HomeಚಳವಳಿAFSPA ರದ್ದತಿಗೆ ಆಗ್ರಹಿಸಿ 70 ಕಿ.ಮೀ ಪ್ರತಿಭಟನಾ ಮೆರವಣಿಗೆ ನಡೆಸುತ್ತಿರುವ ನಾಗಾಲ್ಯಾಂಡ್‌ ನಾಗರಿಕರು

AFSPA ರದ್ದತಿಗೆ ಆಗ್ರಹಿಸಿ 70 ಕಿ.ಮೀ ಪ್ರತಿಭಟನಾ ಮೆರವಣಿಗೆ ನಡೆಸುತ್ತಿರುವ ನಾಗಾಲ್ಯಾಂಡ್‌ ನಾಗರಿಕರು

- Advertisement -
- Advertisement -

ನಾಗಾಲ್ಯಾಂಡ್‌ನಿಂದ ವಿವಾದಿತ ಸಶಸ್ತ್ರ ಪಡೆಗಳ (ವಿಶೇಷ ಅಧಿಕಾರ) ಕಾಯ್ದೆ (AFSPA) ಅನ್ನು ಸಂಪೂರ್ಣವಾಗಿ ರದ್ದುಗೊಳಿಸಬೇಕು ಎಂದು ಆಗ್ರಹಿಸಿ ನಾಗಾಲ್ಯಾಂಡ್‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌ ರಾಜ್ಯದ ಸಮಾನ ಮನಸ್ಕ ನಾಗರಿಕರು‌‌‌‌‌‌‌‌‌‌‌‌‌‌‌‌ ನಡೆಸುತ್ತಿರುವ ಪ್ರತಿಭಟನಾ ಮೆರವಣಿಗೆ ಎರಡನೇ ದಿನಕ್ಕೆ ಕಾಲಿಟ್ಟಿದೆ.

ಕಳೆದ ತಿಂಗಳು ಸೋಮ ಜಿಲ್ಲೆಯಲ್ಲಿ ಭದ್ರತಾ ಪಡೆಗಳು 14 ನಾಗರಿಕರನ್ನು ಹತ್ಯೆ ಮಾಡಿದ್ದನ್ನು ವಿರೋಧಿಸಿ ನಾಗಾಲ್ಯಾಂಡ್‌ನ ನೂರಾರು ಜನರು ಸೋಮವಾರದಿಂದ ಆರಂಭವಾಗಿರುವ “AFSPA ವಿರುದ್ಧದ ಮೆರವಣಿಗೆ ”ಯಲ್ಲಿ ಭಾಗವಹಿಸಿದ್ದಾರೆ.

ಎರಡು ದಿನಗಳಲ್ಲಿ, ನಾಗಾಲ್ಯಾಂಡ್‌ನ ವಾಣಿಜ್ಯ ಕೇಂದ್ರವಾದ ದಿಮಾಪುರ್‌ನಿಂದ ರಾಜ್ಯದ ರಾಜಧಾನಿ ಕೊಹಿಮಾದವರೆಗೆ ಪ್ರತಿಭಟನಾಕಾರರು ಮೆರವಣಿಗೆ ನಡೆಸುತ್ತಿದ್ದಾರೆ. ವಾಕಥಾನ್‌ಗೆ ರಾಜ್ಯದ ವಿವಿಧ ಬುಡಕಟ್ಟು ಸಂಸ್ಥೆಗಳು ಮತ್ತು ನಾಗರಿಕ ಸಂಘಟನೆಗಳ ಬೆಂಬಲ ಸಿಕ್ಕಿದೆ.

ಇದನ್ನೂ ಓದಿ: ನಾಗಾಲ್ಯಾಂಡ್‌ AFSPA ವಿವಾದ; 45 ದಿನಗಳಲ್ಲಿ ‘ಸಕಾರಾತ್ಮಕ ಬೆಳವಣಿಗೆ’: ಅಸ್ಸಾಂ ಸಿಎಂ ಭರವಸೆ

ದಿಮಾಪುರ್‌ನಿಂದ ರಾಜಭವನ ಕೊಹಿಮಾವರೆಗೆ ಎರಡು ದಿನಗಳಲ್ಲಿ ಸುಮಾರು 70 ಕಿಲೋಮೀಟರ್ ದೂರವನ್ನು ಕಾಲ್ನಡಿಗೆಯಲ್ಲಿ ಕ್ರಮಿಸಲಿದೆ. ಕೊಹಿಮಾದಲ್ಲಿ ರಾಜ್ಯಪಾಲರಿಗೆ ಜ್ಞಾಪಕ ಪತ್ರವನ್ನು ಸಲ್ಲಿಸಿ ವಾಕ್‌ಥಾನ್‌ ನಿಲ್ಲಿಸಲಾಗುತ್ತದೆ.

ಇದೊಂದು ಸಾಮೂಹಿಕವಾಗಿ ಸಾರ್ವಜನಿಕರು ಆರಂಭಿಸಿರುವ ಪ್ರತಿಭಟನಾ ಮೆರವಣಿಗೆಯಾಗಿದ್ದು, ಯಾವುದೇ ನಾಗರಿಕ ಸಮಾಜ ಸಂಘಟನೆಗಳು ಅಥವಾ ರಾಜಕೀಯ ಪಕ್ಷಗಳ ನೇತೃತ್ವದಲ್ಲಿ ನಡೆಯುತ್ತಿಲ್ಲ ಎಂದು ರ್‍ಯಾಲಿ ಸಂಘಟಕರೊಬ್ಬರು ಸ್ಪಷ್ಟಪಡಿಸಿದ್ದಾರೆ.

ವಿವಾದಿತ ‘ಸಶಸ್ತ್ರ ಪಡೆಗಳ (ವಿಶೇಷ ಅಧಿಕಾರ) ಕಾಯ್ದೆ-1958’ (AFSPA) ಯನ್ನು ವಾಪಾಸ್ ಪಡೆಯುವ ಕುರಿತು ನಿರ್ಧರಿಸಲು ಸಮತಿ ರಚಿಸಲಾಗುವುದು ಎಂದು ಗೃಹ ಸಚಿವ ಅಮಿತ್ ಶಾರೊಂದಿಗಿನ ಸಭೆಯ ಬಳಿಕ ನಾಗಾಲ್ಯಾಂಡ್ ಮುಖ್ಯಮಂತ್ರಿ ನೆಫಿಯು ರಿಯೊ ತಿಳಿಸಿದ್ದರು.

ಡಿಸೆಂಬರ್ 4 ಮತ್ತು 5 ರಂದು ನಾಗಾಲ್ಯಾಂಡ್‌ನ ಸೋಮ ಜಿಲ್ಲೆಯಲ್ಲಿ ನಡೆದ ಭಯೋತ್ಪಾದನಾ-ವಿರೋಧಿ ಕಾರ್ಯಾಚರಣೆಯಲ್ಲಿ 14 ನಾಗರಿಕರು ಮತ್ತು ಇತರ ಎಂಟು ಮಂದಿ ಭದ್ರತಾ ಪಡೆಗಳಿಂದ ಕೊಲ್ಲಲ್ಪಟ್ಟಿದ್ದರು. ಈ ಘಟನೆಯು ದೇಶಾದ್ಯಂತ ಭಾರೀ ಆಕ್ರೋಶಕ್ಕೆ ಕಾರಣವಾಗಿ, ಈ AFSPA ಕಾನೂನನ್ನು ಹಿಂತೆಗೆದುಕೊಳ್ಳುವ ಬೇಡಿಕೆಗೆ ಮತ್ತಷ್ಟು ಬಲ ನೀಡಿತು.


ಇದನ್ನೂ ಓದಿ: AFSPA ರದ್ದುಗೊಳಿಸಲು ಒತ್ತಡ: ಜ.10 ಮತ್ತು 11ಕ್ಕೆ ನಾಗಾಲ್ಯಾಂಡ್ ಜನರಿಂದ ರ್‍ಯಾಲಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ಹೆಚ್‌.ಡಿ ರೇವಣ್ಣ ನಾಲ್ಕು ದಿನ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಎನ್ನಲಾದ ಮನೆ ಕೆಲಸದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು  ನಾಲ್ಕು ದಿನಗಳ ಕಾಲ ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ನೀಡಿ...