Homeಮುಖಪುಟರಾಜಸ್ಥಾನ: ವಾಯುಪಡೆಯ ಫೈಟರ್ ಜೆಟ್ ಪತನ; ಇಬ್ಬರು ಯೋಧರು ಮೃತ

ರಾಜಸ್ಥಾನ: ವಾಯುಪಡೆಯ ಫೈಟರ್ ಜೆಟ್ ಪತನ; ಇಬ್ಬರು ಯೋಧರು ಮೃತ

- Advertisement -
- Advertisement -

ರಾಜಸ್ಥಾನದ ಬಾರ್ಮರ್ ನಗರದಲ್ಲಿ ಗುರುವಾರದಂದು ತರಬೇತಿ ವಿಮಾನ ‘ಮಿಗ್-21’ ಪತನಗೊಂಡಿದ್ದು, ಭಾರತೀಯ ವಾಯುಪಡೆಯ ಇಬ್ಬರು ಪೈಲಟ್‌ಗಳು ಸಾವನ್ನಪ್ಪಿದ್ದಾರೆ. ಬಾರ್ಮರ್ ಜಿಲ್ಲೆಯ ಭೀಮ್ಡಾ ಗ್ರಾಮದಲ್ಲಿ ಅರ್ಧ ಕಿಲೋಮೀಟರ್ ವ್ಯಾಪ್ತಿಯಲ್ಲಿ ವಿಮಾನದ ಅವಶೇಷಗಳು ಚದುರಿ ಬಿದ್ದಿವೆ.

ದುರದೃಷ್ಟಕರ ಘಟನೆಯಲ್ಲಿ ಅವಳಿ-ಆಸನದ Mig-21 ತರಬೇತುದಾರ ವಿಮಾನವು ರಾತ್ರಿ ತರಬೇತಿಗಾಗಿ ಟೇಕ್ ಆಫ್ ಆಗಿತ್ತು. ಇದು ಹಾರಾಟದ ನಡುವೆ ಬೆಂಕಿ ಕಾಣಿಸಿಕೊಂಡು ನೆಲಕ್ಕೆ ಅಪ್ಪಳಿಸಿದೆ. ಈ ವೇಳೆ ಪೈಲಟ್‌ಗಳು ಹೊರಹಾಕಲು ಆಗಲಿಲ್ಲ ಎಂದು ತಿಳಿದು ಬಂದಿದೆ. ಗುರುವಾರ ರಾತ್ರಿ 9.10ಕ್ಕೆ ಅಪಘಾತ ಸಂಭವಿಸಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

“ಐಎಎಫ್‌ನ ಅವಳಿ ಆಸನಗಳ ಮಿಗ್-21 ತರಬೇತುದಾರ ವಿಮಾನವು ಇಂದು ಸಂಜೆ ರಾಜಸ್ಥಾನದ ಉತರ್ಲೈ ವಾಯುನೆಲೆಯಿಂದ ತರಬೇತಿಗಾಗಿ ಆಕಾಶಕ್ಕೇರಿತ್ತು. ರಾತ್ರಿ 9:10 ರ ಸುಮಾರಿಗೆ ಬಾರ್ಮರ್ ಬಳಿ ವಿಮಾನ ಅಪಘಾತಕ್ಕೀಡಾಯಿತು. ಇಬ್ಬರೂ ಪೈಲಟ್‌ಗಳಿಗೆ ಮಾರಣಾಂತಿಕ ಗಾಯಗಳಾಗಿವೆ. ವಾಯುಪಡೆಯು ಯೋಧರ ಜೀವಹಾನಿಗೆ ತೀವ್ರವಾಗಿ ವಿಷಾದಿಸುತ್ತದೆ ಮತ್ತು ದುಃಖಿತ ಕುಟುಂಬಗಳೊಂದಿಗೆ ದೃಢವಾಗಿ ನಿಲ್ಲುತ್ತದೆ” ಎಂದು ವಾಯುಪಡೆ ಹೇಳಿದೆ.

ಅಪಘಾತದ ಕಾರಣವನ್ನು ತನಿಖೆ ಮಾಡಲು ತನಿಖಾ ನ್ಯಾಯಾಲಯಕ್ಕೆ ಆದೇಶಿಸಲಾಗಿದೆ ಎಂದು ಪಡೆ ಹೇಳಿದೆ.

ಅಪಘಾತದ ನಂತರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಏರ್ ಚೀಫ್ ಮಾರ್ಷಲ್ ವಿಆರ್ ಚೌಧರಿ ಅವರೊಂದಿಗೆ ಮಾತನಾಡಿದ್ದಾರೆ. “ರಾಜಸ್ಥಾನದ ಬಾರ್ಮರ್ ಬಳಿ ಐಎಎಫ್‌ನ ಮಿಗ್ -21 ತರಬೇತುದಾರ ವಿಮಾನ ಅಪಘಾತದಿಂದಾಗಿ ಇಬ್ಬರು ಏರ್ ವಾರಿಯರ್‌ಗಳನ್ನು ಕಳೆದುಕೊಂಡಿದ್ದು ತೀವ್ರ ದುಃಖಕರವಾಗಿದೆ” ಎಂದು ರಾಜನಾಥ್‌ ಸಿಂಗ್ ಟ್ವಿಟರ್‌ನಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: ಗುಜರಾತ್‌ನಲ್ಲಿ ಕಳ್ಳಭಟ್ಟಿ ಮದ್ಯ ಕುಡಿದು 36 ಸಾವು: ಅಕ್ರಮ ದಂಧೆ ವಿರುದ್ಧ ರಾಹುಲ್ ಗಾಂಧಿ ಆಕ್ರೋಶ

“ದೇಶಕ್ಕೆ ಅವರ ಸೇವೆಯನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಈ ದುಃಖದ ಸಮಯದಲ್ಲಿ ನಾನು ಯೋಧರ ಕುಟುಂಬಕ್ಕೆ ಸಂತಾಪ ವ್ಯಕ್ತಪಡಿಸುತ್ತೇನೆ” ಎಂದು ಅವರು ಹೇಳಿದ್ದಾರೆ.

MiG-21 ಸೋವಿಯತ್ ರಷ್ಯಾಕಾಲದ ಏಕ ಎಂಜಿನ್ ಮಲ್ಟಿರೋಲ್ ಫೈಟರ್/ಗ್ರೌಂಡ್ ಅಟ್ಯಾಕ್ ಏರ್‌ಕ್ರಾಫ್ಟ್ ಆಗಿದೆ. ಈ ಹಿಂದೆ ಅದು ದೇಶದ ವಾಯುಪಡೆಯ ಬೆನ್ನೆಲುಬಾಗಿತ್ತು.

ವಿಮಾನವು ಕಳಪೆ ಸುರಕ್ಷತಾ ದಾಖಲೆಯನ್ನು ಹೊಂದಿದ್ದು, ಮುಂದಿನ ದಶಕದಿಂದ ಈ ವಿಮಾನಗಳನ್ನು ಸೇವೆಯಿಂದ ಹಿಂತೆಗೆದುಕೊಳ್ಳುವ ನಿರೀಕ್ಷೆಯಿದೆ. ಆ ವೇಳೆ ವಿಮಾನ ಹೆಚ್ಚು ಆಧುನಿಕ ಪ್ರಕಾರಗಳೊಂದಿಗೆ ಬದಲಾಯಿಸಲಾಗುತ್ತದೆ.

2021 ರಲ್ಲಿ ಐದು ಮಿಗ್ -21 ವಿಮಾನಗಳು ಭಾರತದಲ್ಲಿ ಪತನಗೊಂಡಿವೆ. ಇದರ ಪರಿಣಾಮವಾಗಿ ಮೂವರು ಪೈಲಟ್‌ಗಳು ಸಾವನ್ನಪ್ಪಿದ್ದಾರೆ. ಕಳೆದ ವರ್ಷ ಡಿಸೆಂಬರ್‌ನಲ್ಲಿ ವಾಯುವಪಡೆ ಪೈಲಟ್ವಿಂ ಗ್ ಕಮಾಂಡರ್ ಹರ್ಷಿತ್ ಸಿನ್ಹಾ ಅವರು ಮಿಗ್ -21 ಯುದ್ಧ ವಿಮಾನ ರಾಜಸ್ಥಾನದ ಜೈಸಲ್ಮೇರ್‌ನಲ್ಲಿ ತರಬೇತಿಯ ಸಮಯದಲ್ಲಿ ಪತನಗೊಂಡ ನಂತರ ಸಾವನ್ನಪ್ಪಿದ್ದರು.

ಇದನ್ನೂ ಓದಿ: ‘ಕ್ರಿಯೆಗೆ ಪ್ರತಿಕ್ರಿಯೆ ಎಂದು ಹೊರಟರೆ ಕರಾವಳಿ ತಾಲಿಬಾನ್ ಆಗಲ್ವಾ?’

ಆಗಸ್ಟ್‌ನಲ್ಲಿ, ಮತ್ತೊಂದು MiG-21 ಫೈಟರ್ ಜೆಟ್, ತರಬೇತಿ ಪಥದಲ್ಲಿ ರಾಜಸ್ಥಾನದ ಬಾರ್ಮರ್ ಜಿಲ್ಲೆಯ ಹಳ್ಳಿಯೊಂದರ ಬಳಿ ಪತನಗೊಂಡಿತು. ಆದರೆ, ಪೈಲಟ್ ಸುರಕ್ಷಿತವಾಗಿ ಹೊರ ಹಾರುವಲ್ಲಿ ಯಶಸ್ವಿಯಾಗಿದ್ದರು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿಯವರ ಹಲವಾರು ಹೇಳಿಕೆಗಳಿಂದ ಮಾದರಿ ನೀತಿ ಸಂಹಿತೆ ಉಲ್ಲಂಘನೆ: ಸೀತಾರಾಂ ಯೆಚೂರಿ

0
'ದೇಶದ ವಿವಿಧ ಭಾಗಗಳಲ್ಲಿ ತಮ್ಮ ಲೋಕಸಭಾ ಚುನಾವಣಾ ಪ್ರಚಾರದ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ಮಾದರಿ ನೀತಿ ಸಂಹಿತೆ ಉಲ್ಲಂಘಿಸುವ ಹೇಳಿಕೆಗಳನ್ನು ನೀಡಿದ್ದಾರೆ' ಎಂದು ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ...