Homeಕರ್ನಾಟಕನಮ್ಮ ನಾಯಕ ಅಂದು ಗುಹೆಯೊಳಗೆ, ಇಂದು ನೀರೊಳಗೆ, ಮುಂದೆ ಚಂದ್ರನ ಮೇಲೆ: ಪ್ರಕಾಶ್ ರಾಜ್

ನಮ್ಮ ನಾಯಕ ಅಂದು ಗುಹೆಯೊಳಗೆ, ಇಂದು ನೀರೊಳಗೆ, ಮುಂದೆ ಚಂದ್ರನ ಮೇಲೆ: ಪ್ರಕಾಶ್ ರಾಜ್

- Advertisement -
- Advertisement -

“ನಮಗೊಬ್ಬ ನಾಯಕನಿದ್ದಾನೆ. ಆತ 2019ರಲ್ಲಿ ಕ್ಯಾಮರಾ ಮ್ಯಾನ್‌ಗಳ ಜೊತೆ ಗುಹೆ ಸೇರ್ಕೊಂಡ. ಈಗ ಚುನಾವಣೆ ಬರುವಾಗ ನೀರಿನೊಳಗೆ ಹೋಗಿದ್ದಾನೆ. ಮುಂದಿನ ಚುನಾವಣೆಗೆ ಚಂದ್ರನ ಮೇಲೆ ನಿಂತುಕೊಳ್ಳುತ್ತಾನೆ. ಆತ 20ನೇ ಶತಮಾನದ ದೇಶದ ನಾಯಕನಾ?” ಎಂದು ಬಹುಭಾಷಾ ನಟ ಪ್ರಕಾಶ್ ರಾಜ್ ಪ್ರಧಾನಿ ಮೋದಿ ವಿರುದ್ದ ಪರೋಕ್ಷಾ ವಾಗ್ದಾಳಿ ನಡೆಸಿದ್ದಾರೆ.

ಡೆಮಾಕ್ರಟಿಕ್ ಯೂಥ್ ಫೆಡರೇಶನ್ ಆಫ್ ಇಂಡಿಯಾ (ಡಿವೈಎಫ್ಐ) ದಕ್ಷಿಣ ಕನ್ನಡ ಜಿಲ್ಲೆ ಉಳ್ಳಾಲದಲ್ಲಿ ಆಯೋಜಿಸಿದ್ದ ಮೂರು ದಿನಗಳ 12ನೇ ರಾಜ್ಯ ಮಟ್ಟದ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಅವರು ಮಂಗಳವಾರ ಮಾತನಾಡಿದರು.

“ದೇವಸ್ಥಾನದ ಉದ್ಘಾಟನೆಗೆ ಉಪವಾಸ ಮಾಡುವ ನಾಯಕರಿದ್ದಾರೆ. ಹಾಗಾಗಿ, ನಾವು ಮತ್ತೆ ಸ್ವಾತಂತ್ರ್ಯವನ್ನು, ಪ್ರಜಾಪ್ರಭುತ್ವವನ್ನು ನಮ್ಮ ಕನಸನ್ನು ಸಾರ್ಥಕಗೊಳಿಸುವ ದಾರಿಯನ್ನು ನೋಡಿಕೊಳ್ಳಲು ಇಲ್ಲಿದ್ದೇವೆ” ಎಂದು ಸಮ್ಮೇಳನವನ್ನು ಉದ್ದೇಶಿಸಿ ಪ್ರಕಾಶ್ ರಾಜ್ ಹೇಳಿದರು.

“ಧರ್ಮಗಳನ್ನು ನಂಬುವವರ ಬಗ್ಗೆ ನನಗೆ ಸಮಸ್ಯೆ ಇಲ್ಲ. ಅವರವರ ಭಾವಕ್ಕೆ, ಭಕ್ತಿಗೆ ಧರ್ಮ ಆಚರಿಸಲಿ. ಆದರೆ, ಎಲ್ಲಾ ಧರ್ಮಗಳಲ್ಲಿರುವ ಅಂಧ ಭಕ್ತರ ಬಗ್ಗೆ ನನಗೆ ಸಮಸ್ಯೆಯಿದೆ” ಎಂದರು.

“ನಾನೊಬ್ಬ ಕಲಾವಿದ, ನಾನೊಬ್ಬ ನಿರಂತರ ವಿರೋಧ ಪಕ್ಷ. ನಾನು ಯಾವ ಪಕ್ಷ ಎಂದು ಹಲವರು ಕೇಳುತ್ತಾರೆ. ನಾನು ಯಾವುದೇ ಪಕ್ಷವಲ್ಲ, ನಾನು ಜನರ ಪಕ್ಷ. ಕಲಾವಿದನಾಗಿ ಮಾತನಾಡುವುದು, ಮಾತನಾಡಬೇಕಾಗಿರುವುದು ನನ್ನ ಜವಾಬ್ದಾರಿ. ಯಾವುದಾದರು ಪಕ್ಷ ಸೇರಿದ್ರೆ ಎಲ್ಲೋ ಇರ್ತಿದ್ರಿ ಎಂದು ಹಲವರು ನನಗೆ ಹೇಳುತ್ತಾರೆ. ಯಾಕಿರಬೇಕು? ನಾನೇನು ಬಡವ ಅಲ್ಲ. ಜನರ ಶ್ರೀಮಂತಿಕೆ ನನ್ನತ್ರ ಇದೆ. ನಾನು ಕಳೆದುಕೊಳ್ಳುವಷ್ಟು ಶ್ರೀಮಂತ. ನಿಮ್ಮ ಹಾಗೆ ಸೇರಿಸಿ ಇಡುವಷ್ಟು ಭಿಕ್ಷುಕ ಅಲ್ಲ” ಎಂದು ಹೇಳಿದರು.

“ನಮ್ಮ ದೇಹಕ್ಕಾದ ಗಾಯಗಳು ಕೆಲವೊಮ್ಮೆ ನಾವು ಸುಮ್ಮನ್ನಿದ್ದರೂ ವಾಸಿಯಾಗಿ ಬಿಡುತ್ತವೆ. ಆದರೆ, ದೇಶಕ್ಕಾದ ಗಾಯಗಳು ಸುಮ್ಮನ್ನಿದ್ದಷ್ಟು ಹೆಚ್ಚಾಗುತ್ತವೆ. ನಾವು ಸುಮ್ಮನಿದ್ದಷ್ಟು ಸಮಾಜದ ಗಾಯಗಳು ಹೆಚ್ಚಾಗುತ್ತವೆ. ಅದರಲ್ಲೂ ಧ್ವನಿಯಿಲ್ಲದವರಿಗೆ ಆಗುವ ಗಾಯಗಳು, ಅಲ್ಪ ಸಂಖ್ಯಾತರಿಗೆ ಆಗುವ ಗಾಯಗಳು, ಪಕ್ಕಕ್ಕೆ ತಳ್ಳಿದವರಿಗೆ ಆಗುವ ಗಾಯಗಳು ಹೆಚ್ಚಾಗುತ್ತವೆ. ನಮ್ಮ ಬೆರಳಿಗೆ ಏಟಾದರೆ, ನನ್ನ ಹೆಬ್ಬೆರಳನ್ನು ಕತ್ತರಿಸಿದರೆ, ಅದು ನನ್ನ ನೋವು ಮಾತ್ರ. ಆದರೆ, ಏಕಲವ್ಯನ ಬೆರಳನ್ನು ಕಡಿದರೆ ಅದು ಎಲ್ಲರ ನೋವಾಗಬೇಕು” ಎಂದರು.

“ರಾಜ್ ಕುಮಾರ್, ಎಂಜಿಆರ್, ಎನ್‌ಟಿಆರ್ ಅವರಂತೆ ಈಗ ಸಿನಿಮಾ ನಟರು ರಾಜಕಾರಣಕ್ಕೆ ಬಂದರೆ ಹೇಗಿರುತ್ತದೆ? ಎಂದು ನನ್ನನ್ನು ಒಬ್ಬರು ಕೇಳಿದರು. ಆದರೆ, ಅದಕ್ಕೆ ಅವಕಾಶವೇ ಕೊಟ್ಟಿಲ್ಲ ಅಲ್ವಾ. ಅವನೇ ದೊಡ್ಡ ನಟ ಆಗಿ ಬಿಟ್ಟಿದ್ದಾನಲ್ಲ. ದಿನಕ್ಕೆ ಐದು ವಸ್ತ್ರಗಳನ್ನು ಯಾರಾದರು ಬದಲಾಯಿಸುತ್ತಾರಾ? ಇದು ಯಾರಪ್ಪನ ದುಡ್ಡು?” ಎಂದು ಪ್ರಶ್ನಿಸಿದರು.

ಮೊನ್ನೆ 11 ದಿನಗಳ ಕಾಲ ಉಪವಾಸ ಮಾಡಿ ಓಡಾಡಿದ್ದಾನೆ. ಅಂದರೆ, ದೇಶ ಒಬ್ಬ ಪ್ರಧಾನಿ ಇಲ್ಲದೆ 11 ದಿನ ನಡೆಯಿತು ಎಂದರ್ಥ. ಸಬ್ಕಾ ಸಾಥ್ ಸಬ್ಕಾ ವಿಕಾಸ್, ಬಾಯಿಯೋ ಬೆಹನೋ ಎನ್ನುತ್ತಾರೆ. ಈಗ ಕೋಟಿ ಚೆನ್ನಯ್ಯರನ್ನು ಕಿಡ್ನಾಪ್ ಮಾಡೋಕೆ ಬಂದಿದ್ದಾರೆ. ಆದರೆ, ನೀವು ಬುದ್ದಿ ಕಳಿಸಿದ್ದೀರಿ. ಒಂದೇ ಭಾರತ್ ಎಕ್ಸ್ ಪ್ರೆಸ್‌ಗೆ ಆತ ಫ್ಲ್ಯಾಗ್ ತೋರಿದಷ್ಟು ಸ್ಟೇಷನ್ ಮಾಸ್ಟರ್ ಕೂಡ ರೈಲುಗಳಿಗೆ ಫ್ಲ್ಯಾಗ್ ತೋರಿಸಿರಲು ಸಾಧ್ಯವಿಲ್ಲ. ಮಣಿಪುರ ಹೊತ್ತಿ ಉರಿಯುತ್ತಿದೆ. ಆತ ಅಲಹಾಬಾದ್‌ನಲ್ಲಿ ಐದು ವಂದೇ ಭಾರತ್ ರೈಲು ಉದ್ಘಾಟಿಸುತ್ತಿದ್ದೇನೆ ಎಂದು ಟ್ವೀಟ್ ಮಾಡಿದ್ದ. ಆಗ ನಾನು, ಅದರಲ್ಲಿ ಒಂದಾದರು ಮಣಿಪುರರಕ್ಕೆ ಇದೆಯಾ? ಎಂದು ಕೇಳಿದೆ. ಆತ ಟ್ವೀಟ್ ಡಿಲಿಟ್ ಮಾಡಿದ. ಅಂದರೆ, ನಿರಂತರವಾಗಿ ಪ್ರಶ್ನಿಸಿದರೆ ಕೇಳಿಸಿಕೊಳ್ಳುತ್ತಾರೆ. ಈಗ ನಾವು ಪ್ರಶ್ನೆ ಮಾಡಬೇಕು ಎಂದರು.

ಇದನ್ನೂ ಓದಿ : ‘ಮಾನವತಾವಾದಿ’ ಸಂವಿಧಾನವನ್ನು ‘ಮನುವಾದಿ’ ಮಾಡಲು ಹೊರಟಿದ್ದಾರೆ: ಪ್ರೊ. ನರೇಂದ್ರ ನಾಯಕ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಅರವಿಂದ್ ಕೇಜ್ರಿವಾಲ್, ಕೆ. ಕವಿತಾಗೆ ನೋ ರಿಲೀಫ್‌: ನ್ಯಾಯಾಂಗ ಬಂಧನ ಮೇ 7ರವರೆಗೆ ವಿಸ್ತರಣೆ

0
ದೆಹಲಿ ಅಬಕಾರಿ ನೀತಿಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಭಾರತ್ ರಾಷ್ಟ್ರ ಸಮಿತಿ (ಬಿಆರ್‌ಎಸ್) ನಾಯಕಿ ಕೆ ಕವಿತಾ ಅವರ ನ್ಯಾಯಾಂಗ ಬಂಧನವನ್ನು...