Homeಅಂಕಣಗಳುಬ್ರಾಹ್ಮಣ್ಯ ಎಂಬುದು ಪ್ರಭುತ್ವದ ಸಾಂಸ್ಕೃತಿಕ ಪರಿಭಾಷೆ :  ಮಾಧ್ಯಮ ಇದರ ಸೇವಕ

ಬ್ರಾಹ್ಮಣ್ಯ ಎಂಬುದು ಪ್ರಭುತ್ವದ ಸಾಂಸ್ಕೃತಿಕ ಪರಿಭಾಷೆ :  ಮಾಧ್ಯಮ ಇದರ ಸೇವಕ

- Advertisement -
- Advertisement -

| ಬಿ. ಪೀರ್ ಬಾಷ |

1920ರ ದಶಕದಲ್ಲಿಯೆ ಮಾಧ್ಯಮದ ಹಿಡಿತ ಬ್ರಾಹ್ಮಣ್ಯದ ಕೈಯಲ್ಲಿತ್ತು. ಅಂಬೇಡ್ಕರರು ಪತ್ರಿಕೆ ಆರಂಭಿಸುತ್ತಾರೆಂಬ ಸುದ್ದಿಯೇ ಬಾಲಗಂಗಾಧರ ತಿಲಕರ ಹೊಟ್ಟೆಯೊಳಗೆ ಹುಳಿ ಹೆಚ್ಚುವಂತೆ ಮಾಡಿತ್ತು. ಆಗಲೇ ಜಾಹಿರಾತುಗಳನ್ನು ಪ್ರಕಟಿಸುತ್ತಿದ್ದ ಹಿಂದೂವಾದಿ ‘ಕೇಸರಿ’ ಪತ್ರಿಕೆ, ಅಂಬೇಡ್ಕರರ ‘ಮೂಕನಾಯಕ’ ಪತ್ರಿಕೆಯ ಜಾಹಿರಾತನ್ನು ಪ್ರಕಟಿಸಲು ನಿರಾಕರಿಸಿತ್ತು.

ಕರ್ನಾಟಕದಲ್ಲಿ ‘ಬ್ರಾಹ್ಮಣ ಮಾಧ್ಯಮ’ದ ಸಾರ್ವಭೌಮತ್ವ ಮತ್ತು ಅದರ ಕ್ಷುದ್ರ ನಡವಳಿಕೆ ಕುರಿತಂತೆ ಸಂವಾದದ ಅಗತ್ಯವನ್ನು ‘ನ್ಯಾಯಪಥ’ ಸಂಪಾದಕೀಯ ತನ್ನ ಈ ಹಿಂದಿನ ಸಂಚಿಕೆಯಲ್ಲಿ ವ್ಯಕ್ತಪಡಿಸಿದೆ. ರಾಜ್ಯದ ಪತ್ರಿಕಾರಂಗದಲ್ಲಿ ಶೇ.90ರಷ್ಟು ಮುಖ್ಯಸ್ಥರು ಹವ್ಯಕ ಬ್ರಾಹ್ಮಣರಾಗಿದ್ದು, ಕನ್ನಡದ ಯಾವುದೇ ಮಾಧ್ಯಮ ಸಂಸ್ಥೆಗೆ ಹೋದರೆ ಅಲ್ಲೆಲ್ಲಾ ಹವ್ಯಕ ಬ್ರಾಹ್ಮಣ ಹುಡುಗರೇ ಕಾಣುತ್ತಿದ್ದು ಅವರ ಸಂಖ್ಯೆ ಇನ್ನೂ ಹೆಚ್ಚಾಗಬೇಕೆಂದು ಹವ್ಯಕ ಬ್ರಾಹ್ಮಣ ಸಮ್ಮೇಳನದಲ್ಲಿ, ವಿಶ್ವೇಶ್ವರ ಭಟ್ ಹೇಳಿರುವುದನ್ನು ಉಲ್ಲೇಖಿಸಿದೆ. ಮುಖ್ಯವಾಗಿ, ದೇಶದ ಮಾಜಿ ಪ್ರಧಾನಿಗಳಾದ ದೇವೇಗೌಡರೇ, ಸ್ವತಃ ಬ್ರಾಹ್ಮಣ ವರದಿಗಾರಿಕೆಯ ಬಗ್ಗೆ ರೋಸಿಹೋಗಿ, ‘ನಾನು ಶೂದ್ರ ಅಷ್ಟೇನೆ’ ಎಂದಿರುವ ವಿಡಿಯೋವನ್ನು ಉಲ್ಲೇಖಿಸುತ್ತಾ, ‘ಬಹುಪಾಲು ಮಾಧ್ಯಮಗಳು ಶೂದ್ರ ರಾಜಕಾರಣಿ-ರಾಜಕಾರಣವನ್ನು ಹಣಿಯುತ್ತಿವೆ’ ಎಂಬುದನ್ನು ಪ್ರಸ್ತಾಪಿಸಿದೆ.

ನಿಜ, ಇದೆಲ್ಲವೂ ಸತ್ಯ. ಆದರಿದು ಹೊಸತಾದುದಾಗಲಿ, ಅಚ್ಚರಿಪಡುವಂಥದ್ದಾಗಲಿ ಅಲ್ಲ ಎಂಬುದು ನಮಗೆ ತಿಳಿದಿರುವಂಥದ್ದೇ. ಆದರೆ ಜನತೆಗೆ ಕೇಡು ಬಗೆಯುತ್ತಿರುವ ಬ್ರಾಹ್ಮಣ್ಯ-ಬಂಡವಾಳಿಗ ಮಾಧ್ಯಮದ ಅನೀತಿಯನ್ನು ಅನಾವರಣಗೊಳಿಸುವುದು ಹಾಗೂ ಪರ್ಯಾಯ ಮಾಧ್ಯಮವನ್ನು ಬಲಗೊಳಿಸುವ ಅಗತ್ಯ ಸಂಪಾದಕೀಯದ ಆಶಯವಾಗಿದೆ ಎಂದುಕೊಂಡಲ್ಲಿ ಈ ವಿಷಯವನ್ನು ಗಂಭೀರವಾಗಿ ಚರ್ಚಿಸಲು ಸಾಧ್ಯವಿದೆ

1920ರ ದಶಕದಲ್ಲಿಯೆ ಮಾಧ್ಯಮದ ಹಿಡಿತ ಬ್ರಾಹ್ಮಣ್ಯದ ಕೈಯಲ್ಲಿತ್ತು. ಅಂಬೇಡ್ಕರರು ಪತ್ರಿಕೆ ಆರಂಭಿಸುತ್ತಾರೆಂಬ ಸುದ್ದಿಯೇ ಬಾಲಗಂಗಾಧರ ತಿಲಕರ ಹೊಟ್ಟೆಯೊಳಗೆ ಹುಳಿ ಹೆಚ್ಚುವಂತೆ ಮಾಡಿತ್ತು. ಆಗಲೇ ಜಾಹಿರಾತುಗಳನ್ನು ಪ್ರಕಟಿಸುತ್ತಿದ್ದ ಹಿಂದೂವಾದಿ ‘ಕೇಸರಿ’ ಪತ್ರಿಕೆ, ಅಂಬೇಡ್ಕರರ ‘ಮೂಕನಾಯಕ’ ಪತ್ರಿಕೆಯ ಜಾಹಿರಾತನ್ನು ಪ್ರಕಟಿಸಲು ನಿರಾಕರಿಸಿತ್ತು. ಬೇರೆ ಪತ್ರಿಕೆಗಳಿಗೆ ಸಿಗುತ್ತಿದ್ದ ಜಾಹಿರಾತುಗಳು ಮೂಕನಾಯಕ ಪತ್ರಿಕೆಗೆ ಸಿಗುತ್ತಿರಲಿಲ್ಲ. ಇಂತಹ ಅನುಭವದ ಹಿನ್ನೆಲೆಯಲ್ಲಿಯೇ ಅಂಬೇಡ್ಕರರು; ‘ಭಾರತದಲ್ಲಿ ಒಮ್ಮೆ ಪತ್ರಿಕೋದ್ಯಮ ಒಂದು ವೃತ್ತಿಯಾಗಿತ್ತು. ಈಗ ಅದು ವ್ಯಾಪಾರವಾಗಿದೆ. ಸಾಬೂನು ಉತ್ಪಾದಿಸುವುದಕ್ಕಿಂತ ಹೆಚ್ಚಿನ ನೈತಿಕ ಹೊಣೆ ಅದಕ್ಕಿಲ್ಲ’ ಎಂದಿದ್ದರು. ಈ ಮಾತು ಈ ಹೊತ್ತಿನ ಮಾಧ್ಯಮದ ಸ್ವರೂಪವನ್ನು ಕುರಿತೇ ಹೇಳಿದಂತಿದೆ ಎಂದೆನಿಸಿದರೂ ಇದು ಆ ಹೊತ್ತೇ ಇದ್ದ ಪರಿಸ್ಥಿತಿ ಎಂಬುದನ್ನು ಗಮನಿಸಬೇಕು. ಆಗಲೂ ಸ್ಪಷ್ಟವಾಗಿ ಮಾಧ್ಯಮರಂಗದಲ್ಲಿ ಯಜಮಾನಿಕೆ ಸ್ಥಾಪಿಸಿದ್ದು ಇದೇ ಬ್ರಾಹ್ಮಣ್ಯ. ಇದು ಹತ್ತಿಕ್ಕಿದ್ದು ಇದೇ ಶೂದ್ರರನ್ನು. ಅಷ್ಟುಮಾತ್ರವಲ್ಲ, ಆಗಲೂ ಈ ಬ್ರಾಹ್ಮಣ್ಯ-ಬಂಡವಾಳಿಗ ಮಾಧ್ಯಮ ತನ್ನ ಹೆಚ್ಚುಗಾರಿಕೆ ಸಾರಿದ್ದು-ಹೇರಿದ್ದು ಇದೇ ‘ರಾಷ್ಟ್ರವಾದ’ದ  ಮುಖವಾಡದ ಮೂಲಕವೇ. ಆಗಲೂ ಇದರ ವಿರೋಧಿಗಳು ಹೆಸರಿಗಷ್ಟೇ ಬ್ರಿಟಿಷರು, ನಿಜವೆಂದರೆ ಈಗ ಯಾರೋ ಆಗಲೂ ಅವರೇ! ಆದರೆ ಬದಲಾವಣೆ ಆಗಿರುವುದೇನೆಂದರೆ ಆಗ ಈ ಶಕ್ತಿ ತನ್ನ ಹಿತಾಸಕ್ತಿಯನ್ನು ಕಾಪಾಡಿಕೊಳ್ಳಲು ಹೆಣಗುತ್ತಿತ್ತು. ಆದರೀಗ ಇದಕ್ಕೆ ಆಳುವ ಅಧಿಕಾರ ದಕ್ಕಿದ ಬಳಿಕ ಇದು ದಮನಕಾರಿಯಾಗಿದೆ.

ವಸಾಹತುಶಾಹಿ ಆಡಳಿತದ ಅವಧಿಯಲ್ಲಿ ತಾನು ಬದುಕುಳಿಯಲು ಹೆಣಗುತ್ತಿದ್ದ ಬ್ರಾಹ್ಮಣ್ಯ-ಮಾಧ್ಯಮ-ಬಂಡವಾಳ ‘ಸ್ವಾತಂತ್ರ್ಯಯ’ ಸಿಗುತ್ತಲೇ ತಾನು ಸಂಪೂರ್ಣ ಸ್ವಾತಂತ್ರ್ಯಯ ಪಡೆದು ಕಳೆದ ಮುಕ್ಕಾಲು ಶತಮಾನದಲ್ಲಿ ಬೇರು ಬಿಟ್ಟು ಇದೀಗ ತನ್ನ ಕೊಕ್ಕು-ಪಂಜುಗಳನ್ನು ಚೂಪು ಮಾಡಿಕೊಂಡಿದೆ. ಈಗಿದು ‘ರಾಷ್ಟ್ರ’ದೊಳಗಿನ ಪ್ರಜೆಗಳನ್ನು ‘ಗಿರಾಕಿ’ಗಳನ್ನಾಗಿಸಿಕೊಳ್ಳುತ್ತಿದೆ. ಮಾಧ್ಯಮವಂತೂ ಗಿರಾಕಿಗಳಾದವರ ಮೆದುಳಿಗೇ ಗೆದ್ದಲು ಹಿಡಿಸಿ ಪತ್ರಿಕೆಯ ಬರೆಹ ಮತ್ತು ಟಿ.ವಿಯ ದೃಶ್ಯಗಳನ್ನು ‘ಮಾದಕ’ವಾಗಿ ಮಾರ್ಪಡಿಸಿದೆ. ಈ ಮಾದಕ ವ್ಯಸನದ ಫಲವಾಗಿ ಈ ಹೊತ್ತು ‘ರಾಷ್ಟ್ರವಾದ’ ಎಂಬುದು ವಿವೇಚನಾರಹಿತ ಆವೇಶವಾಗಿ ವ್ಯಕ್ತವಾಗುತ್ತಿದೆ. ಪ್ರಜಾಪ್ರಭುತ್ವದ ಸರ್ವೋನ್ನತ ಜವಾಬ್ದಾರಿಯ ಪ್ರಧಾನ ಸ್ಥಾನವೆಂಬುದು ಪ್ರಶ್ನಾತೀತ ಭಾವೋನ್ಮಾದಿ ಪ್ರತಿಮೆಯಾಗಿದೆ. ಇದೆಲ್ಲವೂ ಪಕ್ಕಾ ಅವರ ಲೆಕ್ಕಾಚಾರದಂತೆಯೇ ನಡೆಯುತ್ತಿದೆ. ಆದರೆ ‘ನಾವು’ ಎಂದುಕೊಂಡ ನಮಗೆ, ಅವರ ಲೆಕ್ಕ ತಪ್ಪಿಸುವ ಅಥವಾ ನಮ್ಮದೇ ಆದ ‘ಲೆಕ್ಕಾಚಾರ’ ಎಂಬುದೊಂದು ಇದೆಯೇ? ಇದು ಮುಖ್ಯ ಪ್ರಶ್ನೆ.

ಕನಿಷ್ಟ ಕಾಮನ್ಸೆನ್ಸ್ ಇದ್ದವರಿಗೂ ತಿಳಿಯುತ್ತದೆ; ಸುದ್ದಿವಾಹಿನಿಗಳಲ್ಲಿ ಪ್ರಸಾರವಾಗುವ ವಿಶೇಷ ವರದಿಗಳ ಶೀರ್ಷಿಕೆಯೇ ಇದು ಯಾರನ್ನು ಎತ್ತಿಕಟ್ಟಲು ಅಥವಾ ಹಣಿಯಲು ಹೆಣೆಯಲಾದ ಕತೆ ಎಂಬುದನ್ನು ಹೇಳಿಬಿಡುತ್ತದೆ. ಸ್ಟುಡಿಯೋಗಳಲ್ಲಿ ನಡೆಸುವ ‘ಚರ್ಚೆ’ (ತಲೆ ಹರಟೆ)ಗಳ ನಿರೂಪಕರ ನಾಟಕೀಯ ಪಾಂಡಿತ್ಯ, ಹೇಸಿಗೆ ತರಿಸುವ ಅವರ ಧ್ವನಿ ವಿನ್ಯಾಸ-ಕುಹಕ, ನಿರೂಪಕನೇ ವಿಚಾರಣಾಧಿಕಾರಿಯಾಗುವ, ವಕೀಲನಾಗುವ, ನ್ಯಾಯಾಧೀಶನಾಗುವ ಏಕಪಾತ್ರಾಭಿನಯದ ಎದುರು ಪ್ಯಾನಲಿಸ್ಟರು ಸ್ಟುಡಿಯೋ ಎಂಬ ಶೋರೂಮಿನ ಗೊಂಬೆಗಳಾಗಿರುತ್ತಾರೆ. ಮೊದಲೇ ನಿಶ್ಚಯಿಸಿಕೊಂಡಂತೆ ತಮ್ಮ ಪರವಿರುವವರಿಗೆ ಮಾತಾಡಲು ಹೆಚ್ಚು ಅವಕಾಶ ಕೊಡುವುದು, ತಮ್ಮ ಪೂರ್ವನಿಶ್ಚಿತ ಉದ್ದೇಶಕ್ಕೆ ಪ್ರತಿಯಾಗಿ ಮಾತಾಡುವವರ ಮಾತು ಇದ್ದಕ್ಕಿದ್ದಂತೆ ಮೊಟಕು ಮಾಡುವುದು ಇಲ್ಲವೇ ‘ಬ್ರೇಕ್’-ವಿರಾಮ ಬೀಳುವುದು ಇದೆಲ್ಲ ಸ್ಪಷ್ಟವಾಗಿ ‘ಒಬ್ಬ’ರ ಪರವಾಗಿದೆ ಎಂದು ಯಾರಿಗೆ ತಿಳಿಯುವುದಿಲ್ಲ? ಚುನಾವಣಾ ಕ್ಷೇತ್ರಗಳಲ್ಲಿ ವಿಶ್ಲೇಷಣೆಯ ಸಂದರ್ಭದಲ್ಲಿಯೂ ವರದಿಗಾರರ ಮೈಕುಗಳು ಯಾರ ಮುಂದೆ ಹೆಚ್ಚುಹೊತ್ತು ನಿಲ್ಲುತ್ತವೆ, ಯಾರ ಮಾತಿಗೆ ತಕ್ಷಣ ಸರಿದು ಬಿಡುತ್ತವೆ ಎಂಬುದೂ ಈಗ ಆಯಾ ವರದಿಗಾರರಿಗೂ ನಾಚಿಕೆಯಾಗುವ ವಿಷಯವಾಗಿ ಉಳಿದಿಲ್ಲ. ಅಷ್ಟುಮಾತ್ರವಲ್ಲ ಸ್ಪಷ್ಟವಾಗಿ ಹೇಳಬೇಕೆಂದರೆ ಸಿದ್ದರಾಮಯ್ಯನವರ ಸರಕಾರವನ್ನು ಕೆಡಹುವಲ್ಲಿ ಪ್ರಧಾನ ಪಾತ್ರವಹಿಸಿರುವುದು ಮತ್ತು ಕುಮಾರಸ್ವಾಮಿಯವರ ಸರಕಾರವನ್ನು ಕೆಡಹುವುದೇ ತಮ್ಮ ಮುಂದಿನ ಗುರಿ ಮಾಡಿಕೊಂಡಿರುವುದು ರಾಜ್ಯದ ಬಿ.ಜೆ.ಪಿ. ಅಲ್ಲ, ಬದಲಿಗೆ ಬೆರಳೆಣಿಕೆಯ ಮಾಧ್ಯಮಗಳು ಎನ್ನುವುದು ಆ ಮಾಧ್ಯಮಗಳ ‘ಶಕ್ತಿ’ಗೆ ಕೊಡುವ ಪ್ರಮಾಣಪತ್ರವಲ್ಲ ಬದಲಿಗೆ ಅವುಗಳ ದೈತ್ಯಶಕ್ತಿಯ ಸರಿ ಅಂದಾಜು ಎಂದು ಭಾವಿಸುವ ಅಗತ್ಯವಿದೆ.  ಈ ಹೊತ್ತು ಬ್ರಾಹ್ಮಣ-ಬನಿಯಾ ಮಾಲಕತ್ವದ ದೃಶ್ಯ-ಮುದ್ರಣ ಮಾಧ್ಯಮಗಳು ನಿಕ್ಕಿ ಫ್ಯಾಸಿಸಮ್ಮಿನ ಮುಖವಾಣಿಯಾಗಿವೆ.

1920ರ ಅಂಬೇಡ್ಕರರ ಅನುಭವದಿಂದ ಮೊದಲು ಮಾಡಿ 2020ರ ನಡುವಿನ ನೂರು ವರ್ಷಗಳ ಅವಧಿಯ ಇತಿಹಾಸ, ನಮ್ಮ ತಿಳಿವಳಿಕೆಗಿರುವ ಬಹುದೊಡ್ಡ ಪಠ್ಯ ಎಂಬುದನ್ನು ಅರಿತು ಅದನ್ನು ಪುನರಾವಲೋಕನ ಮಾಡಿದರೆ ಖಂಡಿತ ನಮಗೆ ಇಲ್ಲಿ ಪಾಠ ಇದೆ. ಉಧ್ಯಮದ ಸ್ವರೂಪ ಪಡೆದ ಮಾಧ್ಯಮ ಯಾವತ್ತೂ ಅದು ಪ್ರಭುತ್ವದ ಬಾಲಬಡುಕವೇ ಆಗಿರುತ್ತದೆ ಎಂಬುದು ತೀರಾ ‘ಸಣ್ಣ’ಮಾತು. ನಿಜವೆಂದರೆ ಇಂತಹ ಮಾಧ್ಯಮ ಪ್ರಜಾಪ್ರಭುತ್ವಕ್ಕೆ ಕಂಟಕಕಾರಿಯೇ ಆಗಿರುತ್ತದೆ. ಮಾಧ್ಯಮ ಪ್ರಜಾಪ್ರಭುತ್ವದ ನಾಲ್ಕನೇ ಅಂಗ ಎನ್ನುವ ಬಣ್ಣನೆಯ ಮಾತು ಈ ಹೊತ್ತು ಆತ್ಮವಂಚಕ ಮಾತಾಗುತ್ತದೆ. ‘ಮಾರುಕಟ್ಟೆ ಪ್ರಜಾಪ್ರಭುತ್ವ’ದಲ್ಲಿ ಮಾಧ್ಯಮ ಸ್ವಯಂ ಪ್ರಚಾರ ಸಾಮಗ್ರಿಯಾಗಿರುತ್ತದಷ್ಟೇ. ಸುದ್ದಿಯ ನಡುವಿನ ಜಾಹಿರಾತುಗಳ ಪ್ರಸಾರ ಮತ್ತು ಸುದ್ದಿಯ ಹೆಸರಿನಲ್ಲಿ ಬಂಡವಾಳಿಗರ ಪರವಾಗಿರುವ ರಾಜಕಾರಣಿಗಳ ಪ್ರಚಾರವೇ ದೃಶ್ಯಮಾಧ್ಯಮಗಳ ನಿಜವಾದ ಉದ್ದೆÃಶವಾಗಿರುತ್ತದೆ ಎಂಬುದನ್ನು ಪ್ರೇಕ್ಷಕ ಶ್ರೀಸಾಮಾನ್ಯನಿಗೆ ತಿಳಿಸಿಕೊಡಬೇಕಾದ ತುರ್ತು ಕೂಡ ಈ ಹೊತ್ತು ಜನಪರರ ಎದುರಿಗಿದೆ.

ಮುಖ್ಯವಾದ ಮಾತನ್ನಷ್ಟೇ ಹೇಳಿ ಮುಗಿಸುವೆ. ಬ್ರಾಹ್ಮಣ ಮಾಧ್ಯಮ ಎಂಬ ಮಾತಿನ ಸಂದರ್ಭದಲ್ಲಿ ಗಮನಿಸಬೇಕಿರುವುದು, ಭಾರತದ ಚರಿತ್ರೆಯಲ್ಲಿ ಈತನಕದ ಎಲ್ಲ ಪ್ರಸಾರ ಪ್ರಕಾರಗಳಲ್ಲೂ ಬ್ರಾಹ್ಮಣ್ಯ ಅವಿಭಜಿತ ಅಂಶವಾಗಿ ಚಾಲ್ತಿಯಲ್ಲಿದೆ. ಇನ್ನು ಅರ್ಥಮಾಡಿಕೊಳ್ಳಬೇಕಿರುವುದು ‘ಬ್ರಾಹ್ಮಣ್ಯ’ ಎಂಬುದರ ಅರ್ಥವೇ ಪ್ರಭುತ್ವ ಎನ್ನುವುದನ್ನು. ಬ್ರಾಹ್ಮಣ್ಯ ಎಂಬುದು ಪ್ರಭುತ್ವದ ಸಾಂಸ್ಕೃತಿಕ ಪರಿಭಾಷೆ ಎಂಬುದನ್ನು ಖಚಿತಪಡಿಸಿಕೊಳ್ಳದ ಹೊರತು ಭಾರತದಲ್ಲಿ ಪ್ರಜೆಗಳ ವಿಮೋಚನೆಯಾಗಲಿ, ಪ್ರಜಾಪ್ರಭುತ್ವದ ನಿರ್ಮಾಣವಾಗಲಿ ಸಾಧ್ಯವಿಲ್ಲ. ಇದರ ವಿವರಣೆಯಲ್ಲಿ ಬಂಡವಾಳವೂ ಬ್ರಾಹ್ಮಣ್ಯದ ಅಂತರ್ಗತ ಧಾತು ಎಂಬುದು ಮನವರಿಕೆಯಾಗುತ್ತದೆ. ಇಲ್ಲಿ ಮಾಧ್ಯಮವು ಇದರ ಹಿತದ ಪೋಷಣೆ ಮತ್ತು ರಕ್ಷಣೆಗಾಗಿ ತಾನು ದುಡಿಯುತ್ತದೆ.
ದೇಶಿ ಬಂಡವಾಳ ನೇತೃತ್ವದ ಜಾಗತಿಕ ಬಂಡವಾಳಿಗ ಮೈತ್ರಿಕೂಟದ ರಾಜಕೀಯ ಸಿದ್ಧಾಂತವಾದ ‘ಹಿಂದೂ-ರಾಷ್ಟ್ರವಾದ’ವು ಎದೆಸೆಟೆಸುತ್ತಿರುವ ಕಾಲಮಾನದಲ್ಲಿ ಮಾಧ್ಯಮದ ಬಗೆಗಿನ ಚರ್ಚೆ, ಸಶಕ್ತ ಪ್ರತಿರೋಧ ಮತ್ತು ಕ್ರಿಯಾತ್ಮಕ ಪರ್ಯಾಯದ ಕಣ್ಣೋಟವನ್ನು ಬಯಸುತ್ತದೆ. ಈ ಹೊತ್ತು ‘ಈ’ ಮಾಧ್ಯಮ ಜನಹಿತಾಸಕ್ತಿಗೆ ಘಾತಕವಾದುದು ಎಂಬುದನ್ನು, ಇದು ಸತ್ಯವನ್ನು ತಿರುಚುತ್ತದೆ, ಸುಳ್ಳನ್ನು ಹೇಳುತ್ತದೆ, ಇದು ಓದುಗ-ನೋಡುಗರ ಪ್ರಜ್ಞೆ ತಗ್ಗಿಸಿ ಗಿರಾಕಿಗಳನ್ನಾಗಿಸುತ್ತದೆ ಎಂಬುದನ್ನು ಜನತೆಗೆ ಮನವರಿಕೆ ಮಾಡಿಕೊಡುವುದು ಮತ್ತು ಪರ್ಯಾಯ ಮಾಧ್ಯಮ ಸಾಧ್ಯತೆಗಳನ್ನು ಕಂಡುಕೊಳ್ಳುವುದೂ ಅತಿ ಜರೂರಿನ ಕ್ರಿಯೆಯಾಗಿದೆ. ಈ ಬ್ರಾಹ್ಮಣ್ಯ ಮಾಧ್ಯಮವನ್ನು ಪ್ರಶ್ನಿಸುವ ಸಾಮರ್ಥ್ಯ, ಕಾರ್ಯಕ್ರಮ ಮತ್ತು ಸೇಡು ತೀರಿಸಿಕೊಳ್ಳುವ ಈ ಮಾಧ್ಯಮಗಳನ್ನು ಎದುರಿಸಿ ಗೆಲ್ಲುವ ವಿಧಾನಗಳ ಹುಡುಕಾಟ, ಕಾರ್ಯಗತಗೊಳಿಸುವಿಕೆ, ಮಾತ್ರವಲ್ಲ ಈ ಬಂಡವಾಳವನ್ನು ಮಣಿಸಿ ಜನಹಿತಕ್ಕೆ ಬಳಸಿಕೊಳ್ಳುವ ಸಂಭವನೀಯತೆಗಳ ಬಗ್ಗೆ ಈ ಹೊತ್ತು ಚಿಂತಿಸಬೇಕಿದೆ. ಅನುಸರಿಸಬೇಕಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿಗೆ ಸಂಸದ ಸಂಗಣ್ಣ ಕರಡಿ ರಾಜೀನಾಮೆ: ಕಾಂಗ್ರೆಸ್ ಸೇರ್ಪಡೆ ಸಾಧ್ಯತೆ

0
ಲೋಕಸಭೆ ಚುನಾವಣೆಯಲ್ಲಿ ಕೊಪ್ಪಳ ಕ್ಷೇತ್ರದ ಟಿಕೆಟ್‌ ಕೈತಪ್ಪಿದ ಹಿನ್ನೆಲೆ ಬಿಜೆಪಿ ವಿರುದ್ದ ಮುನಿಸಿಕೊಂಡಿದ್ದ ಹಾಲಿ ಸಂಸದ ಸಂಗಣ್ಣ ಕರಡಿ ಅವರು ತಮ್ಮ ಸಂಸದ ಸ್ಥಾನಕ್ಕೆ ಮತ್ತು ಬಿಜೆಪಿ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ...