Homeಮುಖಪುಟಸಿಂಘು ಗಡಿಯಲ್ಲಿ ಲಖ್ಬೀರ್‌‌ ಹತ್ಯೆ ಪ್ರಕರಣ: ಹರಿಂದರ್‌‌‌ ಸಿಂಗ್‌‌ ಬರಹ

ಸಿಂಘು ಗಡಿಯಲ್ಲಿ ಲಖ್ಬೀರ್‌‌ ಹತ್ಯೆ ಪ್ರಕರಣ: ಹರಿಂದರ್‌‌‌ ಸಿಂಗ್‌‌ ಬರಹ

- Advertisement -
- Advertisement -

ಹರಿಂದರ್‌‌‌ ಸಿಂಗ್‌‌

(ಸಿಂಘು ಗಡಿಯಿಂದ… ರೈತ ಹೋರಾಟದ ನೆಲದಲ್ಲಿರುವ ದಲಿತ ಹೋರಾಟಗಾರ)

ಕೃಪೆ: zindahal.blogspot.com ([email protected])

ಸಿಂಘು ಬಾರ್ಡರ್‌ನಲ್ಲಿ ನಡೆದದ್ದು ಜಾತಿಗೆ ಸಂಬಂಧಿಸಿದ್ದಲ್ಲ, ಅಥವಾ ರೈತರಿಗೆ ಸಂಬಂಧಿಸಿದ್ದೂ ಅಲ್ಲ. ಇದು ಸಂಪೂರ್ಣವಾಗಿ ಧಾರ್ಮಿಕವಾದದ್ದು ಮತ್ತು ಅಪರಾಧದಿಂದ ಕೂಡಿದ್ದಾಗಿದೆ. ದುರಾದೃಷ್ಟವಶಾತ್‌ ಇದನ್ನು ರೈತರು ಮತ್ತು ಕಾರ್ಮಿಕರ ನಡುವಿನ ಸಂಘರ್ಷದಂತೆ ಬಿಂಬಿಸಲಾಗುತ್ತಿದೆ. ಆದರೆ ಅದರಾಚೆಗಿನ ಸತ್ಯಗಳಿವೆ. ಈ ಘಟನೆಯ ಬಗ್ಗೆ ಹೇಳಬೇಕೆಂದರೆ ಕೊಲೆಯಾದ ಹಾಗೂ ಕೊಲೆಗೈದ ಆರೋಪಿಗಳಿಬ್ಬರೂ ದಲಿತರಾಗಿದ್ದಾರೆ.

ಖಂಡಿತವಾಗಿಯೂ ಪಂಜಾಬ್‌ನಲ್ಲಿ ಜಾತಿ ವ್ಯವಸ್ಥೆ ಗಟ್ಟಿಯಾಗಿದೆ. ಆದರೆ ಪಂಜಾಬ್‌ ಮತ್ತು ಸಿಖ್ಖಿ ನಡುವಿನ ವ್ಯತ್ಯಾಸವನ್ನು ಅರಿಯಬೇಕಾಗಿದೆ. ಬಲಿಷ್ಠ ಜಾತಿ ವ್ಯವಸ್ಥೆಯನ್ನು ಹೊಂದಿರುವ ಪಂಜಾಬ್‌ನಲ್ಲಿ ಸಿಖ್ಖಿಯು ಜಾತಿ ವ್ಯವಸ್ಥೆಯ ಪರ ವಕಾಲತ್ತು ವಹಿಸುವುದಿಲ್ಲ. ಅದು ಜಾತೀಯತೆಯ ವಿರುದ್ಧವಿದೆ. ಸಿಖ್‌ ಧರ್ಮ ಗ್ರಂಥವು ಜಾತಿ ವಿರೋಧಿಯಾಗಿದೆ. ಗುರು ಗ್ರಂಥ ಸಾಹೇಬ್‌ಗೆ ದಲಿತರು ಅಪಾರ ಕೊಡುಗೆ ನೀಡಿದ್ದಾರೆ. ಖಲ್ಸ ಪಂತ್‌‌ ಹೋರಾಟದಲ್ಲಿ ಹಲವರು ದಲಿತ ನಾಯಕರು, ಸೈನಿಕರು ಇದ್ದರು. ಪಿತೃಪ್ರಧಾನ ಹಿಂದುತ್ವದ ಪ್ರಭಾವದಿಂದಾಗಿ ಗ್ರಾಮೀಣ ಸಮಾಜದಲ್ಲಿ ಈ ಸಮಸ್ಯೆ (ಜಾತಿ ವ್ಯವಸ್ಥೆ) ಇದೆ. ಪಂಜಾಬ್‌ನಲ್ಲಿ ಶೇ. 33ರಷ್ಟು ದಲಿತರಿದ್ದು, ಆದರೆ ಶೇ. 3ರಷ್ಟು ಮಂದಿ ಮಾತ್ರ ಕೃಷಿ ಭೂಮಿಯನ್ನು ರಾಜ್ಯದಲ್ಲಿ ಹೊಂದಿದ್ದಾರೆ. ಮುಖ್ಯವಾಗಿ ಜಾಟ್‌ ರೀತಿಯ ಮೇಲ್ಜಾತಿಗಳ ದೈಹಿಕ ಹಾಗೂ ಮಾನಸಿಕ ಕಿರುಕುಳವನ್ನು ದಿನನಿತ್ಯವೂ ದಲಿತರು ಅನುಭವಿಸುತ್ತಿದ್ದಾರೆ. ಅದರಲ್ಲೂ ದಲಿತ ಮಹಿಳೆಯರ ಸ್ಥಿತಿಯಂತೂ ಇನ್ನೂ ಶೋಚನೀಯವಾಗಿದೆ.

ಇದನ್ನೂ ಓದಿರಿ: ಲಖಿಂಪುರ್‌ ಹತ್ಯಾಕಾಂಡ: ಅಜಯ್ ಮಿಶ್ರಾ ಬಂಧನ, ವಜಾಗೆ ಆಗ್ರಹಿಸಿ ರೈತರ ರೈಲ್ ರೋಕೋ ಚಳವಳಿ

ದಲಿತ ಮುಖ್ಯಮಂತ್ರಿ, ಅಕಾಲ್‌ತಖ್‌ನ ದಲಿತ ಜಾತೇದಾರ್‌, ದಲಿತ ಪೊಲೀಸ್ ಮುಖ್ಯಸ್ಥ, ದಲಿತ-ಸ್ತ್ರೀ-ಎಡಪಂಥೀಯ ಗುಂಪುಗಳ ಸಕ್ರಿಯತೆ ಮತ್ತು ಶೇ. 33ರಷ್ಟು ದಲಿತ ಜನಸಂಖ್ಯೆ ಪಂಜಾಬ್‌ನಲ್ಲಿದ್ದರೂ ದಲಿತರು ಹಿಂದುಳಿದಿದ್ದಾರೆ, ವಂಚನೆ ಹಾಗೂ ಶೋಷಣೆಗೆ ಒಳಗಾಗಿದ್ದಾರೆ.

ಲೂದಿಯಾನದಲ್ಲಿನ ಪಂಜಾಬ್‌ ಕೃಷಿ ವಿವಿಯ ಸಮೀಕ್ಷೆಯ ಪ್ರಕಾರ, 2000ನೇ ಇಸವಿಯಿಂದ 2018ರವರೆಗೆ, ಪಂಜಾಬ್‌ನ 2400 ಹಳ್ಳಿಗಳಲ್ಲಿ ಒಟ್ಟು 7303 ಕೃಷಿ ಕಾರ್ಮಿಕರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಪಂಜಾಬ್‌ನಲ್ಲಿ ಆತ್ಯಹತ್ಯೆಗೆ ಶರಣಾಗಿರುವ ರೈತರ ಪ್ರಮಾಣದಷ್ಟೇ ಕೃಷಿ ಕಾರ್ಮಿಕರ ಆತ್ಮಹತ್ಯೆಯ ಪ್ರಮಾಣವೂ ಇದೆ. ಕೃಷಿ ಕಾರ್ಮಿಕರ ಸಾವಿಗೆ ಸಾಲಬಾಧೆಯೇ ಪ್ರಮುಖ ಕಾರಣವಾಗಿದೆ. ಹಲವು ಸಮೀಕ್ಷೆಗಳ ಪ್ರಕಾರ, ಪ್ರತಿ ರೈತ ಕಾರ್ಮಿಕ ಕುಟುಂಬದ ಪ್ರತಿಯೊಬ್ಬರ ತಲೆ ಮೇಲೂ 68,000 ರೂ.ನಿಂದ 1 ಲಕ್ಷ ರೂ.ವರೆಗೆ ಸಾಲದ ಭಾರವಿದೆ. ಇದು ಭಾರತ ಕೃಷಿ ಮಾದರಿಯ ಸಾರ- ಸಣ್ಣ ರೈತರು ಮತ್ತು ಕೃಷಿ ಕಾರ್ಮಿಕರ ಆತ್ಮಹತ್ಯೆ!

ಮಹಿಳಾ ಕೃಷಿಕರ ಸ್ಥಿತಿಗಿಂತ ಮಹಿಳಾ ಕೃಷಿ ಕಾರ್ಮಿಕರ ಸ್ಥಿತಿಯಂತೂ ಇನ್ನೂ ಶೋಚನೀಯವಾಗಿದೆ. ದಲಿತ ಕೃಷಿ ಕಾರ್ಮಿಕರು, ಪಿತೃಪ್ರಧಾನ ವ್ಯವಸ್ಥೆ, ಕೂಲಿ, ಜಾತಿ ಮತ್ತು ಬಡತನದ ಭಾರದಲ್ಲಿ ಬದುಕುತ್ತಿದ್ದಾರೆ. ಹೊಸ ಪ್ರಜಾಪ್ರಭುತ್ವ ಸಮಾಜವನ್ನು ನಿರ್ಮಿಸಬೇಕಾದಲ್ಲಿ ಬಹುಮುಖ್ಯ ಪಾತ್ರ ವಹಿಸಬೇಕಿರುವ ಈ ಸಮಾಜವು, ಬಹುತೇಕ ಕೃಷಿ ಸಂಸ್ಥೆಗಳ ಕ್ರಾಂತಿಕಾರಿ ಸುಧಾರಣಾ ಕಾರ್ಯಕ್ರಮಗಳ ಭಾಗವಾಗಿಲ್ಲ.

ಕೃಷಿಕ ವರ್ಗವೇ ಕೃಷಿ ಕಾರ್ಮಿಕ ವರ್ಗವಾಗಿದ್ದಾಗ ಮತ್ತು ರೈತರು ಮತ್ತು ಕೃಷಿ ಕಾರ್ಮಿಕರ ಸಂಬಂಧಗಳು ‘ಐಕ್ಯತೆ ಮತ್ತು ಸಂಘರ್ಷ’ದ ಸಂಬಂಧವಾಗಿರುತ್ತದೆ. ಕೃಷಿ ವಲಯದಲ್ಲಿ ಕಾರ್ಮಿಕ ವಿರೋಧಿ ಯಾಂತ್ರೀಕರಣವಿದ್ದಾಗ ಕಾರ್ಮಿಕರಿಗೆ ಸಾಮೂಹಿಕ ನಿರುದ್ಯೋಗದ ಪ್ರಶ್ನೆಯಿರುತ್ತದೆ, ಇದು ದಬ್ಬಾಳಿಕೆಯ ಮೂಲಕ ಕಾರ್ಮಿಕರನ್ನು ಆತ್ಮಹತ್ಯೆ ಮಾಡಿಕೊಳ್ಳುವಂತೆ ಮಾಡುತ್ತದೆ.

ಆದರೆ ಎಂಬ ಆದರೆ ಎಂಬುದಿದೆ. ಈ ಆದರೆ ದಲಿತ ವಿಚಾರಗಳ ಕುರಿತ ಅತಿಯಾದ ಚಿಂತನೆ ಹಾಗೂ ಕುತೂಹಲಕ್ಕೆ ಸಂಬಂಧಿಸಿದ್ದಾಗಿದೆ. ಜಾತಿ ಹಿಂಸೆಯು ಇರುವುದು ಸತ್ಯ, ಆದರೆ ಅದು ಸ್ವೀಕಾರರ್ಹವಲ್ಲ. ದಲಿತರು ವರ್ಸಸ್‌ ಜಾಟರು ಅಥವಾ ರೈತ ವರ್ಸಸ್‌ ಕೃಷಿ ಕಾರ್ಮಿಕ ಸಂಬಂಧಿಸಿದ ನೂರಾರು ಸಂಗತಿಗಳಿವೆ. ಆದರೆ ಈ ಪ್ರಕರಣದಲ್ಲಿ ನೀವು ಜಾತಿಯನ್ನು ಹುಡುಕಬಹುದೇ? ಕೊಲೆಯಾದ ಲಖ್ಬೀರ್‌ ಸಿಂಗ್‌ ದಲಿತ ಎಂಬುದನ್ನು ನಾವು ಸುಲಭವಾಗಿ ಪತ್ತೆ ಹಚ್ಚಿದೆವು. ಆದರೆ ಆರೋಪಿಗಳಾದ ಸರಬ್ಜಿತ್‌ ಸಿಂಗ್ ಹಾಗೂ ನಾರಾಯಣ್‌ ಸಿಂಗ್ ಕೂಡ ದಲಿತರು ಎಂಬುದನ್ನು ನಾವು ನೋಡಲಿಲ್ಲ. ಈ ಸಮಸ್ಯೆಯು ಸಂಪೂರ್ಣವಾಗಿ ಧಾರ್ಮಿಕ ಮತ್ತು ಅಪರಾಧ ಕೃತ್ಯವಾಗಿದೆ. ಸಿಖ್ಖರು ದಬ್ಬಾಳಿಕೆಯ ವಿರುದ್ಧ ತಮ್ಮ ಧ್ವನಿಯನ್ನು ಪ್ರತಿಪಾದಿಸಿದ ಭಾವುಕ ರೀತಿಯದ್ದಾಗಿದೆ. ಸಿಖ್/ನಿಹಾಂಗ್‌ಗಳಿಂದ ಹತ್ಯೆಗೀಡಾದ ಇಂದಿರಾ ಗಾಂಧಿ, ಬಿಯಾಂತ್ ಸಿಂಗ್, ಮಾಸಾ ರಂಗರ್ ಮೇಲ್ಜಾತಿಯವರು ಎಂಬುದನ್ನು ದಯವಿಟ್ಟು ಗಮನಿಸಬೇಕು.

ಇದನ್ನೂ ಓದಿರಿ: ಸಿಂಘು ಗಡಿನಲ್ಲಿ ಯುವಕನ ಹತ್ಯೆ: ನಿಹಾಂಗ್ ಗುಂಪು, ಮೃತ ವ್ಯಕ್ತಿಯೊಂದಿಗೆ ಯಾವುದೇ ಸಂಬಂಧವಿಲ್ಲ ಎಂದ ಎಸ್‌ಕೆಎಂ

ಇದು ಅಪವಿತ್ರತೆಯ ಸಮಸ್ಯೆಯಾಗಿದೆ. ಕೊಲೆಯಾದ ವ್ಯಕ್ತಿಯು ಪವಿತ್ರ ಗ್ರಂಥವನ್ನು ಮೋಟಾರ್‌ ಸೈಕಲ್‌ನ ಬಾಕ್ಸ್‌ನಲ್ಲಿ ಇಟ್ಟು ಕೊಳಕಾದ ರಸ್ತೆಯ ಬದಿಯಲ್ಲಿ ಇಟ್ಟಿದ್ದ ಎಂಬುದಕ್ಕೆ ಸಂಬಂಧಿಸಿದ್ದಾಗಿದೆ. ನಿಹಾಂಗ್ ಸಿಖ್ಖರು ಮೊದಲು ಲಖ್‌ಬೀರ್‌ಸಿಂಗ್ ಅವರ ಎಡಗೈಯನ್ನು ಕತ್ತರಿಸಿ ನಂತರ ಅವರ ಕಾಲಿನ ಮೇಲೆ ದಾಳಿ ಮಾಡಿದರು. ಮೊದಲ ದಾಳಿಯ 1 ಗಂಟೆಯ ನಂತರ ಲಖ್ಬೀರ್‌ ಸಾವಿಗೀಡಾದರು.

ಪಂಜಾಬ್‌ ನಲ್ಲಿ 2015ರಲ್ಲಿ ಗುರುಗ್ರಂಥ ಸಾಹೇಬ್‌ ಅಪವಿತ್ರತೆ ಪ್ರಕರಣವೊಂದು ಸಂಭವಿಸಿತು.  ಅಪವಿತ್ರಕ್ಕೆ ವಿರುದ್ಧವಾಗಿ ಸಂಗತ್‌‌ನವರು ಹೋರಾಡುತ್ತಿದ್ದಾಗ ಪೊಲೀಸರ ದಾಳಿಯಿಂದ ಇಬ್ಬರು ಸಿಖ್ಖರು ಸಾವನ್ನಪ್ಪಿದ್ದರು. ಮೂರು ತನಿಖಾ ಆಯೋಗಗಳನ್ನು ರಚಿಸಲಾಯಿತು, ಮೂವರು ಮುಖ್ಯಮಂತ್ರಿಗಳು ಆಡಳಿತ ನಡೆಸಿದ್ದಾರೆ, ಈ ಆಟದಲ್ಲಿ ಅನೇಕ ಅಧಿಕಾರಿಗಳು ಬಂದರು, ಹೋದರು ಆದರೆ ನ್ಯಾಯಮಾತ್ರ ಸಿಗಲಿಲ್ಲ. ಸಿಂಘುವಿನಲ್ಲಿ ಘಟನೆ ನಡೆಯುವ ಮೂರು ದಿನಗಳ ಹಿಂದೆ 2015ರ ಪ್ರಕರಣಕ್ಕೆ ಆರು ವರ್ಷಗಳಾಯಿತು. ಹಾಗೆಯೇ 1984ರ ಸಿಖ್ ವಿರೋಧಿ ಹತ್ಯಾಕಾಂಡಕ್ಕೆ 37 ವರ್ಷಗಳಾಗಿದೆ. ಅಂದಿನಿಂದಲೂ ಸಾವಿರಾರು ನಾಗರಿಕರ ಕರಾಳ ಹತ್ಯೆಗೆ ಪಂಜಾಬ್‌ ಸಾಕ್ಷಿಯಾಗಿದೆ. ಆದರೆ ಈವರೆಗೆ ನ್ಯಾಯ ಮಾತ್ರ ಸಿಕ್ಕಿಲ್ಲ.

ಕೊನೆಯ ಪ್ಯಾರಾಗ್ರಾಫ್ ಅನ್ನು ಉಲ್ಲೇಖಿಸುವ ಉದ್ದೇಶ ಈ ಸಿಂಘು ಪ್ರಕರಣವನ್ನು ಒಂದು ಪ್ರತ್ಯೇಕ ಘಟನೆಯಾಗಿ ನೋಡದಂತೆ ನಿಮ್ಮೆಲ್ಲರನ್ನೂ ವಿನಂತಿಸುವುದಾಗಿದೆ. ಯಾವುದೇ ಅಪವಿತ್ರತೆಯ ಪ್ರಕರಣಕ್ಕೆ ಸಂಬಂಧಿಸಿದಂತೆ ನಡೆಯುವ ಹತ್ಯೆಯನ್ನು ನಿಹಾಂಗ್‌ಗಳು ‘ನ್ಯಾಯ’ ಎಂದು ಆಚರಿಸುತ್ತಾರೆ. ಈ ಪ್ರಕರಣದಲ್ಲಿನ ಹತ್ಯೆಯೂ ಅವರ ಪ್ರಕಾರ ನ್ಯಾಯದ ಸಂಕೇತವಾಗಿದೆ.

ಈ ಥರದ ಹತ್ಯೆಗಳು ನ್ಯಾಯವೆಂಬುದನ್ನು ನಾನು ಸಮರ್ಥಿಸುತ್ತಿಲ್ಲ. ಗುಂಪು ಹತ್ಯೆ ಹಾಗೂ ಕಾನೂನು ಬಾಹಿರ ಕೃತ್ಯಗಳಿಗಿಂತ ಈ ಪ್ರಕರಣ ಕಡಿಮೆಯೇನಲ್ಲ. ಧರ್ಮವನ್ನು ಅಪರಾಧೀಕರಿಸುವುದು ಅತ್ಯಂತ ಅಪಾಯಕಾರಿಯಾದದ್ದು, ಅದು ಈಗ ಚಾಲ್ತಿಯಲ್ಲಿದೆ. ದುರಾದೃಷ್ಟವಶಾತ್‌ ಈ ಘಟನೆ ರೈತ ಪ್ರತಿಭಟನಾ ನೆಲದಲ್ಲಿ ನಡೆಯಿತು. ರೈತ ಹೋರಾಟಕ್ಕೆ, ಸಂಯುಕ್ತ ಕಿಸಾನ್‌ ಮೋರ್ಚಾಕ್ಕೆ, ಸಿಖ್ಖಿಗೆ ನಕರಾತ್ಮಕ ಚಿತ್ರಣವನ್ನು ತಂದುಕೊಟ್ಟಿತು.

ಇದನ್ನೂ ಓದಿರಿ: ಅದಾನಿಯಿಂದ ಹಸ್ಡಿಯೋ ಕಾಡನ್ನು ಉಳಿಸಿ: ಚತ್ತೀಸ್‌ಘಡ ಆದಿವಾಸಿಗಳಿಂದ 300 ಕಿ.ಮೀ ಪಾದಯಾತ್ರೆ

“ಒಂದು ಪುಸ್ತಕ ಹೇಗೆ ಮುಖ್ಯವಾಗುತ್ತದೆ” ಎಂದು ಕೇಳುತ್ತಿರುವವರು ತಮ್ಮದೇ ಹೋರಾಟದಲ್ಲಿ ಮಾತ್ರ ಉತ್ತರವನ್ನು ಕಂಡುಕೊಳ್ಳಬೇಕಾಗಿದೆ. ವಾಲ್ಮೀಕಿ ದೇವಾಲಯವೊಂದನ್ನು ದೆಹಲಿಯಲ್ಲಿ ಕೆಡವಲಾಯಿತು, ಎಲ್ಲ ಅಂಬೇಡ್ಕರ್ ವಾದಿಗಳು ಹೋರಾಟ ಆರಂಭಿಸಿದರು. ಬಾಬ್ರಿ ಮಸೀದಿ ದ್ವಂಸವು ಜಾತ್ಯತೀತತೆಯ ಮೇಲಿನ ದಾಳಿಯಾಗಿತ್ತು. ಬಾಬಾ ಸಾಹೇಬ್‌ ಅಂಬೇಡ್ಕರ್ ಅವರ ಪ್ರತಿಮೆಯನ್ನು ಉರುಳಿಸುವುದು ಕೂಡ ಅಗೌರವದ ಸಂಕೇತವಾಗಿದೆ. ಧಾರ್ಮಿಕ ಮತ್ತು ಸಾಂಸ್ಕೃತಿಕ ಸಾಂಕೇತಗಳು ಮತ್ತು ಚಿಹ್ನೆಗಳು ಸಮಾಜದ ಒಂದು ಪ್ರಮುಖ ಹಾಗೂ ಅವಿಭಾಜ್ಯ ಅಂಗ ಎಂಬುದನ್ನು ನಾವು ನಿರಾಕರಿಸಬಾರದು.

ಕೊಲೆಯಾದ ಲಖ್ಬೀರ್‌ ಸಿಂಗ್‌ ಪವಿತ್ರ ಗ್ರಂಥವನ್ನು ಮುಟ್ಟಿದ, ಅಸ್ಪೃಶ್ಯನಾದ ಲಖ್ಬೀರ್‌‌ನಿಂದಾಗಿ ಮೇಲ್ಜಾತಿಯ ಸಿಂಗ್‌ಗಳ ಭಾವನೆಗೆ ದಕ್ಕೆಯಾಯಿತು ಎಂಬುದು ಆಧಾರ ರಹಿತ ಸಂಗತಿ. ಬೇರೆಯವರಿಗೆ ಹೋಲಿಸಿದರೆ ಸಿಖ್‌ನಲ್ಲಿ ಹೆಚ್ಚಿನ ಸಾಮಾಜಿಕ ಚಲನೆ ಇದೆ. ದಲಿತನೂ ಕೂಡ ಪವಿತ್ರ ಗ್ರಂಥವನ್ನು ಮುಟ್ಟಬಹುದು, ಓದಬಹುದು. ಸಿಖಿ ಶ್ಲೋಕಗಳನ್ನು, ಕೀರ್ತನಗಳನ್ನು ಕೇಳಿದಾಕ್ಷಣ ಯಾರೂ ದಲಿತರ ಕಿವಿಗೆ ಹಾನಿ ಮಾಡುವುದಿಲ್ಲ. ಇನ್ನು ಹೇಳಬೇಕೆಂದರೆ ಗುರು ಗ್ರಂಥ ಸಾಹೇಬ್‌ ರಚನೆಯಲ್ಲಿ ದಲಿತರು ಬಹುದೊಡ್ಡ ಪಾತ್ರ ವಹಿಸಿದ್ದಾರೆ.

ನನ್ನ ಅಜ್ಜ ಎಸ್.ವೀರ್‌ ಸಿಂಗ್‌ ಕೂಡ ಒಬ್ಬ ದಲಿತ. ಅವರು ಗುರುದ್ವಾರದಲ್ಲಿ ಪಾತಿ ಆಗಿದ್ದರು. ಧಾರ್ಮಿಕ ವಿಧಿವಿಧಾನಗಳಿಗಾಗಿ ಎಲ್ಲ ಜಾತಿಯವರು ಆತನನ್ನು ಕರೆಸಿಕೊಳ್ಳುತ್ತಿದ್ದಾರೆ. ಮೊದಲನೆಯದಾಗಿ, ಸಿಖ್ ಫಿಲಾಸಫಿಯಲ್ಲಿ ಜಾತಿ ಎಂಬುದು ಇಲ್ಲ. ಎರಡನೆಯದಾಗಿ, ಪಂಜಾಬಿಗಳು ಜಾತಿ ವ್ಯವಸ್ಥೆಯನ್ನು ಹೊಂದಿದ್ದರೂ, ಹಿಂದೂ ಧರ್ಮದಂತೆ ಕಟುವಾಗಿ ಇಲ್ಲಿನ ಜಾತಿ ವ್ಯವಸ್ಥೆ ಇಲ್ಲ. ಸಿಖ್ ಧರ್ಮದಲ್ಲಿರುವ ದಲಿತರು ‘ಗುರು ಗ್ರಂಥ ಸಾಹಿಬ್’ ಅಥವಾ ಯಾವುದೇ ಪವಿತ್ರ ಪಠ್ಯವನ್ನು ಸ್ಪರ್ಶಿಸಬಹುದು, ಕೇಳಬಹುದು ಮತ್ತು ಓದಬಹುದು.

ಈ ಪ್ರಕರಣದಲ್ಲಿ ಇದು ಜಾತಿ ಹಿಂಸೆಯಲ್ಲ ಎಂಬುದನ್ನು ಸಾಬೀತುಪಡಿಸುತ್ತದೆ. ಆದರೆ ಇದು ಕ್ರೂರ ಹಿಂಸೆ ಎಂಬುದು ಸಾಬೀತಾಗಿದೆ. ಇದು ಅಧಿಕಾರಶಾಹಿಯಿಂದ ಪ್ರಚೋದಿತವಾದ ಹಿಂಸೆಯಾಗಿದೆ ಎಂಬುದನ್ನು ಇಲ್ಲಿ ಅರ್ಥಮಾಡಿಕೊಳ್ಳಬೇಕು. ಭಾರತ ಸರ್ಕಾರ ಧಾರ್ಮಿಕ ಅಲ್ಪಸಂಖ್ಯಾತರ ವಿರುದ್ಧ ಹಿಂಸೆಯನ್ನು ಪ್ರಚಾರ ಮಾಡುತ್ತಿದೆ…

ಭಾರತವು ಅಪರಾಧ ಕೃತ್ಯಗಳಿಗೆ ಸಂಬಂಧಿಸಿದಂತೆ ಕಾನೂನು ಹೊಂದಿದೆ. ಈ ಸಮಸ್ಯೆಯನ್ನು ಕಾನೂನಿನ ಮೂಲಕ ಪರಿಗಣಿಸಬೇಕು. ಕಿಸಾನ್ ಮೋರ್ಚಾ ತನ್ನ ಹೇಳಿಕೆಯಲ್ಲಿ ಹೇಳುವಂತೆ “ಅವರು ಯಾವುದೇ ಧಾರ್ಮಿಕ ಪಠ್ಯ ಅಥವಾ ಚಿಹ್ನೆಯ ಅಗೌರವಕ್ಕೆ ವಿರುದ್ಧವಾಗಿದ್ದಾರೆ. ಆದರೆ ಕಾನೂನನ್ನು ತಮ್ಮ ಕೈಗೆ ತೆಗೆದುಕೊಳ್ಳುವುದನ್ನು ಒಪ್ಪುವುದಿಲ್ಲ. ಆದರೆ ಅದೇ ಸಮಯದಲ್ಲಿ, ನಮ್ಮ ನ್ಯಾಯ ವ್ಯವಸ್ಥೆಯು ಅಗತ್ಯವಿರುವವರಿಗೆ ಉತ್ತಮ ಹಾಗೂ ಸಕಾಲದಲ್ಲಿ ನ್ಯಾಯವನ್ನು ದೊರಕಿಸುವುದನ್ನು ಸಾಬೀತುಪಡಿಸುವ ಸಮಯ ಬಂದಿದೆ.

ನಾಲ್ಕು ನಿಹಾಂಗ್ಸ್ ಪೊಲೀಸರಿಗೆ ಶರಣಾಗಿದ್ದಾರೆ. ಅವರಲ್ಲಿ ಇಬ್ಬರು ಪ್ರಮುಖ ಆರೋಪಿಗಳು ದಲಿತರು ಎಂಬುದನ್ನು ನಾನು ದೃಢೀಕರಿಸಬಲ್ಲೆ. ಇವರೆಲ್ಲರೂ ದಲಿತರು ಎಂದು ಮಾಧ್ಯಮ ವರದಿಗಳು ಹೇಳುತ್ತವೆ. ಈ ನಿಹಾಂಗ್ ಗುಂಪಿನ ಮುಖ್ಯಸ್ಥನೂ ದಲಿತನೇ.

ಇನ್ನು ಮಾಧ್ಯಮಗಳ ಹಲವು ಪ್ರಶ್ನೆಗಳು ಉತ್ತರವಿಲ್ಲದೆ ಹಾಗೆ ಉಳಿದುಕೊಂಡಿವೆ.

1. ಸಿಂಘು ಗಡಿಗೆ ಲಖಬೀರ್ ಸಿಂಗ್ ಅವರನ್ನು ಕರೆತಂದವರು ಯಾರು?

2. ಅಪವಿತ್ರತೆಗೊಳಿಸಿದ್ದಕ್ಕೆ ಪುರಾವೆ ಏನು?

3. ಅವರು ಯಾಕೆ ಸಂತ್ರಸ್ತನನ್ನು ಪೊಲೀಸರಿಗೆ ಒಪ್ಪಿಸಲಿಲ್ಲ?

4. ಕಿಸಾನ್‌ ಸಂಯುಕ್ತ ಮೋರ್ಚಾ ಏಕೆ ಹೆಚ್ಚು ಮಾತಾಡಿಲ್ಲ ಮತ್ತು ಬೇಜವಾಬ್ದಾರಿ ತೋರಿದೆ?

ನನ್ನ ಒಂದೇ ಪ್ರಶ್ನೆಗೆ ಅವರು ಉತ್ತರಿಸಲಾಗಿಲ್ಲ.

“ಸರ್ಕಾರವು ಕೃಷಿ ಕಾನೂನುಗಳನ್ನು ಏಕೆ ರದ್ದುಗೊಳಿಸಿಲ್ಲ ಮತ್ತು ಏಕೆ ಎಂಎಸ್‌ಪಿ ಮೇಲೆ ಕಾನೂನು ಜಾರಿಗೊಳಿಸಿಲ್ಲ?

ಆಳವಾದ ತನಿಖೆ ನಡೆಯಬೇಕು. ಇದು ಪ್ರತ್ಯೇಕ ಘಟನೆಯಲ್ಲ. ಜಾತಿ ಎಂಬುದು ವದಂತಿಯಲ್ಲ; ಅದು ಗುರಾಣಿಯೂ ಅಲ್ಲ. ಹಿಂಸೆ ಎಂಬುದು ಹಿಂಸೆಯಷ್ಟೇ. ಒರಟು ನ್ಯಾಯ ಎಲ್ಲಿಯೂ ಸಮರ್ಥನೀಯವಲ್ಲ ಮತ್ತು ನ್ಯಾಯಸಮ್ಮತವಲ್ಲ.

ನೀವು ಮತ್ತು ನಾನು ಒಬ್ಬರನ್ನೊಬ್ಬರು ದೂಷಿಸುವ ಮೂರ್ಖರಾಗಿದ್ದೇವೆ. ಅಲ್ಲಿ ಸರ್ಕಾರವು ಯಶಸ್ವಿಯಾಗಿ ಒಡೆದು ಆಡುವ ನೀತಿಯೊಂದಿಗೆ ಯಶಸ್ವಿಯಾಗಿ ಆಡಳಿತ ನಡೆಸುತ್ತಿದೆ.

ಹರಿಂದರ್‌‌‌ ಸಿಂಗ್‌‌

(ಅಭಿಪ್ರಾಯಗಳು ಲೇಖಕರದ್ದು)


ಇದನ್ನೂ ಓದಿ: ಲಖ್ಬೀರ್ ಹತ್ಯೆ ಪ್ರಕರಣ: ರೈತ ಸಂಘಟನೆಗಳ‌ ಹೊಣೆಯ ಕುರಿತು ಎರಡು ನೋಟಗಳು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕರಾವಳಿ ಸಮಸ್ಯೆಗೆ ಶಾಶ್ವತ ಪರಿಹಾರದ ಭರವಸೆ: ಸಚಿವ ಕೆ.ಎಸ್.ಬಸವಂತಪ್ಪ

ರಾಜ್ಯದ ಕರಾವಳಿ ಭಾಗದಲ್ಲಿ ಮೀನುಗಾರಿಕೆ ಕ್ಷೇತ್ರದ ಅಭಿವೃದ್ಧಿ ಕುಂಠಿತವಾಗುತ್ತಿರುವ ಕುರಿತು ಕಳವಳ ವ್ಯಕ್ತವಾಗುತ್ತಿರುವ ಬೆನ್ನಲ್ಲೇ, ಸ್ಥಳೀಯ ಸಮಸ್ಯೆಗಳಿಗೆ ಸ್ಪಂದಿಸಲು ಸರ್ಕಾರ ಮುಂದಾಗಿದೆ. ಕರಾವಳಿ ವ್ಯಾಪ್ತಿಯ ಬಂದರುಗಳು, ಮೀನು ಮಾರುಕಟ್ಟೆಗಳು, ಬ್ರೇಕ್‌ವಾಟರ್‌ಗಳು ಹಾಗೂ ಜೆಟ್ಟಿಗಳಿಗೆ...

SIR ಪ್ರಕ್ರಿಯೆಯಲ್ಲಿ ಯಾರ ಹೆಸರು ಬಿಟ್ಟುಹೋಗಬಾರದು: PRC ನೀಡಲು ವಿಳಂಬ ಬೇಡ ಡಾ. ಜಿ. ಪರಮೇಶ್ವರ್

ಉದ್ಯೋಗ ಅಥವಾ ವಿವಿಧ ಕಾರಣಗಳಿಂದಾಗಿ ತಮ್ಮ ಸ್ವಂತ ಊರು ತೊರೆದು ಬೇರೆಡೆಗೆ ಸ್ಥಳಾಂತರಗೊಂಡು ನೆಲೆಸಿರುವ ರಾಜ್ಯದ ಯಾವುದೇ ನಾಗರಿಕರು ಯಾವುದೇ ಕಾರಣಕ್ಕೂ ಮತದಾರರ ಪಟ್ಟಿಯಿಂದ ಹೊರಗುಳಿಯಬಾರದು ಎಂದು ಉಪಮುಖ್ಯಮಂತ್ರಿ ಹಾಗೂ ಕಂದಾಯ ಸಚಿವರಾದ...

ಬಿಹಾರ ಪ್ರವಾಹದ ನಡುವೆ ಮೋದಿ ಹುಟ್ಟುಹಬ್ಬದ ಪ್ರಯುಕ್ತ ದೀಪೋತ್ಸವ; ‘ಆಶೀರ್ವಾದ್ ಕಾ ದಿಯಾ’ ಕಾರ್ಯಕ್ರಮಕ್ಕೆ ತೇಜಸ್ವಿ ಯಾದವ್ ಆಕ್ಷೇಪ

ಬಿಹಾರದಲ್ಲಿ ಪ್ರವಾಹ ಪರಿಸ್ಥಿತಿ ಮುಂದುವರಿದಿರುವ ನಡುವೆಯೇ ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟುಹಬ್ಬದ ಅಂಗವಾಗಿ ಸೆಪ್ಟೆಂಬರ್ 17ರಂದು ‘ಆಶೀರ್ವಾದ್ ಕಾ ದಿಯಾ’ ಕಾರ್ಯಕ್ರಮ ಆಯೋಜಿಸಿರುವುದು ರಾಜಕೀಯ ಚರ್ಚೆಗೆ ಕಾರಣವಾಗಿದೆ. ರಾಜ್ಯದ 15 ಜಿಲ್ಲೆಗಳಲ್ಲಿ...

ಉಮರ್ ಖಾಲಿದ್ ಅವರನ್ನು ‘ದೇಶಪ್ರೇಮಿ’ ಎಂದ ಬಿ.ಕೆ. ಹರಿಪ್ರಸಾದ್; ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲು

ಬೆಂಗಳೂರಿನ ರಾಷ್ಟ್ರೀಯ ಕಾನೂನು ಶಾಲೆ (ಎನ್‌ಎಲ್‌ಎಸ್‌ಐಯು) ಯೂನಿವರ್ಸಿಟಿಯಲ್ಲಿ ಜೈಲಿನಲ್ಲಿರುವ ಹೋರಾಟಗಾರ ಉಮರ್ ಖಾಲಿದ್ ಕುರಿತಾದ ಸಾಕ್ಷ್ಯಚಿತ್ರಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ವಿವಾದದ ನಡುವೆ, ಅವರನ್ನು "ರಾಷ್ಟ್ರಪ್ರೇಮಿ" ಎಂದು ಕರೆದಿರುವ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ...

ಇಂದಿರಾ ಗಾಂಧಿಯಂತೆ ನೇರವಾಗಿ ನಿಲ್ಲಿ, ಟ್ರಂಪ್ ಮುಂದೆ ಮಂಡಿಯೂರುತ್ತಿದ್ದೀರಿ: ‘UPI ಟ್ಯಾಕ್ಸ್’ ಬಗ್ಗೆ ಮೋದಿ ವಿರುದ್ಧ ರಾಹುಲ್ ವಾಗ್ದಾಳಿ!

ಯುಪಿಐ (UPI) ವಹಿವಾಟುಗಳಿಗೆ ಸಂಬಂಧಿಸಿದಂತೆ ಜಾರಿಯಾಗುತ್ತಿರುವ ಹೊಸ 'ಮರ್ಚೆಂಟ್ ಡಿಸ್ಕೌಂಟ್ ರೇಟ್' (MDR) ವ್ಯವಸ್ಥೆ ಇದೀಗ ತೀವ್ರ ರಾಜಕೀಯ ಸಂಘರ್ಷಕ್ಕೆ ಕಾರಣವಾಗಿದೆ. ಇದನ್ನು "ಬ್ಯಾಂಕ್‌ಗಳು ವಿಧಿಸುವ ಸೇವಾ ಶುಲ್ಕ" ಎಂದು ಸರ್ಕಾರ ಸಮರ್ಥಿಸಿಕೊಳ್ಳುತ್ತಿದ್ದರೂ,...

ಲಿಯೋನೆಲ್ ಮೆಸ್ಸಿ ಕೇರಳ ಭೇಟಿ ಪ್ರಕರಣ: ಕೊಚ್ಚಿಯ ‘ರಿಪೋರ್ಟರ್ ಟಿವಿ’ ಕಚೇರಿಯಲ್ಲಿ ಪೊಲೀಸರಿಂದ ಶೋಧ

ಮಲಯಾಳಂ ಸುದ್ದಿ ವಾಹಿನಿ 'ರಿಪೋರ್ಟರ್ ಟಿವಿ'ಯ ಕೊಚ್ಚಿ ಪ್ರಧಾನ ಕಚೇರಿಯಲ್ಲಿ ಬುಧವಾರ (ಸೆ.16) ಮುಂಜಾನೆ ಪೊಲೀಸ್ ತಂಡವೊಂದು ಶೋಧ ಕಾರ್ಯ ನಡೆಸಿದ್ದು, ಇದರಿಂದಾಗಿ ತನ್ನ ಸುದ್ದಿ ಪ್ರಸಾರ ಕಾರ್ಯಾಚರಣೆಗೆ ಅಡಚಣೆಯಾಗಿದೆ ಎಂದು ವಾಹಿನಿ...

‘ಏಕರೂಪತೆ ಸಮಾನತೆಯಲ್ಲ’: 2029ಕ್ಕೂ ಮುನ್ನ 21 ರಾಜ್ಯಗಳಲ್ಲಿ ಯುಸಿಸಿ ಜಾರಿ ಘೋಷಿಸಿದ ಅಮಿತ್ ಶಾಗೆ ಪ್ರತಿಪಕ್ಷಗಳ ತೀವ್ರ ತಿರುಗೇಟು

ನವದೆಹಲಿ/ಮುಂಬೈ: 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರಗಳಿರುವ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಜಾರಿಗೆ ತರಲಾಗುವುದು ಎಂಬ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ...

KPSC ಅಧ್ಯಕ್ಷರ ಪುತ್ರಿಯ ನಕಲಿ ಪ್ರಮಾಣಪತ್ರ ಹಗರಣ: ಅಕ್ರಮಕ್ಕೆ ಸಾಥ್ ನೀಡಿದ್ದ ಅಧಿಕಾರಿಯ ಜಾಮೀನು ಅರ್ಜಿ ವಜಾ

ಕೆಪಿಎಸ್‌ಸಿ (KPSC) ಅಧ್ಯಕ್ಷರ ಪುತ್ರಿಗೆ ಅಕ್ರಮವಾಗಿ ನಕಲಿ ಆದಾಯ ಪ್ರಮಾಣಪತ್ರ ನೀಡಿದ ಆರೋಪ ಎದುರಿಸುತ್ತಿರುವ ಕಂದಾಯ ಅಧಿಕಾರಿಯ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಬೆಂಗಳೂರಿನ ನಗರ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ಮಂಗಳವಾರ ವಜಾಗೊಳಿಸಿದೆ....

ಬಂಗಾಳದಲ್ಲಿ ಬಿಜೆಪಿ ಸರ್ಕಾರದ ನಿರ್ಬಂಧ; ನೆಲಕಚ್ಚಿದ ದನದ ಮಾಂಸ ವ್ಯಾಪಾರ

ಪಶು ಹತ್ಯೆಯ ಕುರಿತು ಮುಖ್ಯಮಂತ್ರಿ ಸುವೇಂಧು ಅಧಿಕಾರಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಸೂಚನೆ ಹೊರಡಿಸಿದ ನಂತರ, ಮಾಂಸದ ವ್ಯಾಪಾರಿ ಮುಷ್ತಾಕ್ ಕಳೆದ ಮೂರು ತಿಂಗಳಿನಿಂದ ಒಂದು ಪೈಸೆಯನ್ನೂ ಗಳಿಸಿಲ್ಲ. "ಚುನಾವಣೆಯ ಕಾರಣದಿಂದ...

ತೀವ್ರಗೊಂಡ ಸೌದಿ-ಹೌತಿ ಸಂಘರ್ಷ : ಮಕ್ಕಾ ಗುರಿಯಾಗಿಸಿದ್ದ ಡ್ರೋನ್ ಹೊಡೆದುರುಳಿಸಿದ್ದೇವೆ ಎಂದ ಸೌದಿ; ತಳ್ಳಿಹಾಕಿದ ಹೌತಿ

ಯೆಮನ್‌ನ ರೆಬೆಲ್ ಗ್ರೂಪ್ ಹೌತಿ ಮತ್ತು ಸೌದಿ ಬೆಂಬಲಿತ ಪಡೆಗಳ ಸಂಘರ್ಷ ತೀವ್ರಗೊಂಡಿದ್ದು, ಇತಿಹಾಸದಲ್ಲೇ ಮೊದಲ ಬಾರಿಗೆ ಮುಸ್ಲಿಮರ ಪವಿತ್ರ ನಗರ ಮಕ್ಕಾದಲ್ಲಿ ಸೌದಿ ಅರೇಬಿಯಾದ ನಾಗರಿಕ ರಕ್ಷಣಾ (ಸಿವಿಲ್ ಡಿಫೆನ್ಸ್) ಇಲಾಖೆಯು...