Homeನಿಜವೋ ಸುಳ್ಳೋಮೋದಿಯವರು ಮೋಡದ ಮೇಲೆ ಪಾಕಿಸ್ತಾನಕ್ಕೆ ಹೋಗಿ ಬಂದ ಅಪೂರ್ವ ಕಥಾನಕ

ಮೋದಿಯವರು ಮೋಡದ ಮೇಲೆ ಪಾಕಿಸ್ತಾನಕ್ಕೆ ಹೋಗಿ ಬಂದ ಅಪೂರ್ವ ಕಥಾನಕ

ಪಾಕಿಸ್ತಾನದ ಮೇಲೆ ನಡೆಸಿದ ‘ವಾಯುದಾಳಿ’ ಮೋದಿ ಹೇಳಿಕೆಗೆ ಸೃಜನಾತ್ಮಕ ಪ್ರತಿಕ್ರಿಯೆಗಳು

- Advertisement -
- Advertisement -

ನಿಮಗೆ ಗೊತ್ತಿರಬೇಕಾದ ಎಲ್ಲಾ ಮಾಹಿತಿಗಳು

ನ್ಯೂಸ್ ನೇಷನ್ ಎಂಬ ಟಿವಿ ಚಾನೆಲ್‍ಗೆ ಪ್ರಧಾನಿ ನರೇಂದ್ರ ಮೋದಿಯವರು ನಿನ್ನೆ ನೀಡಿದ ಸಂದರ್ಶನವನ್ನು ಇನ್ನಾವುದಾದರೂ ಸಂದರ್ಶನದ ಜೊತೆ ಹೋಲಿಸಬೇಕೆಂದರೆ, ಅದನ್ನು 2018ರ ಜನವರಿ 22ರಂದು ಜೀ ಟಿವಿಗೆ ನೀಡಿದ ಸಂದರ್ಶನಕ್ಕೆ ಮಾತ್ರ ಹೋಲಿಸಬಹುದು. ಏಕೆಂದರೆ, ಅದರಲ್ಲಿ ಅವರ ಪ್ರಸಿದ್ಧ ‘ಪಕೋಡಾ ಹೇಳಿಕೆ’ ಹೊರಬಂದಿತ್ತು. ಇದೀಗ ನ್ಯೂಸ್ ನೇಷನ್‍ನಲ್ಲಿ ಅವರು ಪಾಕಿಸ್ತಾನದ ಮೇಲೆ ನಡೆಸಿದ ‘ವಾಯುದಾಳಿ’ಯ ಕುರಿತು ಮಾತನಾಡಿದ್ದಾರೆ. ಈ ಸುದ್ದಿ ಪ್ರಸಾರವಾದ ನಂತರ ಇಲ್ಲಿಯವರೆಗೂ ದೇಶಾದ್ಯಂತ ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿರುವ ಚರ್ಚೆಗೆ ಎಣೆಯೇ ಇಲ್ಲ. ದೇಶದ ಬೇರೆ ಬೇರೆ ಭಾಗಗಳ ಹಲವು ಜನರ ಸೃಜನಶೀಲತೆಯ ಅಭಿವ್ಯಕ್ತಿಯಾಗಿಯೂ ಅದನ್ನು ನೋಡಬಹುದಾಗಿದೆ. ಅದರ ಸಂಪೂರ್ಣ ವಿವರವನ್ನು ಇಲ್ಲಿ ಕೊಡಲಾಗಿದೆ.

ಮೊದಲಿಗೆ, ಮೋದಿಯವರು ಹೇಳಿದ್ದೇನು ನೋಡೋಣ.

ಇದೇ ಸಂದರ್ಭದಲ್ಲಿ ಮೋದಿಯವರ ಬಯೋಗ್ಯಾಸ್‍ಗೆ ಸಂಬಂಧಿಸಿದ ಇನ್ನೊಂದು ಹೇಳಿಕೆಯನ್ನೂ ಹಲವರು ನೆನಪಿಸಿಕೊಂಡಿದ್ದಾರೆ.

ಉದಾಹರಣೆಗೆ ವಿಜಯ ಕರ್ನಾಟಕದ ಅಂಕಣಕಾರರಾಗಿದ್ದ ಚಿಂತಕ ಕೆ.ಪಿ.ಸುರೇಶ್‍ರವರು ಹಳೆಯ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

https://m.facebook.com/story.php?story_fbid=1474653089338603&id=100003817783883

ಇದಕ್ಕೆ ಸಂಬಂಧಿಸಿದ ಹಳೆಯ ಕಾರ್ಟೂನ್ ಸಹಾ ಇಲ್ಲಿದೆ ನೋಡಿ

ಉದ್ಯಮಿ ರಾಜಾರಾಂ ತಲ್ಲೂರು ಅವರು ಮೋದಿಯವರ ಎಂಟೈಲ್ ಪೊಲಿಟಿಕಲ್ ಸೈನ್ಸ್ ಡಿಗ್ರಿಯನ್ನು ತಾವು ಪಡೆದುಕೊಂಡಿರದೇ ಇರುವುದಕ್ಕೆ ‘ಬೇಸರ ವ್ಯಕ್ತಪಡಿಸಿ’ ಈ ಪೋಸ್ಟ್ ಹಾಕಿದ್ದಾರೆ.

ಕಾಶ್ಮೀರದ ನ್ಯಾಷನಲ್ ಕಾನ್ಫರೆನ್ಸ್‍ನ ಮುಖಂಡ ಓಮರ್ ಅಬ್ದುಲ್ಲಾರು ಟ್ವೀಟಿಸಿದ್ದು ಹೀಗೆ.

ವಾಯುಪಡೆಯಲ್ಲಿದ್ದ ಅಧಿಕಾರಿ (ಈಗ ಮೋದಿಯವರ ಟೀಕಾಕಾರ) ರಾಜೀವ್ ತ್ಯಾಗಿಯವರಿಗೆ ತುಂಬಾ ಸಿಟ್ಟು ಬಂದಿದ್ದರೂ, ವೈಜ್ಞಾನಿಕವಾಗಿ ಮೋಡಗಳಿಗೂ ವಾಯುದಾಳಿಗೂ ಇರುವ ಸಂಬಂಧದ ಬಗ್ಗೆ ವಿವರಿಸಿದ್ದಾರೆ. ಅವರ ಪ್ರಕಾರ ಬೇರೆ ಬೇರೆ ಬಗೆಯ ಮೋಡಗಳಿರುತ್ತವೆ ಮತ್ತು ಆ ಮೋಡಗಳಿದ್ದಾಗ ಒಂದೋ ಅವು ಏನೂ ಸಮಸ್ಯೆ ಮಾಡುವುದಿಲ್ಲ, ಇಲ್ಲವೇ ಶತ್ರುಪಡೆಯ ರಾಡಾರ್‍ನ ಅಗತ್ಯವೇ ಇಲ್ಲದೇ ಅವೇ ಧ್ವಂಸಗೊಳ್ಳುತ್ತವೆ. ಇವೆಲ್ಲಾ ವಾಯುಪಡೆಗಳಿಗೆ ಗೊತ್ತಿರುವ ಸಂಗತಿ. ಆದರೆ, ಇದಕ್ಕೆ ವಿರುದ್ಧವಾದ ಸಂಗತಿಯನ್ನು ಒಬ್ಬ ಅನಕ್ಷರಸ್ಥನಿಂದ ಕೇಳಬೇಕಾದ ದುರ್ಗತಿ ವಾಯುಪಡೆಗೆ ಬಂದಿತಲ್ಲಾ ಎಂದು ಕಿಡಿಕಾರಿದ್ದಾರೆ.

https://m.facebook.com/story.php?story_fbid=10161734759650176&id=817450175

ವೈದ್ಯರಾದ ಡಾ.ಅಶೋಕ್ ಕೆ.ಆರ್ ಅವರು ಮೊದಲು ಇದು ಯಾರೋ ಸುಳ್ಳೇ ಸೃಷ್ಟಿ ಮಾಡಿರುವುದು ಎಂದುಕೊಂಡರಂತೆ. ನಂತರ ನಿಜ ಎಂದು ಗೊತ್ತಾಯಿತು ಎಂದಿದ್ದಾರೆ. ಅವರಿಗೆ ಪ್ರತಿಕ್ರಿಯಿಸಿರುವ ಡಾ.ಸುಶಿ ಕಾಡನಕುಪ್ಪೆ ಸಹಾ ಅದೇ ಅಭಿಪ್ರಾಯವನ್ನು ಕಮೆಂಟಿಸಿದ್ದಾರೆ.

ಹಾಗೆಯೇ ಇನ್ನೊಬ್ಬ ನೆಟ್ಟಿಗರು ಹೀಗೆ ಹೇಳುತ್ತಾರೆ.

‘ಇದರಲ್ಲಿ ತಮಾಶೆ ಏನೂ ಇಲ್ಲ. ನಮ್ಮ ಮೋದಿಜಿಗೆ ಮತ್ತೆ ಅಧಿಕಾರ ಸಿಕ್ಕರೆ ಸೂರ್ಯನಿಗೂ ಮನುಷ್ಯರನ್ನು ಕಳಿಸುತ್ತಾರೆ. ಮೊದಲ ಬಾರಿ ಸೂರ್ಯಯಾನಕ್ಕೆ ತನ್ನ ಶಿಷ್ಯಂದಿರಾದ ಸಂಬಿತ್ ಪಾತ್ರ ಮತ್ತು ತೇಜಸ್ವಿ ಸೂರ್ಯಗಳನ್ನು ಕಳಿಸಬಹುದು. ಪಬ್ಲಿಸಿಟಿ ಜಾಸ್ತಿ ಸಿಗೋದರಿಂದ ತಾನೇ ಹೋದರೂ ಹೋಗಬಹುದು.’

ಎಲ್ಲಕ್ಕಿಂತ ಸತೀಶ್ ಆಚಾರ್ಯ ಅವರ ಕಾರ್ಟೂನು ಮೋದಿಯವರನ್ನು ವ್ಯಂಗ್ಯ ಮಾಡುವುದರಲ್ಲಿ ಸಾಕಷ್ಟು ಮುಂದೆ ಹೋಗಿದೆ. ಇಸ್ರೋದ ವಿಜ್ಞಾನಿಗಳಿಗೆ ಸೂರ್ಯಯಾನಕ್ಕೆ ತಯಾರಿ ಮಾಡಲು ಸೂಚಿಸುವ ಮೋದಿ, ನಾವು ಸೂರ್ಯನಲ್ಲಿಗೆ ರಾತ್ರಿ ಹೋದರಾಯಿತು ಎನ್ನುತ್ತಿದ್ದಾರೆ.

ಇನ್ನು ಚಂದ್ರಯಾನವನ್ನೂ ನೆಟ್ಟಿಗರು ಬಿಟ್ಟಿಲ್ಲ. ಚಂದ್ರನ ಮೇಲೆ ಲ್ಯಾಂಡ್ ಆಗಲು ಕಡಿಮೆ ಜಾಗವಿದೆ ಎಂದು ಹೇಳುವ ವಿಜ್ಞಾನಿಗಳಿಗೆ, ‘ಹುಣ್ಣಿಮೆಯ ದಿನ ಹೋದರೆ ಚಂದ್ರ ದೊಡ್ಡದಾಗಿರುತ್ತಾನೆ’ ಎಂಬ ಸಲಹೆ ನೀಡುತ್ತಾರಂತೆ.

ಇದಲ್ಲದೇ ಮತ್ತೊಂದು ಪೋಸ್ಟ್ ಹೀಗೆ ಹೇಳುತ್ತದೆ.

‘ಮೋದಿಯವರು ವಿಮಾನಗಳಿಗೆ ರಿವರ್ಸ್ ಗೇರ್‍ನಲ್ಲಿ ಹೋಗಲು ಸೂಚಿಸಿದ್ದರಂತೆ. ಅದರಿಂದ ಪಾಕಿಸ್ತಾನಕ್ಕೆ ವಿಮಾನಗಳು ಬರುತ್ತಿವೆಯಾ, ಹೋಗುತ್ತಿವೆಯಾ ಎಂದು ಗೊತ್ತಾಗಲಿಲ್ಲ’

ಇನ್ನು ಮೋಡವೆಂದರೆ, ರಾಡಾರ್ ಎಂದರೆ ಮೋದಿಯವರು ಏನು ತಿಳಿದುಕೊಂಡಿರಬಹುದು ಎಂಬ ಕುರಿತೂ ಹಲವು ಕಾರ್ಟೂನ್‍ಗಳು ಬಂದಿವೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...