Homeಮುಖಪುಟನಾಗಾಲ್ಯಾಂಡ್‌: ಮುಂದಿನ 3 ವರ್ಷಗಳಲ್ಲಿ AFSPA ತೆಗೆಯುತ್ತೇವೆ ಎಂದ ಅಮಿತ್ ಶಾ

ನಾಗಾಲ್ಯಾಂಡ್‌: ಮುಂದಿನ 3 ವರ್ಷಗಳಲ್ಲಿ AFSPA ತೆಗೆಯುತ್ತೇವೆ ಎಂದ ಅಮಿತ್ ಶಾ

- Advertisement -
- Advertisement -

ಮುಂದಿನ ಮೂರ್ನಾಲ್ಕು ವರ್ಷಗಳಲ್ಲಿ ನಾಗಾಲ್ಯಾಂಡ್‌ನಾದ್ಯಂತ ವಿವಾದಾತ್ಮಕ ಸಶಸ್ತ್ರ ಪಡೆಗಳ ವಿಶೇಷ ಅಧಿಕಾರ ಕಾಯ್ದೆಯನ್ನು (AFSPA) ತೆಗೆದುಹಾಕಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಮಂಗಳವಾರ ಹೇಳಿದ್ದಾರೆ.

ನಾಗಾಲ್ಯಾಂಡ್‌ನ ಈಶಾನ್ಯ ಭಾಗದ ತುಯೆನ್‌ಸಾಂಗ್‌ನಲ್ಲಿ ಚುನಾವಣಾ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಅಮಿತ್ ಶಾ, ಪೂರ್ವ ನಾಗಾಲ್ಯಾಂಡ್‌ನ ಅಭಿವೃದ್ಧಿ ಮತ್ತು ಹಕ್ಕುಗಳಿಗೆ ಸಂಬಂಧಿಸಿದಂತೆ ಕೆಲವು ಸಮಸ್ಯೆಗಳಿದ್ದು, ಚುನಾವಣೆಯ ನಂತರ ಅವುಗಳನ್ನು ಪರಿಹರಿಸಲಾಗುವುದು ಎಂದು ಅವರು ಹೇಳಿದ್ದಾರೆ. ಈಶಾನ್ಯ ರಾಜ್ಯದಲ್ಲಿ ಶಾಶ್ವತ ಶಾಂತಿಯನ್ನು ತರಲು ಪ್ರಧಾನಿ ನರೇಂದ್ರ ಮೋದಿ ಅವರು ಕೈಗೊಂಡ ಕ್ರಮಗಳು ಮುಂದಿನ ದಿನಗಳಲ್ಲಿ ಫಲ ನೀಡಲಿವೆ ಎಂದರು.

ಇದನ್ನೂ ಓದಿ: ಬಿಜೆಪಿ ದೇಶಕ್ಕೆ ವಿನಾಶಕಾರಿ ಶಕ್ತಿ: ಅಮಿತ್ ಶಾಗೆ ಪಿಣರಾಯಿ ವಿಜಯನ್ ತಿರುಗೇಟು

ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದ ಈಶಾನ್ಯ ಪ್ರದೇಶದಲ್ಲಿ ನಡೆಯುತ್ತಿದ್ದ ಹಿಂಸಾತ್ಮಕ ಘಟನೆಗಳಲ್ಲಿ ಶೇಕಡಾ 70ರಷ್ಟು ಇಳಿಕೆಯಾಗಿದೆ. ಭದ್ರತಾ ಪಡೆಗಳ ಸಾವಿನ ಸಂಖ್ಯೆಯೂ ಶೇಕಡಾ 60ರಷ್ಟು ಇಳಿಕೆಯಾಗಿದೆ. ಅದೇ ರೀತಿ ನಾಗರಿಕರ ಸಾವಿನ ಸಂಖ್ಯೆಯಲ್ಲೂ ಶೇಕಡಾ 83 ರಷ್ಟು ಕಡಿಮೆಯಾಗಿವೆ ಎಂದು ಗೃಹ ಸಚಿವರು ಹೇಳಿದ್ದಾರೆ.

ಏಪ್ರಿಲ್ 2022 ರಲ್ಲಿ, ಅಸ್ಸಾಂ, ನಾಗಾಲ್ಯಾಂಡ್ ಮತ್ತು ಮಣಿಪುರದಾದ್ಯಂತ ಹಲವಾರು ಜಿಲ್ಲೆಗಳಿಂದ AFSPA ಹಿಂತೆಗೆದುಕೊಳ್ಳುವಿಕೆಯನ್ನು ಶಾ ಘೋಷಿಸಿದ್ದರು. ಈ ಕ್ರಮವು “ಸುಧಾರಿತ ಭದ್ರತಾ ಪರಿಸ್ಥಿತಿಯ ಫಲಿತಾಂಶವಾಗಿದೆ. ಈಶಾನ್ಯದಲ್ಲಿ ದಂಗೆಯನ್ನು ಕೊನೆಗೊಳಿಸಿ ಶಾಶ್ವತ ಶಾಂತಿಯನ್ನು ತರಲು ಪ್ರಯತ್ನಗಳು ಮತ್ತು ಹಲವಾರು ಒಪ್ಪಂದಗಳು ನಡೆದಿವೆ. ಅದೇ ಕಾರಣಕ್ಕೆ ವೇಗದ ಅಭಿವೃದ್ಧಿಯಾಗಿದೆ ಎಂದು ಹೇಳಿದರು..

ನಾಗಾಲ್ಯಾಂಡ್‌ನಲ್ಲಿ ಫೆಬ್ರವರಿ 27ರಂದು ಚುನಾವಣಾ ಮತದಾನ ನಡೆಯಲಿದ್ದು, ಮಾರ್ಚ್ 2ರಂದು ಮತ ಎಣಿಕೆ ನಡೆಯಲಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೈಂಗಿಕ ದೌರ್ಜನ್ಯ ಪ್ರಕರಣ : ರೇವಣ್ಣ, ಪ್ರಜ್ವಲ್‌ಗೆ ಎಸ್‌ಐಟಿ ನೋಟಿಸ್

0
ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆಗೆ ಹಾಜರಾಗಲು ಆರೋಪಿಗಳಾದ ಹೆಚ್‌.ಡಿ ರೇವಣ್ಣ ಹಾಗೂ ಪ್ರಜ್ವಲ್ ರೇವಣ್ಣಗೆ ಎಸ್ಐಟಿ ಅಧಿಕಾರಿಗಳು ಇಂದು (ಏ.30) ನೋಟಿಸ್ ಜಾರಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಹಾಸನದ ಹೊಳೆನರಸೀಪುರ ನಗರ...