ಮಂದಿರ ಕಟ್ಟಿದರೆ ಕೊರೊನಾ ನಿಯಂತ್ರಣ ಸಾಧ್ಯವೆಂದು ಕೆಲವರು ಭಾವಿಸಿದ್ದಾರೆ: ಮೋದಿ ವಿರುದ್ದ ಶರದ್ ಪವಾರ್ ವಾಗ್ದಾಳಿ

ಕೆಲವು ಜನರು ಮಂದಿರ ಕಟ್ಟಿದ ನಂತರ ಕೊರೊನಾ ವೈರಸ್ ನಿಯಂತ್ರಣ ಸಾಧ್ಯ ಎಂದು ಭಾವಿಸಿದ್ದಾರೆ ಎಂದು ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ ಮುಖ್ಯಸ್ಥ ಶರದ್ ಪವಾರ್ ಪ್ರಧಾನಿ ನರೇಂದ್ರ ಮೋದಿಯವರ ಮೇಲೆ ವಾಗ್ದಾಳಿ ಮಾಡಿದ್ದಾರೆ.

ಉತ್ತರಪ್ರದೇಶದ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದ ಮೇಲ್ವಿಚಾರಣೆಗೆ ರಚಿಸಿದ ಟ್ರಸ್ಟ್ ಮಂದಿರಕ್ಕೆ ಅಡಿಗಲ್ಲು ಹಾಕುವ ಕಾರ್ಯಕ್ರಮಕ್ಕೆ ಮೋದಿಗೆ ಆಹ್ವಾನ ಕಳುಹಿಸಿದ ಒಂದು ದಿನದ ನಂತದ ಶರದ್ ಪವಾರ್ ಈ ಹೇಳಿಕೆ ನೀಡಿದ್ದಾರೆ.

“ಕೊರೊನಾ ವೈರಸ್ ನಿರ್ಮೂಲನೆ ಮಹಾರಾಷ್ಟ್ರ ಸರ್ಕಾರದ ಆದ್ಯತೆಯಾಗಿದೆ. ಆದರೆ ಮಂದಿರ ನಿರ್ಮಿಸಿದ ನಂತರ ಕೊರೊನಾ ವೈರಸ್ ಹೋಗುತ್ತದೆ ಎಂದು ಕೆಲವರು ಭಾವಿಸುತ್ತಾರೆ, ಅದಕ್ಕಾಗಿಯೇ ಅವರು ಕಾರ್ಯಕ್ರಮವನ್ನು ಆಯೋಜಿಸುತ್ತಿದ್ದಾರೆ” ಎಂದು ಶರದ್ ಪವಾರ್ ಸೋಲಾಪುರದಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ಪ್ರಸ್ತುತ ಮಹಾರಾಷ್ಟ್ರ ಸರ್ಕಾರಲ್ಲಿ ಎನ್‌ಸಿಪಿಯ ಮೈತ್ರಿ ಪಕ್ಷವಾಗಿರುವ ಶಿವಸೇನೆ ರಾಮ ಮಂದಿರದ ನಿರ್ಮಾಣಕ್ಕೆ ಬೆಂಬಲ ನೀಡುತ್ತಿದೆ. ಈ ವಿಷಯವನ್ನು ರಾಜಕೀಯಗೊಳಿಸಬಾರದು ಎಂದು ಶಿವಸೇನೆ ಸಂಸದ ಅರವಿಂದ ಸಾವಂತ್ ಹೇಳಿದ್ದಾರೆ.

“ರಾಮ ದೇವರು ನಂಬಿಕೆಯ ವಿಷಯವಾಗಿದ್ದು, ಅದಕ್ಕೆ ರಾಜಕೀಯ ಬಣ್ಣವನ್ನು ನೀಡುವ ಅಗತ್ಯವಿಲ್ಲ. ಶಿವಸೇನೆ ರಾಮ ಮಂದಿರ ಚಳವಳಿಯ ಪ್ರಮುಖ ಬೆಳಕು. ಸೇನಾ ಅಧ್ಯಕ್ಷ ಉದ್ಧವ್ ಠಾಕ್ರೆ ಮುಖ್ಯಮಂತ್ರಿಯಾಗುವ ಮೊದಲು ಮತ್ತು ಅಧಿಕಾರ ವಹಿಸಿಕೊಂಡ ನಂತರವೂ ಅಯೋಧ್ಯೆಗೆ ಭೇಟಿ ನೀಡಿದ್ದರು” ಎಂದು ಅವರು ಹೇಳಿದ್ದಾರೆ.

ಬಜೆಪಿ ಮುಖಂಡ ಹಾಗೂ ಮಾಜಿ ಸಚಿವರಾದ ಸುಧೀರ್ ಮುಂಗಂತಿವಾರ್ ಮಂದಿರದ ನಿರ್ಮಾಣವು ನಂಬಿಕೆಯ ವಿಷಯವಾಗಿದೆ ಎಂದಿದ್ದಾರೆಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.

“ರಾಮ ಮಂದಿರವನ್ನು ನಿರ್ಮಿಸುವುದರಿಂದ ಕೊರೊನಾ ಹೋಗುವುದಿಲ್ಲ ಎಂದು ಎಲ್ಲರಿಗೂ ತಿಳಿದಿದೆ. ಅವರು ತಮ್ಮ ರಾಜ್ಯದತ್ತ ಗಮನ ಹರಿಸಬೇಕು. ತಮ್ಮ ಮಂತ್ರಿಗಳಿಗೆ ದುಬಾರಿ ಕಾರುಗಳನ್ನು ಖರೀದಿಸುವ ಮೂಲಕ, ರೈತರಿಗೆ ಸಾಲ ಮನ್ನಾ ಮಾಡದೇ ಮಾಸ್ಕ್‌ಗಳನ್ನು ಕಾಳಸಂತೆಯಲ್ಲಿ ಮಾರಿದರೆ ಕೊರೊನಾ ಹೋಗುತ್ತಿದೆಯೆ?… ಈ ಅಗ್ಗದ ರಾಜಕಾರಣದ ಅಗತ್ಯವಿಲ್ಲ, ಮಂದಿರವು ಲಕ್ಷಾಂತರ ಹಿಂದೂಗಳ ನಂಬಿಕೆಯ ವಿಷಯವಾಗಿದೆ” ಎಂದು ಅವರು ಶರದ್ ಪವಾರ್ ಅವರಿಗೆ ತಿರುಗೇಟು ನೀಡಿದ್ದಾರೆ.

ಈ ಮಧ್ಯೆ, ಲಾಕ್ ಡೌನ್ ನಿಂದ ಉಂಟಾದ ಸಾಂಕ್ರಾಮಿಕ ಮತ್ತು ಆರ್ಥಿಕತೆಯ ಬಗ್ಗೆ ಹೆಚ್ಚಿನ ಗಮನ ನೀಡಬೇಕೆಂದು ಪವಾರ್ ಕೇಂದ್ರ ಮತ್ತು ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು ಎಂದು ಎನ್‌ಡಿಟಿವಿ ವರದಿ ಮಾಡಿದೆ.

“ನಾವು ಯಾವಾಗಲೂ ಆದ್ಯತೆ ನೀಡಬೇಕಾದುದರ ಬಗ್ಗೆ ಯೋಚಿಸುತ್ತೇವೆ” ಎಂದು ಅವರು ಹೇಳಿದರು. “ಈಗ ಕೊರೊನಾ ವೈರಸ್ ಸೋಂಕಿತರಿಗೆ ಚೇತರಿಸಿಕೊಳ್ಳಲು ಸಹಾಯ ಮಾಡುವುದು ನಮ್ಮ ಆದ್ಯತೆಯಾಗಿದೆ. ವೈರಸ್ ಕಾರಣ ಲಾಕ್‌ಡೌನ್ ಅನ್ನು ಜಾರಿಗೊಳಿಸಬೇಕಾಯಿತು. ಆರ್ಥಿಕ ಬಿಕ್ಕಟ್ಟು, ಸಣ್ಣ ಉದ್ಯಮಗಳ ಮೇಲೆ ಅದು ಬೀರಿದ ಪರಿಣಾಮದ ಬಗ್ಗೆ ನಮಗೆ ಕಾಳಜಿ ಇದೆ. ಅದಕ್ಕಾಗಿಯೇ ಕೇಂದ್ರ ಸರ್ಕಾರ ವಿಶೇಷ ಗಮನ ಹರಿಸಬೇಕೆಂದು ನಾನು ವಿನಂತಿಸುತ್ತೇನೆ … ಆರ್ಥಿಕ ಬಿಕ್ಕಟ್ಟಿನಿಂದ ಹೊರಬರಲು ಜನರಿಗೆ ಹೇಗೆ ಸಹಾಯ ಮಾಡಬೇಕೆಂಬುದರ ಬಗ್ಗೆ ದೆಹಲಿಯಲ್ಲಿ ಚರ್ಚೆ ನಡೆಯಬೇಕು” ಎಂದು ಅವರು ಆಗ್ರಹಿಸಿದ್ದಾರೆ.


ಓದಿ: ಪೊಲೀಸರ ರಕ್ತದಲ್ಲಿ ತೊಯ್ದ ‘ಉತ್ತಮ’ಪ್ರದೇಶ : ಶಿವಸೇನೆ ಟೀಕೆ


 

1 COMMENT

  1. When case go against babri masjid, not only India but world wide lot of losses and desease appear , during the period of built up lot more crisis will come up . Let the govt hold the decision for the time being.

LEAVE A REPLY

Please enter your comment!
Please enter your name here