ಸರ್ಕಾರಿ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ (LKG, UGK) ಶಾಲೆ : ಈ ಕಾಲದ ಅಗತ್ಯ

ಸರ್ಕಾರಿ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ಶಿಕ್ಷಣವನ್ನು ಪಡೆದ ನಂತರ ಮುಂದಿನ ಹಂತವಾದ  1-5 ನೇ ತರಗತಿಗಳಿಗೆ ಪೋಷಕರು ತಮ್ಮ ಮಕ್ಕಳನ್ನು ಅದೇ ಶಾಲೆಗಳಲ್ಲಿ ಮುಂದುವರೆಸುತ್ತಾರೆ.

| ಬಿ. ಶ್ರೀಪಾದ ಭಟ್ |

ಓದುಗರಿಗೆ ಸೂಚನೆ:
ಈ ಲೇಖನದ ನಿರೂಪಣೆ ಡಿ.ಎನ್.ಶಂಕರಬಟ್ ಅವರ ಬಾಶಾ ಪ್ರಯೋಗಕ್ಕೆ ಒಳಪಟ್ಟಿದೆ. ಮಹಾಪ್ರಾಣದ ಬಳಕೆ, ಷ-ಶ ಬಳಕೆ ಸೇರಿದಂತೆ ಕೆಲವು ಹೊಸ ಸಂಗತಿಗಳನ್ನು ಅವರು ಬಲವಾಗಿ ಪ್ರತಿಪಾದಿಸುತ್ತಿದ್ದು, ಕೆಲವು ಲೇಕಕರು ಅದನ್ನು ಅನುಸರಿಸಲು ಪ್ರಯತ್ನಿಸುತ್ತಿದ್ದಾರೆ. ಹಾಗಾಗಿ ಈ ಲೇಕನದಲ್ಲಿನ ಬಾಶೆಯ ಬಳಕೆಯಲ್ಲಿ ನಿಮಗೆ ಕಂಡುಬರುವ ವ್ಯತ್ಯಾಸವನ್ನು, ಪ್ರೂಫ್ ವ್ಯತ್ಯಾಸ ಎಂದು ಬಗೆಯಬಾರದೆಂದು ಕೋರುತ್ತೇವೆ

ರಾಜ್ಯ ಸರಕಾರವು ಈ ವರ್ಶದಿಂದ ಪೂರ್ವ ಪ್ರಾಥಮಿಕ ಶಾಲೆಗಳನ್ನ (ಎಲ್ ಕೆಜಿ/ಯು ಕೆಜಿ) ಪ್ರಾರಂಬಿಸುವುದಾಗಿ ಹೇಳಿದೆ. ಇದು ಸ್ವಾಗತಾರ್ಹ ನಿರ್ದಾರ. ಕಳೆದ ಐದು ವರ್ಶಗಳಿಂದ ಈ ಕುರಿತು ಸಮಾನ ಶಿಕ್ಷಣಕ್ಕಾಗಿ ಜನಾಂದೋಲನ (ಸಶಿಜ) ಸಂಘಟನೆ ಒಂದು ಚಳುವಳಿಯನ್ನೆ ನಡೆಸಿತ್ತು. ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಮಾದಹಳ್ಳಿ, ಕೆ.ಆರ್.ಪೇಟೆಯ ಶತಮಾನೋತ್ಸವ ಶಾಲೆಗಳಲ್ಲಿ ಹಳೆಯ ವಿದ್ಯಾರ್ಥಿಗಳ ಒಕ್ಕೂಟ, ಸಶಿಜ, ಸ್ಥಳೀಯ ಅದಿಕಾರಿಗಳು, ಪ್ರಾದ್ಯಾಪಕರು  ಒಂದಾಗಿ ‘ಮಕ್ಕಳ ಮನೆ’ ಹೆಸರಿನಲ್ಲಿ ಪೂರ್ವ ಪ್ರಾಥಮಿಕ ಶಾಲೆಗಳನ್ನ ಪ್ರಾರಂಬಿಸಿದರು. ನಾಲ್ಕು ವರ್ಶಗಳ ನಂತರವೂ ಇಂದಿಗೂ ಆ ಶಾಲೆಗಳು ಯಶಸ್ವಿಯಾಗಿ ನಡೆಯುತ್ತಿವೆ ಮತ್ತು ಸರಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆಯೂ ಹೆಚ್ಚಾಗಿದೆ. ಮತ್ತು ಇದು ನಿರಂತರವಾಗಿ ಮುಂದುವರೆಯುತ್ತದೆ

ಈ ನಿಟ್ಟಿನಲ್ಲಿ ಇನ್ನೂ ಆಗಬೇಕಾದದ್ದು ಬಹಳಷ್ಟಿದೆ. ಶಾಲೆಗಳ ಬಲವರ್ಧನೆಗಾಗಿ ಸ್ಥಳೀಯ ಸಮುದಾಯಗಳು ಮಕ್ಕಳ ಮನೆಗಳನ್ನು ಆರಂಭಿಸಿದರೂ ಅದರ ನಿರ್ವಹಣೆಯನ್ನು ಮಾಡುವ ಜವಾಬ್ದಾರಿ ಸರ್ಕಾರವೇ ವಹಿಸಿಕೊಳ್ಳಬೇಕು ಎಂದು ಸಶಿಜ ಸಂಘಟನೆ ಒತ್ತಾಯಿಸುತ್ತಲೆ ಇತ್ತು. ಇದೆ ಸಂದರ್ಬದಲ್ಲಿ ಎಸ್.ಜಿ.ಸಿದ್ದರಾಮಯ್ಯನವರು ಅದ್ಯಕ್ಷರಾಗಿರುವ ‘ಕನ್ನಡ ಅಬಿವೃದ್ದಿ ಪ್ರಾದಿಕಾರ’ವು ಸರಕಾರಿ ಶಾಲೆಗಳ ಸಬಲೀಕರಣ ಸಮಿತಿಯು ನೀಡಿದ ವರದಿಯಲ್ಲಿಯೂ ಈ ಪೂರ್ವಪ್ರಾಥಮಿಕ ಶಾಲೆಗಳನ್ನ ಪ್ರಾರಂಬಿಸಬೇಕು ಎಂದು ಶಿಫಾರಸ್ಸು ಮಾಡಿತ್ತು ಮತ್ತು ಅದರ ಅಗತ್ಯತೆಯ ಕುರಿತು ವಿವರಿಸಲಾಗಿತ್ತು. ಈಗ ಸರಕಾರವು ಪೂರ್ವ ಪ್ರಾಥಮಿಕ ಶಾಲೆಗಳನ್ನ ಪ್ರಾರಂಬಿಸಲು ಮುಂದಾಗಿರುವುದು ಸ್ವಾಗತಾರ್ಹ

ಸರ್ಕಾರಿ ಶಾಲೆಗಳ ಬಲವರ್ಧನೆಗಾಗಿ ಪೂರ್ವ ಪ್ರಾಥಮಿಕ ಶಾಲೆಗಳ ಅಗತ್ಯವನ್ನು ಈ ರೀತಿ ಪಟ್ಟಿ ಮಾಡಬಹುದು:

  • ಮೊದಲನೆಯದಾಗಿ ಸರ್ಕಾರಿ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ಶಿಕ್ಷಣವಾದ (ಎಲ್.ಕೆ.ಜಿ/ಯುಕೆಜಿ) ‘ಮಕ್ಕಳ ಮನೆ’ಯನ್ನು ಪ್ರಾರಂಭ ಮಾಡಿದರೆ ಪೋಷಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ದಾಖಲು ಮಾಡುತ್ತಾರೆ. ಸರ್ಕಾರಿ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ಶಿಕ್ಷಣದ ಹಂತದಿಂದಲೇ ದಾಖಲಾತಿ ಪ್ರಮಾಣ ಹೆಚ್ಚುತ್ತದೆ.
  • ಸರ್ಕಾರಿ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ಶಿಕ್ಷಣವನ್ನು ಪಡೆದ ನಂತರ ಮುಂದಿನ ಹಂತವಾದ  1-5 ನೇ ತರಗತಿಗಳಿಗೆ ಪೋಷಕರು ತಮ್ಮ ಮಕ್ಕಳನ್ನು ಅದೇ ಶಾಲೆಗಳಲ್ಲಿ ಮುಂದುವರೆಸುತ್ತಾರೆ.
  • ಮಕ್ಕಳ ಮನೆಯ ಕಾರಣಕ್ಕಾಗಿ ಆರಂಭದಿಂದಲೇ ಪೋಷಕರು ನೇರವಾಗಿ ಮಕ್ಕಳ ಶಿಕ್ಷಣದ ಎಲ್ಲಾ ಚಟುವಟಿಕೆಗಳÀಲ್ಲಿ ಪಾಲ್ಗೊಳ್ಳಬಹುದು. ಮಕ್ಕಳ ಪ್ರಾಥಮಿಕ ಪೂರ್ವ ಶಿಕ್ಷಣದ ಪ್ರತಿ ಹಂತದಲ್ಲೂ ಪೋಷಕರು ಒಳಗೊಳ್ಳುತ್ತಾ, ಶಿಕ್ಷಕರೊಂದಿಗೆ ಸಮಾಲೋಚಿಸಿ ಉತ್ತಮ ‘ಗುಣಮಟ್ಟದಕಲಿಕೆಯನ್ನು’ ತಮ್ಮ ಮಕ್ಕಳಲ್ಲಿ ರೂಪಿಸುವುದಕ್ಕೆ ಇದು ಅವಕಾಶ ಕಲ್ಪಿಸುತ್ತದೆ.
  • ಈ ಹಂತದಲ್ಲಿ ಕಲಿಕೆಯು ಮಕ್ಕಳ ದೈಹಿಕ, ಮಾನಸಿಕ, ಬೌದ್ಧಿಕ ಬೆಳವಣಿಗೆಗೆ ಪೂರಕವಾಗುತ್ತದೆ. ಅವರ ಕಲಿಕಾ ಸಾಮಥ್ರ್ಯವನ್ನು ಹೆಚ್ಚಿಸುತ್ತದೆ
  • ಪ್ರಾಥಮಿಕ ಪೂರ್ವ ಹಂತದಿಂದಲೇ ಪೋಷಕರು ಸರ್ಕಾರಿ ಶಾಲೆಗಳೊಂದಿಗೆ ಒಡನಾಟ ಆರಂಭಿಸುವುದರಿಂದ ಅವರಿಗೆ ಅಲ್ಲಿ ಮೂಲಭೂತ ಸೌಕರ್ಯದ ಕೊರತೆಗಳು ಸ್ಪಷ್ಟವಾಗಿ ಗೋಚರಿಸುತ್ತವೆ ಮತ್ತು ಪೋಷಕರಿಗೆ ಅಲ್ಲಿನ ಆಡಳಿತ ಮಂಡಳಿಯೊಂದಿಗೆ ನೇರವಾಗಿ ಈ ಕುರಿತು ಚರ್ಚಿಸಲು ಮತ್ತು ಆ ಕೊರತೆಯನ್ನು ನಿವಾರಿಸಲು ಅವಕಾಶ ದೊರಕುತ್ತದೆ. ಇದು ಪೋಷಕರಲ್ಲಿ ಮತ್ತು ಶಿಕ್ಷಕರಲ್ಲಿ ಸಾಮಾಜಿಕ ಜವಬ್ದಾರಿಯನ್ನು ಹೆಚ್ಚಿಸುತ್ತದೆ. ಜೊತೆಗೆ ಸಾಮರಸ್ಯವನ್ನು ಉಂಟುಮಾಡುತ್ತದೆ.
  • ಪೋಷಕರು, ಶಾಲೆ ಮತ್ತು ಶಾಲಾಭಿವೃದ್ಧಿ ಸಮಿತಿ (ಎಸ್‍ಡಿಎಂಸಿ)ಗಳ ನಡುವೆ ಸೌಹಾರ್ದಯುತ ಸಂಬಂಧಗಳನ್ನು ಗಟ್ಟಿಗೊಳಿಸಿಕೊಳ್ಳಲು ಮಕ್ಕಳ ಮನೆ ತುಂಬಾ ಸಹಕಾರಿಯಾಗುತ್ತದೆ.
  • ಇದರ ಕಾರಣಕ್ಕಾಗಿ “ಗ್ರಾಮ-ಪೋಷಕರು–ಶಿಕ್ಷಕ-ಎಸ್‍ಡಿಎಂಸಿ” ಗಳ ನಡುವೆ ಒಂದು ಕಾರ್ಯಕಾರಿ ಅನುಬಂಧ ಏರ್ಪಡುತ್ತದೆ. ಶಾಲೆ ಸಮುದಾಯ ಕೇಂದ್ರಿತವಾಗುತ್ತದೆ
  • ಆರಂಬದ ಪೂರ್ವ ಪ್ರಾಥಮಿಕ ಶಿಕ್ಷಣದ ಹಂತದಿಂದಲೇ ಸರ್ಕಾರಿ ಶಾಲೆಗಳಲ್ಲಿ ಸಮಾನ ಶಿಕ್ಷಣಕ್ಕಾಗಿ ಉತ್ತಮವಾದ ಭದ್ರ ಅಡಿಪಾಯ ಹಾಕಿದರೆ ಇದು ಮುಂದಿನ ಹಂತವಾದ ಕಿರಿಯ ಮತ್ತು ಹಿರಿಯ ಪ್ರಾಥಮಿಕ ಶಿಕ್ಷಣಕ್ಕೆ ಅತ್ಯುತ್ತಮವಾದ ಕಲಿಕೆಯ ವಾತಾವರಣವನ್ನು ಕಲ್ಪಿಸುತ್ತದೆ     

ಇಲ್ಲಿ ಅಂಗನವಾಡಿಗಳನ್ನ ಸರಕಾರಿ ಶಾಲೆಗಳ ಆವರಣಕ್ಕೆ ಸ್ಥಳಾಂತರಿಸುವುದರ ಹಿಂದೆ ಒಂದು ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯ ಸಬಲೀಕರಣದ ಆಶಯವಿದೆ. ಅಂಗನವಾಡಿ (ಶಿಶುಪಾಲನೆ) -ಪೂರ್ವ ಪ್ರಾಥಮಿಕ-ಪ್ರಾಥಮಿಕ ಶಿಕ್ಷಣವನ್ನ ಒಂದು ಹಾರದಂತೆ ಒಂದೆ ದಾರದಲ್ಲಿ ಹೆಣೆಯುವುದರಿಂದ ಪ್ರತಿಯೊಂದು ವಲಯವು ಮತ್ತೊಂದಕ್ಕೆ ಪೂರಕವಾಗಿ (feeder) ಕರ್ತವ್ಯ ನಿರ್ವಹಿಸುತ್ತದೆ ಮತ್ತು ಪರಸ್ಪರ ಪೋಶಿಸಿಕೊಳ್ಳುತ್ತವೆ ಮತ್ತು ಒಂದು ಮತ್ತೊಂದನ್ನ ಗಟ್ಟಿಗೊಳಿಸುತ್ತದೆ. ಇದು ತುಂಬಾ ಅಗತ್ಯವಾದ ಹೆಣಿಗೆಯಾಗಿದೆ.

ಅಂಗನವಾಡಿಗಳನ್ನ ಸರಕಾರಿ ಶಾಲೆಗಳ ಆವರಣಕ್ಕೆ ವರ್ಗಾಯಿಸುವುದರಿಂದ ಅಂಗನವಾಡಿ ವ್ಯವಸ್ಥೆ ಮತ್ತುಶ್ಟು ಬಲಗೊಳ್ಳುತ್ತದೆ, ಉತ್ತರದಾಯಿತ್ವ ದೊರಕುತ್ತದೆ ಮತ್ತು ಅಲ್ಲಿ ಕೆಲಸ ಮಾಡುತ್ತಿರುವ ಕಾರ್ಯಕರ್ತೆಯರ ಉದ್ಯೋಗದಲ್ಲಿ ಯಾವುದೆ ಕೊರತೆ, ಬಿಕ್ಕಟ್ಟು ಉಂಟಾಗುವುದಿಲ್ಲ. ಜೊತೆಗೆ ಅಂಗನವಾಡಿ ಕಾರ್ಯಕರ್ತೆಯರಿಗೆ ಪೂರ್ವಪ್ರಾಥಮಿಕ ಶಿಕ್ಷಣದ ಕುರಿತಾದ ಬೋದನ ತರಬೇತಿ ನೀಡಿದರೆ ಅವರೆ ಅಲ್ಲಿ ಶಿಕ್ಷಕಿಯರಾಗಿ ಮುಂದುವರೆಯಬಹುದು ಮತ್ತು ಉದ್ಯೋಗ ಬದ್ರತೆಯ ಸಾದ್ಯತೆಯೂ ಖಾತರಿಯಾಗುತ್ತದೆ.

ಪೂರ್ವ ಪ್ರಾಥಮಿಕ ಶಿಕ್ಷಣವು ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯ ಬುನಾದಿಯಿದ್ದಂತೆ. ಇದನ್ನು ಪ್ರತೀ ಸರ್ಕಾರಿ ಶಾಲೆಯಲ್ಲೂ ಆರಂಭಿಸಬೇಕು ಮತ್ತು ಅದರ ನಿರ್ವಹಣೆಗಾಗಿ ಬಜೆಟ್ ಒದಗಿಸುವ ಹೊಣೆಯನ್ನು ಸರ್ಕಾರವೇ ಹೊತ್ತುಕೊಳ್ಳಬೇಕು. ಅಲ್ಲಿಯವರೆಗೆ ಸ್ಥಳೀಯ ಸಮುದಾಯಗಳ ಉತ್ಸಾಹ ಮತ್ತು ಜವಾಬ್ದಾರಿಯಿಂದ ನಡೆಯುತ್ತಿರುವ ಮಕ್ಕಳ ಮನೆಗಳಿಗೆ ತುರ್ತಾಗಿ ನೆರವಾಗಲು ಸರ್ಕಾರ ಮತ್ತು ಜನಪ್ರತಿನಿಧಿಗಳು ಮುಂದಾಗಬೇಕು.

(ಈ ಚರ್ಚೆಯನ್ನು ಮುಂದುವರೆಸಲು ನಾನುಗೌರಿ.ಕಾಂ ಬಯಸುತ್ತದೆ. ಹಾಗಾಗಿ ನಿಮ್ಮ ಅಭಿಪ್ರಾಯಗಳನ್ನು ಬರೆದು [email protected] ಗೆ ಅಥವಾ 7353770202 ವಾಟ್ಸಾಪ್ ನಂಬರ್ ಗೆ ಕಳಿಸಬಹುದಾಗಿದೆ.)

 

Donate

ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ನಿಮ್ಮ ನಿರಂತರ ಆರ್ಥಿಕ ನೆರವು ಅಗತ್ಯ. ನಿಮ್ಮಿಂದ ಸಾಧ್ಯವಿರುವಷ್ಟು ಹೆಚ್ಚಿನ ವಂತಿಗೆಯನ್ನು ನೀಡಲು ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ.
ಒಂದು ವೇಳೆ ಈ ಲಿಂಕಿನ ಮೂಲಕ ಹಣ ಪಾವತಿ ಮಾಡುವುದಕ್ಕೆ ಅಡಚಣೆ ಇದ್ದರೆ, ಈ ಪುಟದ ಮೇಲೆ ಅಥವಾ ಕೆಳಗೆ ಇರುವ ವಂತಿಗೆ – Donate ಬಟನ್.ಅನ್ನು ಕ್ಲಿಕ್ಕಿಸಿ.
ಧನ್ಯವಾದಗಳು
Independent journalism can’t be independent without your support, contribute by clicking below.

1 COMMENT

  1. ನೀವು ಬರೆದಿರುವುದೇನೋ ಸರಿ.‌ಅದು ಸಮಾನ ಶಿಕ್ಷಣಕ್ಕಾಗಿ ಜನಾಂದೋಲನದ ದೃಷ್ಟಿಕೋನ. ಆದರೆ ಅಂಗನವಾಡಿ ಸಂಘಟನೆಗಳ ದೃಷ್ಟಿಕೋನದ ಬಗ್ಗೆಯೂ ಲೇಖನ ಬಂದರೆ ಒಳ್ಳೆಯದು

LEAVE A REPLY

Please enter your comment!
Please enter your name here