Homeಅಂಕಣಗಳುಹೊಸ ಮಾಧ್ಯಮಕ್ಕೆ ಸ್ವಾಗತ ನೀವೂ ಅದರ ಭಾಗವಾಗಿರುವುದು ಗೊತ್ತೇನು?

ಹೊಸ ಮಾಧ್ಯಮಕ್ಕೆ ಸ್ವಾಗತ ನೀವೂ ಅದರ ಭಾಗವಾಗಿರುವುದು ಗೊತ್ತೇನು?

- Advertisement -
- Advertisement -

| ಡಾ. ವಾಸು ಎಚ್.ವಿ |

‘ಮುಖ್ಯವಾಹಿನಿ’ ಮಾಧ್ಯಮಗಳ ಕೊಳಕುತನವನ್ನು ನೋಡಿ ಅಪಹಾಸ್ಯ ಮಾಡಿಕೊಂಡು ನಗುವುದು ಒಮ್ಮೊಮ್ಮೆ ಅಪಾಯಕಾರಿಯಾದುದು. ಏಕೆಂದರೆ ಇಂತಹ ಮಾಧ್ಯಮಗಳು ಜೀವವಿರೋಧಿಯಾಗಿದ್ದು ಪ್ರಜಾತಂತ್ರದ ಬುಡಕ್ಕೆ ಕೊಳ್ಳಿಯಿಡುತ್ತಿವೆ. ಆದರೆ ಅವನ್ನು ಬಯ್ದುಕೊಳ್ಳುತ್ತಾ, ಆತಂಕ ಪಡುತ್ತಾ, ವ್ಯಕ್ತಿಗತವಾಗಿ ಯಾರನ್ನೋ ಗುರಿ ಮಾಡುತ್ತಾ ಕಾಲವ್ಯಯ ಮಾಡುವುದು ಅಪಾಯವನ್ನು ಇನ್ನಷ್ಟು ಹೆಚ್ಚಿಸುತ್ತವೆ. ಪರ್ಯಾಯದ ನಿರ್ಮಾಣ ಮಾತ್ರ ಈ ವಿಷವ್ಯೂಹದಿಂದ ನಮ್ಮೆಲ್ಲರನ್ನು ಮೇಲೆತ್ತಬಹುದು.

ಇದರಲ್ಲಿ ಒಂದು ತೊಡಕಿದೆ. ಪರ್ಯಾಯದ ಮಾತಾಡುವವರು ಸಮಾಜದ ಮುಖ್ಯವಾಹಿನಿಯಲ್ಲಿ ಅಂತಹ ದೊಡ್ಡ ಪರಿಣಾಮ ಬೀರದ, ಶುದ್ಧ ಮತ್ತು ರ್ಯಾಡಿಕಲ್ ಕಂಟೆಂಟ್ ಹೊಂದಿರುವ ಪುಟ್ಟ ಪ್ರಯತ್ನದ ಕಡೆಗೆ ಒತ್ತು ಕೊಡುತ್ತಾರೆ. ಮೊದಲೇ ಅಂಚಿನಲ್ಲಿರುವುದನ್ನು, ಪರ್ಯಾಯದ ಹೆಸರಿನಲ್ಲಿ ಅಂಚಿನಲ್ಲೇ ಉಳಿಸುವುದು ಪರ್ಯಾಯವಾಗಲಾರದು. ಮುಖ್ಯವಾಹಿನಿಯ ಘಾತುಕ ಗಾತ್ರವನ್ನು ಹಿಮ್ಮೆಟ್ಟಿಸಿ, ಅದೇ ಮುಖ್ಯವಾಹಿನಿಯಲ್ಲಿ ತನ್ನನ್ನು ತಾನು ಪ್ರತಿಷ್ಠಾಪಿಸಿಕೊಳ್ಳುವ ಸೃಜನಶೀಲ ಮಾರ್ಗವನ್ನು ಶೋಧಿಸಿ, ಸಾಕಾರಗೊಳಿಸಿ ಜಯಿಸುವುದೇ ನಿಜವಾದ ಪರ್ಯಾಯ.

ಈವರೆಗಿನ ಪರಿಭಾಷೆಯು ತಪ್ಪು ಅರ್ಥ ಕೊಡುವುದೆಂಬ ಕಾರಣಕ್ಕೆ, ಪರ್ಯಾಯ ಮಾಧ್ಯಮದ ಬದಲಿಗೆ ಹೊಸ ಮಾಧ್ಯಮ ಎಂಬ ಪದವನ್ನು ಶೀರ್ಷಿಕೆಯಲ್ಲಿ ಬಳಸಲಾಗಿದೆ. ಮಾಧ್ಯಮಗಳು ಉಳ್ಳವರ ಕಪಿಮುಷ್ಟಿಯಲ್ಲಿ ಸೇರುವುದು ಮತ್ತು ಹಳತಾಗುವುದು ಒಟ್ಟಿಗೇ ನಡೆಯುತ್ತಿರುತ್ತದೆ. ಆ ನಂತರ ಹೊಸ ಮಾಧ್ಯಮ ಹುಟ್ಟಿಕೊಳ್ಳುತ್ತದೆ. ಸಾಮಾಜಿಕ ಜಾಲತಾಣಗಳನ್ನು ಹೊಸ ಮಾಧ್ಯಮಗಳೆಂದು ಕರೆಯಲಾಗುತ್ತದಾದರೂ, ಅಲ್ಲೊಂದು ವಿಪರ್ಯಾಸವಿದೆ. Social media is not so social ಎಂಬ ಮಾತಿದೆ. ಏಕೆಂದರೆ, ಅದೂ ಸಹಾ ಕಾರ್ಪೋರೇಟ್ ಲಾಭವನ್ನು ಹಿಗ್ಗಿಸಲೆಂದೇ ಹೆಚ್ಚೆಚ್ಚು ಪುನರ್ರೂಪಿತಗೊಳ್ಳುತ್ತಿದೆ.

ಅಂದರೆ, ಹೊಸ ಮಾಧ್ಯಮವು ಬಹುಬೇಗ ಹಳತಾಗುತ್ತಿರುವ ಕಾಲದಲ್ಲಿ ನಾವು ನವನವೀನ ದಾರಿಯನ್ನು ನಮ್ಮದಾಗಿಸಿಕೊಳ್ಳಬೇಕಿದೆ. ಲಂಕೇಶರು 90ರ ದಶಕದ ಮಧ್ಯಭಾಗದಲ್ಲೇ ‘ಪತ್ರಿಕೆ’ಯ ಬರಹದಲ್ಲಿ ಅದನ್ನು ಹೇಳಿದ್ದರು. ಆಗಿಂದಾಗ್ಗೆ ಪೊರೆ ಕಳಚದೇ ಮಾಧ್ಯಮವು ಉಳಿದುಕೊಳ್ಳುವುದು ಸಾಧ್ಯವಿಲ್ಲ ಎಂಬುದು ಅವರ ಮಾತಾಗಿತ್ತು. ಲಂಕೇಶರು ರಾಜಕೀಯ ಮತ್ತು ಸಾಹಿತ್ಯಗಳನ್ನು ಪತ್ರಿಕೆಯ ಪ್ರಮುಖ ಭಾಗಗಳನ್ನಾಗಿಸಿ ಜಾಣ ಜಾಣೆಯರನ್ನು ಓರಿಯೆಂಟ್ ಮಾಡಲು ಟ್ಯಾಬ್ಲಾಯ್ಡ್ ವಾರಪತ್ರಿಕೆಯನ್ನು ಪ್ರಭಾವೀ ಹತಾರವಾಗಿ ಬಳಸಿದರು.

ಟ್ಯಾಬ್ಲಾಯ್ಡ್ ಪತ್ರಿಕೆಗಳು ತಳಮುಟ್ಟಿ, ಮುದ್ರಣ ಮಾಧ್ಯಮ ತನ್ನ ಬಿರುಸು ಕಳೆದುಕೊಳ್ಳುತ್ತಿರುವ ಯುಗದಲ್ಲಿ ‘ನ್ಯಾಯಪಥ’ ಆರಂಭವಾಗಿದೆ. ಹಾಗಾದರೆ, ಇದು ಕೇವಲ ಒಂದು ಸಾಂಕೇತಿಕ ಪ್ರಯತ್ನವಾಗಿ ಮುಂದುವರೆಯಬೇಕೆಂಬುದೇ ನಮ್ಮ ಯೋಜನೆಯೇ? ಖಂಡಿತಾ ಅಲ್ಲ. ನಷ್ಟದಲ್ಲೇ ನಡೆಯುತ್ತಿರುವ ಬಹುಪಾಲು ಟಿವಿ ಚಾನೆಲ್‍ಗಳು ಮುಂದೆಂದೋ ಕ್ಲಿಕ್ ಆಗುತ್ತೇವೆಂಬ ಭ್ರಾಂತಿಯಲ್ಲಿ ಕಾಲು ಎಳೆದುಕೊಂಡು ನಡೆಯುತ್ತವಲ್ಲಾ ಹಾಗೆ ಇದನ್ನು ನಡೆಸಲಾಗುತ್ತಿದೆಯೇ? ಇಲ್ಲವೇ ಇಲ್ಲ. ನ್ಯಾಯಪಥ ಪತ್ರಿಕೆ ಅಥವಾ ಈಗ ಚುರುಕು ಹಾಗೂ ವ್ಯಾಪಕತೆ ಪಡೆದುಕೊಳ್ಳುತ್ತಿರುವ ವೆಬ್ ಪೋರ್ಟಲ್‍ಗಳು ಹೊಸ ಮಾಧ್ಯಮ ರೂಪಿಸಲು ಬೇಕಾದ ಜನರನ್ನು ಒಟ್ಟುಗೂಡಿಸುವ ವೇದಿಕೆಗಳಷ್ಟೇ.

ಎಲ್ಲಾ ಕಾಲದಲ್ಲೂ ಅತ್ಯಂತ ಪ್ರಬಲವಾದ ಮಾಧ್ಯಮ ಯಾವುದು? ಅದು ಜನರೇ ವಾಹಕರಾಗಿ ಪ್ರಸಾರ ಮಾಡುವ ಮಾಧ್ಯಮ. ಜನರೇ ತಮಗೆ ಬೇಕಾದ ಕಥನವನ್ನೂ ಕಟ್ಟಿಕೊಳ್ಳುವಂತಾದರೆ? ಅಂತಹ ಮಾಧ್ಯಮವನ್ನು ಯಾವುದೂ ಸರಿಗಟ್ಟಲಾರದು. ವಿವಿಧ ದೇಶಗಳಲ್ಲಿ ತಮ್ಮ ಸ್ಥಾವರಗಳನ್ನು ಹೊಂದಿ, ವಚ್ರ್ಯುಯಲ್ ಜಗತ್ತಿನಲ್ಲಿ ಜಂಗಮವಾಗಿರುವ ಸಾಮಾಜಿಕ ಜಾಲತಾಣಗಳು ಜನರ ಆಲೋಚನೆಗಳು ಹರಳುಗಟ್ಟಿ ಪ್ರಸಾರಗೊಳ್ಳಲು ವೇದಿಕೆಯನ್ನು ಒದಗಿಸಿವೆ. ಮೇಲೆ ಹೇಳಿದಂತೆ ಇದಕ್ಕೆ ಮಿತಿಗಳಿವೆಯಾದರೂ, ಈ ಸದ್ಯ ಅವು ಇನ್ನೂ ವಿಸ್ತಾರಗೊಳ್ಳುವ ಹಂತದಲ್ಲೇ ಇವೆ. ಮುಂದೊಂದು ದಿನ (ಇಂದು ಕಾಶ್ಮೀರದಲ್ಲಿ ಆಗಿರುವಂತೆ) ಸ್ಥಗಿತಗೊಳ್ಳುವ ಅಥವಾ ಸಂಪೂರ್ಣ ಸೆಲೆಕ್ಟಿವ್ ಆಗುವುದಕ್ಕೆ ಮುಂಚೆ ಬದಲೀ ವ್ಯವಸ್ಥೆಯನ್ನು ಮಾಡಿಕೊಳ್ಳಬೇಕಾಗುತ್ತದಾದರೂ, ಅಲ್ಲಿಯವರೆಗೆ ಅವು ನಮಗೆ ಕೆಲವು ಸಾಧ್ಯತೆಗಳನ್ನು ಒದಗಿಸುತ್ತವೆ.

ಬಲವಾದ ಹೊಸ ಮುಖ್ಯವಾಹಿನಿ ರೂಪಿಸಲು ಮೊದಲು ನಾವು ಓದುಗರ ಅಂದರೆ ಸಾಮಾನ್ಯ ಜನರ ಮುಂಚೂಣಿ ವಿಭಾಗದ ಹಿತಾಸಕ್ತಿಯನ್ನು ರೂಪಿಸುವುದು ಮುಖ್ಯ. ಆಗ ಅವರೇ ಸುದ್ದಿಯನ್ನು ರೂಪಿಸುತ್ತಾರೆ ಮತ್ತು ಅದರ ಪ್ರಸಾರಕ್ಕೂ ಕಾರಣರಾಗುತ್ತಾರೆ. ಎಲ್ಲಾ ಕಾಲದಲ್ಲೂ ಇವರೇ, ಅಂದರೆ ಈ ಸಾಮಾನ್ಯ ಜನರೇ, ಭಾರೀ ಬಹುಸಂಖ್ಯಾತರಾದ್ದರಿಂದ (overwhelming majority) ಅವರು ಸುದ್ದಿಯನ್ನು ರೂಪಿಸುವುದು ಮತ್ತು ಪ್ರಸಾರ ಮಾಡುವುದಕ್ಕೆ ಇಳಿದರೆ ಅದನ್ನು ಯಾರಾದರೂ ಹೇಗೆ ಸರಿಗಟ್ಟಬಲ್ಲರು. ಅವರೇ ಅದಕ್ಕೆ ಬೇಕಾದ ಸಂಪನ್ಮೂಲವನ್ನೂ ರೂಢಿಸಿಕೊಳ್ಳುತ್ತಾರೆ. ಅಂದರೆ ಬಹಳ ಹೆಚ್ಚಿನ ಜನರು ಅದನ್ನು ಓದಿದರೆ ಜಾಹೀರಾತಿನ ಮೂಲಕ ಅಥವಾ ನೇರವಾಗಿ ಹಣ ನೀಡುವ ಮೂಲಕ.

ಈ ಬಹುಸಂಖ್ಯಾತ ಜನರನ್ನು ಅವರ ಹಿತಾಸಕ್ತಿಗೆ ಪೂರಕವಾಗಿ ಚಿಂತಿಸಲು, ಕಥನ ರೂಪಿಸಲು, ಸುದ್ದಿ ಕಟ್ಟಲು ಓರಿಯೆಂಟ್ ಮಾಡುವುದೆಂದರೆ, ಅದು ಹೊಸ ಮಾಧ್ಯಮ ಕಟ್ಟಲು ಬೇಕಾದ ಸೃಜನಶೀಲ ದಾರಿಗಳನ್ನು ಕಂಡುಕೊಳ್ಳುವ ಕೆಲಸ. ಆ ಸವಾಲನ್ನು ನಾವೀಗ ಕೈಗೆತ್ತಿಕೊಳ್ಳಬೇಕಿದೆ.

ದೇಶದ ಬಹುಸಂಖ್ಯೆಯ ಜನರು ಪರ್ಯಾಯ ಚಿಂತನೆ, ಪ್ರಜ್ಞೆಯನ್ನು ಪಡೆದುಕೊಳ್ಳಲು ಸಾಧ್ಯವಾಗುವುದು ಅವರೇ ಪಾಲ್ಗೊಳ್ಳುವ ಗುದ್ದಾಟದಿಂದ ಪಡೆಯುವ ಅನುಭವದ ಮೂಲಕವೇ. ಆ ರೀತಿಯಲ್ಲಿ ಬಹುಸಂಖ್ಯೆಯ ಜನರೆಲ್ಲರೂ ಒಂದಾಗಿ ನಿರ್ಮಿಸಹೊರಡುವ ಪರ್ಯಾಯ ಬೆಳೆಯದೇ, ಮಾಧ್ಯಮ ಮಾತ್ರ ಬೆಳೆದುಬಿಡುತ್ತದೆಯೇ ಎಂಬ ಪ್ರಶ್ನೆಯನ್ನು ಕೆಲವು ಶಾಶ್ವತ ಸಿನಿಕರು ಕೇಳಬಹುದು. ಹೌದು, ಬೆಳೆಯುತ್ತದೆ ಎಂಬ ವಿಶ್ವಾಸ ನಮ್ಮದು. ಅದು ಇಂದಿನ ಎಲ್ಲಾ ಮುಖ್ಯವಾಹಿನಿ ಮಾಧ್ಯಮಗಳನ್ನು ಗಾತ್ರದಲ್ಲಿ ಮೀರದಿದ್ದರೂ, ಪರಿಣಾಮದಲ್ಲಿ ಬೀರುತ್ತದೆ. ಏಕೆಂದರೆ

ಮಾಧ್ಯಮವೆನ್ನುವುದು ಸಮಾಜದಲ್ಲಿ ವೇಗವರ್ಧಕದ ಕೆಲಸ ಮಾಡುತ್ತದೆಯೇ ಹೊರತು, ತಾನೇ ಸಮಾಜವಲ್ಲ.
ಅಂತಹ ‘ಮುಖ್ಯವಾಹಿನಿ’ ಮಾಧ್ಯಮವನ್ನು ಕಟ್ಟಿ ನಿಲ್ಲಿಸುವ ಯೋಚನೆಯನ್ನು ನಾವು ಹೊಂದಿದ್ದೇವೆ. ಹೇಗೆ ಎಂಬ ಯೋಜನೆಯನ್ನು ಜೊತೆಗೂಡಿ ರೂಪಿಸೋಣ. ಈ ನಿಟ್ಟಿನಲ್ಲಿ ನೀವೇನು ಜವಾಬ್ದಾರಿ ತೆಗೆದುಕೊಳ್ಳಬಹುದು ಎಂಬುದನ್ನು ನಮ್ಮೊಂದಿಗೆ ಹಂಚಿಕೊಳ್ಳಿ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ನಿರುದ್ಯೋಗಿ ಯುವಕರನ್ನು ಜಿರಳೆಗಳು ಎಂದ ಸಿಜೆಐ: ಇದೆಂತಾ ಮಾತು ನ್ಯಾಯಮೂರ್ತಿಗಳೇ!

‘ಕೆಲವು ನಿರುದ್ಯೋಗಿ ಯುವಕರು ಜಿರಳೆಗಳಂತೆ ಸಮಾಜವನ್ನು ಕಾಡುತ್ತಾರೆ. ಉದ್ಯೋಗ, ಸ್ಥಾನಮಾನ ಸಿಗದೆ ಇದ್ದಾಗ ಅವರು ಎಲ್ಲರ ಮೇಲೆ ದಾಳಿ ಆರಂಭಿಸುತ್ತಾರೆ’ ಇದು ಯಾವುದೋ ರಾಜಕೀಯ ರ‍್ಯಾಲಿಯ ಭಾಷಣವಲ್ಲ ಅಥವಾ ಟಿವಿ ಚಾನೆಲ್‌ಗಳ ಜಗಳವಲ್ಲ,...

ಮುಸ್ಲಿಮರು ಕೇವಲ ವೋಟು ಹಾಕಿಕೊಂಡೇ ಇರಬೇಕಾ..ಹಕ್ಕುಗಳನ್ನು ಕೇಳಬಾರದಾ?: ಕಾಂಗ್ರೆಸ್‌ಗೆ ಮುಸ್ಲಿಂ ಸಮಾವೇಶ ಪ್ರಶ್ನೆ

"ಮುಸ್ಲಿಮರು ಕೇವಲ ವೋಟು ಹಾಕಿಕೊಂಡೇ ಇರಬೇಕಾ? ಯಾವ ಹಕ್ಕನ್ನೂ ಕೇಳಬಾರದು ಎಂದು ನೀವು (ಕಾಂಗ್ರೆಸ್‌ನವರು) ಬಯಸುತ್ತಿದ್ದೀರಾ?" ಎಂದು ಕರ್ನಾಟಕ ಮುಸ್ಲಿಂ ಸಮಾವೇಶ ಖಾರವಾಗಿ ಪ್ರಶ್ನಿಸಿತು. ಬೆಂಗಳೂರಿನ ಪುರಭವನದಲ್ಲಿ ಇಂದು (ಮೇ 16, ಶನಿವಾರ) ನಡೆದ...

“ಸನಾತನ ಬೇರುಗಳಲ್ಲಿರುವ ಅಸಮಾನತೆಗೆ ದ್ರಾವಿಡ ನೆಲದ ಪ್ರತಿರೋಧ”: ಉದಯನಿಧಿ ಹೇಳಿಕೆ ವಿವಾದವಾಗಿದ್ದೇಗೆ..?

ಸನಾತನ ಸಂಸ್ಥೆಗಳನ್ನು ಮತ್ತು ಸನಾತನ ಧರ್ಮವನ್ನು ನಿರ್ಮೂಲನೆ ಮಾಡುವ ಬಗ್ಗೆ ಉದಯನಿಧಿ ಸ್ಟಾಲಿನ್ ಅವರ ಹೇಳಿಕೆಗಳು ಸದ್ಯ ದೇಶಾದ್ಯಂತ ಸಂಚಲನ ಮೂಡಿಸಿವೆ.  ತಮಿಳುನಾಡು ವಿಧಾನಸಭೆಯಲ್ಲಿ ನೂತನ ಮುಖ್ಯಮಂತ್ರಿಯಾಗಿ ಸಿ. ಜೋಸೆಫ್ ವಿಜಯ್ ಅವರು ಅಧಿಕಾರ...

ನೇತ್ರಾವತಿ ತೀರದಲ್ಲಿ ‘ಅಂತರಗಂಗೆ’ಯಂತೆ ಹರಿಯುತ್ತಿರುವ ಪ್ರತಿರೋಧ: ವೇದವಲ್ಲಿಯಿಂದ ಸೌಜನ್ಯಳವರೆಗೆ ಪ್ರತಿಧ್ವನಿಸುತ್ತಿರುವ ಪ್ರಶ್ನೆ-‘ಕೊಂದವರು ಯಾರು?’

ಪ್ರಪಂಚದಾದ್ಯಂತ ಪಿತೃಪ್ರಧಾನ ವ್ಯವಸ್ಥೆ ಮತ್ತು ಪ್ರಭುತ್ವಗಳು ಹಲವು ರೀತಿಗಳಲ್ಲಿ ಮಹಿಳೆಯರನ್ನು ದಮನಿಸುವ ವಿಧಾನಗಳನ್ನು ಕಂಡುಕೊಂಡು ಕರಗತ ಮಾಡಿಕೊಂಡಿವೆ. ಅದರಲ್ಲಿ ಅತ್ಯಂತ ಪರಿಣಾಮಕಾರಿಯಾದುದು, ದೇವರು, ಭಕ್ತಿ ಮತ್ತು ಧರ್ಮದ ಹೆಸರಿನಲ್ಲಿ ಮಹಿಳೆಯರನ್ನು ದಮನಕ್ಕೊಳಪಡಿಸುವ ತಂತ್ರ....

ರೂ. 170 ಕೋಟಿ ದಂಡ ಪಾವತಿಸಲು ಮುಂದಾದ ಅದಾನಿ : ಏನಿದು ಪ್ರಕರಣ?

ಅಮೆರಿಕದ ನ್ಯಾಯಾಲಯದಲ್ಲಿ ದಾಖಲಾಗಿದ್ದ ವಂಚನೆ ಮತ್ತು ಲಂಚದ ಪ್ರಕರಣಕ್ಕೆ ಸಂಬಂಧಿಸಿದಂತೆ, ಉದ್ಯಮಿ ಗೌತಮ್ ಅದಾನಿ ಮತ್ತು ಅವರ ಸೋದರಳಿಯ ಸಾಗರ್ ಅದಾನಿ ಒಟ್ಟು 18 ಮಿಲಿಯನ್ ಡಾಲರ್ (ಸುಮಾರು 170 ಕೋಟಿ ರೂಪಾಯಿ) ದಂಡ ಪಾವತಿಸಲು ಒಪ್ಪಿಕೊಳ್ಳುವ ಮೂಲಕ...

ಭೋಜಶಾಲಾ-ಕಮಲ್ ಮೌಲಾ ಪ್ರಕರಣದಲ್ಲಿ ಹಿಂದೂಗಳ ಪರ ತೀರ್ಪು…ಮಸೀದಿಯಲ್ಲ ದೇವಸ್ಥಾನವೆಂದ ಕೋರ್ಟ್ : ಏನಿದು ವಿವಾದ?

ಸುಮಾರು 100 ವರ್ಷಗಳ ಹಳೆಯ ವಿವಾದವಾದ ಭೋಜಶಾಲಾ-ಕಮಲ್ ಮೌಲಾ ಮಸೀದಿ ಪ್ರಕರಣದಲ್ಲಿ ಶುಕ್ರವಾರ (ಮೇ 15) ಮಧ್ಯಪ್ರದೇಶ ಹೈಕೋರ್ಟ್ ತೀರ್ಪು ನೀಡಿದ್ದು, ಭೋಜಶಾಲಾದಲ್ಲಿರುವ ಐತಿಹಾಸಿಕ ಸ್ಥಳವು ಸರಸ್ವತಿ ದೇವಿಗೆ ಸಮರ್ಪಿತವಾದ ದೇವಾಲಯವಾಗಿದೆ ಎಂದು...

“ಮಹಿಳಾ ಮೀಸಲಾತಿ ಮುಖವಾಡದಲ್ಲಿ ಡಿಲಿಮಿಟೇಷನ್ ಕುತಂತ್ರ ವಿಫಲ” ಬಿಜೆಪಿಗೆ ದಕ್ಷಿಣ ಭಾರತದ ಎಚ್ಚರಿಕೆ

ಮೋದಿ ನೇತೃತ್ವದ ಕೇಂದ್ರ ಸರ್ಕಾರವು 2026ರ ಏಪ್ರಿಲ್ 16ರಂದು ಸಂಸತ್ತಿನ ವಿಶೇಷ ಅಧಿವೇಶನ ಕರೆದು, ಮಹಿಳಾ ಮೀಸಲಾತಿ ಅನುಷ್ಠಾನವನ್ನು ತ್ವರಿತಗೊಳಿಸುವ ನೆಪವನ್ನು ಮುಂದುಮಾಡಿ ಮೂರು ಮಸೂದೆಗಳನ್ನು ಮಂಡಿಸಿತು. ಇವುಗಳಲ್ಲಿ ಪ್ರಮುಖವಾದ ಸಂವಿಧಾನ (131ನೇ...

ಹೊಸ ಕಾರ್ಮಿಕ ಕಾನೂನು ಶ್ರಮಿಕರ ಮೂಲಭೂತ ಹಕ್ಕುಗಳಿಗೆ ಕತ್ತರಿ!

"8 ಗಂಟೆ ಕೆಲಸ, 8 ಗಂಟೆ ಮನರಂಜನೆ, 8 ಗಂಟೆ ವಿಶ್ರಾಂತಿ" ಎಂಬ ತತ್ವವು ಸುಲಭವಾಗಿ ದೊರೆತದ್ದಲ್ಲ, ಇದು ದೀರ್ಘಕಾಲದ ಹೋರಾಟ, ತ್ಯಾಗ ಮತ್ತು ಏಕತೆಯ ಫಲವಾಗಿದೆ. ಕೆಲಸದ ಹೊರೆ ಅತಿಯಾಗಿ ಇದ್ದ...

ಮನರೇಗಾ ಯಶೋಗಾಥೆ: ಭಾಗ-1 ದಲಿತರು-ಮಹಿಳೆಯರಿಗೆ ಆರ್ಥಿಕ ಭದ್ರತೆ; ಗ್ರಾಮ ಸಬಲೀಕರಣಕ್ಕೆ ಮನರೇಗಾ ಕೊಟ್ಟ ಕೊಡುಗೆ ಅಪಾರ

2001-2004 ರವರೆಗಿನ ನಿರಂತರ ಬರ ಕರ್ನಾಟಕದ ಬಹುತೇಕ ಹಳ್ಳಿಗಳನ್ನು ಕಂಗಾಲಾಗಿಸಿದ್ದಂತೂ ನಿಜ. ಎಲ್ಲ ಕೆರೆಗಳು ಬತ್ತಿಹೋಗಿದ್ದರಿಂದ ದನಕರುಗಳಿಗೆ ನೀರು ಕುಡಿಸಲೂ ಜನ ಅಲೆದಾಡುತ್ತಿದ್ದರು. ಜನರಿಗೆ ಕುಡಿಯುವ ನೀರು ಪೂರೈಕೆ ಸಹ ಆ ಸಂದರ್ಭದಲ್ಲಿ...

ಮಣಿಪುರ: ಬುಡಕಟ್ಟು ಚರ್ಚ್ ನಾಯಕರ ಮೇಲೆ ಉಗ್ರ ದಾಳಿ:  ಹಲವೆಡೆ ಮೇಣದ ಬತ್ತಿಯ ಜೊತೆಗೆ ಶೋಕ ವ್ಯಕ್ತ ಪಡಿಸಿದ ಕುಕಿ ಸಮುದಾಯ 

ಇಂಫಾಲ್: ಮಣಿಪುರದ ಕಾಂಗ್‌ಪೋಕ್ಪಿ ಜಿಲ್ಲೆಯಲ್ಲಿ ಮೂವರು ಪ್ರಮುಖ ಕುಕಿ ಚರ್ಚ್ ನಾಯಕರನ್ನು ಹೊಂಚು ಹಾಕಿ ದಾಳಿ ನಡೆಸಿ ಕೊಲ್ಲಲಾಗಿದೆ. ಈ ಘಟನೆಯು ರಾಜ್ಯದಲ್ಲಿ ಜನಾಂಗೀಯ ಉದ್ವಿಗ್ನತೆಯನ್ನು ಮತ್ತಷ್ಟು ತೀವ್ರಗೊಳಿಸಿದೆ.  ಮೇ 13ರಂದು ಬೆಳಿಗ್ಗೆ ಚುರಾಚಂದ್‌ಪುರನಲ್ಲಿ...