Homeಕರ್ನಾಟಕಸಿದ್ದರಾಮಯ್ಯ ಕೊಲೆಗೆ ಕರೆ ನೀಡಿದ ಅಶ್ವತ್ಥ ನಾರಾಯಣ ವಿರುದ್ಧ ರಾಜ್ಯಾದ್ಯಂತ ಖಂಡನೆ ವ್ಯಕ್ತ

ಸಿದ್ದರಾಮಯ್ಯ ಕೊಲೆಗೆ ಕರೆ ನೀಡಿದ ಅಶ್ವತ್ಥ ನಾರಾಯಣ ವಿರುದ್ಧ ರಾಜ್ಯಾದ್ಯಂತ ಖಂಡನೆ ವ್ಯಕ್ತ

- Advertisement -
- Advertisement -

ಉನ್ನತ ಶಿಕ್ಷಣ ಸಚಿವ ಸಿಎನ್ ಅಶ್ವತ್ಥ ನಾರಾಯಣ ಅವರು ಫೆ.15, ಬುಧವಾರದಂದು ಮಂಡ್ಯದಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುವ ವೇಳೆ, ”ಟಿಪ್ಪುವನ್ನು ಹೊಡೆದಾಕಿದಂತೆ ಸಿದ್ದರಾಮಯ್ಯರನ್ನು ಹೊಡೆದುಹಾಕಿ” ಎಂದು ಕರೆ ಕೊಟ್ಟಿದ್ದಾರೆ. ಅವರ ಈ ವಿವಾದಾತ್ಮಕ ಹೇಳಿಕೆಯನ್ನು ರಾಜ್ಯಾದ್ಯಂತ ಅನೇಕ ನಾಯಕರು ಖಂಡಿಸಿದ್ದಾರೆ.

ಈ ಬಗ್ಗೆ ಪತ್ರಕರ್ತ ದಿನೇಶ್ ಅಮಿನ್ ಮಟ್ಟು ಅವರು ಹೀಗೆ ಬರೆದಿದ್ದಾರೆ.. ಟಿಪ್ಪುವನ್ನು ಉರಿಗೌಡ, ನಂಜೇಗೌಡ ಹೊಡೆದು ಹಾಕಿದ ಹಾಗೆ ಸಿದ್ದರಾಮಯ್ಯನವರನ್ನು ಮಾಡಿ ಎಂದು‌ ಸಚಿವ ಡಾ. ಅಶ್ವತ್ಥ ನಾರಾಯಣ ಬಹಿರಂಗ ಸಭೆಯಲ್ಲಿ ಪ್ರಚೋದಿಸಿದ್ದಾರೆ. ಮಾಧ್ಯಮದ ಮಂದಿ, ಬಿಜೆಪಿಯ ಸಜ್ಜನರು ಮಾತ್ರವಲ್ಲ ಕಾಂಗ್ರೆಸ್ ನಾಯಕರು ಕೂಡಾ ಮೌನಧಾರಣೆ ಮಾಡಿದ್ದಾರೆ. ಒಂದೊಮ್ಮೆ ಇದೇ ಮಾತನ್ನು ಬಿಜೆಪಿಯ ಸಚಿವರು, ಮುಖ್ಯಮಂತ್ರಿಗಳು ಇಲ್ಲವೆ ಪ್ರಧಾನಮಂತ್ರಿ ಅವರನ್ನು ಉದ್ದೇಶಿಸಿ ಹೇಳಿದ್ದರೆ ಏನಾಗುತ್ತಿತ್ತು? ಇಡೀ ದೇಶದಲ್ಲಿ ಸುಂಟರಗಾಳಿಯೋ, ಸುನಾಮಿಯೋ, ಭೂಕಂಪವೊ ಆಗುತ್ತಿತ್ತು. ಗೊತ್ತಲ್ಲಾ, ಮಣಿಶಂಕರ್ ಅಯ್ಯರ್, ಚಾಯ್ ವಾಲಾ ಎಂದು ಕರೆದ ಕಾರಣಕ್ಕಾಗಿಯೇ ನರೇಂದ್ರಮೋದಿಯವರು ಪ್ರಧಾನಿಯಾಗಿಯೇ ಬಿಟ್ಟರು. ಮುಂದಿನ ಚುನಾವಣೆಯಲ್ಲಿ ಬಿಜೆಪಿ ಸೋಲುತ್ತದೆ ಎಂದು ನಿಮಗೇನಾದರೂ ಅನಿಸುತ್ತಾ? ಎಂದು ಬರೆದಿದ್ದಾರೆ.

ಹೋರಾಟಗಾರ, ನಟ ಚೇತನ್ ಕೂಡ ಖಂಡಿಸಿದ್ದು, ”ಟಿಪ್ಪುವನ್ನು ಪ್ರೀತಿಸುವವರು ‘ಇರಬಾರದು’ ಎಂಬ ಬಿಜೆಪಿಯ ಕಟೀಲು ಮತ್ತು ಟಿಪ್ಪುವಿನಂತೆ ಸಿದ್ದರಾಮಯ್ಯ ಅವರನ್ನು ‘ಮುಗಿಯಬೇಕು’ ಎಂಬ ಅಶ್ವತ್ಥ ನಾರಾಯಣ ಅವರ ಹೇಳಿಕೆಗಳು ಹಿಂಸೆಯ ಕರೆಗಳು! ನಮ್ಮ ಪ್ರಜಾಪ್ರಭುತ್ವದಲ್ಲಿ ಇಂತಹ ಮಾತುಗಳನ್ನು ಸಹಿಸಲು ಸಾಧ್ಯವಿಲ್ಲ. ಈ 2 ಹಿಂಸಾಚಾರ ಪ್ರಚೋದಕರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು” ಎಂದು ಹೇಳಿದ್ದಾರೆ.

ಮಾಜಿ ಸಚಿವ ಡಾ.ಎಚ್‌ಸಿ ಮಹಾದೇವಪ್ಪ ಟ್ವೀಟ್ ಮಾಡಿದ್ದು, ”ಕೊಡಗಿಗೆ ಹೋದಾಗ ಬಿಜೆಪಿಗರು ಸಿದ್ದರಾಮಯ್ಯ ಅವರ ಮೇಲೆ ಮೊಟ್ಟೆ ಹೊಡೆಯುವ ಕೆಲಸ ಮಾಡಿದ್ದರು, ಈಗ ಅವರ ಹತ್ಯೆಗೆ ಪ್ರಚೋದಿಸುವ ಹೇಳಿಕೆಯನ್ನು ಸಚಿವರೇ ಕೊಡುತ್ತಿದ್ದಾರೆ. ರಾಜ್ಯದಲ್ಲಿ ಗೃಹ ಇಲಾಖೆ ಏನಾದರೂ ಬದುಕಿದ್ದರೆ ಮೊದಲು ಬೇಜವಾಬ್ದಾರಿ ಸಚಿವ ಅಶ್ವತ್ಥ ನಾರಾಯಣ ಅವರ ಮೇಲೆ ಕ್ರಮ ಜರುಗಿಸಲಿ ಮತ್ತು ಈತನನ್ನು ಸಂಪುಟದಿಂದ ವಜಾ ಮಾಡಬೇಕು” ಎಂದು ಆಗ್ರಹಿಸಿದ್ದಾರೆ.

ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ ಹರಿಪ್ರಸಾದ್ ಅವರು, ”ಸಿದ್ದರಾಮಯ್ಯರನ್ನ ಕೊಲೆ ಮಾಡಲು ಅಶ್ವತ್ಥ ನಾರಾಯಣ ಬಹಿರಂಗ ಕರೆ ನೀಡುತ್ತಿದ್ದಾರೆ. ಇದು ಕ್ರೂರವಾದದ್ದು, ರಾಜ್ಯದ ಕ್ಯಾಬಿನೆಟ್ ಮಂತ್ರಿಯೊಬ್ಬರು ಕೊಲೆಗೆ ಬಹಿರಂಗವಾಗಿ ಕರೆ ನೀಡುತ್ತಾರೆ. ಗಾಂಧೀಜಿ ಕೊಲೆಗಾರರ ​​ಬಗ್ಗೆ ಸಹಾನುಭೂತಿ ಹೊಂದಿರುವ ಜನರಿಂದ ಇನ್ನೇನು ನಿರೀಕ್ಷಿಸಬಹುದು? ಪೊಲೀಸರು ಸಚಿವರ ವಿರುದ್ಧ ಸುಮೋಟೋ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಬೇಕು” ಎಂದು ಟ್ವೀಟ್ ಮಾಡಿದ್ದಾರೆ.

ಕೆಪಿಸಿಸಿ ಸಂವಹನ ವಿಭಾಗದ ಮುಖ್ಯಸ್ಥ ಪ್ರಿಯಾಂಕ್ ಖರ್ಗೆ ಅವರು, ”ಅಶ್ವತ್ಥ ನಾರಾಯಣ ಅವರಿಂದ ಇದನ್ನು ನಿರೀಕ್ಷಿಸಿರಲಿಲ್ಲ. ಕೇಶವ ಕೃಪಾದವರನ್ನು ಸಮಾಧಾನ ಪಡಿಸುವುದೊಂದೇ ರಾಜ್ಯ ಬಿಜೆಪಿ ನಾಯಕರ ಅಜೆಂಡಾದಂತೆ ಕಾಣುತ್ತಿದೆ. ಬಿಜೆಪಿ ಹತಾಶವಾಗಿದೆ ಮತ್ತು ಇಂತಹ ಅಸಂಬದ್ಧ ಹೇಳಿಕೆಗಳ ಮೂಲಕ ಮತದಾರರ ಗಮನ ಸೆಳೆಯಲು ಶ್ರಮಿಸುತ್ತಿದೆ” ಎಂದಿದ್ದಾರೆ.

ಈ ವಿಚಾರವಾಗಿ ಮಾಧ್ಯಮದವರೊಂದಿಗೆ ಮಾತನಾಡಿದ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ ಇಬ್ರಾಹಿಂ, ”ಟಿಪ್ಪು ಸುಲ್ತಾನ್ ಬಗ್ಗೆ ಕೇಂದ್ರದ ನಿಲುವು ಏನಿದೆ.. ಕೇಂದ್ರದ ವಸ್ತು ಸಂಗ್ರಹಾಲಯದಲ್ಲಿ ಟಿಪ್ಪು ಸುಲ್ತಾನರಿಗೆ ಏನು ಗೌರವ ಕೊಟ್ಟಿದ್ದಾರೆ ಎನ್ನುವುದು ರಾಜ್ಯ ಬಿಜೆಪಿ ನಾಯಕರು ತಿಳಿದುಕೊಳ್ಳಬೇಕು.. ಈ ಅಶ್ವತ್ಥ ನಾರಾಯಣ ಒಬ್ಬ ಮಲ್ಲೇಶ್ವರಂನ ಚಿಲ್ಲಾರೆ ಗಿರಾಕಿ ಇಂತವನಿಗೆ ಇತಿಹಾಸವೂ ಗೊತ್ತಿಲ್ಲ ಚುನಾವಣೆ ಸಂದರ್ಭದಲ್ಲಿ ಯಾವ ವಿಚಾರ ಮಾತನಾಡಬೇಕು ಎನ್ನುವ ಕನಿಷ್ಠ ಜ್ಞಾನವೂ ಇಲ್ಲ” ಎಂದರು.
”ಸಿದ್ದರಾಮಯ್ಯರನ್ನ ಹೊಡದಾಕಿಬಿಡಿ ಅಂದ್ರೆ ಹೇಗೆ.. ಅವರು ಬೇರೆ ಪಕ್ಷದಲ್ಲಿ ಇರಬಹುದು, ಸಂಸ್ಕೃತಿ ಇರುವಂತವರಾಗಿ, ನಾಗರಿಕ ಸಮಾಜದಲ್ಲಿ ಬದುಕುತ್ತಿದ್ದೇವೆ ಎನ್ನುವ ಅರಿವು ಇರಬೇಕು. ಈ ರೀತಿ ಹೇಳಿಕೆ ನೀಡುವುದು ಖಂಡನೀಯ, ಡಿಸಿಯವರು ಇವರ ಮೇಲೆ ಸುಮೋಟೋ ಕೇಸ್ ದಾಖಲಿಸಬೇಕಿತ್ತು. ಈಗಲಾದರೂ ಮಾನ್ಯ ಮುಖ್ಯಮಂತ್ರಿಗಳು ಅಶ್ವತ್ಥ ನಾರಾಯಣ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ವಿನಂತಿಸುತ್ತೇನೆ” ಎಂದರು.

ಇದೇ ವೇಳೆ ಪ್ರತಿಕ್ರಿಯಿಸಿದ ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಅವರು, ”ಅಶ್ವತ್ಥ ನಾರಾಯಣ ಸಂಸ್ಕೃತಿಯೇ ಅಂತಹದ್ದು, ಈ ರೀತಿ ಆಗಾಗ ಅದು ಹೊರಗೆ ಬರುತ್ತದೆ” ಎಂದರು.
ಸಚಿವ ಅಶ್ವತ್ಥ ನಾರಾಯಣ ಹೇಳಿಕೆ ಖಂಡಿಸಿ ಕಾಂಗ್ರೆಸ್ ಪ್ರತಿಭಟನೆ ಮಾಡಲು ನಿರ್ಧರಿಸಿದೆ. ಇತ್ತ ಕುರುಬ ಸಮುದಾಯದ ನಾಯಕರು ಸಹ ಪ್ರತಿಭಟನೆಗೆ ಮುಂದಾಗಿದ್ದಾರೆ. ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಸ್.ಮನೋಹರ್ ಅವರು ಮಲ್ಲೇಶ್ವರಂ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ದೂರು ದಾಖಲಿಸಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ಹೆಚ್‌.ಡಿ ರೇವಣ್ಣ ನಾಲ್ಕು ದಿನ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಎನ್ನಲಾದ ಮನೆ ಕೆಲಸದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು  ನಾಲ್ಕು ದಿನಗಳ ಕಾಲ ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ನೀಡಿ...