Homeಅಂತರಾಷ್ಟ್ರೀಯಭಾರತೀಯ ಗಣತಂತ್ರದ ಬಹುದೊಡ್ಡ ಹಬ್ಬಕ್ಕೆ ಸ್ತ್ರೀ ದ್ವೇಷಿ, ಮತಾಂಧ, ಸರ್ವಾಧಿಕಾರಿ ಪ್ರವೃತ್ತಿಯ ಮುಖ್ಯ ಅತಿಥಿ!

ಭಾರತೀಯ ಗಣತಂತ್ರದ ಬಹುದೊಡ್ಡ ಹಬ್ಬಕ್ಕೆ ಸ್ತ್ರೀ ದ್ವೇಷಿ, ಮತಾಂಧ, ಸರ್ವಾಧಿಕಾರಿ ಪ್ರವೃತ್ತಿಯ ಮುಖ್ಯ ಅತಿಥಿ!

"ಇವರನ್ನು ಹಿಟ್ಲರ್, ಮುಸ್ಸೋಲಿನಿ ಎಂದೆಲ್ಲಾ ಕರೆಯುತ್ತಾರೆ. ಭ್ರಷ್ಟ ಎಂದಲ್ಲ!" ಜನರಿಗೆ ಭ್ರಷ್ಟಾಚಾರಕ್ಕಿಂತ ಸರ್ವಾಧಿಕಾರ ಉತ್ತಮ ಅನಿಸಿತು; ಬೊಲ್ಸೊನಾರೊ ಗೆದ್ದರು

- Advertisement -
- Advertisement -

“ನಾನು ನಿನ್ನನ್ನು ಅತ್ಯಾಚಾರ ಮಾಡುವುದಿಲ್ಲ. ನೀನು ಅದಕ್ಕೂ ತಕ್ಕವಳಲ್ಲದ ಕುರೂಪಿ.” ಹೀಗೆಂದು ತನ್ನ ಸಹೋದ್ಯೋಗಿ ಮಹಿಳೆ, ಅದೂ ಸಂಸತ್ ಸದಸ್ಯೆಗೆ ಬಹಿರಂಗವಾಗಿ ಹೇಳಿದ ವ್ಯಕ್ತಿಯನ್ನು ಏನೆಂದು ಕರೆಯುತ್ತೀರಿ? ಸ್ತ್ರೀ ದ್ವೇಷಿ ಎಂದೇ? ವಿಕೃತನೆಂದೆ?

“ಪೊಲೀಸನೊಬ್ಬನಿಗೆ ಜನರನ್ನು ಕೊಲ್ಲಲು ಆಗದಿದ್ದರೆ, ಅವನು ಪೊಲೀಸನೇ ಅಲ್ಲ!” ಈ ರೀತಿಯಾಗಿ ಒಬ್ಬ ರಾಜಕಾರಣಿ, ರಾಷ್ಟ್ರ ನಾಯಕ ಹೇಳಿದರೆ ಏನೆಂದು ಕರೆಯುತ್ತೀರಿ? ಸರ್ವಾಧಿಕಾರಿ ಪ್ರವೃತ್ತಿಯ ನಿರ್ದಯಿ ಎಂದೇ?

“ಕರಿಯರು ಪ್ರಾಣಿಗಳಿಗೆ ಸಮ. ಅವರು ಮೃಗಾಲಯದಲ್ಲಿ ಇರಬೇಕಾದವರು. ಗುಲಾಮಿಗಷ್ಟೇ ಅರ್ಹರು” ಎಂದು ಯಾರಾದರೂ ಹೇಳಿದರೆ, ಬಹುತೇಕ ಕರಿಯರು ಅಥವಾ ಕಂದು ಬಣ್ಣದವರಾದ ನಾವು ಹೇಗೆ ಪ್ರತಿಕ್ರಿಯಿಸಬಹುದು? ಜನಾಂಗೀಯವಾದಿ ಎಂದೇ?

ಇದನ್ನು ಹೇಳಿದ್ದು ಬೇರಾರೂ ಅಲ್ಲ! ಭಾರತದಂತಹಾ ಮಹಾನ್ ಪ್ರಜಾಪ್ರಭುತ್ವದ ಅತಿದೊಡ್ಡ ಸಾರ್ವಜನಿಕ ಹಬ್ಬಗಳಲ್ಲಿ ಒಂದಾದ ಗಣರಾಜ್ಯೋತ್ಸವಕ್ಕೆ ನರೇಂದ್ರ ಮೋದಿ ಸರಕಾರ ಮುಖ್ಯ ಅತಿಥಿಯಾಗಿ ಆಹ್ವಾನಿಸಿರುವ ಬ್ರೆಜಿಲ್‌ನ ಬಾಯಿಬಡುಕ, ತೀವ್ರ ಬಲಪಂಥೀಯ ಅಧ್ಯಕ್ಷ ಜೈರ್ ಬೊಲ್ಸೊನಾರೊ!

ಇದನ್ನೂ ಓದಿ: ಬ್ರೆಜಿಲ್ ಮೋದಿಯ ಕುರಿತ ಕಡೆಯ ಕಂತು

ಕಾಶ್ಮೀರದಲ್ಲಿ ನಡೆಯುತ್ತಿರುವ ದಮನವನ್ನು ಮುಚ್ಚಿಹಾಕುವ ಸಾರ್ವಜನಿಕ ಸಂಪರ್ಕ ಪ್ರಹಸನಕ್ಕೆ ತೆರಿಗೆದಾರರ ಖರ್ಚಿನಲ್ಲಿ ಐರೋಪ್ಯ ಒಕ್ಕೂಟದ ಬಲಪಂಥೀಯ ಸಂಸದರನ್ನು ಆಹ್ವಾನಿಸಿ, ಪ್ರಪಂಚದ ಕಣ್ಣಿಗೆ ತೆರೆ ಎಳೆಯಲು ಯತ್ನಿಸಿ, ಮೋದಿ ಸರಕಾರ ಟೀಕೆಗೆ ಗುರಿಯಾಗಿತ್ತು. ಅದು ಈಗ ಒಂದು ಹೆಜ್ಜೆ ಮುಂದೆ ಹೋಗಿ, ಭಾರತದ 71ನೇ ಗಣರಾಜ್ಯೋತ್ಸವಕ್ಕೆ ಈತನನ್ನು ಆಹ್ವಾನಿಸಿರುವುದು ಮತ್ತೊಮ್ಮೆ ಅರ್ಹವಾಗಿಯೇ ಟೀಕೆಗೆ ಕಾರಣವಾಗಿದೆ. ಜೊತೆಗೆ ಯುಎಸ್ಎಯ ಬಂಡವಾಳಿಗರ ಕೈಗೊಂಬೆಯಂತೆ ವರ್ತಿಸುತ್ತಿರುವ ಬ್ರೆಜಿಲ್‌ನ ಹಾದಿಯಲ್ಲಿಯೇ ಭಾರತವೂ ಸಾಗಲಿರುವ ಸೂಚನೆಯೇ ಇದು ಎಂಬ ಸಂಶಯವನ್ನೂ ಮೂಡಿಸಿದೆ.

ಮೇಲೆ ಮಾಡಲಾದ ಟೀಕೆಗಳಿಗೆ ಸ್ಪಷ್ಟ ಮತ್ತು ಬಹಿರಂಗವಾದ ಆಧಾರಗಳಿವೆ. 1999ರಲ್ಲಿ ಬೊಲ್ಸೊನಾರೊ, ಬ್ರೆಜಿಲ್‌ನ ಮಾಜಿ ಅಧ್ಯಕ್ಷ ಫೆರ್ನಾಂಡೊ ಹೆನ್ರಿಕ್ ಕಾರ್ದೋಸೊ ಅವರ ಹತ್ಯೆಗೆ ಬಹಿರಂಗವಾಗಿ ಕರೆ ನೀಡಿದ್ದರು. 2002ರಲ್ಲಿ ಅವರು ಸಂಸದೆ ಮರಿಯಾ ದೊ ರೊಸಾರಿಯೊ ಅವರಿಗೆ, ತಾನವಳನ್ನು ಅತ್ಯಾಚಾರ ಮಾಡುವುದಿಲ್ಲ. ಆಕೆ ಅದಕ್ಕೂ ಅರ್ಹಳಲ್ಲದ ಕುರೂಪಿ ಎಂದು ಹೇಳಿದ್ದರು. 2011ರಲ್ಲಿ ತನ್ನ ಮಗ ಸಲಿಂಗಕಾಮಿ ಎಂದು ಕರೆಸಿಕೊಳ್ಳುವುದಕ್ಕಿಂತ ಅಪಘಾತದಲ್ಲಿ ಸಾಯುವುದು ಮೇಲು ಎಂದು ಸಲಿಂಗ ಕಾಮಿಗಳನ್ನು ಹೀಗೆಳೆದಿದ್ದರು. 2017ರಲ್ಲಿ ಜನರನ್ನು ಕೊಲ್ಲಲಾಗದ ಪೊಲೀಸ್, ಒಬ್ಬ ಪೊಲೀಸನೇ ಅಲ್ಲ ಎಂದಿದ್ದರು. ಇವೆಲ್ಲವೂ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಪ್ರಕಟ, ಪ್ರಚಾರವಾಗಿವೆ. ಇಂತಹಾ ವಿವಾದಾತ್ಮಕ, ತೀವ್ರವಾದಿ ಹೇಳಿಕೆಗಳಿಂದಲೇ ಅವರು ವಿಶ್ವದಾದ್ಯಂತದ ತೀವ್ರ ಬಲಪಂಥೀಯ ನಾಯಕರ ಪಟ್ಟಿಯಲ್ಲಿ ಪ್ರಮುಖವಾಗಿ ಕಾಣಿಸಿಕೊಳ್ಳುತ್ತಾರೆ. ಒಟ್ಟಿನಲ್ಲಿ ಅವರು ಭಾರತದಲ್ಲಿ ಯದ್ವಾತದ್ವಾ, ಅಸಂಬದ್ಧ ಹೇಳಿಕೆಗಳನ್ನು ನೀಡುವ ಬಲಪಂಥೀಯ ಪುಢಾರಿ, ಸಾಧು, ಸಂತೆಗಳನ್ನು ನೆನೆಪಿಸುತ್ತಾರೆ!

ಇಲ್ಲಿ ಜೈರ್ ಬೊಲ್ಸೊನಾರೊ ಜೀವನ ಕಥನವನ್ನು ನೀಡುವುದು ಈ ಲೇಖನದ  ಉದ್ದೇಶವಲ್ಲ. ಪ್ರಪಂಚದ ಅತ್ಯಂತ ದೊಡ್ಡ ಪ್ರಜಾಪ್ರಭುತ್ವವೆನಿಸಿದ ನಾವು ನಮ್ಮ ಅತ್ಯಂತ ದೊಡ್ಡ ಪ್ರಜಾಪ್ರಭುತ್ವದ ಹಬ್ಬಗಳಲ್ಲಿ ಒಂದಾದ ಗಣರಾಜ್ಯೋತ್ಸವಕ್ಕೆ ಹೋಗಿಹೋಗಿ ಎಂತವರನ್ನು ಮುಖ್ಯ ಅತಿಥಿಯನ್ನು ಆಹ್ವಾನಿಸಿ, ಜಗತ್ತಿನ ಕುಚೋದ್ಯದ ದೃಷ್ಟಿಗೆ ಬಿದ್ದಿದ್ದೇವೆ ಮತ್ತು ನಮ್ಮ ನಾಯಕರು ಯಾಕಾಗಿ ಹೀಗೆ ಮಾಡಿದ್ದಾರೆ; ಅವರ ಬ್ರೆಜಿಲ್ ಮತ್ತು ಬೊಲ್ಸೊನಾರೊ ಪ್ರೇಮಕ್ಕೆ ಕಾರಣವೇನೆಂದು ಓದುಗರ ಗಮನಕ್ಕೆ ತಂದು ಯೋಚಿಸಲು ಪ್ರೇರೇಪಿಸುವುದಷ್ಟೇ ಆಗಿದೆ.

ಬೊಲ್ಸೊನಾರೊ 1973ರಲ್ಲಿ ಸೈನ್ಯ ಸೇರಿ ಮೇಲಿನ ಹಂತಕ್ಕೆ ಏರಿದರು. ಆತನ ಕಮಾಂಡಿಂಗ್ ಆಫೀಸರ್ ಒಬ್ಬರು ಹೀಗೆ ಹೇಳಿದ್ದರು- “ಆತ ಅತಿಯಾದ ಹಣಕಾಸಿನ ಮಹತ್ವಾಕಾಂಕ್ಷೆ ಹೊಂದಿದ ಮನುಷ್ಯ… ಆತನಲ್ಲಿ ತರ್ಕ, ವಿವೇಚನಾಶೀಲತೆ ಮತ್ತು ಸಮತೋಲನವಿಲ್ಲ”. ಆದರೆ, ಆತ ಸಾಮಾನ್ಯ ಮನುಷ್ಯನಂತೆ ಚಿಂತಿಸುತ್ತಾರೆ ಎಂಬ ಜನರ ಭ್ರಮೆಯು ಆತನಿಗೆ ಅಪಾರ ರಾಜಕೀಯ ಲಾಭವನ್ನು ತಂದುಕೊಟ್ಟಿದೆ.

1986ರಲ್ಲಿ ಮಿಲಿಟರಿ ಸೇರಿ ಒಂದು ದಶಕದ ಬಳಿಕ ಆತ ಸೇನೆಯ ಕಡಿಮೆ ಸಂಬಳದ ಬಗ್ಗೆ ದೇಶದ ಪ್ರತಿಷ್ಟಿತ ಪತ್ರಿಕೆ “ವೆಜಾ’ದಲ್ಲಿ ಲೇಖನವೊಂದನ್ನು ಬರೆದರು. ಅದಕ್ಕಾಗಿ ಆತನಿಗೆ 15 ದಿನಗಳ ಸೆರೆವಾಸ ವಿಧಿಸಲಾಯಿತು. ಆದರೆ, ಅದು ಆತನಿಗೆ ದೇಶಪ್ರೇಮಿ ಎಂಬ ಹೆಸರು ತಂದು ಕೊಟ್ಟು, ಆತನ ರಾಜಕೀಯ ಪ್ರವೇಶಕ್ಕೆ ಭಾರೀ ಚಾಲನೆ ನೀಡಿತು.‌

1986ರಲ್ಲಿ ಈತ ರಾಜಧಾನಿ ರಿಯೋ ಡಿ’ಜನೈರೋದ ನಗರ ಸಭೆಯ ಸದಸ್ಯನಾಗಿ ಆಯ್ಕೆಯಾದರು. 1991ರ ಹೊತ್ತಿಗೆ ಸಂಸದರೂ ಆದರು. ನಂತರದ ಎರಡೂವರೆ ದಶಕಗಳ ಕಾಲ ರಾಜಕೀಯವಾಗಿ ಹಿನ್ನೆಲೆಯಲ್ಲಿಯೇ ಇದ್ದರು. ಆಗಾಗ, ವಿವಾದಾತ್ಮಕ ಹೇಳಿಕೆಗಳನ್ನು ನೀಡುತ್ತಾ ಸುದ್ದಿಯಲ್ಲಿದ್ದರೂ, ಬ್ರೆಜಿಲ್‌ನ ರಾಜಕೀಯದಲ್ಲಿ ನಗಣ್ಯರಾಗಿದ್ದರು.

2017ರಲ್ಲಷ್ಷೇ ಆತ ಬ್ರೆಜಿಲ್ ಸಂಸತ್ತಿನ ಕೆಳಮನೆಯ ಸ್ಪೀಕರ್ ಸ್ಥಾನಕ್ಕೆ ಸ್ಪರ್ಧಿಸಿದಾಗ ಕೇವಲ ನಾಲ್ಕೇ ನಾಲ್ಕು ಮತಗಳು ಬಿದ್ದಿದ್ದವು. ಆದರೆ, ಜನವರಿ 2019ರ ಚುನಾವಣೆಯಲ್ಲಿ ಏಕಾಏಕಿಯಾಗಿ ಉಲ್ಕೆಯಂತೆ ಬ್ರೆಜಿಲ್‌ನ ಅಧ್ಯಕ್ಷರಾಗಿ ಚುನಾಯಿತರಾದರು.

2008ರ ಆರ್ಥಿಕ ಬಿಕ್ಕಟ್ಟು ಎಲ್ಲಾ ದೇಶಗಳಂತೆ ಬ್ರೆಜಿಲನ್ನೂ ತಟ್ಟಿತ್ತು. 2014ರ ತೈಲ ದೈತ್ಯ ಪೆಟ್ರೋಬ್ರಾಸ್ ಕಂಪೆನಿಯನ್ನು ಒಳಗೊಂಡ ಭಾರೀ ಹಗರಣ ಬೊಲ್ಸೊನಾರೊಗೆ ಭಾರಿ ಲಾಭವನ್ನೇ ತಂದುಕೊಟ್ಟಿತ್ತು. ಹಣದುಬ್ಬರ ಏರಿ, ತಲಾದಾಯದಲ್ಲಿ ಭಾರೀ ಕುಸಿತವಾಗುವುದರ ಜೊತೆಗೆ, ಅಪರಾಧ ಪ್ರಮಾಣದಲ್ಲಿಯೂ ಭಾರೀ ಏರಿಕೆಯಾಯಿತು. ಅಪರಾಧ ಅತ್ಯಂತ ಹೆಚ್ಚಿರುವ ಪ್ರಪಂಚದ 50 ನಗರಗಳಲ್ಲಿ ಬ್ರೆಜಿಲ್‌ 19ನೇ ಸ್ಥಾನದಲ್ಲಿತ್ತು. ಪ್ರತೀ ವರ್ಷ ಸುಮಾರು 60,000 ಮಂದಿ ಆತ್ಮಹತ್ಯೆ ಮಾಡಿಕೊಂಡರು.

ತನಿಖೆ ನಡೆದು ಮಾಜಿ ಅಧ್ಯಕ್ಷ ದಿಲ್ಮಾ ರೌಸೆಫ್ ಸೇರಿದಂತೆ ಅನೇಕ ರಾಜಕಾರಣಿಗಳು, ಅಧಿಕಾರಿಗಳ ಭ್ರಷ್ಟಾಚಾರ ಬಯಲಾಗಿತ್ತು. ರೌಸೆಫ್ ನಂತರ ಬಂದ ಮೈಕೆಲ್ ಟರ್ನರ್‌ಗೂ ಅದೇ ಗತಿಯಾಯಿತು.  ಜನರು ರೋಸಿ ಹೋಗಿದ್ದರು. ಇಂತಹಾ ಸಂದರ್ಭದಲ್ಲಿ ತಾನು ಪ್ರಾಮಾಣಿಕನಾಗಿದ್ದು, ಭ್ರಷ್ಟಾಚಾರ ನಿಲ್ಲಿಸುವ ಭರವಸೆ ನೀಡಿದ ಬೊಲ್ಸೊನಾರೊರನ್ನು ಜನರು ಬೆಂಬಲಿಸಿದರು. ಆತನ ಪ್ರಚಾರದ ವೇಳೆ ಒಂದು ಪೋಸ್ಟರ್ ಹೀಗಿತ್ತು- ಬ್ರೆಜಿಲ್ ಧ್ವಜದ ಮುಂದೆ ಬೊಲ್ಸೊನಾರೊ ನಿಂತಿದ್ದಾರೆ; “ಇವರನ್ನು ಹಿಟ್ಲರ್, ಮುಸ್ಸೋಲಿನಿ ಎಂದೆಲ್ಲಾ ಕರೆಯುತ್ತಾರೆ. ಭ್ರಷ್ಟ ಎಂದಲ್ಲ!” ಜನರಿಗೆ ಭ್ರಷ್ಟಾಚಾರಕ್ಕಿಂತ ಸರ್ವಾಧಿಕಾರ ಉತ್ತಮ ಅನಿಸಿತು; ಬೊಲ್ಸೊನಾರೊ ಗೆದ್ದರು.

ಅಯ್ಕೆಯಾದ ಬಳಿಕ ಬೊಲ್ಸೊನಾರೊ, ಬಂಡವಾಳಶಾಹಿ ಮತ್ತು ಯುಎಸ್‌ಎ ನಿರ್ದೇಶಿತ ‘ಸುಧಾರಣಾ’ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ. ಭಾರತದಲ್ಲಿ ಆಗುತ್ತಿರುವಂತೆಯೇ ಸರಕಾರಿ ಸ್ವಾಮ್ಯದ ಸಂಸ್ಥೆಗಳನ್ನು ಖಾಸಗಿಗೆ ಮಾರುತ್ತಿದ್ದಾರೆ. ಅವರು ಕೂಡಾ ತಮ್ಮ ದೇಶದಲ್ಲಿ ಜನಾಂಗೀಯವಾಗಿ ಒಡೆದಾಳುವ ನೀತಿ ಅನುಸರಿಸುತ್ತಿದ್ದಾರೆ. ವಿವಿಧ ಸಾಮಾಜಿಕ ಗುಂಪುಗಳ ನಡುವೆ ಅಸ್ಮಿತೆಯ ರಾಜಕೀಯ ಮುಂದುವರಿಸಿದ್ದಾರೆ. ಜನಮರುಳು ಘೋಷಣೆಗಳನ್ನು ಹಾಕುತ್ತಿದ್ದಾರೆ. ಬ್ರೆಜಿಲ್‌ನ ಪರಿಸ್ಥಿತಿ, ಅದು ಹಿಡಿದಿರುವ ರಾಜಕೀಯ, ಆರ್ಥಿಕ ಹಾದಿ, ಅಲ್ಲಿನ ಮತ್ತು ಇಲ್ಲಿನ ರಾಜಕೀಯ ಹಿನ್ನೆಲೆ, ರಾಜಕಾರಣಿಗಳ ದಿಢೀರ್ ಜನಪ್ರಿಯತೆ, ಅವರ ಕಾರ್ಯತಂತ್ರ ಇತ್ಯಾದಿಗಳಲ್ಲಿ ಅನೇಕ ಸಾಮ್ಯಗಳಿದ್ದು, ಆ ಬಗ್ಗೆಯೇ ಒಂದು ಪ್ರತ್ಯೇಕ ಲೇಖನ ಬರೆಯಬಹುದು!

ಹೀಗಿದ್ದೂ, ಇಂತಹಾ ಆಕ್ಷೇಪಾರ್ಹ ಹಿನ್ನೆಲೆ ಇರುವ ಸರ್ವಾಧಿಕಾರಿ ಪ್ರವೃತ್ತಿಯ, ತೀವ್ರ ಬಲಪಂಥೀಯ ನಾಯಕನನ್ನು ನಮ್ಮ ದೇಶದ ನಾಯಕರು ಗಣರಾಜ್ಯೋತ್ಸವಕ್ಕೆ ಮುಖ್ಯ ಅತಿಥಿಯಾಗಿ ಯಾಕೆ ಆರಿಸಿ, ಆಹ್ವಾನಿಸಿದರು? ಅವರು ಬ್ರೆಜಿಲ್‌ನಲ್ಲಿ ತಮ್ಮ ಹಾದಿಯನ್ನು ಕಂಡರೇ, ಅಥವಾ ಅದುವೇ ತಮ್ಮ ಹಾದಿಯನ್ನು ಅನುಸರಿಸುತ್ತಿದೆ ಎಂಬ ಅಭಿಮಾನದಿಂದ ಕರೆದರೆ? ನಾವು ಈ ಕ್ರಮದ ಹಿನ್ನೆಲೆಯಲ್ಲಿ ಭಾರತ ಮುಂದೆ ಸಾಗಬಹುದಾದ ದಿಕ್ಕನ್ನು ಊಹಿಸಬಹುದಾಗಿದೆ. ಅಲ್ಲದೆ, ನಮ್ಮ ಮತ್ತು ಬ್ರೆಜಿಲ್‌ನ ಬಲಪಂಥೀಯ ನಡೆಗಳು, ಗುಲಾಮಿ ಬಂಡವಾಳಪರ ಆರ್ಥಿಕ ನಡೆಗಳನ್ನು ಒಟ್ಟಾಗಿಯೇ ಸೂಕ್ಷ್ಮವಾಗಿ ಗಮನಿಸಬೇಕಾಗಿದೆ.

(ಪೂರಕ ಮಾಹಿತಿ: ದಿ ಕ್ವಿಂಟ್ ಮತ್ತು ಇತರ ಸಾಮಾಜಿಕ ಜಾಲತಾಣಗಳು)

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

2 COMMENTS

LEAVE A REPLY

Please enter your comment!
Please enter your name here

- Advertisment -

2029ರ ವೇಳೆಗೆ 21 NDA ಆಡಳಿತದ ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿ: ಮುಂಬೈನಲ್ಲಿ ಗೃಹ ಸಚಿವ ಅಮಿತ್ ಶಾ ಘೋಷಣೆ

ವಿವಾಹ, ವಿಚ್ಛೇದನ, ಪಿತ್ರಾರ್ಜಿತ ಆಸ್ತಿ ಮತ್ತು ದತ್ತು ಸ್ವೀಕಾರದಂತಹ ವೈಯಕ್ತಿಕ ಕಾನೂನುಗಳಲ್ಲಿ ಧರ್ಮಾತೀತವಾಗಿ ಏಕರೂಪತೆ ತರುವ 'ಏಕರೂಪ ನಾಗರಿಕ ಸಂಹಿತೆ'ಯನ್ನು (UCC) 2029ರ ವೇಳೆಗೆ ಬಿಜೆಪಿ ನೇತೃತ್ವದ ಎನ್‌ಡಿಎ ಆಡಳಿತವಿರುವ ಎಲ್ಲಾ 21...

KPSC ಯನ್ನು ರದ್ದು ಮಾಡುತ್ತಾ ಸರ್ಕಾರ? ಹೊಸ ಚರ್ಚೆ ಹುಟ್ಟುಹಾಕಿದ ಸಚಿವ ಈಶ್ವರ್ ಖಂಡ್ರೆ ಹೇಳಿಕೆ

ಕರ್ನಾಟಕ ಲೋಕಸೇವಾ ಆಯೋಗವನ್ನು (KPSC) ಮುಚ್ಚುವ ಅಥವಾ ಸಂಪೂರ್ಣವಾಗಿ ರದ್ದುಗೊಳಿಸುವ ಕುರಿತು ಅರಣ್ಯ ಹಾಗೂ ಜೀವಿಶಾಸ್ತ್ರ ಸಚಿವ ಈಶ್ವರ್ ಖಂಡ್ರೆ ನೀಡಿರುವ ಹೇಳಿಕೆಯು ರಾಜ್ಯ ರಾಜಕಾರಣದಲ್ಲಿ ತೀವ್ರ ಸಂಚಲನ ಮೂಡಿಸಿದ್ದು, ಲಕ್ಷಾಂತರ ಸ್ಪರ್ಧಾತ್ಮಕ...

ಹುಬ್ಬಳ್ಳಿಯಲ್ಲಿ ಗಣೇಶ ಮೆರವಣಿಗೆ ವೇಳೆ ಮಹಿಳೆಯರೊಂದಿಗೆ ಅಸಭ್ಯ ವರ್ತನೆ

ಹುಬ್ಬಳ್ಳಿಯಲ್ಲಿ ಗಣೇಶೋತ್ಸವದ ಮೂರ್ತಿ ತರುವ ಸಂಭ್ರಮದ ಮೆರವಣಿಗೆಯನ್ನೇ ನೆಪವಾಗಿಸಿಕೊಂಡು ಅಪರಿಚಿತ ಕಿಡಿಗೇಡಿಗಳು ಮಹಿಳೆಯರ ಜೊತೆ ಅಸಭ್ಯವಾಗಿ ವರ್ತಿಸಿದ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಹಬ್ಬದ ನೆಪದಲ್ಲಿ ಸಾರ್ವಜನಿಕ ಸೌಹಾರ್ದತೆ ಮತ್ತು ಮಹಿಳೆಯರ ಸುರಕ್ಷತೆಗೆ...

ಗಣಪತಿ ಹಬ್ಬದ ನೆಪದಲ್ಲಿ ಮೈಸೂರಿನಲ್ಲಿ ಸೌಹಾರ್ದತೆ ಕೆಡಿಸಲು ಯತ್ನ? ಭದ್ರತಾ ನಿಯಮಗಳನ್ನೇ ಧಿಕ್ಕರಿಸಿದ BJP ನಾಯಕರು

ಗಣೇಶೋತ್ಸವದ ಮೆರವಣಿಗೆಗಳನ್ನು ನೆಪವಾಗಿಸಿಕೊಂಡು ಕೋಮು ಸೌಹಾರ್ದತೆಗೆ ಧಕ್ಕೆ ತರುವ, ಸೂಕ್ಷ್ಮ ಪ್ರದೇಶಗಳಲ್ಲಿ ಪ್ರಚೋದನಾಕಾರಿ ಘೋಷಣೆಗಳನ್ನು ಕೂಗಿ ಗಲಭೆಗೆ ಪ್ರೇರೇಪಿಸುವ ರಕ್ತದಾಹಿ ಕೃತ್ಯಗಳಿಗೆ ಬ್ರೇಕ್ ಹಾಕಲು ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದೆ....

SIR: ವಿಶೇಷ ತೀವ್ರ ಪರಿಷ್ಕರಣೆ’ ಎಂಬ ಪ್ರಹಸನ, ಆಯೋಗದ ತಪ್ಪುಗಳಿಗೆ ಮತದಾರರು ಪ್ರಾಯಶ್ಚಿತ್ತ ಪಡಬೇಕೇ?

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಹೆಸರಿನಲ್ಲಿ ರಾಜ್ಯಾದ್ಯಂತ ಮತದಾರರನ್ನು 2002ರ ಮತದಾರರ ಪಟ್ಟಿಯೊಂದಿಗೆ ‘ಮ್ಯಾಪಿಂಗ್’ ಮಾಡುವ ಬೃಹತ್ ಪ್ರಕ್ರಿಯೆಯನ್ನು ಚುನಾವಣಾ ಆಯೋಗವು ಕೈಗೆತ್ತಿಕೊಂಡಿದೆ. 2002ರಲ್ಲಿದ್ದ ದತ್ತಾಂಶವನ್ನು ಇಂದಿನ ಪಟ್ಟಿಯೊಂದಿಗೆ ಹೋಲಿಸಿ,...

ಯೋಗಿ ಆದಿತ್ಯನಾಥ್ ಅವರನ್ನು ಪ್ರಶ್ನಿಸಿದ್ದ ಪತ್ರಕರ್ತೆ ದಿವ್ಯಾ ಶ್ರೀವಾಸ್ತವ್‌ಗೆ ಬೆದರಿಕೆ

ಶನಿವಾರ (ಸೆ. 12) ನಡೆದಿದ್ದ ಸುದ್ದಿಗೋಷ್ಠಿಯೊಂದರಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಪ್ರಶ್ನಿಸಿದ ಪತ್ರಕರ್ತೆ ದಿವ್ಯಾ ಶ್ರೀವಾಸ್ತವ ಅವರ ವೀಡಿಯೊ ವೈರಲ್ ಆದ ಬಳಿಕ, ಅವರು ಆನ್‌ಲೈನ್ ಬೆದರಿಕೆಗಳು ಮತ್ತು...

ಅಲಿಗಢ ಮುಸ್ಲಿಂ ವಿವಿ ಪ್ರತಿಭಟನೆಯ ‘ಪಕ್ಷಪಾತಿ’ ನಿರೂಪಣೆ : ಝೀ ನ್ಯೂಸ್‌ಗೆ ₹2 ಲಕ್ಷ ದಂಡ ವಿಧಿಸಿದ ಎನ್‌ಬಿಡಿಎಸ್‌ಎ

ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದಲ್ಲಿ (AMU) ನಡೆದ ವಿದ್ಯಾರ್ಥಿ ಪ್ರತಿಭಟನೆಯ ವೇಳೆ ಪ್ಯಾಲೆಸ್ತೀನ್ ಪರ ಘೋಷಣೆಗಳನ್ನು ಕೂಗಿದ ಘಟನೆಯನ್ನು ವರದಿ ಮಾಡುವಾಗ ಪ್ರಸಾರ ನೀತಿ ಸಂಹಿತೆಯನ್ನು ಉಲ್ಲಂಘಿಸಿದೆ ಎಂದು ಪರಿಗಣಿಸಿ, 'ಝೀ ನ್ಯೂಸ್' (Zee...

‘ಕೆಲವರು ಮುಸ್ಲಿಮರನ್ನು ಬೈದ್ರೆ ಮಾತ್ರ ಲೀಡರ್‌ ಆಗೋದು ಅನ್ಕೊಂಡಿದಾರೆ!’: ಆರ್‌. ಅಶೋಕ್‌ ಹಳೆಯ ಹೇಳಿಕೆ ಮುಂದಿಟ್ಟು ಪ್ರಿಯಾಂಕ್ ಖರ್ಗೆ ಟೀಕೆ!

ಮೈಸೂರಿನ ಟಿ. ನರಸೀಪುರದಲ್ಲಿ ಗಣಪತಿ ಮೆರವಣಿಗೆ ಸಾಗುವ ಮಾರ್ಗದ ವಿಚಾರವಾಗಿ ಬಿಜೆಪಿ ಪ್ರತಿಭಟನೆಗೆ ಮುಂದಾಗಿರುವ ಬೆನ್ನಲ್ಲೇ, ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌. ಅಶೋಕ್‌ ವಿರುದ್ಧ ಗೃಹ ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ...

ಠಾಣೆಗೆ ನುಸುಳುತ್ತೇನೆ ಎಂದ ಪ್ರತಾಪ್ ಸಿಂಹನಿಗೆ ಪರಪ್ಪನ ಜೈಲಿಗೂ ರೆಡಿಯಾಗಿ ಎಂದ ಸಚಿವ ಪ್ರಿಯಾಂಕ್ ಖರ್ಗೆ

ಮಾಜಿ ಸಂಸದ ಪ್ರತಾಪ್ ಸಿಂಹ ಅವರನ್ನು ನೇರವಾಗಿ ಗುರಿಯಾಗಿಸಿಕೊಂಡು ಸಚಿವ ಪ್ರಿಯಾಂಕ್ ಖರ್ಗೆ ತೀವ್ರ ವಾಗ್ದಾಳಿ ನಡೆಸಿದ್ದು, ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸುವ ಅಥವಾ ಅವರಿಗೆ ಬೆದರಿಕೆ ಹಾಕುವ ರೀತಿಯಲ್ಲಿ ಮಾತನಾಡುವವರ ವಿರುದ್ಧ ಸರ್ಕಾರ...

ಆಹಾರ ಪದ್ಧತಿ- ಧಾರ್ಮಿಕ ಆಚರಣೆಗಳನ್ನು ಆರಿಸಿಕೊಳ್ಳಲು ಜನರಿಗೆ ಸ್ವಾತಂತ್ರ್ಯವಿದೆ: ಬಂಗಾಳ ಮುಖ್ಯಮಂತ್ರಿ ಸುವೇಂದು ಅಧಿಕಾರಿ

ದುರ್ಗಾ ಪೂಜೆಯ ಸಂದರ್ಭದಲ್ಲಿ ಬಂಗಾಳಿಗಳು ಮಾಂಸಾಹಾರ ಸೇವಿಸುವುದರ ಕುರಿತು ಬಾಗೇಶ್ವರ ಬಾಬಾ ಎಂದೇ ಜನಪ್ರಿಯರಾಗಿರುವ ಧೀರೇಂದ್ರ ಶಾಸ್ತ್ರಿ ಅವರ ಹೇಳಿಕೆಗೆ ಪರೋಕ್ಷವಾಗಿ ಪ್ರತಿಕ್ರಿಯಿಸಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಸುವೇಂದು ಅಧಿಕಾರಿ, "ತಮ್ಮ ಆಹಾರ...