Homeಮುಖಪುಟಮೇಘಾಲಯ ಚುನಾವಣೆ: ತುರಾ ಸ್ಟೇಡಿಯಂನಲ್ಲಿ ಮೋದಿ ಪ್ರಚಾರಕ್ಕೆ ಅನುಮತಿ ನಿರಾಕರಣೆ

ಮೇಘಾಲಯ ಚುನಾವಣೆ: ತುರಾ ಸ್ಟೇಡಿಯಂನಲ್ಲಿ ಮೋದಿ ಪ್ರಚಾರಕ್ಕೆ ಅನುಮತಿ ನಿರಾಕರಣೆ

- Advertisement -
- Advertisement -

ಇದೇ ಫೆಬ್ರವರಿ 27ರಂದು ನಡೆಯಲಿರುವ ಮೇಘಾಲಯ ಚುನಾವಣಾ ಪ್ರಚಾರಕ್ಕೆ ಹೆಲಿಕ್ಯಾಪ್ಟರ್‌ನಲ್ಲಿ ತೆರಳಲು ಸಿದ್ದರಾಗಿದ್ದ ಪ್ರಧಾನಿ ಮೋದಿಯವರ ತುರಾ ಸ್ಟೇಡಿಯಂನ ಕಾರ್ಯಕ್ರಮಕ್ಕೆ ಅಲ್ಲಿನ ಸರ್ಕಾರ ಅನುಮತಿ ನಿರಾಕರಿಸಿದೆ.

ಮೇಘಾಲಯದ ದಕ್ಷಿಣ ತುರಾ ಮುಖ್ಯಮಂತ್ರಿ ಕಾನ್ರಾಡ್ ಕೆ ಸಂಗ್ಮಾ ಪ್ರತಿನಿಧಿಸುವ ಕ್ಷೇತ್ರವಾಗಿದೆ. ಆ ಕ್ಷೇತ್ರಕ್ಕೆ ಬಿಜೆಪಿಯು ತನ್ನ ರಾಜ್ಯ ಘಟಕದ ಉಪಾಧ್ಯಕ್ಷ ಮತ್ತು ಮಾಜಿ ಉಗ್ರಗಾಮಿ ನಾಯಕ ಬರ್ನಾರ್ಡ್ ಎನ್ ಮರಕ್ ಅವರನ್ನು ತನ್ನ ಅಧಿಕೃತ ಅಭ್ಯರ್ಥಿಯನ್ನಾಗಿ ಘೋಷಿಸಿದೆ.

ಕಳೆದ ತಿಂಗಳು ಸಿಎಂ ಕಾನ್ರಾಡ್ ಸಂಗ್ಮಾ ನೇತೃತ್ವದ ನ್ಯಾಷನಲ್ ಪೀಪಲ್ಸ್ ಪಕ್ಷವು ಆಡಳಿತಾರೂಢ ಮೇಘಾಲಯ ಡೆಮಾಕ್ರಟಿಕ್ ಅಲಯನ್ಸ್‌ನಿಂದ ಬೇರ್ಪಟ್ಟು ರಾಜ್ಯ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸಲು ನಿರ್ಧರಿಸಿದ ನಂತರ ತೆಗೆದುಕೊಂಡ ಈ ತೀರ್ಮಾನಕ್ಕೆ ಬಿಜೆಪಿ ಕಿಡಿಕಾರಿದೆ.

2018 ರಿಂದ ಎನ್‌ಪಿಪಿ ನೇತೃತ್ವದ ಮೇಘಾಲಯ ಡೆಮಾಕ್ರಟಿಕ್ ಅಲಯನ್ಸ್ (ಎಂಡಿಎ) ಸರ್ಕಾರದಲ್ಲಿ ಬಿಜೆಪಿ ಸಹ ಕೈಜೋಡಿಸಿತ್ತು. ಆದರೆ ಸದ್ಯ ಎರಡು ಪಕ್ಷಗಳು ಏಕಾಂಗಿಯಾಗಿ ಸ್ಪರ್ಧಿಸಲು ನಿರ್ಧರಿಸಿದವು. ಅಂದಿನಿಂದ, ಎನ್‌ಪಿಪಿ ಮತ್ತು ಬಿಜೆಪಿ ನಡುವೆ ತಿಕ್ಕಾಟ ಆರಂಭವಾಗಿದೆ.

127 ಕೋಟಿ ರೂ ವೆಚ್ಚದಲ್ಲಿ ನಿರ್ಮಿಸಲಾದ ಫುಟ್ಭಾಲ್ ಮತ್ತು ಒಳಾಂಗಣ ಕ್ರೀಡಾಂಗಣಕ್ಕೆ ಮಾಜಿ ಮುಖ್ಯಮಂತ್ರಿ ಪಿ ಎ ಸಂಗ್ಮಾ ಹೆಸರಿಡಲಾಗಿದೆ. ಅಂತರಾಷ್ಟ್ರೀಯ ಸೌಲಭ್ಯ ಹೊಂದಿರುವ ದೇಶದ ದೊಡ್ಡ ಫುಟ್ಬಾಲ್ ಕ್ರೀಡಾಂಗಣವನ್ನು 2022ರ ಡಿಸೆಂಬರ್‌ನಲ್ಲಿ ಉದ್ಘಾಟಿಸಲಾಗಿದ್ದು, ಒಳಾಂಗಣ ಕ್ರೀಡಾಂಗಣದ ಕೆಲಸ ನಡೆಯುತ್ತಿದೆ ಎನ್ನಲಾಗಿದೆ.

“ಈ ಕ್ರೀಡಾಂಗಣದ ನಿರ್ಮಾಣಕ್ಕೆ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಹಣ ನೀಡಿದೆ. ದೇಶದ ಪ್ರಧಾನಿಗೆ ಅನುಮತಿ ನಿರಾಕರಿಸುವುದು ದೊಡ್ಡ ಅವಮಾನ” ಎಂದು ಬಿಜೆಪಿಯ ರಾಜ್ಯ ಘಟಕದ ಅಧ್ಯಕ್ಷ ಅರ್ನೆಸ್ಟ್ ಮಾವ್ರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಆದರೆ ಸಿಎಂ ಕಾನ್ರಾಡ್ ಸಂಗ್ಮಾರವರು ಇದರಲ್ಲಿ ತಮ್ಮ ಪಕ್ಷದ ಪಾತ್ರವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. “ಚುನಾವಣಾ ರ್ಯಾಲಿಗಳಿಗೆ ಅನುಮತಿ ನೀಡುವುದು ಚುನಾವಣಾ ಆಯೋಗ ಮತ್ತು ಜಿಲ್ಲಾಡಳಿತಗಳು. ಅದರಲ್ಲಿ ನಮ್ಮ ಹಸ್ತಕ್ಷೇಪವಿರುವುದಿಲ್ಲ. ನಮ್ಮ ಬಹಳಷ್ಟು ರ್ಯಾಲಿಗಳಿಗೆ ಅನುಮತಿ ಕೊಟ್ಟಿಲ್ಲ. ಹಾಗಾಗಿ ಬಿಜೆಪಿ ನಮ್ಮ ವಿರುದ್ಧ ಟೀಕೆ ಮಾಡುವುದನ್ನು ನಿಲ್ಲಿಸಬೇಕು” ಎಂದಿದ್ದಾರೆ.

ಬಿಜೆಪಿ ಇದನ್ನು ದೊಡ್ಡ ಇಶ್ಯೂ ಮಾಡುತ್ತಿದ್ದಾರೆ. ನಾವು ಮೊದಲೇ ಹೇಳಿದಂತೆ ಸ್ಟೇಡಿಯಂ ಎರಡು ಭಾಗಗಳಾಗಿದ್ದು, ಒಂದು ಫುಟ್ಬಾಲ್ ಸ್ಟೇಡಿಯಂ ಮತ್ತೊಂದು ಒಳಾಂಗಣ ಕ್ರೀಡಾಂಗಣ ಮತ್ತು ಈಜುಕೊಳವಿದೆ. ಅದಿನ್ನೂ ಪೂರ್ಣಗೊಂಡಿಲ್ಲ. ಪ್ರಧಾನಿ ರ್ಯಾಲಿಗೆ ಹೆಚ್ಚು ಜನ ಸೇರಿದರೆ ಕ್ರೀಡಾಂಗಣ ಅಂದ ಮತ್ತು ನೈಸರ್ಗಿಕ ಹುಲ್ಲು ಹಾಳಾಗಬಹುದು. ಅಲ್ಲದೆ ಅಲ್ಲಿ ಪಾರ್ಕಿಂಗ್ ವ್ಯವಸ್ಥೆ ಸಹ ಇಲ್ಲ. ಈ ಎಲ್ಲಾ ಕಾರಣಗಳಿಂದ ಚುನಾವಣಾ ಆಯೋಗ ಅನುಮತಿ ನಿರಾಕರಿಸಿರಬಹುದು ಎಂದಿದ್ದಾರೆ.

60 ವಿಧಾನಸಭಾ ಕ್ಷೇತ್ರಗಳನ್ನೊಳಗೊಂಡ ಮೇಘಾಲಯದಲ್ಲಿ ಫೆಬ್ರವರಿ 27 ರಂದು ಚುನಾವಣೆ ನಡೆಯುತ್ತಿದೆ. ಬಹುಮತಕ್ಕೆ 31 ಸ್ಥಾನಗಳ ಅಗತ್ಯವಿದೆ.

ಮೇಘಾಲಯದಲ್ಲಿ ಯಾವುದೇ ಮೈತ್ರಿಕೂಟಗಳ ಬದಲು ಎಲ್ಲಾ ಪಕ್ಷಗಳು ಏಕಾಂಗಿಯಾಗಿ ಸ್ಪರ್ಧಿಸಲು ಮುಂದಾಗಿವೆ. ಅಸ್ಸಾಂನೊಂದಿಗೆ ಮೇಘಾಲಯ ಗಡಿ ಸಮಸ್ಯೆ ಎದುರಿಸುತ್ತಿದೆ. ಜೊತೆಗೆ ಅಭಿವೃದ್ದಿಯಲ್ಲಿಯೂ ಹಿಂದೆ ಉಳಿದಿದೆ. ಇವುಗಳು ಈ ಭಾರಿಯ ಚುನಾವಣಾ ವಿಷಯಗಳಾಗಿವೆ.

ಸಿಎಂ ಕಾನ್ರಾಡ್ ಸಂಗ್ಮಾ ನೇತೃತ್ವದ ನ್ಯಾಷನಲ್ ಪೀಪಲ್ಸ್ ಪಕ್ಷವು 58 ಸ್ಥಾನಗಳಲ್ಲಿ ಸ್ಪರ್ಧಿಸುತ್ತಿದೆ. ಟಿಎಂಸಿ ಪಕ್ಷವು ಮುಕುಲ್ ಸಂಗ್ಮಾ ನೇತೃತ್ವದಲ್ಲಿ 55 ಸ್ಥಾನಗಳಲ್ಲಿ ಸ್ಪರ್ಧಿಸಲು ಮುಂದಾಗಿದೆ. ಕಾಂಗ್ರೆಸ್ ಎಲ್ಲಾ 60 ಸ್ಥಾನಗಳಲ್ಲಿ ಕಣಕ್ಕಿಳಿಯುತ್ತಿದೆ. ಬಿಜೆಪಿ ಸಹ 60 ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದೆ. ಉಳಿದಂತೆ ಯುನೈಟೈಡ್ ಡೆಮಾಕ್ರಟಿಕ್ ಪಾರ್ಟಿ 34, ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ 7, ಹಿಲ್‌ಸ್ಟೇಲ್ ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ 7 ಮತ್ತು ವಾಯ್ಸ್ ಆಫ್ ಪೀಪಲ್ ಪಾರ್ಟಿ 14 ಕಡೆಗಳಲ್ಲಿ ಸ್ಪರ್ಧಿಸುತ್ತಿದೆ.

2018ರ ಬಲಾಬಲ

ಕಾಂಗ್ರೆಸ್ – 21, ಎನ್‌ಪಿಪಿ 19, ಯುನೈಟೈಡ್ ಡೆಮಾಕ್ರಟಿಕ್ ಪಾರ್ಟಿ 06, ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ 04 ಮತ್ತು ಬಿಜೆಪಿ 02 ಕಡೆಗಳಲ್ಲಿ ಜಯ ಗಳಿಸಿತ್ತು.

ಮೇಘಾಲಯ, ತ್ರಿಪುರ ಮತ್ತು ನಾಗಾಲ್ಯಾಂಡ್ ರಾಜ್ಯಗಳ ಚುನಾವಣಾ ಫಲಿತಾಂಶ ಮಾರ್ಚ್ 02 ರಂದು ಪ್ರಕಟವಾಗಲಿದೆ.

ಇದನ್ನೂ ಓದಿ: ಕಾಂಗ್ರೆಸ್‌ನ ಸರ್ವಸದಸ್ಯರ ಅಧಿವೇಶನಕ್ಕೂ ಮುನ್ನ ಛತ್ತೀಸ್‌ಗಢದಲ್ಲಿ ಇಡಿ ದಾಳಿ; ಕೈ ನಾಯಕರಿಂದ ಟೀಕೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕೆನಡಾದ ಸಾರ್ವತ್ರಿಕ ಚುನಾವಣೆಗೆ ಭಾರತದಿಂದ ‘ಆಯ್ಧ ಅಭ್ಯರ್ಥಿಗಳಿಗೆ’ ರಹಸ್ಯವಾಗಿ ಹಣಕಾಸಿನ ನೆರವು: ವರದಿ

0
2021ರ ಸಾರ್ವತ್ರಿಕ ಚುನಾವಣೆಯ ಸಮಯದಲ್ಲಿ ಆಯ್ದ ಅಭ್ಯರ್ಥಿಗಳಿಗೆ ರಹಸ್ಯವಾಗಿ ಹಣಕಾಸಿನ ನೆರವು ನೀಡಲು ಭಾರತ ಸರ್ಕಾರವು ತನ್ನ ಪ್ರಾಕ್ಸಿ ಏಜೆಂಟ್‌ಗಳ ಮೂಲಕ ಪ್ರಯತ್ನಿಸಿರಬಹುದು ಎಂದು ಕೆನಡಾದಲ್ಲಿ ವಿದೇಶಿ ಹಸ್ತಕ್ಷೇಪದ ಕುರಿತು ತನಿಖೆ ನಡೆಸುತ್ತಿರುವ ಕೆನಡಾದ...