ಮೀಸಲಾತಿ: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್

ಗ್ರಾಮೀಣ ಹಾಗೂ ಬಡ ವಿದ್ಯಾರ್ಥಿಗಳ ಉನ್ನತ ಶಿಕ್ಷಣದ ಕನಸಿಗೆ ಬಲ ತುಂಬುವ ನಿಟ್ಟಿನಲ್ಲಿ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಶಿಕ್ಷಣ ಹಾಗೂ ಉದ್ಯೋಗದಲ್ಲಿ ಶೇಕಡಾ 7.5 ರಷ್ಟು ಮೀಸಲಾತಿ ಕಲ್ಪಿಸುವುದಾಗಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್...

ಪಶ್ಚಿಮ ಬಂಗಾಳದ ಪ್ರವಾಸೋದ್ಯಮ ಜಾಹೀರಾತಿನಲ್ಲಿ ಐಫೆಲ್ ಟವರ್, ಈಜಿಪ್ಟ್ ಪಿರಮಿಡ್: ಆದರೆ ಬಂಗಾಳವೇ ನಾಪತ್ತೆ!

ಪಶ್ಚಿಮ ಬಂಗಾಳವನ್ನು ಜಾಗತಿಕ ಪ್ರವಾಸೋದ್ಯಮ ಭೂಪಟದಲ್ಲಿ ಮುನ್ನೆಲೆಗೆ ತರುವ ಉದ್ದೇಶದಿಂದ ಬಿಡುಗಡೆ ಮಾಡಲಾದ ರಾಜ್ಯದ ಹೊಸ ಪ್ರವಾಸೋದ್ಯಮ ಜಾಹೀರಾತು ಈಗ ತೀವ್ರ ಟೀಕೆ ಹಾಗೂ ಅಪಹಾಸ್ಯಕ್ಕೆ ಈಡಾಗಿದೆ. ಈ ಜಾಹೀರಾತನ್ನು ಒಮ್ಮೆ ಗಮನಿಸಿದರೆ...

ಅಮೆರಿಕದಲ್ಲಿ ಮೋಹನ್‌ ಭಾಗವತ್ ಸೌಹಾರ್ದತೆ ಮಾತು; ಮಹಾರಾಷ್ಟ್ರದ ಗಾರ್ಬಾ-ದಾಂಡಿಯಾ ಕಾರ್ಯಕ್ರಮಗಳಲ್ಲಿ ಮುಸ್ಲಿಮರಿಗೆ ನಿಷೇಧ ಹೇರಿದ ವಿಎಚ್‌ಪಿ

ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಅವರು ನ್ಯೂಯಾರ್ಕ್‌ನಲ್ಲಿ ಮಾಡಿದ ಭಾಷಣದಲ್ಲಿ ಧಾರ್ಮಿಕ ಸೌಹಾರ್ದತೆ, ಪರಸ್ಪರ ಗೌರವ ಮತ್ತು ಪ್ರತಿಯೊಂದು ಸಮುದಾಯದ ಗುರುತಿನ ರಕ್ಷಣೆ ಕುರಿತು ಮಾತನಾಡಿದ ಕೆಲವೇ ದಿನಗಳ...

ಸೈಬರ್ ವಂಚನೆಗೊಳಗಾದ ಸಂತ್ರಸ್ತರಿಗೆ ನೆರವು: ಕರ್ನಾಟಕದಲ್ಲಿ ಶೀಘ್ರವೇ ‘ಇ-ಶೂನ್ಯ ಎಫ್‌ಐಆರ್’ ಜಾರಿ

ಸೈಬರ್ ವಂಚನೆಗೊಳಗಾದ ಸಂತ್ರಸ್ತರು ಇನ್ನು ಮುಂದೆ ದೂರು ದಾಖಲಿಸಲು ಪೊಲೀಸ್ ಠಾಣೆಗಳಿಗೆ ಅಲೆಯಬೇಕಿಲ್ಲ. ಸೈಬರ್ ಅಪರಾಧ ಪ್ರಕರಣಗಳ ಎಫ್‌ಐಆರ್ ದಾಖಲಾತಿಯನ್ನು ಚುರುಕುಗೊಳಿಸುವ ಹಾಗೂ ಜನಸ್ನೇಹಿಯಾಗಿಸುವ ಉದ್ದೇಶದಿಂದ ಭಾರತೀಯ ಸೈಬರ್ ಅಪರಾಧ ಸಮನ್ವಯ ಕೇಂದ್ರ...

ತಲೆ ಮರೆಸಿಕೊಂಡಿದ್ದ ಸ್ವತಂತ್ರ ಭಾರದ್ವಾಜ್‌ ಅರೆಸ್ಟ್ : ಪೋಕ್ಸೋ ಅಡಿ ಮತ್ತೊಂದು ಪ್ರಕರಣ ದಾಖಲು

ದೆಹಲಿಯ ಜಂತರ್ ಮಂತರ್‌ನಲ್ಲಿ ಜುಲೈನಲ್ಲಿ ನಡೆದ ಸಿಜೆಪಿ ಪ್ರತಿಭಟನೆ ವೇಳೆ ವಿದ್ಯಾರ್ಥಿ ಹೋರಾಟಗಾರ್ತಿ ನಿಶು ಆಝಾದ್ ಅವರ ತಂದೆಯ ಮೇಲೆ ಹಲ್ಲೆ ನಡೆಸಿದ ಆರೋಪ ಹೊತ್ತಿರುವ ಹಿಂದುತ್ವ ಸೋಶಿಯಲ್ ಮೀಡಿಯಾ 'ಇನ್‌ಫ್ಲುಯೆನ್ಸರ್' ಸ್ವತಂತ್ರ...

ಆರ್‌ಎಸ್ಎಸ್ ಬೆಂಬಲಿತ ಗುಂಪುಗಳಿಂದ ದೇಣಿಗೆ ಸ್ವೀಕರಿಸದಿರಲು ಅಮೆರಿಕದ ರಾಜಕಾರಣಿಗಳಿಂದ ಪ್ರತಿಜ್ಞೆ

ಅಮೆರಿಕದ ಸುಮಾರು 90 ಜನಪ್ರತಿನಿಧಿಗಳು ಮತ್ತು ರಾಜಕೀಯ ಅಭ್ಯರ್ಥಿಗಳು ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ (RSS) ಬೆಂಬಲಿತ ಗುಂಪುಗಳಿಂದ ರಾಜಕೀಯ ದೇಣಿಗೆಗಳನ್ನು ಸ್ವೀಕರಿಸುವುದಿಲ್ಲ ಎಂದು ಪ್ರತಿಜ್ಞೆ ಮಾಡಿದ್ದಾರೆ. ಹಿಂದುತ್ವ ಸಂಘಟನೆಯ ಮುಖ್ಯಸ್ಥ ಮೋಹನ್ ಭಾಗವತ್...

KPSC ಪರೀಕ್ಷಾ ಅಕ್ರಮ: ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲ, ರಾಜಕೀಯ ಪಕ್ಷ ನೋಡದೆ ನಿರ್ದಾಕ್ಷಿಣ್ಯ ಕ್ರಮ – ಸಚಿವ ಪ್ರಿಯಾಂಕ್ ಖರ್ಗೆ

ಕೆಪಿಎಸ್‌ಸಿ (KPSC) ಪರೀಕ್ಷಾ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಅತ್ಯಂತ ಗಂಭೀರವಾಗಿದ್ದು, ಇದರಲ್ಲಿ ಭಾಗಿಯಾಗಿರುವ ಯಾರನ್ನೇ ಆಗಲಿ ರಕ್ಷಿಸುವ ಪ್ರಶ್ನೆಯೇ ಇಲ್ಲ. ಆರೋಪಿಗಳು ಎಷ್ಟೇ ಪ್ರಭಾವಶಾಲಿಗಳಾಗಿದ್ದರೂ ಅಥವಾ ಯಾವುದೇ ರಾಜಕೀಯ ಪಕ್ಷಕ್ಕೆ...

ಉತ್ತರ ಪ್ರದೇಶ: ಸಹಾರನ್‌ಪುರ ಕಲೆಕ್ಟರೇಟ್ ಮಸೀದಿ ಧ್ವಂಸ, ‘ಬುಲ್ಡೋಜರ್ ರಾಜಕಾರಣ’ಕ್ಕೆ ವಿಪಕ್ಷಗಳಿಂದ ಖಂಡನೆ!

ಸಹಾರನ್‌ಪುರ (ಉತ್ತರ ಪ್ರದೇಶ): ಉತ್ತರ ಪ್ರದೇಶದ ಸಹಾರನ್‌ಪುರ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿದ್ದ ಮಸೀದಿಯನ್ನು ಶನಿವಾರ (ಸೆಪ್ಟೆಂಬರ್ 5) ಮುಂಜಾನೆ ಭಾರಿ ಪೊಲೀಸ್ ಭದ್ರತೆಯೊಂದಿಗೆ ಬುಲ್ಡೋಜರ್ ಬಳಸಿ ಧ್ವಂಸಗೊಳಿಸಲಾಗಿದೆ. ಈ ಕಾರ್ಯಾಚರಣೆಗೆ ವ್ಯಾಪಕ ಆಕ್ರೋಶ...

ಗೌರಿ ಹತ್ಯೆಯಾಗಿ 9 ವರ್ಷ : ಹೋರಾಟಗಾರರು-ಒಡನಾಡಿಗಳಿಂದ ಗೌರವ ನಮನ

ದಿಟ್ಟ ಪತ್ರಕರ್ತೆ, ಹೋರಾಟಗಾರ್ತಿ ಗೌರಿ ಲಂಕೇಶ್‌ ಅವರ 9ನೇ ವರ್ಷದ ಹುತಾತ್ಮ ದಿನದ ಅಂಗವಾಗಿ ಇಂದು (ಸೆ.5) ಬೆಳಿಗ್ಗೆ ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಅವರ ಸಮಾಧಿ ಬಳಿ ‘ಗೌರಿ ನಮನ ಕಾರ್ಯಕ್ರಮ‘ ನಡೆಯಿತು. ಗೌರಿ ಅವರ...