ಲೋಕಸಭೆ ಚುನಾವಣೆಯ 4ನೇ ಹಂತದ ಮತದಾನ ನಡೆಯುತ್ತಿದ್ದು, ಹೈದರಾಬಾದ್‌ನ ಬಿಜೆಪಿ ಅಭ್ಯರ್ಥಿ ಮಾಧವಿ ಲತಾ ಅವರು ಮತಗಟ್ಟೆಗೆ ತೆರಳಿ ಮುಸ್ಲಿಂ ಮಹಿಳೆಯರ ಬುರ್ಖಾದ ಸ್ಕಾರ್ಫ್ ತೆಗೆಸಿ ಗುರುತಿನ ಚೀಟಿಗಳನ್ನು ಪರಿಶೀಲಿಸಿದ್ದಾರೆ. ಈ ಕುರಿತ ವಿಡಿಯೋ ವೈರಲ್ ಆಗಿದೆ.
ಹೈದರಾಬಾದ್‌ನ ಆಝಂಪುರದ ಮತಗಟ್ಟೆ ಸಂಖ್ಯೆ 122ಕ್ಕೆ ತೆರಳಿದ ಮಾಧವಿ ಲತಾ, ಮುಸ್ಲಿಂ ಮಹಿಳೆಯರ ಬುರ್ಖಾದ ಸ್ಕಾರ್ಫ್ ತೆಗೆಸಿ, ಅವರ ಗುರುತಿನ ಚೀಟಿಗಳನ್ನು ಪರಿಶೀಲಿಸಿ ಮತದಾರರ ಮೇಲೆ ಅನುಮಾನ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಸಾರ್ವಜನಿಕರಿಂದ ಖಂಡನೆ ವ್ಯಕ್ತವಾಗಿದೆ.
This is not 'visit'. This is bullying the voters by the BJP candidate. Who gave her the authority. Is the Election Commission completely taken over by the BJP? @SpokespersonECI @ECISVEEP@CEO_Telangana pic.twitter.com/ix9GUCMv4K
— Mohammed Zubair (@zoo_bear) May 13, 2024
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಮಾಧವಿ ಲತಾ, “ನಾನು ಮಹಿಳೆಯರಲ್ಲಿ, ಅವರ ಗುರುತನ್ನು ಖಚಿತಪಡಿಸುವಂತೆ ಕೇಳಿದ್ದೇನೆ. ಇದರಲ್ಲಿ ಯಾವುದೇ ತಪ್ಪಿಲ್ಲ. ನಾನು ಅಭ್ಯರ್ಥಿಯಾಗಿದ್ದೇನೆ. ಕಾನೂನಿನ ಪ್ರಕಾರ ಅಭ್ಯರ್ಥಿಗೆ ಈ ರೀತಿ ಗುರುತಿನ ಚೀಟಿಗಳನ್ನು ಪರಿಶೀಲಿಸುವ ಹಕ್ಕಿದೆ. ನಾನು ಪುರುಷ ಅಲ್ಲ, ಮಹಿಳೆ. ತುಂಬಾ ವಿನಮ್ರತೆಯಿಂದ ನಾನು ಅವರಲ್ಲಿ ವಿನಂತಿಸಿದ್ದೇನೆ. ದಯವಿಟ್ಟು ನಿಮ್ಮ ಗುರುತಿನ ಚೀಟಿಗಳನ್ನು ಪರಿಶೀಲಿಸಿಬಹುದೇ? ಎಂದು ಕೇಳಿದ್ದೇನೆ. ಯಾರಾದರು ಇದನ್ನು ದೊಡ್ಡ ವಿವಾದ ಮಾಡಲು ಬಯಸಿದ್ದರೆ, ಅವರು ಹೆದರಿದ್ದಾರೆ ಎಂದರ್ಥ”ಎಂದಿದ್ದಾರೆ.
#WATCH | Madhavi Latha says, "…The Police personnel seem very dull, they are not active…They are not checking anything. Senior citizen voters are coming here but their names are deleted from the list. A few of them are residents of Goshamahal but their names are in the list… https://t.co/jJhatrT9zz pic.twitter.com/i30IkgkpGR
— ANI (@ANI) May 13, 2024
“ಮತಗಟ್ಟೆಯಲ್ಲಿರುವ ಪೊಲೀಸ್ ಸಿಬ್ಬಂದಿ ಚುರುಕಾಗಿರಲಿಲ್ಲ. ಅವರು ಏನನ್ನೂ ಪರಿಶೀಲಿಸುತ್ತಿರಲಿಲ್ಲ. ಹಿರಿಯ ನಾಗರಿಕ ಮತದಾರರು ಇಲ್ಲಿಗೆ ಬರುತ್ತಿದ್ದಾರೆ. ಆದರೆ, ಅವರ ಹೆಸರನ್ನು ಪಟ್ಟಿಯಿಂದ ಅಳಿಸಲಾಗಿದೆ. ಗೋಶಮಹಲ್ ನಿವಾಸಿಗಳ ಹೆಸರು ರಂಗಾರೆಡ್ಡಿಯ ಪಟ್ಟಿಯಲ್ಲಿದೆ” ಎಂದು ಹೇಳಿದ್ದಾರೆ.
ಬಿಜೆಪಿ ಅಭ್ಯರ್ಥಿ ಮಾಧವಿ ಲತಾ ಅವರು ಮತದಾರರ ಗುರುತಿನ ಚೀಟಿಯನ್ನು ಪರಿಶೀಲಿಸಿದ ಕುರಿತು ಕೇಳಲಾದ ಪ್ರಶ್ನೆಗೆ ಪ್ರತಿಕ್ರಿಯಿಸಿದ ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ, “ನಾನು ವಿಡಿಯೋ ನೋಡಿಲ್ಲ. ಬಿಜೆಪಿ ಗೆಲ್ಲುವುದಕ್ಕೋಸ್ಕರ ಮುಸ್ಲಿಂ ಮತಗಳನ್ನು ಧ್ರುವೀಕರಿಸಲು ಪ್ರಯತ್ನಿಸುತ್ತಿದೆ. ಆದರೆ, ಈ ಎಲ್ಲಾ ವಿಷಯಗಳು ಅಸಾದುದ್ದೀನ್ ಓವೈಸಿಗೆ ಸಹಾಯ ಮಾಡುವುದರಿಂದ ಬಿಜೆಪಿಗೆ ಪ್ರಯೋಜನವಾಗುವುದಿಲ್ಲ” ಎಂದಿದ್ದಾರೆ.
ವರದಿಗಳ ಪ್ರಕಾರ, ಮಾಧವಿ ಲತಾ ವಿರುದ್ಧ ಐಪಿಸಿ ಸೆಕ್ಷನ್ 171 ಸಿ, 186, 505(1)(ಸಿ) ಮತ್ತು ಪ್ರಜಾಪ್ರತಿನಿಧಿ ಕಾಯ್ದೆಯ ಸೆಕ್ಷನ್ 132 ರ ಅಡಿಯಲ್ಲಿ ಹೈದರಾಬಾದ್‌ನ ಮಲಕ್‌ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತೆಲಂಗಾಣದ 17 ಲೋಕಸಭಾ ಸ್ಥಾನಗಳಿಗೆ ಮತದಾನ ನಡೆಯುತ್ತಿದೆ. ಬೆಳಗ್ಗೆ 7 ಗಂಟೆಗೆ ಆರಂಭವಾದ ಮತದಾನವು ಎರಡು ಗಂಟೆ ಮುಂಚಿತವಾಗಿ ಮುಕ್ತಾಯಗೊಳ್ಳುವ ಕೆಲವು ಸ್ಥಳಗಳನ್ನು ಹೊರತುಪಡಿಸಿ, ಸಂಜೆ 6 ಗಂಟೆಗೆ ಮುಕ್ತಾಯಗೊಳ್ಳಲಿದೆ.
ಇದನ್ನೂ ಓದಿ : ಆಂಧ್ರಪ್ರದೇಶ ಚುನಾವಣೆ: ಶಾಸಕನಿಂದ ಮತದಾರನಿಗೆ ಕಪಾಳಮೋಕ್ಷ; ರಾಜ್ಯದ ವಿವಿಧೆಡೆ ಹಿಂಸಾತ್ಮಕ ಘಟನೆ ವರದಿ