Homeಮುಖಪುಟಹಿಂಸಾಚಾರ ತೋರಿಸುವ ಫೋಟೋ, ವೀಡಿಯೊಗಳ ಪ್ರಸಾರಕ್ಕೆ ನಿಷೇಧ: ಮಣಿಪುರ ಸರ್ಕಾರ

ಹಿಂಸಾಚಾರ ತೋರಿಸುವ ಫೋಟೋ, ವೀಡಿಯೊಗಳ ಪ್ರಸಾರಕ್ಕೆ ನಿಷೇಧ: ಮಣಿಪುರ ಸರ್ಕಾರ

- Advertisement -
- Advertisement -

ಹಿಂಸಾಚಾರದ ಚಿತ್ರಗಳು ಮತ್ತು ವೀಡಿಯೊಗಳನ್ನು ಪ್ರಸಾರ ಮಾಡುವವರ ವಿರುದ್ಧ ಪ್ರಕರಣಗಳನ್ನು ದಾಖಲಿಸುವುದಾಗಿ ಮಣಿಪುರ ಸರ್ಕಾರ ಬುಧವಾರ ಹೇಳಿದೆ.

ಕಂದಕದಲ್ಲಿ ವ್ಯಕ್ತಿಯ ದೇಹವನ್ನು ಸುಟ್ಟು ಹಾಕುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಕಾಣಿಸಿಕೊಂಡ ಮೂರು ದಿನಗಳ ನಂತರ ರಾಜ್ಯ ಗೃಹ ಇಲಾಖೆ ಈ ಆದೇಶ ಹೊರಡಿಸಿದೆ. ಈ ವಿಡಿಯೋ ಮೇ 4ರದ್ದು ಎಂದು ಪೊಲೀಸರು ಸ್ಪಷ್ಟಪಡಿಸಿದ್ದರು.

ಈ ರೀತಿಯ ಫೋಟೋಗಳು ಅಥವಾ ವೀಡಿಯೋಗಳು ಪ್ರತಿಭಟನಾಕಾರರ ಮೇಲೆ ಪ್ರಭಾವ ಬೀರಬಹುದು, ಹೀಗಾಗಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ಈ ಆದೇಶ ಅತ್ಯಗತ್ಯ ಎಂದು ಸರ್ಕಾರ ಹೇಳಿದೆ.

”ಹಿಂಸಾತ್ಮಕ ಚಟುವಟಿಕೆಗಳನ್ನು ಬಿಂಬಿಸುವ ವೀಡಿಯೊಗಳು ಮತ್ತು ಚಿತ್ರಗಳು/ಚಿತ್ರಗಳ ವರದಿಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹರಡುವಿಕೆಯನ್ನು ಸರ್ಕಾರ ಅತ್ಯಂತ ಗಂಭೀರವಾಗಿ ಮತ್ತು ಅತ್ಯಂತ ಸೂಕ್ಷ್ಮತೆಯಿಂದ ವೀಕ್ಷಿಸುತ್ತದೆ” ಎಂದು ಹೇಳಿದೆ.

ಸಾಮಾನ್ಯ ಸ್ಥಿತಿಗೆ ತರಲು ಇದು “ಸಕಾರಾತ್ಮಕ ಹೆಜ್ಜೆ” ಎಂದು ಸರ್ಕಾರ ಹೇಳಿದೆ.

”ಹಿಂಸಾಚಾರ / ದ್ವೇಷವನ್ನು ಪ್ರಚೋದಿಸಲು ತಂತ್ರಜ್ಞಾನವನ್ನು ದುರ್ಬಳಕೆ ಮಾಡುವವರ ವಿರುದ್ಧ ಮಾಹಿತಿ ತಂತ್ರಜ್ಞಾನ ಕಾಯಿದೆ ಮತ್ತು ನಿಯಮಗಳು ಮತ್ತು ಭಾರತೀಯ ದಂಡ ಸಂಹಿತೆಯ ಸಂಬಂಧಿತ ನಿಬಂಧನೆಗಳ ಅಡಿಯಲ್ಲಿ ಸೂಕ್ತ ಕ್ರಮ ಜರುಗಿಸಲಾಗುತ್ತದೆ” ಎಂದು ರಾಜ್ಯ ಗೃಹ ಇಲಾಖೆ ಹೇಳಿದೆ.

ಮೇ ತಿಂಗಳ ಸಂಘರ್ಷ ಪ್ರಾರಂಭವಾದಾಗಿನಿಂದ, ಹಿಂಸಾಚಾರದ ಹಲವು ವೀಡಿಯೊಗಳು ವ್ಯಾಪಕ ಕಾಳಜಿ ಮತ್ತು ಖಂಡನೆಗೆ ಕಾರಣವಾಗಿವೆ.

ಜುಲೈ 19ರಂದು, ಇಬ್ಬರು ಕುಕಿ ಮಹಿಳೆಯರನ್ನು ಗುಂಪೊಂದು ಬೆತ್ತಲೆಯಾಗಿ ಮೆರವಣಿಗೆ ಮಾಡಿದ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹೊರಹೊಮ್ಮಿತು. ಮೇ 4ರಂದು ಮಹಿಳೆಯರ ಮೇಲೆ ಹಲ್ಲೆ ನಡೆದಿದ್ದು, ಮೇ 18ರಂದು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಆದರೆ, ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಶೇರ್ ಆದ ನಂತರವೇ ಪ್ರಕರಣದಲ್ಲಿ ಒಂಬತ್ತು ಮಂದಿಯನ್ನು ಬಂಧಿಸಲಾಗಿತ್ತು.

ಬುಧವಾರ, ಮೊಬೈಲ್ ಇಂಟರ್ನೆಟ್ ಮೇಲಿನ ನಿಷೇಧವನ್ನು ಅಕ್ಟೋಬರ್ 16 ರವರೆಗೆ ವಿಸ್ತರಿಸಲಾಯಿತು.

ಇದನ್ನೂ ಓದಿ: ಮಣಿಪುರ: ಬುಡಕಟ್ಟು ಯುವಕನ ಸಜೀವ ದಹನ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಜಾತಿ, ಧರ್ಮದ ನೆಲೆಯಲ್ಲಿ ಚುನಾವಣಾ ಪ್ರಚಾರ ಮಾಡಬೇಡಿ: ಬಿಜೆಪಿ, ಕಾಂಗ್ರೆಸ್‌ಗೆ ಚು.ಆಯೋಗ ಸೂಚನೆ

0
ಜಾತಿ, ಸಮುದಾಯ ಧರ್ಮದ ನೆಲೆಯಲ್ಲಿ ಚುನಾವಣಾ ಪ್ರಚಾರವನ್ನು ಮಾಡಬೇಡಿ, ರಕ್ಷಣಾ ಪಡೆಗಳನ್ನು ರಾಜಕೀಯಗೊಳಿಸಬೇಡಿ ಎಂದು ಚು.ಆಯೋಗ ಬಿಜೆಪಿ ಮತ್ತು ಕಾಂಗ್ರೆಸ್‌ಗೆ ಖಡಕ್‌ ಸೂಚನೆಯನ್ನು ನೀಡಿದೆ. ಭಾರತೀಯ ಜನತಾ ಪಕ್ಷದ ಅಧ್ಯಕ್ಷ ಜೆಪಿ ನಡ್ಡಾ ಮತ್ತು...