HomeಮುಖಪುಟSC, ST ಮತ್ತು ಈಶಾನ್ಯ ರಾಜ್ಯಗಳಲ್ಲಿ ಕಡಿಮೆ ಅನುದಾನ ಬಳಕೆ: ಕೃಷಿ ಇಲಾಖೆಗೆ ಮಂಜೂರಾದ 44,000...

SC, ST ಮತ್ತು ಈಶಾನ್ಯ ರಾಜ್ಯಗಳಲ್ಲಿ ಕಡಿಮೆ ಅನುದಾನ ಬಳಕೆ: ಕೃಷಿ ಇಲಾಖೆಗೆ ಮಂಜೂರಾದ 44,000 ಕೋಟಿ ರೂ. ಬಳಕೆಯಾಗದೆ ವಾಪಸ್

- Advertisement -
- Advertisement -

ಲೋಕಸಭೆಯಲ್ಲಿ ಸೋಮವಾರ ಮಂಡಿಸಲಾದ ಸಂಸದೀಯ ಸ್ಥಾಯಿ ಸಮಿತಿಯ ವರದಿಯ ಪ್ರಕಾರ,  ”ಕೃಷಿ ಸಚಿವಾಲಯದ ಅಡಿಯಲ್ಲಿ ಬರುವ ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆಯು ಕಳೆದ ಮೂರು ವರ್ಷಗಳಲ್ಲಿ ತನ್ನ ಬಜೆಟ್‌ನ 44,015.81 ಕೋಟಿ ರೂ. ಹಂಚಿಕೆಯನ್ನು ಸಂಪೂರ್ಣವಾಗಿ ಬಳಸಿಕೊಳ್ಳಲು ಸಾಧ್ಯವಾಗಿಲ್ಲ” ಎಂದು ತಿಳಿಸಿದೆ.

ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆಯ ಅನುದಾನದ ಬೇಡಿಕೆಯ (2023-24) ವರದಿಯಲ್ಲಿ, ಪಿ ಸಿ ಗದ್ದಿಗೌಡರ್ ಅವರ ನೇತೃತ್ವದ ಕೃಷಿ, ಪಶುಸಂಗೋಪನೆ ಮತ್ತು ಆಹಾರ ಸಂಸ್ಕರಣೆ ಸ್ಥಾಯಿ ಸಮಿತಿಯು ಹಂಚಿಕೆಯಾದ ಹಣವನ್ನು ಸರ್ಕಾರ ಮರಳಿ ಪಡೆಯುವ ಅಭ್ಯಾಸವನ್ನು ಬಿಡಬೇಕು ಎಂದು ಕೇಳಿಕೊಂಡಿದೆ.

“2020-21, 2021-22 ಮತ್ತು 2022-23 (ತಾತ್ಕಾಲಿಕ) ಅವಧಿಯಲ್ಲಿ ಕ್ರಮವಾಗಿ 23,824.54 ಕೋಟಿ, 429.22 ಕೋಟಿ ಮತ್ತು 19,762.05 ಕೋಟಿ ರೂಪಾಯಿ ಮೊತ್ತದ ಹಣವನ್ನು ಹಿಂಪಡೆದಿದೆ ಎಂದು ಇಲಾಖೆಯ ಉತ್ತರದಿಂದ ಸಮಿತಿಯು ಟಿಪ್ಪಣಿಯಲ್ಲಿ ತಿಳಿಸಿದೆ. ಅಂದರೆ ಈ ವರ್ಷಗಳಲ್ಲಿ ಇಲಾಖೆಯಿಂದ ಒಟ್ಟು 44,015.81 ಕೋಟಿ ರೂ. ಹಿಂಪಡೆಯಲಾಗಿದೆ.”

ಇದನ್ನೂ ಓದಿ: ಸಲಿಂಗ ವಿವಾಹಕ್ಕೆ ಕಾನೂನು ಮಾನ್ಯತೆ ನೀಡುವುದು ಸರಿಯಲ್ಲ: ಕೇಂದ್ರದ ವಿರೋಧ

ಮುಖ್ಯವಾಗಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸಮುದಾಯಗಳ ಕಲ್ಯಾಣದ ಉದ್ದೇಶಿತ ಯೋಜನೆಗಳಿಗೆ ಕಡಿಮೆ ಅವಶ್ಯಕತೆ ಇರುವುದರಿಂದ ನಿಧಿಯನ್ನು ಹಿಂಪಡೆಯಲಾಗಿದೆ ಸಚಿವಾಲಯವು ವರದಿಯಲ್ಲಿ ಹೇಳಿದೆ. ಎನ್‌ಇಎಸ್ (ಈಶಾನ್ಯ ರಾಜ್ಯಗಳು), ಎಸ್‌ಸಿಎಸ್‌ಪಿ (ಪರಿಶಿಷ್ಟ ಜಾತಿ ಉಪ ಯೋಜನೆ) ಮತ್ತು ಬುಡಕಟ್ಟು ಪ್ರದೇಶದ ಉಪ ಯೋಜನೆ (ಟಿಎಎಸ್‌ಪಿ) ಘಟಕಗಳ ಅಡಿಯಲ್ಲಿ ಕಡಿಮೆ ಬಳಕೆಯಾಗುವುದರಿಂದ ಹಣವನ್ನು ಹಿಂಪಡೆಯುವುದು ಮುಖ್ಯವಾಗಿದೆ ಎಂದು ಸಮಿತಿಗೆ ತಿಳಿಸಲಾಗಿದೆ” ಎಂದು ಸಚಿವಾಲಯವು ಹೇಳಿದೆ.

ಇನ್ನು ಮುಂದೆ ಸರ್ಕಾರ ನಿಧಿಯನ್ನು ಹಿಂಪಡೆಯುವ ಅಭ್ಯಾಸವನ್ನು ಬಿಡಬೇಕು ಎಂದು ಸಮಿತಿಯು ಭಾವಿಸುತ್ತದೆ, ಇದರಿಂದಾಗಿ ಯೋಜನೆಗಳು ದೇಶದ ಕೆಳಮಟ್ಟದ ಜನರಿಗೂ ತಲುಪುತ್ತವೆ, ಮತ್ತು ಅತ್ಯುತ್ತಮ ರೀತಿಯಲ್ಲಿ ಯೋಜನೆಗಳು ಯಶಸ್ವಿಯಾಗುತ್ತವೆ. ಆದ್ದರಿಂದ, ನಿಧಿಯ ಹಿಂಪಡೆಯುವಿಕೆಗೆ ಕಾರಣವಾಗುವ ಅಂಶಗಳನ್ನು ಗುರುತಿಸಲು ಮತ್ತು ಹಣವನ್ನು ಸಂಪೂರ್ಣ ಮತ್ತು ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ಕ್ರಮಗಳನ್ನು ತೆಗೆದುಕೊಳ್ಳಲು ಇಲಾಖೆಗೆ ಸಮಿತಿಯು ಶಿಫಾರಸು ಮಾಡಿದೆ.

ಕೇಂದ್ರದ ಒಟ್ಟು ಬಜೆಟ್‌ಗೆ ಕೃಷ ಇಲಾಖೆಯ ಶೇಕಡಾವಾರು ಬಜೆಟ್ ಹಂಚಿಕೆಯು 2020-21 ರಲ್ಲಿ 4.41% ರಿಂದ 2023-24 ರಲ್ಲಿ 2.57% ಕ್ಕೆ ಇಳಿದಿದೆ ಎಂದು ವರದಿಯು ಹೇಳುತ್ತದೆ.

2020-21, 2021-22ರ ಅವಧಿಯಲ್ಲಿ ಕೇಂದ್ರ ಸರ್ಕಾರ ಒಟ್ಟು ಬಜೆಟ್‌ನಲ್ಲಿ ಶೇಕಡಾವಾರು ಪ್ರಮಾಣದಲ್ಲಿ ಕೃಷಿ ಇಲಾಖೆಗೆ ನಿಗಧಿಗೊಳಿಸಿದ ಬಜೆಟ್ ಹಂಚಿಕೆ ಪ್ರತಿ ವರ್ಷ ಕಡಿಮೆಯಾಗುತ್ತಿರುವುದನ್ನು ಇಲಾಖೆಯು ಒಪ್ಪಿಕೊಂಡಿದೆ. 2020-21 ಮತ್ತು 2023-24 ಅನುಕ್ರಮವಾಗಿ 4.41%, 3.53%, 3.14 % ಮತ್ತು 2.57% ರಷ್ಟಿದೆ ಎಂದು ವರದಿ ಹೇಳಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಅಮೇಥಿ ಕಾಂಗ್ರೆಸ್ ಕಚೇರಿ ಮೇಲೆ ದಾಳಿ, ಕಾರ್ಯಕರ್ತನಿಗೆ ಹಲ್ಲೆ: ಬಿಜೆಪಿ ಮುಖಂಡರು ಸೇರಿ 10...

0
ಉತ್ತರ ಪ್ರದೇಶದ ಅಮೇಥಿಯಲ್ಲಿ ಕಾಂಗ್ರೆಸ್ ಪಕ್ಷದ ಕಚೇರಿ ಮೇಲೆ ಭಾನುವಾರ (ಮೇ 5) ಮಧ್ಯರಾತ್ರಿ ಅಪರಿಚಿತ ದುಷ್ಕರ್ಮಿಗಳ ಗುಂಪೊಂದು ದಾಳಿ ಮಾಡಿದೆ. ಪಕ್ಷದ ಕಚೇರಿಯ ಹೊರಗೆ ನಿಲ್ಲಿಸಿದ್ದ ಹಲವು ವಾಹನಗಳನ್ನು ಧ್ವಂಸಗೊಳಿಸಿದ ದುಷ್ಕರ್ಮಿಗಳು,...