Homeಕರ್ನಾಟಕಅಗ್ರಹಾರ ಕೃಷ್ಣಮೂರ್ತಿ ಪರ ನ್ಯಾಯಕ್ಕಾಗಿ ಆಗ್ರಹಿಸಿ ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಿಗೆ ಪತ್ರ

ಅಗ್ರಹಾರ ಕೃಷ್ಣಮೂರ್ತಿ ಪರ ನ್ಯಾಯಕ್ಕಾಗಿ ಆಗ್ರಹಿಸಿ ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಿಗೆ ಪತ್ರ

ಕೇಂದ್ರ ಸಾಹಿತ್ಯ ಅಕಾಡೆಮಿಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದ ಅಗ್ರಹಾರ ಕೃಷ್ಣಮೂರ್ತಿಯವರು 8 ವರ್ಷಗಳ ಹಿಂದೆ ನಿವೃತ್ತಿಯಾಗಿದ್ದರು. ಆದರೆ ಅವರ ಮೇಲೆ ಕೆಲವು ಆರೋಪಗಳನ್ನು ಹೊರಿಸಿ, ನಿವೃತ್ತಿಯ ನಂತರ ಸಿಗಬೇಕಾದ ಸೌಲಭ್ಯಗಳನ್ನು ತಡೆಹಿಡಿಯಲಾಯಿತು.

- Advertisement -
- Advertisement -

ಅಗ್ರಹಾರ ಕೃಷ್ಣಮೂರ್ತಿಯವರಿಗೆ ಸಿಗಬೇಕಾದ ನಿವೃತ್ತಿಯ ನಂತರದ ಸೌಲಭ್ಯಗಳನ್ನು ನೀಡುವಂತೆ ಮತ್ತು ಅವರ ಮೇಲೆ ಹೊರಿಸಿರುವ ಆರೋಪಗಳನ್ನು ತಳ್ಳಿಹಾಕುವಂತೆ ಕರ್ನಾಟಕದಲ್ಲಿರುವ ಸಾಹಿತಿಗಳು, ಚಿಂತಕರು ಮತ್ತು ಹೋರಾಟಗಾರರು ಸೇರಿ ಕೇಂದ್ರ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಚಂದ್ರಶೇಖರ ಕಂಬಾರರಿಗೆ ಪತ್ರ ಬರೆದಿದ್ದಾರೆ.

ಕೇಂದ್ರ ಸಾಹಿತ್ಯ ಅಕಾಡೆಮಿಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದ ಅಗ್ರಹಾರ ಕೃಷ್ಣಮೂರ್ತಿಯವರು 8 ವರ್ಷಗಳ ಹಿಂದೆ ನಿವೃತ್ತಿಯಾಗಿದ್ದರು. ಆದರೆ ಅವರ ಮೇಲೆ ಕೆಲವು ಆರೋಪಗಳನ್ನು ಹೊರಿಸಿ, ನಿವೃತ್ತಿಯ ನಂತರ ಸಿಗಬೇಕಾದ ಸೌಲಭ್ಯಗಳನ್ನು ತಡೆಹಿಡಿಯಲಾಗಿತ್ತು.

ಕೃಷ್ಣಮೂರ್ತಿ ಅಕಾಡೆಮಿಯ ಆರೋಪಗಳನ್ನು ಪ್ರಶ್ನಿಸಿ ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದರು. ಸುದೀರ್ಘ ನ್ಯಾಯಾಂಗ ಹೋರಾಟದಲ್ಲಿ ಉಚ್ಚ ನ್ಯಾಯಾಲಯವು ಕೃಷ್ಣಮೂರ್ತಿ ಮೇಲಿದ್ದ ಆರೋಪಗಳನ್ನು ತಳ್ಳಿಹಾಕಿತ್ತು. ಇದರಿಂದ ಅವರು ದೋಷಮುಕ್ತರಾಗಿದ್ದಾರೆ.

ಚಿಂತಕರು ಕೇಂದ್ರ ಸಾಹಿತ್ಯ ಅಕಾಡೆಮಿಗೆ ಬರೆದ ಪತ್ರದಲ್ಲಿ ಅಗ್ರಹಾರ ಕೃಷ್ಣಮೂರ್ತಿ ಅವರ ಮೇಲೆ ಹೊರಿಸಿದ್ದ ಆರೋಪಗಳ ವಿಚಾರವಾಗಿ ಅವರು ಏಳು ವರ್ಷಗಳ ಕಾಲ ಮಾನಸಿಕ ನೋವು ಅನುಭವಿಸಿದ್ದರು. ತತ್ಸಂಬಂಧ ಅವರ ಆರೋಗ್ಯ ಕೆಟ್ಟು ದೈಹಿಕವಾಗಿ ಜರ್ಜರಿತರಾಗಿದ್ದಾರೆ ಎಂದು ಹೇಳಿದೆ.

“ನಿವೃತ್ತಿಯ ನಂತರದ ಸೌಲಭ್ಯಗಳು ಬಾರದೆ ಇದ್ದುದರಿಂದ ಆರ್ಥಿಕವಾಗಿಯೂ ಸಂಕಷ್ಟಕ್ಕೆ ಸಿಲುಕಿದರು. ಸಾಹಿತ್ಯ ಅಕಾಡೆಮಿಯ ಉನ್ನತ ಹುದ್ದೆಯಲ್ಲಿದ್ದ ಅಗ್ರಹಾರ ಕೃಷ್ಣಮೂರ್ತಿ ಅವರ ಮೇಲಿದ್ದ ಆರೋಪಗಳ ಕಾರಣ ನಿವೃತ್ತಿಯ ನಂತರ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ಸ್ವಾಯತ್ತ ಸಂಸ್ಥೆಗಳಲ್ಲಿ ತಮ್ಮ ಸೇವೆ ಮುಂದುವರೆಸಬಹುದಾದ ಬಹುದೊಡ್ಡ ಅವಕಾಶಗಳಿಂದಲೂ ವಂಚಿತರಾದರು” ಎಂದು ಪತ್ರದಲ್ಲಿ ಬರೆಯಲಾಗಿದೆ.

ಮಾನಸಿಕವಾಗಿ, ದೈಹಿಕವಾಗಿ, ಆರ್ಥಿಕವಾಗಿ ಇಷ್ಟೆಲ್ಲಾ ನೋವುಂಡ ಅಗ್ರಹಾರ ಅವರಿಗೆ ಕರ್ನಾಟಕ ಉಚ್ಚ ನ್ಯಾಯಾಲಯ ನೀಡಿದ ತೀರ್ಪಿನಿಂದ ಒದಗಿದ ನ್ಯಾಯವೂ ಅವರ ಪಾಲಿಗೆ ಇಲ್ಲವಾಯಿತು ಎಂದು ಪತ್ರವು ಆರೋಪಿಸಿದೆ.

ಉಚ್ಚ ನ್ಯಾಯಾಲಯದ ತೀರ್ಪಿನಂತೆ ಕೇಂದ್ರ ಸಾಹಿತ್ಯ ಅಕಾಡೆಮಿಯು ಅವರ ನಿವೃತ್ತಿ ಸೌಲಭ್ಯಗಳನ್ನು ನೀಡದೆ ಮತ್ತೆ ದ್ವಿಸದಸ್ಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿತು. ಅದರಿಂದ ಘಾಸಿಗೊಂಡ ಕೃಷ್ಣಮೂರ್ತಿಯವರಿಗೆ ಆರೋಗ್ಯದಲ್ಲಿ ತೀವ್ರ ಏರುಪೇರಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಇದೀಗ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಪತ್ರವು ಹೇಳಿದೆ.

ಕನ್ನಡ ಸಾರಸ್ವತ ಲೋಕದ ಚಿಂತಕರಲ್ಲಿ ಒಬ್ಬರಾದ ಕೃಷ್ಣಮೂರ್ತಿ ಅವರ ವಿಶ್ರಾಂತ ಬದುಕಿನಲ್ಲಿ ಇಂತಹ ನೋವುಣ್ಣುವ ಪರಿಸ್ಥಿತಿ ಅವರ ಪಾಲಿಗೆ ಬಂದಿರುವುದಕ್ಕೆ ಪತ್ರವು ಅತ್ಯಂತ ಖೇದ ಹಾಗೂ ದುಃಖ ವ್ಯಕ್ತಪಡಿಸಿದೆ.

ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು, ನಾಡಿನ ಹಿರಿಯರೂ ಕನ್ನಡಿಗರೂ ಆದ ಡಾ.ಚಂದ್ರಶೇಖರ ಕಂಬಾರ ಅವರು ಕೇಂದ್ರ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿರುವ ಈ ಸಂದರ್ಭದಲ್ಲಿ ಕನ್ನಡಿಗರೇ ಆದ ಅಗ್ರಹಾರ ಕೃಷ್ಣಮೂರ್ತಿ ಅವರಿಗೆ ಸಿಕ್ಕ ನ್ಯಾಯವನ್ನು ಅಕಾಡೆಮಿ ಮರು ಪ್ರಶ್ನಿಸುವ ಸನ್ನಿವೇಶ ಬರಬಾರದಿತ್ತು ಎಂದಿರುವ ಪತ್ರವು ಮೇಲ್ಮನವಿ ಸಲ್ಲಿಸಿರುವ ವಿಷಯದ ಬಗ್ಗೆ ಮಾನವೀಯತೆಯ ಹಿನ್ನೆಲೆಯಲ್ಲಿ, ಸತ್ಯ ಸಂಗತಿಗಳ ಮುನ್ನೆಲೆಯಲ್ಲಿ ಮೇಲ್ಮನವಿಯನ್ನು ಹಿಂಪಡೆದು ಅಗ್ರಹಾರ ಕೃಷ್ಣಮೂರ್ತಿ ಅವರಿಗೆ ಸಲ್ಲಬೇಕಾದ ಎಲ್ಲಾ ಸೌಲಭ್ಯಗಳನ್ನು ಕೊಡಬೇಕೆಂದು ಪತ್ರವು ಆಗ್ರಹಿಸಿದೆ.

ಪತ್ರಕ್ಕೆ ಬರಗೂರು ರಾಮಚಂದ್ರಪ್ಪ, ಕೆ. ಮರುಳಸಿದ್ದಪ್ಪ, ಡಾ.ಎಲ್. ಹನುಮಂತಯ್ಯ, ಡಾ. ವಿಜಯಮ್ಮ, ಹೆಚ್.ಎಸ್. ಶಿವಪ್ರಕಾಶ್, ಕಾಳೇಗೌಡ ನಾಗಾವರ, ಡಾ. ರಾಜೇಂದ್ರ ಚನ್ನಿ, ಸಿ.ಎಸ್. ದ್ವಾರಕನಾಥ್, ಬಿ.ಟಿ.ವೆಂಕಟೇಶ್ ಕೇಶವರೆಡ್ಡಿ ಹಂದ್ರಾಳ ಹೆಚ್.ಆರ್. ಸ್ವಾಮಿ, ಕುಂ. ವೀರಭದ್ರಪ್ಪ, ಶ್ರೀನಿವಾಸ್ ಜಿ ಕಪ್ಪಣ್ಣ, ಪುರುಷೋತ್ತಮ್ ಬಿಳಿಮಲೆ,  ಆಶಾದೇವಿ ಎಂ.ಎಸ್., ಸಿ. ಬಸವಲಿಂಗಯ್ಯ, ಕವಿತಾ ಲಂಕೇಶ್ಕೆ. ನೀಲಾ, ಎಲ್.ಎನ್ ಮುಕುಂದರಾಜ್, ಷರೀಫಾ, ದಿನೇಶ್ ಅಮೀನ್‌ಮಟ್ಟು, ಡಿ.ಉಮಾಪತಿ, ಎಸ್.ಹೆಚ್.ರೆಡ್ಡಿ, ಬಸವರಾಜು ಮುಂತಾದವರು ಸೇರಿದಂತೆ ಕರ್ನಾಟಕದ 50 ಕ್ಕೂ ಹೆಚ್ಚು ಲೇಖಕರು, ಚಿಂತಕರು, ಹೋರಾಟಗಾರರು ಹಾಗೂ ಕವಿಗಳು ಸಹಿ ಮಾಡಿದ್ದಾರೆ.


ಇದನ್ನೂ ಓದಿ: ನಮ್ಮ ಸಹಕಾರಕ್ಕೆ ಯಾವುದೆ ಷರತ್ತುಗಳಿಲ್ಲ: ಮಾರಿಷಸ್‌ಗೆ ಪ್ರಧಾನಿ ಮೋದಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ದ್ವೇಷ ಬಿತ್ತುವ, ವಿಭಜನೀಯ ಶಕ್ತಿಗಳನ್ನು ಸೋಲಿಸಲು ಒಗ್ಗಟ್ಟಾಗಬೇಕು: ಅಡ್ಮಿರಲ್ ರಾಮದಾಸ್ ಅವರ ಕೊನೆಯ ಸಂದೇಶ...

0
ಲೋಕಸಭೆ ಚುನಾವಣೆ ಹೊಸ್ತಿಲ್ಲಲ್ಲಿ ನೌಕಾಪಡೆಯ ಮಾಜಿ ಮುಖ್ಯಸ್ಥ ಅಡ್ಮಿರಲ್ ರಾಮ್‌ದಾಸ್ ಅವರ ಕೊನೆಯ ಕಾಲದ ಸಂದೇಶವನ್ನು ಅವರ ಪತ್ನಿ ಲಲಿತಾ ರಾಮದಾಸ್‌ ಸಾರ್ವಜನಿಕರ ಮುಂದಿಟ್ಟಿದ್ದು, ದ್ವೇಷಿಸುವ, ವಿಭಜನೀಯ, ಸರ್ವಾಧಿಕಾರಿಗಳನ್ನು ಸೋಲಿಸಲು ಒಗ್ಗಟ್ಟಾಗಬೇಕು ಎಂದು...