Homeಚಳವಳಿಸಾಮಾಜಿಕ ನ್ಯಾಯಕ್ಕಾಗಿ ಒಳಮೀಸಲಾತಿ ಜಾರಿಯಾಗಲಿ: ಡಿ.11 ರಂದು ಬೆಂಗಳೂರಿನಲ್ಲಿ ಬೃಹತ್ ಹೋರಾಟ

ಸಾಮಾಜಿಕ ನ್ಯಾಯಕ್ಕಾಗಿ ಒಳಮೀಸಲಾತಿ ಜಾರಿಯಾಗಲಿ: ಡಿ.11 ರಂದು ಬೆಂಗಳೂರಿನಲ್ಲಿ ಬೃಹತ್ ಹೋರಾಟ

ನವೆಂಬರ್ 28ರಿಂದ ಹರಿಹರದಲ್ಲಿರುವ ದಸಸಂ ಸಂಸ್ಥಾಪಕರಾದ ಬಿ.ಕೃಷ್ಣಪ್ಪನವರ ಚೈತನ್ಯ ಭೂಮಿಯಿಂದ ಆರಂಭವಾಗಿರುವ ಪಾದಯಾತ್ರೆಯು ಸದ್ಯ ನೆಲಮಂಗಲ ತಲುಪಿದೆ.

- Advertisement -
- Advertisement -

ಸಾಮಾಜಿಕ ನ್ಯಾಯಕ್ಕಾಗಿ ಒಳಮೀಸಲಾತಿ ಜಾರಿಯಾಗಲಿ ಎಂದು ಒತ್ತಾಯಿಸಿ ಡಿ.11ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ‘ಸಾಮಾಜಿಕ ನ್ಯಾಯಕ್ಕಾಗಿ ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಜಾರಿ ಹೋರಾಟ ಸಮಿತಿಯ’ ವತಿಯಿಂದ ಬೃಹತ್ ಹೋರಾಟ ಹಮ್ಮಿಕೊಳ್ಳಲಾಗಿದೆ.

ಒಳಮೀಸಲಾತಿ ಜಾರಿಗೆ ಒತ್ತಾಯಿಸಿ ನವೆಂಬರ್ 28ರಿಂದ ಹರಿಹರದಲ್ಲಿರುವ ದಸಸಂ ಸಂಸ್ಥಾಪಕರಾದ ಬಿ.ಕೃಷ್ಣಪ್ಪನವರ ಚೈತನ್ಯ ಭೂಮಿಯಿಂದ ಆರಂಭವಾಗಿರುವ ಪಾದಯಾತ್ರೆಯು ಸದ್ಯ ನೆಲಮಂಗಲ ತಲುಪಿದ್ದು, ಡಿಸೆಂಬರ್ 11 ರಂದು ಬೆಂಗಳೂರಿನ ಹೋರಾಟಕ್ಕೆ ಸೇರಿಕೊಳ್ಳುತ್ತದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಹೋರಾಟದ ಮೂಂಚೂಣಿ ನಾಯಕರಾದ ಅಂಬಣ್ಣ ಅರೋಲಿಕರ್, ಎಂ.ಆರ್ ಭೇರಿ, ಕರಿಯಪ್ಪ ಗುಡಿಮನಿ, ಡಿಎಸ್ಎಸ್ ರಾಜ್ಯ ಸಂಚಾಲಕರಾದ ಹೆಣ್ಣೂರು ಶ್ರೀನಿವಾಸ್, ಸುರೇಶ್, ನಾಗವೇಂದ್ರ ಬೈಯ್ಯಾರೆಡ್ಡಿ, ಮಸ್ಕಿ ಮುರಾರಿ ಸೇರಿದಂತೆ ನೂರಾರು ಹೋರಾಟಗಾರರು ಕಳೆದ 11 ದಿನಗಳಿಂದ ಪಾದಯಾತ್ರೆಯಲ್ಲಿ ಭಾಗಿಯಾಗಿದ್ದಾರೆ.

ಒಳಮೀಸಲಾತಿ ಜಾರಿಗಾಗಿ ಮೂರು ದಶಕಗಳಿಂದ ನಿರಂತರ ಹೋರಾಟ ನಡೆಯುತ್ತಿದ್ದು ಅದೀಗ ತೀವ್ರ ಸ್ವರೂಪ ಪಡೆದುಕೊಂಡಿದೆ. ನೂರಾರು ಮುಖಂಡರು ಇದಕ್ಕಾಗಿ ಹಗಲಿರುಳು ಹೋರಾಟದಲ್ಲಿ ನಿರತರಾಗಿದ್ದಾರೆ. ಡಿಸೆಂಬರ್ 11ರ ಹೋರಾಟಕ್ಕೆ ರಾಜ್ಯದ ಎಲ್ಲಾ ಮೂಲೆಗಳಿಂದ ಸಾವಿರಾರು ಜನರು ಭಾಗವಹಿಸುವ ನಿರೀಕ್ಷೆಯಿದೆ. ಡಿಸೆಂಬರ್ 6ರಂದು ನಡೆದ ದಲಿತರ ಸಾಂಸ್ಕೃತಿಕ ಪ್ರತಿರೋಧ ಸಮಾವೇಶದಲ್ಲಿಯೂ ಸಹ ಒಳಮೀಸಲಾತಿ ಜಾರಿಯಾಗಬೇಕೆಂಬ ನಿರ್ಣಯ ಅಂಗೀಕರಿಸಲಾಗಿತ್ತು.

ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚಿದ ಒತ್ತಡ

ಇದೀಗ ಬೆಂಗಳೂರಿನಲ್ಲಿ ಡಿಸೆಂಬರ್ 11 ರಂದು ನಡೆಯುವ ಐತಿಹಾಸಿಕ ಬೃಹತ್ ಹೋರಾಟಕ್ಕೆ ಸಿದ್ದತೆಗಳು ನಡೆಯುತ್ತಿವೆ. ಒಳಮೀಸಲಾತಿ ಜಾರಿಯಾಗಬೇಕೆಂಬ ಹಕ್ಕೊತ್ತಾಯ ಸಾಮಾಜಿಕ ಜಾಲತಾಣಗಳಲ್ಲಿ ಜೋರಾಗಿ ಕೇಳಿಬರುತ್ತಿದ್ದು, ಈ ಕುರಿತ ಪೋಸ್ಟರ್‌ಗಳು ವ್ಯಾಪಕವಾಗಿ ಹರಿದಾಡುತ್ತಿವೆ.

ಮೂರೇ ದಿ‌ನದಲ್ಲಿ EWS ಮೀಸಲಾತಿಗಾಗಿ ಸಂವಿಧಾನ ತಿದ್ದುಪಡಿ ಮಾಡಿದವರಿಗೆ ಮೂವತ್ತು ವರ್ಷದಿಂದ ಕೇಳುತ್ತಿರುವ ಒಳಮೀಸಲಾತಿಯನ್ನ ಜಾರಿಮಾಡಲು ಏನು ಅಡ್ಡಿ? ‘ಸಾಮಾಜಿಕ‌ ನ್ಯಾಯವು ದಮನಿತರ ಪಾಲಿಗೆ ದಕ್ಕುವ ಒಳಮೀಸಲಾತಿಯೊಂದಿಗೆ ಸಾರ್ಥಕಗೊಳ್ಳುತ್ತದೆ ಎಂಬ ಸಮಷ್ಠಿ ನ್ಯಾಯ ಪ್ರಜ್ಞೆಯನ್ನು ಆಳುವವರಿಗೆ ಅರ್ಥ ಮಾಡಿಸುವ ಕಾಲ ಬಂದಿದೆ’. “ಮೀಸಲಾತಿ ಎನ್ನುವುದು ಸಾಮಾಜಿಕ ನ್ಯಾಯ, ಮೀಸಲಾತಿ ಪರವಾಗಿರುವರೆಲ್ಲಾ ಒಳಮೀಸಲಾತಿ ಪರವಾಗಿ ಇರಲೇಬೇಕು” ಎಂಬ ಹೇಳಿಕೆಗಳು ವೈರಲ್ ಆಗಿವೆ.

ಅಂಬೇಡ್ಕರ್‌ರವರು ಪ್ರಸ್ತಾಪಿಸಿರುವ ಜಾತಿ ಒಳಗೆ ಮತ್ತು ಜಾತಿ ಜಾತಿಗಳ ನಡುವಿನ ಸ್ತರೀಯ ಅಸಮಾನತೆಯನ್ನು ತಡೆದು ಹಾಕಲು ಒಳಮೀಸಲಾತಿಯು ತಾಂತ್ರಿಕ ಸಾಧನವಾದರೆ, ಮುಂದೆ ಹೋದವರು ಹಿಂದಿರುವವರಿಗಾಗಿ ಕಾಯುವ, ಮೇಲೆ ಏರಿದವರು ಕೆಳಗಿನವರಿಗಾಗಿ ಕೈ ಚಾಚುವ ಸಹಾನುಭೂತಿ ಬಂಧುತ್ವದ ಅಡಿಪಾಯವಾಗಿದೆ. ಹೆಜ್ಜೆಗಳು ಸಮಪಾಲಿಗಾಗಿ ಸಾಗಿ ಬಂಧುತ್ವವ ಬೆಸೆಯಲಿ ಎಂಬ ಲೇಖಕಿ, ಹೋರಾಟಗಾರ್ತಿ ದು. ಸರಸ್ವತಿ ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ; ತುಳಿತಕ್ಕೊಳಗಾದವರೆಲ್ಲರೂ ದಲಿತರೆ; ಆದರೆ ದಲಿತರೆಲ್ಲರೂ ಅಸ್ಪೃಶ್ಯರಲ್ಲ- ಡಾ.ಎಸ್.ಕೆ.ಮಂಜುನಾಥ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕೇಂದ್ರ ನೀಡಿದ ಬರ ಪರಿಹಾರದ ಮೊತ್ತ ಅತ್ಯಲ್ಪ: ಸುಪ್ರೀಂ ಕೋರ್ಟ್‌ನಲ್ಲಿ ಕರ್ನಾಟಕ ಸರ್ಕಾರದ ವಾದ

0
ನಿಯಮಾವಳಿ ಪ್ರಕಾರ ಕೇಂದ್ರ ಸರ್ಕಾರ ಬರ ಪರಿಹಾರ ಬಿಡುಗಡೆ ಮಾಡಿಲ್ಲ ಎಂದು ಕರ್ನಾಟಕ ಸರ್ಕಾರ ಸೋವಾರ ಸುಪ್ರೀಂ ಕೋರ್ಟ್‌ನಲ್ಲಿ ವಾದ ಮಂಡಿಸಿದೆ. ಕೇಂದ್ರ ಸರ್ಕಾರ ನೀಡಿರುವ 3,454 ಕೋಟಿ ರೂಪಾಯಿ ಮೊತ್ತ ತಾನು...