Homeಮುಖಪುಟಕಂಗಾಲು ಮೋದಿಯ ಕಳಾ ವೃದ್ಧಿಗೆ ನಮೋ ಯಜ್ಞ

ಕಂಗಾಲು ಮೋದಿಯ ಕಳಾ ವೃದ್ಧಿಗೆ ನಮೋ ಯಜ್ಞ

- Advertisement -
- Advertisement -

ಶುದ್ಧೋದನ |

ಸಂಘಪರಿವಾರದಲ್ಲಿ ಶುರುವಿಟ್ಟುಕೊಂಡಿರುವ ನಡುಕ ದಿನಗಳೆದಂತೆ ಜೋರಾಗುತ್ತದೆ. ಹಿಂದಿ ಹೃದಯ ಭೂಮಿಯ ಅಸೆಂಬ್ಲಿ ಚುನಾವಣೆಗಳಲ್ಲಿ ಬಿಜೆಪಿ ಮಕಾಡೆ ಮಲಗುತ್ತಿದ್ದಂತೆಯೇ ಮೋದಿ ಮಹಾತ್ಮನ ಮಂಕುಬೂದಿ ಕಳೆ ಕಳೆದುಕೊಂಡಿರುವ ಭೀತಿ ಸಂಘ ಪರಿವಾರವನ್ನು ಆವರಿಸಿಬಿಟ್ಟಿದೆ. ಹಿಂದುತ್ವದ ಹಿಡನ್ ಅಜೆಂಡಾಗಳನ್ನೆಲ್ಲ ಜಾರಿಗೊಳಿಸಲು ಮೋದಿಯಂಥ “ಬದಲಿ ಶೂದ್ರ” ಸದ್ಯಕ್ಕಂತೂ ಆರೆಸೆಸ್-ವಿಎಚ್‍ಪಿ ಬಳಗಕ್ಕೆ ಸಿಗುವಹಾಗಿಲ್ಲ. ಹಾಗಾಗಿ ಹೇಗಾದರೂ ಮಾಡಿ ಸುಳ್ಳುಗಳಿಗೆ ಕಲಾತ್ಮಕವಾಗಿ ಹೂಳಪು ಕೊಡಲು ಚೆಡ್ಡಿ-ಕಾವಿ ತಂಡ ತರಹೇವಾರಿ ಮಸಲತ್ತು ಮಾಡಲಾರಂಭಿಸಿದೆ.
ರೈತರು, ಕಾರ್ಮಿಕರು, ನಿರುದ್ಯೋಗಿ ಯುವಕರು, ಅಮಾಯಕ ಮಹಿಳೆಯರಿಗೆಲ್ಲ ನಿರಂತರ ಮೋಸ, ವಂಚನೆ ಮಾಡುತ್ತ ದೇಶದ ನೆಮ್ಮದಿ ಕೆಡಿಸಿದ ಪಾಪಕ್ಕೆ ಫಲವಾಗಿ ಅಧಃಪತನದ ಅಂಚಿಗೆ ಬಂದು ನಿಂತಿರುವ ಬಿಜೆಪಿ ಮನುವಾದಿಗಳೀಗ ಮೋದಿ ಕಳಾ ವೃದ್ಧಿಗೆ ಯಜ್ಞದ ಮೊರೆ ಹೋಗಿದ್ದಾರೆ. ಮೌಢ್ಯ ತುಂಬುವ ಹೋಮ-ಹವನ, ಯಜ್ಞ-ಯಾಗ, ಮಡಿ-ಮೈಲಿಗೆ, ಮೋಸ-ಸುಳ್ಳುಗಳ ಪೇಟೆಂಟ್ ಸಂಘಪರಿವಾರ ಪಡೆದುಕೊಂಡು ಅದ್ಯಾವುದೋ ಕಾಲವಾಗಿಹೋಗಿದೆ! ಆದರೆ ಈ ಆನಾಹುತಕಾರಿ ತಂತ್ರಗಳೇ ಸಂಘ ಪರಿವಾರದ ಕೈಗೊಂಬೆ ಮೋದಿಗೆ ತಿರುಗುಬಾಣ ಆಗುತ್ತಿವೆ. ಧನಾತ್ಮಕವಾಗಿ ಜನರ ಮನಸ್ಸು ಗೆಲ್ಲಲಾಗದ ಮೋದಿ ಶಿಷ್ಯಸಂಕುಲ, ಮತ್ತದೇ ವಾಮಮಾರ್ಗಕ್ಕೆ ಬಿದ್ದಿದೆ. ಯಜ್ಞ-ತಂತ್ರದಿಂದ ಜನರ ಮರುಳುಗೊಳಿಸಿ ಆಸ್ತಿತ್ವ ಉಳಿಸಿಕೊಳ್ಳಲು ತಿಣುಕಾಡುತ್ತಿದೆ.
ಲೋಕಸಭಾ ಚುನಾವಣೆ ಎದುರಾಗಿರುವ ಈ ಯುದ್ಧಕಾಲದಲ್ಲಿ ಸೇನಾಧಿಪತಿಯೇ ಕಾಲು ಮುರಿದುಕೊಂಡು ಕೂತಂತಾಗಿದೆ ಬಿಜೆಪಿ ಪರಿಸ್ಥಿತಿ. ಹುಸಿ ವೀರಾವೇಷದ ಭಾಷಣ ಎರಚುವ ಮೋದಿಯ ಮನಮುರಕು ಮಾತುಗಳನ್ನು ಕೇಳುವ ಸ್ಥಿತಿಯಲ್ಲೀಗ ಜನರಿಲ್ಲ ಎಂಬುವುದು ಪರಿವಾರ ಪುರೋಹಿತರಿಗೆ ಪಕ್ಕಾ ಆಗಿದೆ. ರಾಮಮಂದಿರ-ಹಿಂದೂತ್ವದ ಶಾರ್ಟ್‍ಕಟ್ ದಾರಿಯಲ್ಲಿ ದಿಲ್ಲಿ ಸಿಂಹಾಸನ ತಲುಪಿದ್ದ ಮೋದಿಗೆ ಪ್ರಧಾನಿಯಾಗಿ ನಾಲ್ಕುವರೆ ವರ್ಷ ಕಳೆದರೂ ಅಯೋಧ್ಯೆ, ರಾಮಮಂದಿರ ನೆನಪಾಗಲೇ ಇಲ್ಲ. ಕಟ್ಟರ್ ಹಿಂದೂತ್ವದ ಹುಡುಗರಿಗೂ ಅಯೋಧ್ಯೆಯ ರಾಮಮಂದಿರ ಅನ್ನೋದು, ಬಿಜೆಪಿಯು ಎಲೆಕ್ಷನ್ ಗೆಲುವಿನ ಸಲುವಾಗಿ ಹುಟ್ಟುಹಾಕುವ ಅತಿದೊಡ್ಡ ವಂಚನೆ ಅನ್ನೋದು ನಿಸ್ಸಂಶಯವಾಗಿ ಅರ್ಥವಾಗಿಬಿಟ್ಟಿದೆ! ಆ ಕಾರಣಕ್ಕೇ 1992ರಲ್ಲಿ ಬಾಬ್ರಿ ಮಸೀದಿ ಧ್ವಂಸವಾದಾಗ ಹೊತ್ತಿ ಉರಿದಿದ್ದ ಮಧ್ಯಪ್ರದೇಶ, ರಾಜಸ್ಥಾನದಂತಹ ಉತ್ತರ ಭಾರತದ ಹಿಂದಿ ಹಾರ್ಟ್‍ಲ್ಯಾಂಡ್‍ಗಳಲ್ಲೇ ಕೇಸರಿ ಸಾಧುಗಳ ರಾಮಮಂದಿರ ಜನಾಗ್ರಹ ಸಮಾವೇಶಗಳು ಬಿಜೆಪಿಗೆ ಮತ ತಂದುಕೊಡುವಲ್ಲಿ ಸಂಪೂರ್ಣವಾಗಿ ಸೋತುಹೋಗಿವೆ.
ದೇಶದ ಬೆನ್ನೆಲುಬಾದ ರೈತರು ಬೆಳೆದ ಬೆಳೆಗೆ ಬೆಲೆ ಸಿಗದೆ ಆತ್ಮಹತ್ಯೆ ದಾರಿ ಹಿಡಿದಿದ್ದರೆ, ವರ್ಷಕ್ಕೆ 1 ಕೋಟಿ ಉದ್ಯೋಗ ಸೃಷ್ಟಿ ಮಾಡ್ತೀನಿ ಅಂದಿದ್ದ ಮೋದಿ ಇರೋ ಉದ್ಯೋಗಗಳನ್ನೇ ನಾಶ ಮಾಡುವ ಕೆಲಸಕ್ಕೆ ಹೈಹಾಕಿದ್ದಾರೆ. ಬ್ಯಾಂಕ್ ರಾಷ್ಟ್ರೀಕರಣದಿಂದ ಜನಮನ ಗೆದ್ದಿದ್ದ ಇಂದಿರಾ ಗಾಂಧಿಯಂತೆ ನೋಟ್ ಬ್ಯಾನ್ ಮಾಡಲು ಹೋಗಿ ಮೋದಿ ಇಡೀ ದೇಶದ ಆರ್ಥಿಕತೆಯೇ ಮುಗ್ಗರಿಸಿ ಬೀಳುವಂತೆ ಮಾಡಿದ್ದಾರೆ. ಕಪ್ಪುಹಣವನ್ನೂ ತರದೆ, ಪ್ರತಿ ಅಕೌಂಟಿಗೆ ಹದಿನೈದು ಲಕ್ಷವನ್ನೂ ಡೆಪಾಸಿಟ್ ಮಾಡದ ಮೋದಿಯ ವರ್ಚಸ್ಸೀಗ ಸಂಪೂರ್ಣ ಕುಸಿದುಬಿದ್ದಿದೆ. ಸಾಲದ್ದಕ್ಕೆ ಅಂಬಾನಿ-ಅದಾನಿಗಳ ಖಜಾನೆ ಹಿಗ್ಗಿಸಲು ಹೋಗಿ ರಫೇಲ್ ಭಾನ್ಗಡಿಯಲ್ಲಿ ಮೋದಿ ಮುಸುಡಿಯನ್ನೇ ಸಿಗಾಕಿಕೊಂಡು ಕೂತು ದೇಶದ ಮುಂದೆ ಬೆತ್ತಲಾಗಿದ್ದಾರೆ. ಮೊನ್ನೆ ನಡೆದ ಪಂಚರಾಜ್ಯ ಫಲಿತಾಂಶಗಳೇ ಇದಕ್ಕೆ ಸಾಕ್ಷಿ.
ಇಂಥಾ ಯಡವಟ್ಟುಗಳನ್ನು ಸರಿ ಮಾಡಿಕೊಂಡು ಜನರ ಮನಸ್ಸನ್ನು ಗೆಲ್ಲೋದು ಬಿಟ್ಟು, ಮೋದಿಯ ಪರಿವಾರದ ಪಟಾಲಮ್ಮು ಯಜ್ಞ, ಯಾಗ ಮಾಡಿ ವರ್ಚಸ್ಸು ವೃದ್ಧಿಗೆ ಕೈಹಾಕಿದೆ! ಆ ಮೂಲಕ ತಮ್ಮ ಹಾದಿಯೇನಿದ್ದರೂ ಪ್ರಗತಿಯತ್ತಲ್ಲ, ಹಳೇ ಶಿಲಾಯುಗದತ್ತ ಅನ್ನೋದನ್ನು ತಾನೇ ಸಾಬೀತು ಮಾಡಿಕೊಂಡಿದೆ. ಬಿಜೆಪಿಯ ಈ ಶಿಲಾಯುಗದ ನಿದರ್ಶನ ಇದೇ ಮೊದಲೇನಲ್ಲ. ಇತ್ತೀಚೆಗಷ್ಟೇ ಗೋವಾ ಬಿಜೆಪಿ ಸರ್ಕಾರದ ಕೃಷಿ ಇಲಾಖೆ ವೇದ-ಮಂತ್ರ ಪಠಣದಿಂದ ರೈತರು ಬಂಪರ್ ಬೆಳೆ ತೆಗೆದು ಸುಖವಾಗಿ ಇರಬಹುದೆಂದು ಅಧೀಕೃತವಾಗೇ ಘೋಷಿಸಿದ್ದು ಓದುಗರಿಗೆ ನೆನಪಿರಬಹುದು.
ಟೀಮ್ ಮೋದಿ ತನ್ನ ಕಫ್ತಾನನ ವೈಫಲ್ಯಗಳನ್ನು ಮುಚ್ಚಿಹಾಕುವ ಸಲುವಾಗಿ ಮೌಢ್ಯದ ಯಜ್ಞ-ಮಂತ್ರ-ವೇದಗಳ ಮೊರೆಹೋಗಿರೋದನ್ನು ಕಂಡು ಜನ ನಗಾಡುತ್ತಿದ್ದಾರೆ. ದಕ್ಷಿಣ ಕನ್ನಡದ ಬದಿಯಡ್ಕ ಬಳಿಯ ಮಾನ್ಯ ಸಮೀಪದ ಮೇಗಿನಡ್ಕ ಎಂಬಲ್ಲಿ ಮೋದಿಯನ್ನು ಕಂಟಕದಿಂದ ಪಾರು ಮಾಡಲು ಯಜ್ಞ ಒಂದನ್ನು ಇದೇ ಡಿಸೆಂಬರ್ 28 ರಿಂದ 31ರವರೆಗೆ ನಡೆಸಲು ಚೆಡ್ಡಿಗಳು ನಿರ್ಧರಿಸಿದ್ದಾರೆ.
ಕರಾವಳಿಯ ದೇವಸ್ಥಾನಗಳ ಬ್ರಹ್ಮಕಲಶೋತ್ಸವ, ಕಳಾವೃದ್ಧಿ ಧಾರ್ಮಿಕ ದಗಲುಬಾಜಿತನದಿಂದಲೇ ಪ್ರವರ್ಧಮಾನಕ್ಕೆ ಬಂದ ಕಲ್ಲಡ್ಕ ಪ್ರಭಾಕರ ಭಟ್ಟ ಮತ್ತು ಬೆಂಕಿ ಬ್ರಾಂಡಿನ ಸಂಸದ ನಳಿನ್ ಕುಮಾರ್ ಕಟೀಲ್ ಗುರು-ಶಿಷ್ಯರ “ನಮೋ ಯಜ್ಞ” ಎಂಬ ಸರ್ಕಸ್ಸೇ ಈ ಲೇಟೆಸ್ಟ್ ಪ್ರಹಸನ. ನಾಲ್ಕು ದಿನ ನಮೋ, ಜ್ಞಾನ, ಭಕ್ತಿ ಮತ್ತು ಯಕ್ಷ ಯಜ್ಞಗಳೆಂಬ ಚತುರ್ವಿಧ ಹಿಕಮತ್ತಿನ ಮೂಲ ಉದ್ದೇಶ ಮೋದಿಗೆ ಅರ್ಥಾತ್ ಬಿಜೆಪಿಗೆ ಆಗುತ್ತಿರುವ ಡ್ಯಾಮೇಜ್ ಕಂಟ್ರೋಲ್ ಮಾಡೋದು!
ಕಾರ್ಯಕ್ರಮದ ಸಂಘಟಕರೇ ಹೇಳುವ ಹಾಗೆ ಇದೊಂದು ಮೋದಿಗೆ ಶಕ್ತಿ ತುಂಬುವ ಯಾಗ. ಅಲ್ಲಿಗೆ ಮೋದಿ ದುರ್ಬಲಗೊಂಡಿದ್ದಾರೆ ಅನ್ನೋದನ್ನು ಬಿಜೆಪಿಗರೇ ಒಪ್ಪಿಕೊಂಡಂತಾಯ್ತು! ಇಂಥದೊಂದು ಯಜ್ಞ ಮೋದಿಗಿಂತ ಹೆಚ್ಚಾಗಿ ಸೋಲಿನ ಭೀತಿಯಲ್ಲಿರುವ ಲೋಕಲ್ ಸಂಸದ ನಳಿನ್‍ಕುಮಾರ್ ಕಟೀಲ್‍ಗೆ ಬೇಕಾಗಿದೆ. ಪರಮ ಚೆಡ್ಡಿ ಸಾಹಿತಿಗಳಾದ ಎಸ್.ಎಲ್.ಭೈರಪ್ಪ, ಪ್ರಧಾನ್ ಗುರುದತ್ತ ಜತೆ ಸಂವಾದ ಕಾರ್ಯಕ್ರಮ ಹೆಣೆದಿರುವ ಕಲ್ಲಡ್ಕ, ನಳಿನ್‍ರ ಮುಖ್ಯಗುರಿ ಯುವಕರ ದಿಕ್ಕುತಪ್ಪಿಸಿ ಚುನಾವಣೆಗೆ ಅಣಿಯಾಗುವುದು. ಒಂದು ಕಾಲಕ್ಕೆ ಸುಶಿಕ್ಷಿತರ, ಪ್ರಜ್ಞಾವಂತರ ಜಿಲ್ಲೆಯೆಂದೇ ಹೆಸರಾಗಿದ್ದ ದಕ್ಷಿಣ ಕನ್ನಡದ ಮಂದಿ ಈಗ ಇಂಥಾ ಹುಚ್ಚಾಟಗಳಿಗೆ ಸಾಕ್ಷಿಯಾಗಬೇಕಾಗಿ ಬಂದಿರೋದು ದುರಂತ.
ತಮಾಷೆಯೆಂದರೆ, ತೆಲಂಗಾಣದ ಎಲೆಕ್ಷನ್ ಹೊತ್ತಲ್ಲಿ ಪ್ರಧಾನಿ ಮೋದಿಯು ಅಲ್ಲಿನ ಟಿಆರ್‍ಎಸ್ ಪಕ್ಷದ ಅಧಿನಾಯಕ ಕೆಸಿಆರ್‍ಗೆ ಸೋಲಿನ ಭೀತಿ ಆವರಿಸಿರೋದರಿಂದ ಜ್ಯೋತಿಷಿಗಳ ಮಾತುಕೇಳಿಕೊಂಡು ಹೋಮ-ಹವನ-ಪೂಜೆ ಮಾಡಿಸಿಕೊಂಡು ತಿರುಗಾಡುತ್ತಿದ್ದಾರೆಂದು ಗೇಲಿ ಮಾಡಿದ್ದುಂಟು!! ಈಗ ಮೋದಿ ಭಕ್ತರು ಅದೇ ಹಾದಿಯಲ್ಲಿದ್ದಾರೆ. ಅಂದಹಾಗೆ, ಎಲ್ಲರನ್ನೂ ಎಲ್ಲ ಕಾಲಕ್ಕೂ ಮೂರ್ಖರನ್ನಾಗಿ ಮಾಡಲು ಸಾಧ್ಯವಾ?
ಅಂತೂ ತಮ್ಮ ಪತನ ಪ್ರಾರಂಭವಾಗಿದೆ ಅನ್ನೋದನ್ನು ಮೋದಿ ಪರಿವಾರವೇ ಈ ಯಜ್ಞದ ಮೂಲಕ ಒಪ್ಪಿಕೊಂಡಂತಾಗಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

31 ವರ್ಷಗಳ ಹಳೇ ಸಾಲ ತೀರಿಸಲು 1200 ಕಿ.ಮೀ ಪ್ರಯಾಣಿಸಿದ ಕೇರಳದ ಇಸ್ಮಾಯಿಲ್

"ನನ್ನ ಕಣ್ಣುಗಳಿಂದ ಆನಂದಬಾಷ್ಪಗಳು ಉದುರಿದವು. ನನ್ನ ಮನಸ್ಸಿಗೆ ಅದೆಷ್ಟು ನೆಮ್ಮದಿ ಸಿಕ್ಕಿತೆಂದರೆ, ಅದನ್ನು ವಿವರಿಸಲು ಪದಗಳೇ ಸಾಲದು. ಆತನಿಗೂ ಅಷ್ಟೇ ದೊಡ್ಡ ಸಮಾಧಾನ." ಹೀಗೆ ಭಾವುಕರಾಗಿ ನುಡಿಯುತ್ತಾರೆ ಮೊಹಮ್ಮದ್ ಇಸ್ಮಾಯಿಲ್. 1995ರಲ್ಲಿ ಸೌದಿ...

ಬಂಡಾಯದ ಬಳಿಕ ಟಿಎಂಸಿಗೆ ಮತ್ತೊಂದು ಸವಾಲು : ಪಕ್ಷದ ಬ್ಯಾಂಕ್ ಖಾತೆಗಳು ಫ್ರೀಝ್

ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ಮೂರು ಬ್ಯಾಂಕ್ ಖಾತೆಗಳಲ್ಲಿರುವ 440 ಕೋಟಿ ರೂಪಾಯಿ ಹಣವನ್ನು ಭಾಗಶಃ ಬಳಸಲು ಕಲ್ಕತ್ತಾ ಹೈಕೋರ್ಟ್ ಅನುಮತಿ ನೀಡಿದ ಮರುದಿನವೇ, ಪಶ್ಚಿಮ ಬಂಗಾಳ ಪೊಲೀಸರು...

ಮಂದಿರ ನಿರ್ಮಾಣದ ಕ್ರೆಡಿಟ್‌ಗೆ ಇದ್ದ ಯಜಮಾನಿಕೆ, ಕೊಳ್ಳೆ ಹೊಡೆದಾಗ ಯಾಕಿಲ್ಲ ಸೇವಕರೇ?

ಬಾಲರಾಮನ ಪ್ರಾಣಪ್ರತಿಷ್ಠಾಪನೆಗೆ ಮುನ್ನ ಪ್ರಧಾನಿಯವರು 11 ದಿನಗಳ ಕಾಲ ಕಠಿಣ ಉಪವಾಸ ವ್ರತ ಆಚರಿಸಿದ್ದರು, ಕೇವಲ ಎಳನೀರು ಕುಡಿದರು, ನೆಲದ ಮೇಲೆ ಮಲಗಿದರು ಎಂದು ಇಡೀ ದೇಶಕ್ಕೆ ಸಾರಲಾಗಿತ್ತು. ಅಯೋಧ್ಯೆಯಿಂದ ಹೊಸ ಕಾಲದ...

‘ಫ್ರೀ ಪ್ಯಾಲೆಸ್ತೀನ್’ ಘೋಷಣೆಯನ್ನು ತಮಾಷೆ ಮಾಡಿದ ಸೈಫ್ ಅಲಿ ಖಾನ್ – ನಿರೂಪಕಿ ಅನುಪಮಾ ಚೋಪ್ರಾ

ಸ್ಪ್ಯಾನಿಷ್ ನಟ ಜೇವಿಯರ್ ಬಾರ್ಡೆಮ್ ಅವರ "ಫ್ರೀ ಪ್ಯಾಲೆಸ್ತೀನ್" ಹೇಳಿಕೆ ಕುರಿತು ಸೈಫ್ ಅಲಿ ಖಾನ್ ಮತ್ತು ಚಲನಚಿತ್ರ ಪತ್ರಕರ್ತೆ ಅನುಪಮಾ ಚೋಪ್ರಾ ನಗುತ್ತಿರುವ ಕ್ಲಿಪ್ ಆನ್‌ಲೈನ್‌ನಲ್ಲಿ ವೈರಲ್ ಆಗಿದ್ದು, ನಟನ ಅಸೂಕ್ಷ್ಮ...

ತೆಲಂಗಾಣ : ಪೋಕ್ಸೋ ಪ್ರಕರಣದ ಆರೋಪಿಯಿಂದ ಸಂತ್ರಸ್ತೆ ಸೇರಿ 6 ಜನರ ಹತ್ಯೆ

ಪೋಕ್ಸೋ ಪ್ರಕರಣದ ಆರೋಪಿಯೊಬ್ಬ ಸಂತ್ರಸ್ತೆ ಸೇರಿದಂತೆ ಒಟ್ಟು ಆರು ಜನರನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಶಾಬಾದ್ ಮಂಡಲದಲ್ಲಿ ಶುಕ್ರವಾರ (ಜು.10) ರಾತ್ರಿ ನಡೆದಿದೆ. 28 ವರ್ಷ ವಯಸ್ಸಿನ...

‘ನನ್ನನ್ನು ಮೌನಗೊಳಿಸಲು, ನೀವು ನನ್ನನ್ನು ಕೊಲ್ಲಬೇಕಾಗುತ್ತದೆ’: ಟಿಎಂಸಿ ಬಿಕ್ಕಟ್ಟಿನ ನಡುವೆ ಬಿಜೆಪಿ ವಿರುದ್ಧ ಮಮತಾ ಬ್ಯಾನರ್ಜಿ ಆಕ್ರೋಶ  

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (TMC) ಪಕ್ಷದಲ್ಲಿ ಆಂತರಿಕ ಬಿಕ್ಕಟ್ಟು ತಾರಕಕ್ಕೇರಿರುವ ಬೆನ್ನಲ್ಲೇ, ಪಕ್ಷದ ಸುಪ್ರೀಮೋ ಹಾಗೂ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಇತ್ತೀಚಿನ ತಿಂಗಳುಗಳಲ್ಲೇ ಅತ್ಯಂತ ಪ್ರಬಲವಾದ ರಾಜಕೀಯ...

ಸುಪ್ರೀಂ ಕೋರ್ಟ್‌ನಲ್ಲಿ ಜಡ್ಜ್‌ಗಳನ್ನೇ ‘ನ್ಯಾಯಾಂಗ ಸೇವಕರು’ ಎಂದ ಅರ್ಜಿದರ

ಸುಪ್ರೀಂ ಕೋರ್ಟ್‌ನಲ್ಲಿ ಶುಕ್ರವಾರ ಅತ್ಯಂತ ನಾಟಕೀಯ ಹಾಗೂ ಆಘಾತಕಾರಿ ದೃಶ್ಯವೊಂದು ತೆರೆದುಕೊಂಡಿದೆ. ಪ್ರಕರಣವೊಂದರ ವಿಚಾರಣೆ ವೇಳೆ ಖುದ್ದಾಗಿ ಹಾಜರಾಗಿದ್ದ ಅರ್ಜಿದಾರನೊಬ್ಬ, ಲಕ್ನೋದ ಪೊಲೀಸ್ ಅಧಿಕಾರಿಯೊಬ್ಬರ ವಿರುದ್ಧ ಎಫ್‌ಐಆರ್ (FIR) ದಾಖಲಿಸಲು ನಾನು ನ್ಯಾಯಪೀಠಕ್ಕೆ...

ಮದ್ಯದ ಅಮಲಿನಲ್ಲಿ ಸಾರಿಗೆ ಬಸ್‌ ಅಪಹರಿಸಿದ ವ್ಯಕ್ತಿ; 21 ಕಿ.ಮೀ. ಪ್ರಯಾಣದ ನಂತರ ಅಪಘಾತ

ತೆಲಂಗಾಣದ ಜನಗಾಂವ್ ಬಸ್ ನಿಲ್ದಾಣದಲ್ಲಿ ನಿಂತಿದ್ದ ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ನಿಗಮದ (ಟಿಜಿಎಸ್‌ಆರ್‌ಟಿಸಿ) ಬಸ್‌ ಅನ್ನು ವ್ಯಕ್ತಿಯೊಬ್ಬ ಕುಡಿದ ಮತ್ತಿನಲ್ಲಿ ಕದ್ದಿದ್ದಾನೆ. ನಂತರ ಅದನ್ನು ಸುಮಾರು 21 ಕಿ.ಮೀ. ದೂರ ಓಡಿಸಿ,...

ಬೆಂಗಳೂರಿನಲ್ಲಿ: ರಸ್ತೆ ಬದಿ ವಾರಗಟ್ಟಲೆ ವಾಹನ ನಿಲ್ಲಿಸಿದರೆ ಜಪ್ತಿ ಮಾಡಿ ‘ಹರಾಜು’ ಹಾಕಲಿದೆ ಸರ್ಕಾರ!

ಸಿಲಿಕಾನ್ ಸಿಟಿಯ ಟ್ರಾಫಿಕ್ ದಟ್ಟಣೆಗೆ ಮುಕ್ತಿ ಹಾಡಲು ಮತ್ತು ಪಾದಚಾರಿಗಳ ಹಕ್ಕನ್ನು ರಕ್ಷಿಸಲು ರಾಜ್ಯ ಸರ್ಕಾರ ಈಗ ಅತ್ಯಂತ ಕಠಿಣ ಹೆಜ್ಜೆಯನ್ನಿಟ್ಟಿದೆ. ನಗರದ ರಸ್ತೆ ಬದಿ ಹಾಗೂ ಫುಟ್‌ಪಾತ್‌ಗಳಲ್ಲಿ ತಿಂಗಳುಗಟ್ಟಲೆ ಧೂಳು ತಿನ್ನುತ್ತಾ...

ಸರ್ಕಾರಿ ಶಾಲೆಗಳಲ್ಲಿ 86 ಲಕ್ಷ ವಿದ್ಯಾರ್ಥಿಗಳ ಕುಸಿತ, ಖಾಸಗಿ ಶಾಲೆಗಳತ್ತ ಮುಖ ಮಾಡಿದ 88 ಲಕ್ಷ ಮಕ್ಕಳು: ಕಳವಳಕಾರಿ ವರದಿ

ನವದೆಹಲಿ: ದೇಶದ ಶಾಲಾ ಶಿಕ್ಷಣ ವ್ಯವಸ್ಥೆಯಲ್ಲಿ ಮಹತ್ತರ ಬದಲಾವಣೆಗಳು ಕಂಡುಬರುತ್ತಿದ್ದು, ಸರ್ಕಾರಿ ಶಾಲೆಗಳ ದಾಖಲಾತಿಯಲ್ಲಿ ಭಾರಿ ಕುಸಿತ ಉಂಟಾಗಿದೆ. 2023–24 ಮತ್ತು 2025–26ರ ಶೈಕ್ಷಣಿಕ ವರ್ಷಗಳ ನಡುವಿನ ಅವಧಿಯಲ್ಲಿ ದೇಶಾದ್ಯಂತ ಸರ್ಕಾರಿ ಶಾಲೆಗಳಲ್ಲಿ...