Homeಮುಖಪುಟಮಣಿಪುರ: ಕರ್ಪ್ಯೂ ಉಲ್ಲಂಘಿಸಿ ಪ್ರತಿಭಟನೆ; ಫೈರಿಂಗ್‌ನಲ್ಲಿ ಹಲವರಿಗೆ ಗಾಯ

ಮಣಿಪುರ: ಕರ್ಪ್ಯೂ ಉಲ್ಲಂಘಿಸಿ ಪ್ರತಿಭಟನೆ; ಫೈರಿಂಗ್‌ನಲ್ಲಿ ಹಲವರಿಗೆ ಗಾಯ

- Advertisement -
- Advertisement -

ಮಣಿಪುರದ ಹಿಂಸಾಚಾರ ಪೀಡಿತ ಜಿಲ್ಲೆಗಳಲ್ಲಿ ಭದ್ರತಾ ಪಡೆಗಳು ಹಾಕಿದ್ದ ಬ್ಯಾರಿಕೇಡ್‌ಗಳತ್ತ  ಪ್ರತಿಭಟನಾಕಾರರು ಬೃಹತ್ ಮೆರವಣಿಗೆ ನಡೆಸಿದ್ದು, ಭದ್ರತಾ ಪಡೆಗಳು ಅಶ್ರುವಾಯು ಮತ್ತು ರಬ್ಬರ್ ಬುಲೆಟ್‌ಗಳನ್ನು ಸಿಡಿಸಿದ್ದಾರೆ. ಈ ವೇಳೆ  ಹಲವರು ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಮಣಿಪುರ ಮೈತೈ ಸಮುದಾಯದ ಜನರು ಇರುವ ಪ್ರದೇಶದಲ್ಲಿ ಜನರು ಕರ್ಪ್ಯೂ ಉಲ್ಲಂಘಿಸಿ ಮನೆಯಿಂದ ಹೊರಗೆ ಬಂದಿದ್ದಾರೆ. ಮೈತೈ ನಾಗರಿಕ ಸಮಾಜ ಸಂಸ್ಥೆಯ ಭಾಗವಾಗಿರುವ ಸಮನ್ವಯ ಸಮಿತಿಯು ಪ್ರತಿಭಟನೆಗೆ ಕರೆ ನೀಡಿತ್ತು.

ಮಣಿಪುರದ ಬಿಕ್ಕಟ್ಟನ್ನು ಇನ್ನಷ್ಟು ಹದಗೆಡಿಸದಂತೆ ಸರ್ಕಾರ ಮನವಿ ಮಾಡಿದರೂ, ಚಿನ್-ಕುಕಿ ಬಹುಸಂಖ್ಯಾತ ಚುರಾಚನ್‌ಪುರದವರೆಗೆ ಮೆರವಣಿಗೆ ನಡೆಸುವುದಾಗಿ COCOMI ಹೇಳಿದೆ.

ಮೈತೈ ಬಹುಸಂಖ್ಯಾತ ಬಿಷ್ಣುಪುರ್ ಜಿಲ್ಲೆಯಿಂದ 35 ಕಿಮೀ ದೂರದಲ್ಲಿರುವ ಚುರಾಚಂದ್‌ಪುರದಲ್ಲಿ ಭದ್ರತೆಯನ್ನು ಬಿಗಿಗೊಳಿಸಲಾಗಿದೆ. ಭದ್ರತಾ ಪಡೆಗಳು ತಾತ್ಕಾಲಿಕವಾಗಿ ಸೂಕ್ಷ್ಮ ವಲಯ ಎಂದು ಘೋಷಿಸಿ ಎರಡು ಜಿಲ್ಲೆಗಳ ನಡುವೆ ಬ್ಯಾರಿಕೇಡ್‌ಗಳನ್ನು ಇರಿಸಿದ್ದಾರೆ.

ಫೌಗಕ್ಚಾವೊ ಇಖೈನಲ್ಲಿನಲ್ಲಿ ಇರಿಸಿದ್ದ ಬ್ಯಾರಿಕೇಡ್‌ಗಳಿಂದಾಗಿ ತೊರ್ಬಂಗ್‌ನಲ್ಲಿರುವ ಮನೆಗೆ ಹೋಗಲು ಸಾಧ್ಯವಾಗುತ್ತಿಲ್ಲ ಎಂದು ಸ್ಥಳೀಯರು ಹೇಳಿದ್ದಾರೆ. ಆಗಸ್ಟ್ 30 ರೊಳಗೆ ಫೌಗಕ್ಚಾವೊ ಇಖಾಯ್‌ನಲ್ಲಿರುವ ಬ್ಯಾರಿಕೇಡ್‌ಗಳನ್ನು ತೆಗೆದುಹಾಕಲು ಸರ್ಕಾರಕ್ಕೆ ಮನವಿ ಮಾಡಿದ್ದೆವು. ಆದರೆ ಬ್ಯಾರಿಕೇಡ್ ತೆರವು ಮಾಡಿಲ್ಲ ಎಂದು COCOMI ಹೇಳಿದೆ.

ಇದೀಗ ಬಿಷ್ಣುಪುರ್, ಕಕ್ಚಿಂಗ್, ತೌಬಾಲ್, ಇಂಫಾಲ್ ವೆಸ್ಟ್ ಮತ್ತು ಇಂಫಾಲ್ ಪೂರ್ವದಲ್ಲಿ ಕರ್ಫ್ಯೂ ಜಾರಿಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮುನ್ನೆಚ್ಚರಿಕೆ ಕ್ರಮವಾಗಿ ವಿವಿಧ ಜಿಲ್ಲೆಗಳಲ್ಲಿ ಹೆಚ್ಚಿನ ಸಂಖ್ಯೆಯ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ.

ಈ ಪ್ರದೇಶಗಳಲ್ಲಿ ಕಾನೂನು ಮತ್ತು ಸುವ್ಯವಸ್ಥೆಗೆ ಯಾವುದೇ ರೀತಿಯ ತೊಂದರೆಯಾಗದಂತೆ ಜಿಲ್ಲಾ ಪೊಲೀಸ್, CRPF, BSF, ITBP, RAF, ಸೇನೆ ಮತ್ತು ಅಸ್ಸಾಂ ರೈಫಲ್ಸ್ ಸೇರಿದಂತೆ ಸಾಕಷ್ಟು ಪಡೆಗಳನ್ನು ನಿಯೋಜಿಸಲಾಗಿದೆ ಎಂದು ಚುರಾಚಂದ್‌ಪುರ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್ ಮಲ್ಲಾಡಿ ಹೇಳಿದ್ದಾರೆ.

ಇದನ್ನು ಓದಿ: ಸಂವಿಧಾನವೇ ನನ್ನ ಧರ್ಮ, ಹೇಳಿಕೆಗೆ ಬದ್ಧನಾಗಿದ್ದೇನೆ: ಎಫ್‌ಐಆರ್ ಬಗ್ಗೆ ಪ್ರಿಯಾಂಕ್‌ ಖರ್ಗೆ ಪ್ರತಿಕ್ರಿಯೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ರೋಹಿತ್ ವೇಮುಲಾ ‘ಪರಿಶಿಷ್ಟ ಜಾತಿ’ಗೆ ಸೇರಿದವರಲ್ಲ: ಪ್ರಕರಣದ ಫೈಲ್ ಕ್ಲೋಸ್ ಮಾಡಿದ ಪೊಲೀಸರು

0
ದೇಶದಾದ್ಯಂತ ಭಾರೀ ಸದ್ದು ಮಾಡಿದ್ದ ಹೈದರಾಬಾದ್ ವಿಶ್ವವಿದ್ಯಾಲಯದ ಪಿಎಚ್‌ಡಿ ವಿದ್ಯಾರ್ಥಿ ರೋಹಿತ್ ವೇಮುಲಾ ಸಾವಿನ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ ನಡೆದಿದ್ದು, ತೆಲಂಗಾಣ ಪೊಲೀಸರು ಪ್ರಕರಣದ ಮುಕ್ತಾಯದ ವರದಿಯನ್ನು ಸಲ್ಲಿಸಿದ್ದಾರೆ. 2016ರ ಜನವರಿಯಲ್ಲಿ ಆತ್ಮಹತ್ಯೆ ಮಾಡಿಕೊಂಡ...