Homeಮುಖಪುಟಗೋವಾ ಕರಾವಳಿಯಲ್ಲಿ ಮಿಗ್‌‌ 29K ಯುದ್ಧ ವಿಮಾನ ಪತನ

ಗೋವಾ ಕರಾವಳಿಯಲ್ಲಿ ಮಿಗ್‌‌ 29K ಯುದ್ಧ ವಿಮಾನ ಪತನ

- Advertisement -
- Advertisement -

ಭಾರತೀಯ ನೌಕಾಪಡೆಯ ಮಿಗ್‌‌ 29K ಫೈಟರ್ ಜೆಟ್ ತಾಂತ್ರಿಕ ದೋಷದಿಂದ ಬುಧವಾರ ಬೆಳಿಗ್ಗೆ ಗೋವಾ ಕರಾವಳಿಯಲ್ಲಿ ಪತನಗೊಂಡಿದೆ. ಪೈಲಟ್ ಸುರಕ್ಷಿತವಾಗಿ ಹೊರಬಿದ್ದಿದ್ದಾರೆ ಎಂದು ನೌಕಾಪಡೆ ತಿಳಿಸಿದೆ. ಘಟನೆಯ ಕುರಿತು ತನಿಖೆ ನಡೆಸುವಂತೆ ನೌಕಾಪಡೆಯ ಪ್ರಧಾನ ಕಛೇರಿಯು ತನಿಖಾ ಮಂಡಳಿಗೆ (BoI) ಆದೇಶಿಸಿದೆ.

“ಗೋವಾ ಸಮುದ್ರದ ಮೇಲೆ ದಿನನಿತ್ಯದ ಹಾರಾಟದಲ್ಲಿ ಮಿಗ್ 29K ಬೇಸ್‌ಗೆ ಹಿಂತಿರುಗುವಾಗ ತಾಂತ್ರಿಕ ದೋಷ ಕಾಣಿಸಿಕೊಂಡಿದೆ. ಈ ವೇಳೆ ಪೈಲಟ್ ಸುರಕ್ಷಿತವಾಗಿ ಹೊರ ಬಿದ್ದಿದ್ದು, ತ್ವರಿತ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯಿಂದ ಚೇತರಿಸಿಕೊಂಡಿದ್ದಾರೆ” ಎಂದು ನೌಕಾಪಡೆ ತನ್ನ ಸಂಕ್ಷಿಪ್ತ ಹೇಳಿಕೆಯಲ್ಲಿ ತಿಳಿಸಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

“ಪೈಲಟ್ ಸ್ಥಿತಿ ಸ್ಥಿರವಾಗಿದೆ ಎಂದು ವರದಿಯಾಗಿದೆ. ಘಟನೆಗೆ ಕಾರಣವನ್ನು ತನಿಖೆ ಮಾಡಲು ತನಿಖಾ ಮಂಡಳಿಗೆ (BoI) ಆದೇಶಿಸಲಾಗಿದೆ” ಎಂದು ಅದು ಹೇಳಿದೆ.

ಇದನ್ನೂ ಓದಿ: ನೇಪಾಳ: ನಾಲ್ವರು ಭಾರತೀಯರು ಸೇರಿದಂತೆ 22 ಜನರಿದ್ದ ವಿಮಾನ ಪತನ

ಮಿಗ್‌ 29K ರಷ್ಯಾದ ಏರೋಸ್ಪೇಸ್ ಕಂಪನಿಯಾದ ಮಿಕೊಯಾನ್ (MiG) ಅಭಿವೃದ್ಧಿಪಡಿಸಿದ ಎಲ್ಲಾ ಹವಾಮಾನ ವಾಹಕ ಆಧಾರಿತ ಮಲ್ಟಿರೋಲ್ ಫೈಟರ್ ವಿಮಾನವಾಗಿದೆ. ಭಾರತೀಯ ನೌಕಾಪಡೆಯು ಐಎನ್‌ಎಸ್‌ ವಿಕ್ರಮಾದಿತ್ಯದಿಂದ ಕಾರ್ಯನಿರ್ವಹಿಸಲು ಸುಮಾರು 100 ಕೋಟಿ ರೂ. ವೆಚ್ಚದಲ್ಲಿ ಒಂದು ದಶಕದ ಹಿಂದೆ ರಷ್ಯಾದಿಂದ 45 ಮಿಗ್‌‌-29K ಗಳನ್ನು ಖರೀದಿಸಿತ್ತು.

2020ರ ನವೆಂಬರ್‌ನಲ್ಲಿ ನೌಕಾಪಡೆಯ ಮಿಗ್‌‌ 29K ವಿಮಾನವು ವಿಮಾನ ವಾಹಕ ನೌಕೆ ಐಎನ್‌ಎಸ್‌ ವಿಕ್ರಮಾದಿತ್ಯದಿಂದ ಟೇಕಾಫ್ ಆದ ನಂತರ ಗೋವಾ ಕರಾವಳಿಯ ಅರಬ್ಬಿ ಸಮುದ್ರಕ್ಕೆ ಪತನಗೊಂಡಿತು.

2019 ರ ನವೆಂಬರ್‌ನಲ್ಲಿ ಕೂಡಾ ದಕ್ಷಿಣ ಗೋವಾ ಜಿಲ್ಲೆಯಲ್ಲಿ ಮಿಗ್‌ 29K ಯ ಅವಳಿ ಆಸನದ ಯುದ್ಧ ವಿಮಾನವು ಪತನಗೊಂಡಿತ್ತು. ಈ ವೇಳೆ ಇಬ್ಬರೂ ಪೈಲಟ್‌ಗಳು ಸುರಕ್ಷಿತವಾಗಿ ಹೊರಬಿದ್ದಿದ್ದರು.

ಇದನ್ನೂ ಓದಿ: ರಾಜಸ್ಥಾನ: ವಾಯುಪಡೆಯ ಫೈಟರ್ ಜೆಟ್ ಪತನ; ಇಬ್ಬರು ಯೋಧರು ಮೃತ

ಮತ್ತೊಂದು ಮಿಗ್‌ 29K 2020ರ ಫೆಬ್ರವರಿ 23 ರಂದು ಗೋವಾದ ವಾಸ್ಕೋದಲ್ಲಿನ ಪ್ರಮುಖ ನೌಕಾ ವಾಯು ನಿಲ್ದಾಣವಾದ ಐಎನ್‌ಎಸ್‌‌ ಹಂಸಾದಿಂದ ಟೇಕ್ ಆಫ್ ಆದ ನಂತರ ಗೋವಾ ಕರಾವಳಿಯಲ್ಲಿ ಅರಬ್ಬಿ ಸಮುದ್ರಕ್ಕೆ ಅಪ್ಪಳಿಸಿತ್ತು. ಈ ವೇಳೆ ಕೂಡಾ ವಿಮಾನದ ಪೈಲಟ್‌ ಸುರಕ್ಷಿತವಾಗಿ ಹೊರಬೀಳುವಲ್ಲಿ ಯಶಸ್ವಿಯಾಗಿದ್ದರು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ಹೆಚ್‌.ಡಿ ರೇವಣ್ಣ ನಾಲ್ಕು ದಿನ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಎನ್ನಲಾದ ಮನೆ ಕೆಲಸದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು  ನಾಲ್ಕು ದಿನಗಳ ಕಾಲ ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ನೀಡಿ...