Homeಮುಖಪುಟಮಧ್ಯಪ್ರದೇಶದ MBBS ವಿದ್ಯಾರ್ಥಿಗಳಿಗೆ RSS ನಾಯಕರ ವಿಚಾರ ಬೋಧನೆ: ಕಾಂಗ್ರೆಸ್ ಖಂಡನೆ

ಮಧ್ಯಪ್ರದೇಶದ MBBS ವಿದ್ಯಾರ್ಥಿಗಳಿಗೆ RSS ನಾಯಕರ ವಿಚಾರ ಬೋಧನೆ: ಕಾಂಗ್ರೆಸ್ ಖಂಡನೆ

- Advertisement -
- Advertisement -

ಮಧ್ಯಪ್ರದೇಶದ ವೈದ್ಯಕೀಯ ವಿದ್ಯಾರ್ಥಿಗಳು ಇನ್ನು ಮುಂದೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್‌ಎಸ್‌ಎಸ್) ಸಂಸ್ಥಾಪಕ ಡಾ.ಕೆ.ಬಿ.ಹೆಡ್ಗೆವಾರ್, ಭಾರತೀಯ ಜನ ಸಂಘದ ಮುಖ್ಯಸ್ಥ ದೀನ್ ದಯಾಳ್ ಉಪಾಧ್ಯಾಯ ಅವರ ಬಗ್ಗೆ ಕಲಿಯಲಿದ್ದಾರೆ ಎಂದು ಶಿಕ್ಷಣ ಸಚಿವ ವಿಶ್ವಾಸ್ ಸಾರಂಗ್ ಹೇಳಿದ್ದರು.

ಆರ್‌ಎಸ್‌ಎಸ್‌ ನಾಯಕರ ವಿಚಾರಗಳನ್ನು ಪಠ್ಯದ ಭಾಗವಾಗಿ ಬೋಧಿಸುವುದಕ್ಕೆ ಕಾಂಗ್ರೆಸ್ ಆಕ್ಷೇಪ ವ್ಯಕ್ತಪಡಿಸಿದೆ. ಆರ್‌ಎಸ್‌ಎಸ್ ಸಿದ್ಧಾಂತವನ್ನು ಜನರ ಮೇಲೆ ಹೇರಲು ಬಿಜೆಪಿ ಬಯಸಿದೆ ಎಂದು ಮಾಜಿ ಸಚಿವ ಮತ್ತು ಶಾಸಕ ಸಜ್ಜನ್ ಸಿಂಗ್ ವರ್ಮಾ ಆರೋಪಿಸಿದ್ದಾರೆ.

’ಅಫ್ಘಾನಿಸ್ತಾನದ ಅಸಹಾಯಕ ಜನರೊಂದಿಗೆ ತಾಲಿಬಾನ್ ಮಾಡುತ್ತಿರುವಂತೆ  ಬಿಜೆಪಿ ಕೂಡ ತಮ್ಮ ಸಿದ್ಧಾಂತವನ್ನು ಜನರ ಮೇಲೆ ಹೇರುತ್ತಿದ್ದಾರೆ’ ಎಂದು ಕಾಂಗ್ರೆಸ್ ನಾಯಕ ಸಜ್ಜನ್ ಸಿಂಗ್ ವರ್ಮಾ ಹೇಳಿದ್ದಾರೆ.

ಇದನ್ನೂ ಓದಿ: RSS, ವಿಎಚ್‌ಪಿ, ತಾಲಿಬಾನ್ ಒಂದೇ ಮನಸ್ಥಿತಿಯವು: ಸಾಹಿತಿ ಜಾವೇದ್ ಅಖ್ತರ್

ಸೋಮವಾರ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿರುವ ಸಜ್ಜನ್ ಸಿಂಗ್ ವರ್ಮಾ, “ಆರ್‌ಎಸ್‌ಎಸ್ ತನ್ನ ಸಿದ್ಧಾಂತವನ್ನು ವೈದ್ಯಕೀಯ ವಿದ್ಯಾರ್ಥಿಗಳ ಮೇಲೆ ಹೇರುತ್ತಿರುವಂತೆಯೇ ತಾಲಿಬಾನ್ ತನ್ನ ಸಿದ್ಧಾಂತವನ್ನು ಅಫ್ಘಾನಿಸ್ತಾನದ ಅಸಹಾಯಕ ಜನರ ಮೇಲೆ ಹೇರುತ್ತಿದೆ. ರೋಗಿಗೆ ಶಸ್ತ್ರಚಿಕಿತ್ಸೆ ಮಾಡುವ ಮೊದಲು ವೈದ್ಯರು ಹೆಡ್ಗೆವಾರ್ ಮತ್ತು ಉಪಾಧ್ಯಾಯರ ಪುಸ್ತಕಗಳನ್ನು ಶಸ್ತ್ರಚಿಕಿತ್ಸೆಯ ಮೇಜಿನ ಮೇಲೆ ಇಡುತ್ತಾರೆಯೇ..?” ಎಂದು ವ್ಯಂಗ್ಯವಾಡಿದ್ದಾರೆ.

“ಹೀಗೆ ಆದರೆ ವೈದ್ಯಕೀಯ ವಿದ್ಯಾರ್ಥಿಗಳು ಸರ್ಕಾರದ ವಿರುದ್ಧ ದಂಗೆ ಏಳುತ್ತಾರೆ. ವಿದ್ಯಾರ್ಥಿಗಳು ಹೃದಯಶಾಸ್ತ್ರ, ಅಂಗರಚನಾಶಾಸ್ತ್ರ ಮತ್ತು ಮೂಳೆಶಾಸ್ತ್ರದ ವಿಷಯಗಳನ್ನು ತಮ್ಮ ಪಠ್ಯಕ್ರಮದಲ್ಲಿ ಸೇರಿಸಿಕೊಳ್ಳಬೇಕು. ಅದು ಬಿಟ್ಟು ಸ್ವಾತಂತ್ರ್ಯಕ್ಕಾಗಿ ಹೋರಾಟದಲ್ಲಿ ಭಾಗವಹಿಸದವರ ಬಗ್ಗೆ ಅಲ್ಲ” ಎಂದು ವರ್ಮಾ ಹೇಳಿದ್ದಾರೆ.

ಆರ್‌ಎಸ್‌ಎಸ್ ಸಂಸ್ಥಾಪಕ ಡಾ.ಕೆ.ಬಿ.ಹೆಡ್ಗೆವಾರ್, ಭಾರತೀಯ ಜನ ಸಂಘದ ಮುಖ್ಯಸ್ಥ ದೀನ್ ದಯಾಳ್ ಉಪಾಧ್ಯಾಯ, ಸ್ವಾಮಿ ವಿವೇಕಾನಂದ, ಡಾ. ಭೀಮರಾವ್ ಅಂಬೇಡ್ಕರ್ ಮತ್ತು ಮಹರ್ಷಿ ಚರಕ ಸೇರಿದಂತೆ ಈ ನಾಯಕರ ಅಧ್ಯಾಯಗಳನ್ನು ರಾಜ್ಯಾದ್ಯಂತ ವೈದ್ಯಕೀಯ ಕಾಲೇಜುಗಳಲ್ಲಿ ಎಂಬಿಬಿಎಸ್ ವಿದ್ಯಾರ್ಥಿಗಳಿಗೆ ಕಲಿಸಲಾಗುವುದು ಎಂದು ಭಾನುವಾರ ಮಧ್ಯಪ್ರದೇಶದ ಶಿಕ್ಷಣ ಸಚಿವ ವಿಶ್ವಾಸ್ ಸಾರಂಗ್ ತಿಳಿಸಿದ್ದರು.


ಇದನ್ನೂ ಓದಿ: RSS ಕೇಂದ್ರ ಕಚೇರಿಯಲ್ಲಿ ಸಭೆ ನಡೆಸಿ ವಿವಾದ ಸೃಷ್ಟಿಸಿದ ಸುಪ್ರೀಂಕೋರ್ಟ್‌ನ ಮಾಜಿ ಮುಖ್ಯ ನ್ಯಾಯಮೂರ್ತಿ!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿಗೆ ಸಂಸದ ಸಂಗಣ್ಣ ಕರಡಿ ರಾಜೀನಾಮೆ: ಕಾಂಗ್ರೆಸ್ ಸೇರ್ಪಡೆ ಸಾಧ್ಯತೆ

0
ಲೋಕಸಭೆ ಚುನಾವಣೆಯಲ್ಲಿ ಕೊಪ್ಪಳ ಕ್ಷೇತ್ರದ ಟಿಕೆಟ್‌ ಕೈತಪ್ಪಿದ ಹಿನ್ನೆಲೆ ಬಿಜೆಪಿ ವಿರುದ್ದ ಮುನಿಸಿಕೊಂಡಿದ್ದ ಹಾಲಿ ಸಂಸದ ಸಂಗಣ್ಣ ಕರಡಿ ಅವರು ತಮ್ಮ ಸಂಸದ ಸ್ಥಾನಕ್ಕೆ ಮತ್ತು ಬಿಜೆಪಿ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ...