Homeಕರ್ನಾಟಕಮೋದಿ, ಯೋಗಿ ಆದಿತ್ಯನಾಥರೇ ನೀವು ಚರಿತ್ರೆ ಮುಚ್ಚಿಹಾಕಲು ಹೊರಟಿದ್ದೀರಿ: ವಿಶ್ವನಾಥ್‌

ಮೋದಿ, ಯೋಗಿ ಆದಿತ್ಯನಾಥರೇ ನೀವು ಚರಿತ್ರೆ ಮುಚ್ಚಿಹಾಕಲು ಹೊರಟಿದ್ದೀರಿ: ವಿಶ್ವನಾಥ್‌

"ಉತ್ತರ ಪ್ರದೇಶದಲ್ಲಿ ಒಂದೂವರೆ ಕೋಟಿ ಜನ ಕುರುಬರು ಇದ್ದಾರೆ. ಕುರುಬ ಜನಾಂಗಕ್ಕೆ ಸೇರಿದ ಅಹಲ್ಯಾಬಾಯಿ. ಅವರನ್ನು ಮರೆತಿರುವುದು ಪ್ರಮಾದ"

- Advertisement -
- Advertisement -

ಪ್ರಧಾನಿ ನರೇಂದ್ರ ಮೋದಿ ಹಾಗೂ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಚರಿತ್ರೆಯನ್ನು ಮುಚ್ಚಿ ಹಾಕಲು ಹೊರಟಿದ್ದಾರೆ ಎಂದು ವಿಧಾನಪರಿಷತ್‌ ಸದಸ್ಯ ಅಡಗೂರು ಎಚ್.ವಿಶ್ವನಾಥ್‌ ಗುಡುಗಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯವರು ಸೋಮವಾರ ಉತ್ತರ ಪ್ರದೇಶದ ವಾರಣಾಸಿಯಲ್ಲಿ ಕಾಶಿ ವಿಶ್ವನಾಥ ಕಾರಿಡಾರ್ ಲೋಕಾರ್ಪಣೆ ಮಾಡುತ್ತಿರುವ ಹಿನ್ನೆಲೆಯಲ್ಲಿ ಅವರು ಸುದ್ದಿಗೋಷ್ಠಿ ನಡೆಸಿದರು.

ವಿಧಾನಪರಿಷತ್ ಸದಸ್ಯ ಹೆಚ್.ವಿಶ್ವನಾಥ್, ಪ್ರಧಾನಿ ಮೋದಿ ಅವರ ಕಾರ್ಯ ಸ್ವಾಗತ, ಅರ್ಹ. ಇಷ್ಟು ಬಹುದೊಡ್ಡ ಕಾರ್ಯಕ್ರಮದಲ್ಲಿ ಒಂದು ಲೋಪ ಆಗಿದೆ. ವಾರಣಾಸಿ ಜೀರ್ಣೋದ್ಧಾರ ಮಾಡಿದವರನ್ನು ಇಲ್ಲಿ ಮರೆಯಲಾಗಿದೆ ಎಂದು ತಿಳಿಸಿದ್ದಾರೆ.

ಸಾವಿರಾರು ವರ್ಷಗಳ ಹಿಂದೆ ರಾಜ ಮಹಾರಾಜರ ದಾಳಿಗೆ ಕಾಶಿ ತುತ್ತಾಗಿದ್ದು. ಅದನ್ನು  ಇಂದೂರಿನ ಮಹಾರಾಣಿ ಅಹಲ್ಯ ಬಾಯಿ ಔರ್ಕರ್ ರಕ್ಷಣೆ ಮಾಡಿದರು. ಯುದ್ದಕ್ಕೆ ಬದಲಾಗಿ ಬುದ್ದಿವಂತಿಕೆಯಿಂದ ಕಾಶಿ ವಿಶ್ವನಾಥ ದೇವಾಲಯ ಉಳಿಸಿದರು. ಮೊದಲ ಹಿಂದೂ ಧ್ವಜವನ್ನು ಹಾರಿಸಿದವರು ಅಹಲ್ಯ ಬಾಯಿ ಔರ್ಕರ್. ಅವರು ಯಾವಾಗಲೂ ಶಿವನ‌ ಹೆಸರಿನಲ್ಲೇ ಆಡಳಿತ ಮಾಡಿದವರು. ಅವರನ್ನು ಪ್ರಧಾನಿ ಮೋದಿ ಹಾಗೂ ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಮರೆತಿದ್ದಾರೆ. ಇದು ಚರಿತ್ರೆಯನ್ನು ಮರೆತಂತಾಗಿದೆ ಎಂದು ವಿಶ್ವನಾಥ್‌ ವಿಷಾದಿಸಿದ್ದಾರೆ.

ನೀವು ಚರಿತ್ರೆ ಮುಚ್ಚಿ ಹಾಕಲು ಹೊರಟಿದ್ದೀರಾ. ತಕ್ಷಣದಲ್ಲಿ ಆ ಸ್ಥಳದಲ್ಲಿ ಅಹಲ್ಯ ಬಾಯಿ ಔರ್ಕರ್ ಪ್ರತಿಮೆ ಸ್ಥಾಪಿಸಿ. ವಾರಣಾಸಿ ಏರ್ಪೋರ್ಟ್‌‌ಗೆ ಅಹಲ್ಯ ಬಾಯಿ ಔರ್ಕರ್ ಹೆಸರಿಡಿ ಎಂದು  ಎಂದು ಪ್ರಧಾನಿಯವರಲ್ಲಿ ಮನವಿ ಮಾಡಿರುವ ಅವರು, ಕ್ರೈಸ್ತರಿಗೆ ವ್ಯಾಟಿಕನ್, ಮುಸ್ಲಿಮರಿಗೆ ಮೆಕ್ಕಾ ಇದ್ದಂತೆ ಹಿಂದೂಗಳಿಗೆ ಕಾಶಿ ಎಂದು ಅಭಿಪ್ರಾಯಪಟ್ಟಿದ್ದಾರೆ.

ಅಹಲ್ಯಾಬಾಯಿ ಕುರುಬ ಜನಾಂಗದವರು

ಉತ್ತರ ಪ್ರದೇಶದಲ್ಲಿ ಒಂದೂವರೆ ಕೋಟಿ ಜನ ಕುರುಬರು ಇದ್ದಾರೆ. ಕುರುಬ ಜನಾಂಗಕ್ಕೆ ಸೇರಿದ ಅಹಲ್ಯಾಬಾಯಿ. ಅವರನ್ನು ಮರೆತಿರುವುದು ಪ್ರಮಾದ. ಕಾಗಿನೆಲೆ ಸ್ವಾಮಿಗಳ ಜಗದ್ಗುರುಗಳನ್ನು ಮರೆತಿದ್ದೀರಾ? ಕುರುಬರು ನಿಮಗೆ ಅಪಥ್ಯವಾಗುತ್ತಿದ್ದಾರಾ? ಯಾಕೆ ಕುರುಬರನ್ನು ನೀವು ಮರೆಯುತ್ತಿದ್ದೀರಾ. ನಿರಂಜನಾಪುರಿ ಪ್ರಸನ್ನ ಸ್ವಾಮಿಗಳನ್ನು ಕರೆದಿಲ್ಲ. ಬಸವರಾಜ ಬೊಮ್ಮಾಯಿ ಸಹಾ ಮರೆತುಬಿಟ್ಟರಾ? ನಮ್ಮದು ಸಹ ದೊಡ್ಡ ಮಠ ಎಂದು ನೆನಪಿಸಿದ್ದಾರೆ.

ಹಾವೇರಿ ಕಲಬುರಗಿ ರಾಯಚೂರು ಸೇರಿ ನಾಲ್ಕು ಕಡೆ ಇದೆ. ನಮ್ಮ ಕಾಗಿನೆಲೆ ಪಕ್ಕಾ ಹಿಂದೂಗಳ ಮಠ. ಮೊದಲ ಸ್ವಾಮಿಗಳು ಪಕ್ಕಾ ಆರ್‌‌ಎಸ್‌ಎಸ್‌‌ನವರು. ಹಿಂದೂ ಧರ್ಮದ ಪ್ರತಿಪಾದಕರಾಗಿದ್ದವರು. ಅಹಲ್ಯಬಾಯಿ ಸಮಾಜದ ಗುರುಗಳನ್ನು ಮರೆತಿದ್ದೀರಾ. ಕುರುಬರು ಬೇಡವಾ ನಿಮಗೆ? ಎಂದು ಪ್ರಶ್ನಿಸಿದ್ದಾರೆ.

ತಮಗೆ ವಿಶ್ವನಾಥ್‌ ಎಂದು ಹೆಸರಿಟ್ಟ ಹಿನ್ನೆಲೆಯನ್ನು ನೆನೆಸಿಕೊಂಡಿರುವ ಅವರು, ಮಗು ಸಾವನ್ನಪ್ಪಬಾರದು ಅಂತಾ ನಮ್ಮಪ್ಪ ಹರಕೆ ಹೊತ್ತಿದ್ದರು.  ಕಾಶಿಗೆ ಹೋಗಿ ಹರಕೆ‌ ಹೊತ್ತು ನನ್ನ ಹೆಸರು ಇಟ್ಟರು. ಕಾಶಿಯಲ್ಲಿ ಮೋಕ್ಷ ಪಡೆಯಲು ಎಲ್ಲರು ಹಂಬಲಿಸುತ್ತಾರೆ. ಮುಸ್ಲಿಂರಿಗೆ ಮೆಕ್ಕಾ ಇದ್ದಂತೆ ಕ್ರೈಸ್ತರಿಗೆ ರೋಮ್ ಇದ್ದಂತೆ. ಹಿಂದೂಗಳಿಗೆ ಕಾಶಿ ಪವಿತ್ರವಾದದ್ದು ಎಂದು ತಿಳಿಸಿದ್ದಾರೆ.


ಇದನ್ನೂ ಓದಿರಿ: ರಂಗಾಯಣದ ಗೌರವ ಹಾಳುಮಾಡದಿರಿ: ಹಿರಿಯ ಸಾಹಿತಿಗಳು, ರಂಗಕರ್ಮಿಗಳು, ಚಿಂತಕರ ಆಗ್ರಹ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ಯಾಲೆಸ್ತೀನ್‌ಗೆ ವಿಶ್ವಸಂಸ್ಥೆಯ ಪೂರ್ಣ ಸದಸ್ಯತ್ವ ನೀಡುವ ಪ್ರಯತ್ನ ಬೆಂಬಲಿಸಿದ ಭಾರತ

0
ವಿಶ್ವಸಂಸ್ಥೆಯ ಸಂಪೂರ್ಣ ಸದಸ್ಯತ್ವ ಪಡೆಯುವ ಪ್ಯಾಲೆಸ್ತೀನ್‌ನ ಮನವಿಯನ್ನು ಮರು ಪರಿಶೀಲಿಸಿ ಅನುಮೋದಿಸುವ ವಿಶ್ವಾಸವಿದೆ ಎಂದು ಭಾರತ ಬುಧವಾರ ಹೇಳಿದೆ. ಈ ಮೂಲಕ ಪ್ಯಾಲೆಸ್ತೀನ್‌ ವಿಶ್ವಸಂಸ್ಥೆಯ ಪೂರ್ಣ ಸದಸ್ಯತ್ವ ಪಡೆಯುವುದಕ್ಕೆ ಬೆಂಬಲ ವ್ಯಕ್ತಪಡಿಸಿದೆ. ಇಸ್ರೇಲ್ ಮತ್ತು...