Homeಮುಖಪುಟಬಿಜೆಪಿ 120, ಕಾಂಗ್ರೆಸ್ 6, ಎಎಪಿ 0: ಗುಜರಾತ್‌ ಚುನಾವಣಾ ಜಾಹೀರಾತಿನಲ್ಲಿ ಬಿಜೆಪಿ ಕ್ಲೀನ್‌ಸ್ವೀಪ್- ನ್ಯೂಸ್‌ಲಾಂಡ್ರಿ...

ಬಿಜೆಪಿ 120, ಕಾಂಗ್ರೆಸ್ 6, ಎಎಪಿ 0: ಗುಜರಾತ್‌ ಚುನಾವಣಾ ಜಾಹೀರಾತಿನಲ್ಲಿ ಬಿಜೆಪಿ ಕ್ಲೀನ್‌ಸ್ವೀಪ್- ನ್ಯೂಸ್‌ಲಾಂಡ್ರಿ ವರದಿ

- Advertisement -
- Advertisement -

ಬಿಜೆಪಿ: 120, ಕಾಂಗ್ರೆಸ್: 6, ಎಎಪಿ: 0. – ಇದು ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಮೂರು ಪ್ರಮುಖ ಪಕ್ಷಗಳು ಗೆದ್ದಿರುವ ಸ್ಥಾನಗಳ ಸಂಖ್ಯೆ ಅಲ್ಲ. ಇದು ಕಳೆದ 15 ದಿನಗಳಲ್ಲಿ ಈ ಪಕ್ಷಗಳು ಗುಜರಾತ್‌ನ ಮೂರು ಪ್ರಮುಖ ದಿನಪತ್ರಿಕೆಗಳಾದ ‘ಸಂದೇಶ್, ದಿವ್ಯ ಭಾಸ್ಕರ್ ಮತ್ತು ಗುಜರಾತ್ ಸಮಾಚಾರ’ದಲ್ಲಿ ನೀಡಿದ ಜಾಹೀರಾತುಗಳ ಸಂಖ್ಯೆಯಾಗಿದೆ.

ನವೆಂಬರ್ 21ರಿಂದ ಹಿಡಿದು ಡಿಸೆಂಬರ್ 5ರವರೆಗೆ ಅಹಮದಾಬಾದ್ ಆವೃತ್ತಿಗಳಲ್ಲಿ ಬಂದ ಜಾಹೀರಾತುಗಳನ್ನು ‘ನ್ಯೂಸ್‌ಲಾಂಡ್ರಿ’ ಜಾಲತಾಣ ವಿಶ್ಲೇಷಣೆ ಮಾಡಿದೆ. ಸರಾಸರಿಯಾಗಿ ಕಾಂಗ್ರೆಸ್‌ ವಿರುದ್ಧ ಬಿಜೆಪಿ ಮೂರು ಪತ್ರಿಕೆಗಳಲ್ಲಿ ಪ್ರತಿದಿನ ಎಂಟು ಜಾಹೀರಾತುಗಳನ್ನು ನೀಡಿದೆ ಎಂದು ಜಾಲತಾಣ ವರದಿ ಮಾಡಿದೆ.

ಈ ಅವಧಿಯಲ್ಲಿ ಮೂರು ಪತ್ರಿಕೆಗಳು ತಮ್ಮ ಮೊದಲ ಹಾಗೂ ಕೊನೆಯ ಪುಟಗಳಲ್ಲಿ ಬಿಜೆಪಿಯ ಒಟ್ಟು 72 ಜಾಹೀರಾತುಗಳನ್ನು ಪ್ರಕಟಿಸಿದವು. ಡಿಸೆಂಬರ್ 1 ರಂದು ಅಹಮದಾಬಾದ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ರೋಡ್‌ಶೋ ನಡೆಸಲಿರುವ ಕುರಿತು ಪೂರ್ಣಪುಟದ ಜಾಹೀರಾತುಗಳನ್ನು ನೀಡಲಾಗಿತ್ತು. ಬಿಜೆಪಿ ತನ್ನ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ ಒಂದು ದಿನದ ನಂತರ ನವೆಂಬರ್ 27ರಂದು ಪೂರ್ಣ ಪುಟ ಜಾಹೀರಾತುಗಳು ಕಾಣಿಸಿಕೊಂಡವು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಬಿಜೆಪಿಯ ಹೆಚ್ಚಿನ ಜಾಹೀರಾತುಗಳು ಗುಜರಾತ್‌ನಲ್ಲಿ ಸಾರ್ವಜನಿಕ ಸಭೆಗಳನ್ನು ನಡೆಸಲಿರುವ ಪಕ್ಷದ ನಾಯಕರ ಕುರಿತು ಇರುತ್ತಿದ್ದವು. ಮೋದಿಯವರ ವೇಳಾಪಟ್ಟಿಯೇ ಮೊದಲ ಪುಟದ ಅರ್ಧದಷ್ಟು ಭಾಗವನ್ನು ಆಕ್ರಮಿಸಿಕೊಂಡಿದ್ದನ್ನು ಗಮನಿಸಬಹುದು. ಪ್ರಮುಖವಾಗಿ ಪ್ರಚಾರ ಮಾಡಲಾದ ಇತರ ವೇಳಾಪಟ್ಟಿಗಳು ಕೇಂದ್ರ ಸಚಿವರಾದ ಅಮಿತ್ ಶಾ, ಸ್ಮೃತಿ ಇರಾನಿ, ಪರ್ಷೋತ್ತಮ್ ರೂಪಾಲಾ, ಮನ್ಸುಖ್ ಮಾಂಡವಿಯಾ ಮುಖ್ಯಮಂತ್ರಿಗಳಾದ ಭೂಪೇಂದ್ರ ಪಟೇಲ್, ಹಿಮಂತ ಬಿಸ್ವಾ ಶರ್ಮಾ, ಜೈರಾಮ್ ಠಾಕೂರ್, ಯೋಗಿ ಆದಿತ್ಯನಾಥ್ ಮತ್ತು ಮಹಾರಾಷ್ಟ್ರದ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಮೊದಲಾದವರಿಗೆ ಸೇರಿದ್ದವು.

ನವೆಂಬರ್ 22 ರಂದು ಅತಿ ಹೆಚ್ಚಿನದಾಗಿ ಬಿಜೆಪಿ ಜಾಹೀರಾತುಗಳನ್ನು ಪ್ರಕಟಿಸಲಾಗಿದೆ.  ರೂಪಲಾ, ಫಡ್ನವಿಸ್, ಮಾಂಡವಿಯಾ, ಶರ್ಮಾ ಮತ್ತು ಠಾಕೂರ್ ಅವರನ್ನು ಒಳಗೊಂಡ ಸಾರ್ವಜನಿಕ ಸಭೆಗಳ ವಿವರಗಳನ್ನು ಪ್ರತಿ ಪತ್ರಿಕೆಯಲ್ಲಿ ಎಂಟು ಜಾಹೀರಾತುಗಳನ್ನು ಪ್ರಕಟಿಸಲಾಗಿದೆ. ಕೊನೆಯ ಪುಟದಲ್ಲಿ ಮೂರು ಮತ್ತು ಒಳಪುಟಗಳಲ್ಲಿ ಐದು ಜಾಹೀರಾತುಗಳು ಕಾಣಿಸಿಕೊಂಡಿವೆ. ಪ್ರತಿ ಪತ್ರಿಕೆಯ ಕೊನೆಯ ಪುಟದ ಕಾಲುಭಾಗವು ಸಾರ್ವಜನಿಕ ಸಭೆಯ ವಿವರಗಳನ್ನು ಒಳಗೊಂಡಿದ್ದವು. ಬನಸ್ಕಾಂತ, ಅಹಮದಾಬಾದ್ ಮತ್ತು ಆನಂದ್‌ನಲ್ಲಿ ನಡೆಯಲಿರುವ ಸಾರ್ವಜನಿಕ ಸಭೆಗಳ ಕುರಿತು ವಿವರಗಳನ್ನು ನೀಡಲಾಗಿತ್ತು. ಅಮಿತ್ ಶಾ ಅವರ ಚಿತ್ರಗಳೊಂದಿಗೆ ಜಾಹೀರಾತು ಪ್ರಕಟಗೊಂಡಿದ್ದವು. ಭೂಪೇಂದ್ರ ಪಟೇಲ್ ಮತ್ತು ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಅವರನ್ನೂ ಇಲ್ಲಿ ಒಳಗೊಳ್ಳಲಾಗಿತ್ತು.

ಇದನ್ನೂ ಓದಿರಿ: ವಡ್ಗಾಮ್‌ ಫಲಿತಾಂಶ ಘೋಷಣೆಗೂ ಮುನ್ನವೇ ಜಿಗ್ನೇಶ್ ಸೋತಿದ್ದಾರೆಂದು ಮಾಧ್ಯಮಗಳು ವರದಿ ಪ್ರಕಟಿಸಿದ್ದೇಕೆ?

ಮೂರು ಪತ್ರಿಕೆಗಳಲ್ಲಿ ಬಿಜೆಪಿಯ ಏಕೈಕ ಜಾಕೆಟ್ ಜಾಹೀರಾತು ಡಿಸೆಂಬರ್ 1 ರಂದು ಪ್ರಕಟಗೊಂಡಿತ್ತು. ಅಹಮದಾಬಾದ್‌ನಲ್ಲಿ ಮೋದಿಯವರು 50-ಕಿಮೀಯಷ್ಟು ರೋಡ್‌ಶೋ ನಡೆಸಲಿರುವುದನ್ನು ಇಲ್ಲಿ ನೀಡಲಾಗಿತ್ತು. ಮೂರು ಗಂಟೆಗಳಲ್ಲಿ 16 ವಿಧಾನಸಭಾ ಕ್ಷೇತ್ರಗಳನ್ನು 35 ನಿಲುಗಡೆಗಳೊಂದಿಗೆ ಮೋದಿ ಕ್ರಮಿಸಲಿರುವ ವಿವರಗಳನ್ನು ಜಾಹೀರಾತಿನಲ್ಲಿ ನೀಡಲಾಗಿತ್ತು.

ನವೆಂಬರ್ 27 ರಂದು, ಬಿಜೆಪಿಯು ಪ್ರತಿ ಮೂರು ಪತ್ರಿಕೆಗಳ ಒಳಪುಟಗಳಲ್ಲಿ ಪೂರ್ಣ ಪುಟದ ಜಾಹೀರಾತುಗಳನ್ನು ನೀಡಿತ್ತು. ಪಕ್ಷದ ಪ್ರಣಾಳಿಕೆಯ ಪ್ರಮುಖ ಅಂಶಗಳನ್ನು ಪಟ್ಟಿ ಮಾಡಲಾಗಿತ್ತು. ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೊಳಿಸುವುದು, ‘ಆಂಟಿ ರ್‍ಯಾಡಿಕಲ್‌’ ಕೋಶವನ್ನು ಸ್ಥಾಪಿಸುವುದು, 2036ರ ಒಲಂಪಿಕ್ಸ್ ಅನ್ನು ಆಯೋಜಿಸಲು ವಿಶ್ವ ದರ್ಜೆಯ ಕ್ರೀಡಾ ಮೂಲಸೌಕರ್ಯಗಳನ್ನು ನಿರ್ಮಿಸುವುದು, 20 ಲಕ್ಷ ಉದ್ಯೋಗಗಳನ್ನು ಸೃಷ್ಟಿಸುವುದು, ಏಮ್ಸ್ ತರಹದ ವೈದ್ಯಕೀಯ ಸೌಲಭ್ಯಗಳನ್ನು ಸ್ಥಾಪಿಸುವುದು – ಸೇರಿದಂತೆ ಮೊದಲಾದ ಭರವಸೆಗಳನ್ನು ನೀಡಲಾಗಿತ್ತು.

ಕಳೆದ 15 ದಿನಗಳಲ್ಲಿ ಮೋದಿಯವರ ಸಾರ್ವಜನಿಕ ಸಭೆಗಳ ಕುರಿತ 18 ಮುಖಪುಟದ ಜಾಹೀರಾತುಗಳನ್ನು ‘ನ್ಯೂಸ್‌ಲಾಂಡ್ರಿ’ ಪಟ್ಟಿ ಮಾಡಿದೆ. ಮೋದಿಯವರ ರೋಡ್‌ಶೋ ಕುರಿತ ಜಾಹೀರಾತು ಹೊರತುಪಡಿಸಿ ಉಳಿದೆಲ್ಲವೂ ಮೊದಲ ಪುಟದ ಅರ್ಧದಷ್ಟು ಭಾಗವನ್ನು ಆಕ್ರಮಿಸಿಕೊಂಡಿವೆ. ಉದಾಹರಣೆಗೆ ನವೆಂಬರ್ 24ರಂದು, ಎಲ್ಲಾ ಮೂರು ಪತ್ರಿಕೆಗಳ ಮುಖಪುಟಗಳಲ್ಲಿ ಜಾಹೀರಾತು ನೀಡಿ, ‘ಅರಾವಳಿ, ಬನಸ್ಕಾಂತ, ಗಾಂಧಿನಗರ ಮತ್ತು ಅಹಮದಾಬಾದ್‌’ನಲ್ಲಿ ಮೋದಿಯವರು ಪಾಲ್ಗೊಳ್ಳಲಿರುವ ಸಾರ್ವಜನಿಕ ಸಭೆಗಳ ಮಾಹಿತಿಗಳನ್ನು ನೀಡಲಾಗಿತ್ತು. ಷಾ ಅವರ ಸಾರ್ವಜನಿಕ ಸಭೆಗಳ ಜಾಹೀರಾತುಗಳು ಸಾಮಾನ್ಯವಾಗಿ ಕೊನೆಯ ಪುಟದಲ್ಲಿ ಕಾಣಿಸಿಕೊಳ್ಳುತ್ತಿದ್ದವು. ಮೂರು ಪತ್ರಿಕೆಗಳಲ್ಲಿ ಸಾಮಾನ್ಯವಾಗಿ ಕಾಲುಪುಟದ ಒಟ್ಟು 24 ಜಾಹೀರಾತುಗಳನ್ನು ನೀಡಲಾಗಿತ್ತು.

ವಿವಿಧ ದಿನಗಳಲ್ಲಿ, ಒಳಪುಟಗಳಲ್ಲಿ ಬಿಜೆಪಿಯ ಸಾಧನೆಗಳ ಕುರಿತು ಅನೇಕ ಜಾಹೀರಾತುಗಳು ಇದ್ದವು. ಈ ಜಾಹೀರಾತುಗಳು “ಭಾಜ್ಪ್ ಎಟ್ಲೆ ಭರೋಸೋ” ( ಬಿಜೆಪಿ ಎಂದರೆ ನಂಬಿಕೆ) ಎಂಬ ಪಠ್ಯದೊಂದಿಗೆ ಸಾಮಾನ್ಯವಾಗಿ ಪ್ರಾರಂಭವಾಗುತ್ತಿತ್ತು ಅಥವಾ ಕೊನೆಗೊಳ್ಳುತ್ತಿತ್ತು. ನವೆಂಬರ್ 24ರಂದು ಒಂದು ಜಾಹೀರಾತಿನಲ್ಲಿ, “ಬಿಜೆಪಿ ಎಂದರೆ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವ, ರಾಜ್ಯದಲ್ಲಿ ಶಾಂತಿಯನ್ನು ಖಾತ್ರಿಪಡಿಸುವ, ಮಾ ಶಕ್ತಿಯ ಭದ್ರತೆಯನ್ನು ಖಾತ್ರಿಪಡಿಸುವ, ಮಹಿಳೆಯರಿಗೆ ಸುರಕ್ಷೆ ನೀಡುವ ಪಕ್ಷವಾಗಿದೆ. ಬಿಜೆಪಿಗೆ ಮತ ನೀಡಿ ಅಧಿಕಾರ ದೊರಕಿಸಬೇಕು” ಎಂದು ಮನವಿ ಮಾಡಲಾಗಿತ್ತು.

ಮತ್ತೊಂದು ಜಾಹೀರಾತಿನಲ್ಲಿ ಕೋವಿಡ್ ಸಮಯದಲ್ಲಿ ಬಿಜೆಪಿ ಮಾಡಿರುವ ಸಾಧನೆಗಳೆಂದು ಪಟ್ಟಿ ಮಾಡಲಾಗಿತ್ತು. ಬಡವರಿಗೆ ಉಚಿತ ಪಡಿತರ, ಗ್ಯಾರಂಟಿ ಇಲ್ಲದೆ ಬೀದಿ ಬದಿ ವ್ಯಾಪಾರಿಗಳಿಗೆ ಸಾಲ, ಕಾರ್ಮಿಕರಿಗೆ ಪೌಷ್ಟಿಕ ಆಹಾರ ಮೊದಲಾದ ವಿಚಾರಗಳನ್ನು ಪ್ರಸ್ತಾಪಿಸಲಾಗಿತ್ತು.

ಡಿಸೆಂಬರ್ 5 ರಂದು ಎಲ್ಲಾ ಮೂರು ಪತ್ರಿಕೆಗಳಲ್ಲಿ ಜಾಹೀರಾತು ಪ್ರಕಟಿಸಿ, ಎರಡನೇ ಹಂತದ ಮತದಾನದತ್ತ ಗಮನ ಸೆಳೆಯಲಾಯಿತು. “ಗುಜರಾತ್‌ನ ಹೆಮ್ಮೆ”, “ಗುಜರಾತ್ ವಿರೋಧಿಗಳ ವಿರುದ್ಧ ಹೋರಾಡುವ ಮತ್ತು ಭಯೋತ್ಪಾದಕರನ್ನು ಪ್ರವೇಶಿಸದಂತೆ ತಡೆಯುವ ಒಬ್ಬರಿಗೆ ಮತ ಚಲಾಯಿಸಬೇಕು” ಎಂದು ಕೋರಲಾಗಿತ್ತು. “ಏಕರೂಪ ನಾಗರಿಕ ಸಂಹಿತೆಯ ಪ್ರಕ್ರಿಯೆಯನ್ನು ಆರಂಭಿಸಿದ ರಾಜ್ಯ, ಜಗತ್ತೇ ಗುಜರಾತ್‌ಗೆ ಜಯಕಾರ ಹಾಕಿದೆ” ಎಂದು ಪ್ರಕಟಿಸಲಾಗಿತ್ತು. ಅಮಿತ್ ಷಾ, ನಡ್ಡಾ, ಭೂಪೇಂದ್ರ ಪಟೇಲ್ ಮತ್ತು ಸಿಆರ್ ಪಾಟೀಲ್ ಅವರ ಸಣ್ಣ ಭಾವಚಿತ್ರಗಳ ಜೊತೆಗೆ ಮೋದಿಯವರ ಕಟೌಟ್‌ ಬಳಿಸಲಾಗಿತ್ತು. ಮೊದಲ ಪುಟದ ಅರ್ಧದಷ್ಟು ಭಾಗವನ್ನು ಜಾಹೀರಾತು ಆಕ್ರಮಿಸಿಕೊಂಡಿತ್ತು.

ಇದನ್ನೂ ಓದಿರಿ: ಮೊರ್ಬಿ ವಿವಾದ: ಜಾಮೀನಿನ ಬಳಿಕ ಟಿಎಂಸಿ ನಾಯಕ ಸಾಕೇತ್‌ ಮತ್ತೆ ಬಂಧನ

ಕಾಂಗ್ರೆಸ್‌ ಪಾಡೇನು?

ಡಿಸೆಂಬರ್ 4 ಮತ್ತು 5ರಂದು ಎರಡನೇ ಹಂತದ ಮತದಾನಕ್ಕೆ ಒಂದು ದಿನ ಮೊದಲು ಮೂರು ಪತ್ರಿಕೆಗಳಲ್ಲಿ ಕಾಲುಪುಟದಷ್ಟು ಜಾಹೀರಾತುಗಳನ್ನು ಕಾಂಗ್ರೆಸ್ ನೀಡಿತ್ತು. ಮೊದಲ ಜಾಹೀರಾತಿನಲ್ಲಿ ಕಾಂಗ್ರೆಸ್‌ನ ಚುನಾವಣಾ ಭರವಸೆಗಳನ್ನು ಪ್ರಸ್ತಾಪಿಸಲಾಗಿತ್ತು. ಉಚಿತ ವಿದ್ಯುತ್, 500 ರೂ.ನಲ್ಲಿ ಗ್ಯಾಸ್ ಸಿಲಿಂಡರ್, ಹೆಚ್ಚಿನ ಉದ್ಯೋಗವಕಾಶ ಮತ್ತು ರೈತರ ಸಾಲ ಮನ್ನಾದ ಕುರಿತು ಕಾಂಗ್ರೆಸ್‌ ಮಾತನಾಡಿತ್ತು.

ಡಿಸೆಂಬರ್ 5 ರಂದು ಜಾಹೀರಾತಿನಲ್ಲಿ ಹೆಚ್ಚಿದ ಹಣದುಬ್ಬರ, ನಿರುದ್ಯೋಗ ಮತ್ತು “ವ್ಯಾಪಕ” ಭ್ರಷ್ಟಾಚಾರದ ಕುರಿತು ತಿಳಿಸಲಾಗಿತ್ತು. ಕಾಂಗ್ರೆಸ್‌ಗೆ ಮತ ಹಾಕಿದರೆ, ಶಿಕ್ಷಣ ವ್ಯವಸ್ಥೆಯನ್ನು ಸುಧಾರಿಸಲಾಗುತ್ತದೆ, ಯುವಕರಿಗೆ ಉದ್ಯೋಗಗಳನ್ನು ಒದಗಿಸಲಾಗುತ್ತದೆ, ಹಣದುಬ್ಬರವನ್ನು ತಡೆಯಲಾಗುತ್ತದೆ ಮತ್ತು ಗುಜರಾತ್ ಅನ್ನು ಡ್ರಗ್ ಮುಕ್ತ ಮಾಡಲಾಗುತ್ತದೆ ಎಂದು ಭರವಸೆ ನೀಡಲಾಗಿತ್ತು. “ಬದಲಾವಣೆ ಒಂದೇ ಪರ್ಯಾಯ” ಎಂದು ಜಾಹೀರಾತು ಕೊನೆಗೊಂಡಿತ್ತು.

ನವೆಂಬರ್ 21 ರಿಂದ ಡಿಸೆಂಬರ್ 5 ರವರೆಗೆ ಈ ಮೂರು ಪತ್ರಿಕೆಗಳಲ್ಲಿ ಎಎಪಿ ಯಾವುದೇ ಜಾಹೀರಾತುಗಳನ್ನು ನೀಡಿಲ್ಲ.

(ಹೆಚ್ಚಿನ ವಿವರಗಳಿಗೆ ‘ನ್ಯೂಸ್‌ಲಾಂಡ್ರಿ’ ವರದಿ ಓದಬಹುದು)

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ರೇವಣ್ಣಗೆ ಶಿಕ್ಷೆಯಾಗದಿದ್ದರೆ ಮತ್ತೆ ಹಾಗೆ ಮಾಡ್ತಾರೆ: ಅತ್ಯಾಚಾರ ಸಂತ್ರಸ್ತೆಯ ಸಹೋದರಿ ಹೇಳಿಕೆ

0
"ಪ್ರಜ್ವಲ್ ಮತ್ತು ರೇವಣ್ಣ ಯಾವತ್ತೂ ತಲೆ ಎತ್ತಿ ನಡೆಯಬಾರದು, ಅಂತಹ ಶಿಕ್ಷೆಯಾಗಬೇಕು" ಎಂದು ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆಯೊಬ್ಬರ ಸಹೋದರಿ ಮಾಲಾ (ಹೆಸರು ಬದಲಿಸಲಾಗಿದೆ) ಹೇಳಿರುವುದಾಗಿ thenewsminute.com ವರದಿ ಮಾಡಿದೆ. ಮಾಲಾಗೆ ತನ್ನ ಸಹೋದರಿ...