Homeಕರ್ನಾಟಕಅಂಬೇಡ್ಕರ್‌ರವರ ಹೋರಾಟದ ರಥವನ್ನು ಮುಂದಕ್ಕೊಯ್ಯೋಣ: ನಿಜಗುಣಾನಂದ ಸ್ವಾಮಿಗಳು

ಅಂಬೇಡ್ಕರ್‌ರವರ ಹೋರಾಟದ ರಥವನ್ನು ಮುಂದಕ್ಕೊಯ್ಯೋಣ: ನಿಜಗುಣಾನಂದ ಸ್ವಾಮಿಗಳು

ಕನ್ನಡನೆಟ್‌.ಕಾಂಗೆ ದಶಮಾನ ಸಂಭ್ರಮ - ಬಹುತ್ವ ಭಾರತ ಪತ್ರಿಕೆ ಬಿಡುಗಡೆ ಸಮಾರಂಭದಲ್ಲಿ ನಿಜಗುಣಾನಂದ ಸ್ವಾಮಿಯವರ ಅಭಿಪ್ರಾಯ..

- Advertisement -
- Advertisement -

ಭಾರತವೆಂಬ ಹಡಗಿಗೆ ನಾವಿಕರು ರಾಜಕಾರಣಿಗಳಾಗಬಾರದು. ಬದಲಿಗೆ ಬುದ್ದ, ಬಸವ, ಅಂಬೇಡ್ಕರ್‌ರವರ ಚಿಂತನೆಗಳು ನಾವಿಕರಾಗಬೇಕು. ಬುದ್ದನ ತನು, ಬಸವಣ್ಣನ ಮನಸ್ಸು ಮತ್ತು ಅಂಬೇಡ್ಕರ್‌ರವರ ಆತ್ಮ ಭಾರತ ದೇಶವನ್ನು ಮುನ್ನಡೆಸಬೇಕೆಂದು ತೋಂಟದಾರ್ಯ ಶಾಖಾ ಮಠ, ಮುಂಡರಗಿಯ ನಿಜಗುಣಾನಂದ ಸ್ವಾಮಿಯವರು ಹೇಳಿದರು.

ಕೊಪ್ಪಳದಲ್ಲಿ ಕನ್ನಡನೆಟ್‌.ಕಾಂಗೆ ದಶಮಾನ ಸಂಭ್ರಮದ ಪ್ರಯುಕ್ತ ’ಬಹುತ್ವ ಭಾರತ’ ಮಾಸಪತ್ರಿಕೆ ಬಿಡುಗಡೆ ಮಾತನಾಡಿದ ಅವರು ಸಂಬಂಧಗಳ ಬೆಸುಗೆ ಮಾಡುವುದೇ ಮಾಧ್ಯಮ. ಅದಕ್ಕೆ ತನ್ನದೇಯಾದ ಪರಂಪರೆ ಮತ್ತು ಇತಿಹಾಸವಿದೆ. ಪ್ರಜಾಪ್ರಭುತ್ವದ ನಿಸರ್ಗದಲ್ಲಿ ಒಬ್ಬ ಮನುಷ್ಯನಾಗಿ ಬದುಕುತ್ತಿದ್ದು, ಎಲ್ಲರೂ ಮನುಷ್ಯನಾಗಿ ಬದುಕಬೇಕೆಂದು ಬಯಸಲು ಮಾಧ್ಯಮಗಳು ಪ್ರಯತ್ನಿಸಬೇಕು ಎಂದರು.

ಇಂದಿನ ಪ್ರಜಾಪ್ರಭುತ್ವ ಕುಸಿಯಲಿಕ್ಕೆ ಪ್ರಜೆಗಳೇ ಕಾರಣರಾಗಿರುವುದು ದುರಂತ. ಪ್ರಜೆಗಳು ಗಟ್ಟಿಯಿದ್ದರೆ, ಜಾಗೃತರಿದ್ದರೆ ಸ್ವಾಮಿಜಿಗಳು ಗಟ್ಟಿಯಾಗಿರುತ್ತಾರೆ, ರಾಜಕಾರಣಿಗಳು ಸಹ ಗಟ್ಟಿಯಾಗಿರುತ್ತಾರೆ. ಇದನ್ನು ಎಲ್ಲಿವರೆಗೂ ಪ್ರಜೆಗಳು ಅಂತರಂಗದೊಳಗೆ ಅರ್ಥಮಾಡಿಕೊಳ್ಳುವುದಿಲ್ಲವೋ ಆಗ ಪ್ರಜಾಪ್ರಭುತ್ವದ ವ್ಯವಸ್ಥೆ ಕಳೆದುಕೊಳ್ಳುತ್ತದೆ ಎಂದರು.

ಸೋಷಿಯಲ್‌ ಮೀಡಿಯಾ ಬಂದಮೇಲೆ ನಮ್ಮಂತವರ ಮಾತಿಗೆ ಒಂದಷ್ಟು ಬೆಲೆ ಬಂದಿದೆ. ಕರ್ನಾಟಕದಲ್ಲಿ ಮೊಟ್ಟ ಮೊದಲಿಗೆ ಪತ್ರಿಕೆ ತಂದವರು ಸನಾತನಾವಾದಿಗಳು, ಸಂಪ್ರದಾಯವಾದಿಗಳಲ್ಲ, ವಿದ್ಯಾವಂತರೂ ಸಹ ಅಲ್ಲ. ಬದಲಿಗೆ ಕ್ರೈಸ್ತಮಿಷನರಿಗಳು ಮಂಗಳೂರು ಸಮಾಚಾರ ತಂದರು. ಮಂಗಳೂರು ಸಮಾಚಾರ ಬಳ್ಳಾರಿಯಲ್ಲಿ ಪ್ರಿಂಟ್‌ ಆಗುತ್ತಿತ್ತು, ಆಗ ಕ್ರೈಸ್ತರು ಪತ್ರಿಕೆಯೆಂದರೇ ಏನು ಎಂದು ಅರ್ಥಮಾಡಿಸಿದರು ಎಂದು ತಿಳಿಸಿದರು.

ಮಾಧ್ಯಮ ಎನ್ನುವುದು ಹೊಟ್ಟೆಪಾಡಿನ ಕೆಲಸವಲ್ಲ. ಕಾರ್ಯಾಂಗ, ಶಾಸಕಾಂಗ, ನ್ಯಾಯಾಂಗದಿಂದ ನ್ಯಾಯಸಿಗದಿದ್ದಾಗ, ದಾರಿತಪ್ಪಿದಾಗ ಕೆಲಸ ಮಾಡಬೇಕದ ಅಂತರಂಗದ ತರಂಗ ಶಕ್ತಿಯೇ ಮಾಧ್ಯಮ. ಸತ್ಯ ಯಾವುದು? ಸುಳ್ಳು ಯಾವುದು? ಎಂದು ತಿಳಿಸುವುದು ಮಾಧ್ಯಮದ ಕೆಲಸ ಎಂದರು.

ಆದರಿಂದು ಹಲವು ಮಾಧ್ಯಮಗಳು ಕೆಲವೇ ಜಾತಿಧರ್ಮದ, ರಾಜಕೀಯ ಪಕ್ಷಗಳ ಪರವಾಗಿ ಕೆಲಸ ಮಾಡುತ್ತಿವೆ. ಎಂ.ಎಂ ಕಲಬುರ್ಗಿಯವರು ಯು.ಆರ್‌ ಅನಂತಮೂರ್ತಿಯವರ ಪ್ರಸಂಗವನ್ನು ಉಲ್ಲೇಖ ಮಾಡಿ ಮಾತನಾಡಿದನ್ನು ಹಿಂದೂ ಧರ್ಮದ ಕವಲೊಡೆದ ಎಂದೆಲ್ಲಾ ಸುಳ್ಳು ಸುದ್ದಿಪ್ರಕಟಿಸಿದರು. ಹಿಂದೂ ಧರ್ಮದ, ದೇವಸ್ಥಾನದ ವಿರೋಧ ಎಂದೆಲ್ಲಾ ಬರೆದು ಕಚೋಧ್ಯ, ಮತೀಯವಾದಿಗಳ, ಮತಾಂಧರ, ಪಟ್ಟಭದ್ರ ಹಿತಾಸಕ್ತಿಯ ಮಾಧ್ಯಮಗಳು ಕಲಬುರ್ಗಿಯವರ ಸಾವಿಗೆ ಕಾರಣವಾದುದು ದುರಂತ ಎಂದರು.

ಇಂದು ಎಲ್ಲಿಯಾದರೂ ಮಾತನಾಡಿ ಹೋದ ನಂತರ ನಾವು ಮನೆಸೇರುತ್ತೇವೆ ಎಂಬುದಕ್ಕೆ ಗ್ಯಾರಂಟಿಯಿಲ್ಲ. ಪ್ರತಿದಿನ ಮಾತನಾಡುವಾಗ ಸಾವಿನ ಕದವನ್ನು ತಟ್ಟಿ ಮಾತನಾಡುತ್ತೇನೆ. ಕಾರಣ ಧಾರ್ಮಿಕ ಮುಖಂಡರು ಹೀಗೆ ಮಾತನಾಡಬಾರದು. ಅವರೇನಿದ್ದರೂ ಹಾವಿನ ಹೆಡೆಯಂತೆ ಆರ್ಶಿವಾದದ ಕೈಹಾಕಬೇಕು. ಸ್ವಾಮಿಗಳೇಕೆ ಹೀಗೆ ಮಾತನಾಡಬೇಕು ಎನ್ನುವ ರೀತಿ ಮಾಧ್ಯಮಗಳು ನಮ್ಮ ಬಗ್ಗೆ ವರದಿ ಮಾಡುತ್ತಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಭಾರತ ದಿನೇ ದಿನೇ ಏಕಾಧಿಪತ್ಯ ಆಳ್ವಿಕೆಗೆ ಒಳಗಾಗುತ್ತಿದೆ. ಇದು ಸರಿಯಲ್ಲ. ನಮ್ಮದು ಬಹುತ್ವದ ದೇಶ. ಇದು ಬುದ್ದ, ಮಹಾವೀರ, ಲೋಕಾಯತ, ಚಾರ್ವಕ, ಕನಕಪುರಂದರ, ಬಸವಣ್ಣನವರ, ತಿರುವಳ್ಳುವರ್, ಸ್ವಾಮಿ ವಿವೇಕನಂದ, ಗಾಂಧಿ, ಅಂಬೇಡ್ಕರರ ಚಿಂತನೆಗಳ ದೇಶವಾಗಿದೆ ಎಂದರು.

ನಾನು ದೇಶವಿರೋಧಿ, ಧರ್ಮದ ವಿರೋಧಿಯಲ್ಲ. ನಾಸ್ತಿಕನೂ ಅಲ್ಲ. ನಾನು ಇಲ್ಲಿರುವ ಎಲ್ಲಾ ಜಾತಿ ಧರ್ಮದವರನ್ನು ಸಮಾನವಾಗಿ ಕಾಣಿ ಎಂದು ಹೇಳುತ್ತೇನೆ. ಏಕೆಂದರೆ ಎಲ್ಲರೂ ಸಮಾನವಾಗ ಬದುಕುಬೇಕೆಂಬ ಸತ್ಯದ ಆಶಯವಿರುವ ಬಾಬಾಸಾಹೇಬರ ಸಂವಿಧಾನಿವಿದೆ ಈ ದೇಶದಲ್ಲಿ ಎಂದರು.

ಕನ್ನಡನೆಟ್‌.ಕಾಂ ಒಂದು ಜೀವವನ್ನು ಉಳಿಸುವ ಕೆಲಸ ಮಾಡುತ್ತಿದೆ. ಅಂಬೇಡ್ಕರ್‌ರ ಪೆನ್ನು ಹೇಗೆ ದೇಶಕ್ಕೆ ದೊಡ್ಡ ಕೊಡುಗೆ ನೀಡಿತೋ ಹಾಗೆಯೇ ನೀವು ಮುಂದುವರೆಯಿರಿ ಎಂದು ಸಲಹೆ ನೀಡಿದರು.

ಮಾಧ್ಯಮಗಳು ಹಫ್ತಾ, ವಸೂಲಿ, ಮಟ್ಕಾ ದಂಧೆಯ ಬಗ್ಗೆ ಬರೆಯಿರಿ, ಹುಡುಕಿ ಹುಡುಕಿ ಬರೆಯಿರಿ ಬದಲಿಗೆ ಸುಳ್ಳು ಬರೆಯಬೇಡಿ, ಬ್ರೆಕಿಂಗ್‌ ನ್ಯೂಸ್‌ ಎಂಬ ಧಾವಂತಕ್ಕೆ ಬೀಳದೆ ಸತ್ಯ ಪರಿಶೀಲಿಸಿ ಪ್ರಕಟಿಸಿ ಎಂದರು. ನೆರೆ ಸಂತ್ರಸ್ತರು ತಲ್ಲಣಿಸುತ್ತಿದ್ದಾರೆ. ರೈತರು ಕಷ್ಟದಲ್ಲಿದ್ದಾರೆ. ಕಪ್ಪತಗುಡ್ಡ ತೊಂದರೆಯಲ್ಲಿದೆ. ಇವುಗಳ ಕುರಿತು ಹೆಚ್ಚು ಹೆಚ್ಚು ಬರೆದು ಆಳುವವರ ಕಣ್ತೆರೆಸಿ ಎಂದು ಮನವಿ ಮಾಡಿದರು.

ಮನುಷ್ಯನಿಗೆ ಮೂಲಭೂತವಾಗಿ ಅನ್ನ, ಅರಿವೆ, ಅರಿವು, ಆಶ್ರಯ, ಔಷಧ. ಆದರೆ ಎಲ್ಲಾ ಮನುಷ್ಯರಿಗೂ ಇದು ಸಿಗುತ್ತಿಲ್ಲ. ಅದಕ್ಕಾಗಿ ದೊಡ್ಡ ಹೋರಾಟ ನಡೆಯುತ್ತಿದೆ. ಈ ಹೋರಾಟದಲ್ಲಿ ಯಾವುದೇ ಕಾರಣಕ್ಕೂ ಹಿಂದಕ್ಕೆ ಸರಿಯಬೇಡಿ, ಅಂಬೇಡ್ಕರ್‌ರವರು ಹೇಳಿದಂತೆ ಥೇರನ್ನು ಮುಂದಕ್ಕೆ ಎಳೆದುಕೊಂಡಹೋಗೋಣ ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಹೈದರಾಬಾದ್‌ ಕರ್ನಾಟಕ ಹೋರಾಟಗಾರ ಡಾ.ರಜಾಕ್‌ ಉಸ್ತಾದ್‌ “ಟಿ.ವಿ ಮಾಧ್ಯಮದವರು ಓದುವುದಿಲ್ಲ, ಪತ್ರಿಕಾ ಮಾಧ್ಯಮದವರು ಸ್ಥಳಕ್ಕೆ ಹೋಗುವುದಿಲ್ಲ ಎಂಬತಾಗಿದೆ” ಎಂದು ಬೇಸರ ವ್ಯಕ್ತಪಡಿಸಿದರು. ಹಿಂದೆ ಜನ ಸುಳ್ಳು ಹೇಳುತ್ತಿದ್ದಾಗ ಪತ್ರಿಕೆಗಳು ಸತ್ಯ ಬರೆಯುತ್ತಿದ್ದವು. ಆದರಿಂದು ಪತ್ರಿಕೆಗಳು ಸುಳ್ಳು ಬರೆಯುತ್ತಿದ್ದು ಜನ ಸತ್ಯ ಹುಡುಕಿದ್ದಾರೆ ಎಂಬ ರವೀಶ್‌ ಕುಮಾರ್‌ರವರ ಮಾತನ್ನು ಉಲ್ಲೇಖಿಸಿ ಪ್ರಸ್ತುತ ಮಾಧ್ಯಮದ ಸ್ಥಿತಿಯನ್ನು ವಿವರಿಸಿದರು.

ಇದೇ ಸಂದರ್ಭದಲ್ಲಿ ತನಿಖಾ ಪತ್ರಿಕೋದ್ಯಮದ ಮೂಲಕ ಬಹಳಷ್ಟು ಹಗರಣಗಳನ್ನು ಬಯಲಿಗೆ ತಂದ ಹಿರಿಯ ಪತ್ರಕರ್ತರು ಮತ್ತು ಪ್ರಗತಿಪರ ಚಳವಳಿಗಳ ಒಡನಾಡಿಯಾದ ಕೊಪ್ಪಳದ ವಿಠ್ಠಪ್ಪ ಗೋರಂಟ್ಲಿಯವರಿಗೆ, ಹೈದರಾಬಾದ್‌ ಕರ್ನಾಟಕದ ಸಮಸ್ಯೆಗಳನ್ನು ಮುನ್ನಲೆಗೆ ತರುತ್ತಿರುವ ಪತ್ರಕರ್ತರಾದ ರಾಯಚೂರಿನ ಸಿದ್ದು ಬಿರಾದರ್‌‌ರವರಿಗೆ ಮತ್ತು ದಿ ಹಿಂದು ಪತ್ರಿಕೆಯ ಮೂಲಕ ಜನಪರ ಪತ್ರಿಕೋದ್ಯಮದ ಭಾಗವಾದ ಬಳ್ಳಾರಿಯ ಅಹಿರಾಜ್‌ರವರಿಗೆ “ಬಹುತ್ವ ಭಾರತೀಯ” ಪ್ರಶಸ್ತಿ ಪ್ರಧಾನ ಮಾಡಲಾಯಿತು.

ಪತ್ರಕರ್ತರದ ಸಿದ್ದನಗೌಡ ಪಾಟೀಲ್, ಕಾರ್ಮಿಕ ಮುಖಂಡರಾದ ಆರ್‌ ಭಾರಧ್ವಜ್‌, ಕನ್ನಡ ನೆಟ್‌ ಸಂಪಾದಕರಾದ ರಾಜಭಕ್ಷಿ, ಬಹುತ್ವ ಭಾರತ ಮಾಸಪತ್ರಿಕೆಯ ಸಂಪಾದಕರಾದ ಸಿರಾಜ್‌ ಬಿಸ್ರಳ್ಳಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

ಮೊಬೈಲ್ ಪತ್ತೆ ಪ್ರಕರಣ: ಪ್ರಜ್ವಲ್ ರೇವಣ್ಣ 2 ದಿನ ಪೊಲೀಸ್ ಕಸ್ಟಡಿಗೆ

ಅತ್ಯಾಚಾರ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾಗಿ ಸಜಾ ಕೈದಿಯಾಗಿ ಪರಪ್ಪನ ಅಗ್ರಹಾರ ಜೈಲು ಸೇರಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರಿಗೆ ಮತ್ತೊಂದು ಕಾನೂನು ಸಂಕಷ್ಟ ಎದುರಾಗಿದೆ. ಜೈಲಿನ ಅವರ ಕೊಠಡಿಯಲ್ಲಿ ಅಕ್ರಮವಾಗಿ ಮೊಬೈಲ್...

ರಾಜ್ಯದಲ್ಲಿ ಅವಧಿ ಮೀರಿದ ಆಹಾರ ಪೂರೈಕೆಯ ಬೃಹತ್ ದಂಧೆ: ₹1.43 ಕೋಟಿಯ ಉತ್ಪನ್ನಗಳು ಜಪ್ತಿ

ಆನ್‌ಲೈನ್ ಮತ್ತು ಇ-ಕಾಮರ್ಸ್ ವೇದಿಕೆಗಳ ಮೂಲಕ ಸಾರ್ವಜನಿಕರಿಗೆ ಅವಧಿ ಮೀರಿದ ಹಾಗೂ ಕಳಪೆ ಗುಣಮಟ್ಟದ ಆಹಾರ ಉತ್ಪನ್ನಗಳನ್ನು ಸರಬರಾಜು ಮಾಡುತ್ತಿದ್ದ ಬೃಹತ್ ದಂಧೆಯನ್ನು ಕರ್ನಾಟಕ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆ...

ಭಾರತೀಯ ಮಹಿಳೆಯನ್ನು ಬಾಂಗ್ಲಾ ಗಡಿಯಾಚೆಗೆ ತಳ್ಳಿದ ಪ್ರಕರಣ : 2 ಲಕ್ಷ ರೂ. ಪರಿಹಾರ ಪಾವತಿಸಲು ಅಸ್ಸಾಂ ಸರ್ಕಾರಕ್ಕೆ ಗುವಾಹಟಿ ಹೈಕೋರ್ಟ್ ಆದೇಶ

ಪಶ್ಚಿಮ ಬಂಗಾಳ ಮೂಲದ ಮುಸ್ಲಿಂ ಮಹಿಳೆಯೊಬ್ಬರಿಗೆ ವಿದೇಶಿಯರ ನ್ಯಾಯಾಧಿಕರಣದ (ಫಾರಿನರ್ಸ್ ಟ್ರಿಬ್ಯೂನಲ್) ಆದೇಶವನ್ನು ಪ್ರಶ್ನಿಸಲು ಯಾವುದೇ ಅವಕಾಶ ನೀಡದೆ, ಅವರನ್ನು ಬಾಂಗ್ಲಾ ಗಡಿಯಾಚೆಗೆ ತಳ್ಳಿದ್ದಕ್ಕಾಗಿ ಮಧ್ಯಂತರ ಪರಿಹಾರವಾಗಿ ಆಕೆಯ ಪತಿಗೆ 2 ಲಕ್ಷ...

ಮಂಡಿಯ ಐಐಟಿ ಕ್ಯಾಂಪಸ್‌ನಲ್ಲಿ ‘ಶೂದ್ರರು ಮೇಲ್ವರ್ಗಗಳ ಸೇವಕರು’ ಎಂಬ ವರ್ಣ ಶ್ರೇಣೀಕರಣ ಚಿತ್ರಣ: ಜಾತಿ ವಿವಾದದ ನಂತರ ತನಿಖೆಗೆ ಆದೇಶ

ಮಂಡಿ: ಶೂದ್ರರನ್ನು ‘ಉನ್ನತ ವರ್ಗಗಳಿಗೆ ಸೇವೆ ಸಲ್ಲಿಸಲು ಉದ್ದೇಶಿಸಿರುವವರು’ ಎಂದು ಬಿಂಬಿಸುವ ಪೋಸ್ಟರ್‌ವೊಂದು ಹಿಮಾಚಲ ಪ್ರದೇಶದ ಐಐಟಿ ಮಂಡಿಯಲ್ಲಿ ಜಾತಿ ವಿವಾದಕ್ಕೆ ಕಾರಣವಾಗಿದ್ದು, ಪ್ರಕರಣದ ಕುರಿತು ಸಂಸ್ಥೆ ತನಿಖೆಗೆ ಆದೇಶಿಸಿದೆ. ಸೆಪ್ಟೆಂಬರ್ 4ರಂದು...

ಎಸ್ಐಆರ್ ಬಳಿಕ ಮಣಿಪುರ, ಸಿಕ್ಕಿಂ, ಮಿಜೋರಾಂನಲ್ಲಿ 2.24 ಲಕ್ಷ ಮತದಾರರ ಹೆಸರು ಕಡಿತ: ಸಿಕ್ಕಿಂನಲ್ಲಿ ಶೇ.11.15ರಷ್ಟು ಇಳಿಕೆ 

ನವದೆಹಲಿ: ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ (SIR) ಬಳಿಕ ಈಶಾನ್ಯ ಭಾರತದ ಮಣಿಪುರ, ಸಿಕ್ಕಿಂ ಮತ್ತು ಮಿಜೋರಾಂ ರಾಜ್ಯಗಳ ಮತದಾರರ ಪಟ್ಟಿಯಲ್ಲಿ ದೊಡ್ಡ ಪ್ರಮಾಣದ ಬದಲಾವಣೆ ಕಂಡುಬಂದಿದೆ. ಈ ಮೂರು ರಾಜ್ಯಗಳಲ್ಲಿ...

ಜೆಎನ್‌ಯು ಪ್ರೊಫೆಸರ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ : 10ಕ್ಕೂ ಹೆಚ್ಚು ವಿದ್ಯಾರ್ಥಿನಿಯರಿಂದ ದೂರು

ದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ (ಜೆಎನ್‌ಯು) ಆಂತರಿಕ ದೂರುಗಳ ಸಮಿತಿಯು (ಐಸಿಸಿ), ಸುಮಾರು ಹನ್ನೊಂದು ವಿದ್ಯಾರ್ಥಿನಿಯರು ಪ್ರೊಫೆಸರ್ ಒಬ್ಬರ ವಿರುದ್ಧ ಮಾಡಿರುವ ಲೈಂಗಿಕ ಕಿರುಕುಳದ ಆರೋಪಗಳ ಕುರಿತು ಪ್ರಸ್ತುತ ತನಿಖೆ ನಡೆಸುತ್ತಿದೆ ಎಂದು...

ಹಿಂದೂ ಧಾರ್ಮಿಕ ಸಂಘಟನೆ ನಿಯೋಗದ ಭೇಟಿ ವೇಳೆ ಮಹಿಳಾ ಸಿಬ್ಬಂದಿಯನ್ನು ದೂರವಿಟ್ಟ ಆರೋಪ; ಈಫೆಲ್ ಟವರ್‌ನಲ್ಲಿ ನೌಕರರ ಮುಷ್ಕರ

ಹಿಂದೂ ಧಾರ್ಮಿಕ ಸಂಘಟನೆ ಬಿಎಪಿಎಸ್ (BAPS) ನಿಯೋಗದ ಭೇಟಿಯ ವೇಳೆ ಮಹಿಳಾ ಸಿಬ್ಬಂದಿಯನ್ನು ಕೆಲಸದ ಸ್ಥಳಗಳಿಂದ ದೂರವಿಡಲಾಗಿತ್ತು ಎಂಬ ಆರೋಪ ಫ್ರಾನ್ಸ್‌ನಲ್ಲಿ ವಿವಾದಕ್ಕೆ ಕಾರಣವಾಗಿದೆ. ಘಟನೆಯನ್ನು ಖಂಡಿಸಿ ಈಫೆಲ್ ಟವರ್‌ನ ಸಿಬ್ಬಂದಿ ಸೋಮವಾರ...

KPSC ಪಶುವೈದ್ಯಾಧಿಕಾರಿ ನೇಮಕಾತಿ ಅಕ್ರಮ: CID ತನಿಖೆಯಲ್ಲಿ ರೂ. 12 ಕೋಟಿಗೂ ಅಧಿಕ ಡೀಲ್ ಬಯಲು!

ಕರ್ನಾಟಕ ಲೋಕಸೇವಾ ಆಯೋಗ (KPSC) ನಡೆಸಿದ ಪಶುವೈದ್ಯಾಧಿಕಾರಿ ಹುದ್ದೆಗಳ ನೇಮಕಾತಿ ಪರೀಕ್ಷೆಯ ಅಕ್ರಮ ಪ್ರಕರಣದ ತನಿಖೆ ತೀವ್ರಗೊಂಡಿದ್ದು, ಸಿಐಡಿ (CID) ತನಿಖೆಯಲ್ಲಿ ಸಾಲು ಸಾಲು ಆಘಾತಕಾರಿ ಸಂಗತಿಗಳು ಹೊರಬಿದ್ದಿವೆ. ಒಟ್ಟು 24 ಅಭ್ಯರ್ಥಿಗಳು ಹಣ...

ದೆಹಲಿಯಲ್ಲಿ ಮಣಿಪುರದ ಸಂಗೀತಗಾರನ ಗುಂಪು ಹತ್ಯೆ : ಎಂಟು ಜನರ ಬಂಧನ

ದೆಹಲಿಯ ಆಶ್ರಮ್ ಪ್ರದೇಶದಲ್ಲಿ ವಾಸಿಸುತ್ತಿದ್ದ ಮಣಿಪುರದ ಸಂಗೀತಗಾರ ಚೊಂಗ್ಥಾಮ್ ವಿಕ್ರಮ್ ಸಿಂಗ್ ಅವರು ಭಾನುವಾರ (ಸೆ.6) ರಾತ್ರಿ ಗುಂಪೊಂದರಿಂದ ಕಲ್ಲು ತೂರಾಟ ಅಥವಾ ಹಲ್ಲೆಗೆ ಒಳಗಾಗಿ, ಅದರಿಂದ ಉಂಟಾದ ಗಂಭೀರ ಗಾಯಗಳಿಂದಾಗಿ ಸೋಮವಾರ...

SIR: ಚಿಂತಕ ಪರಕಾಲ ಪ್ರಭಾಕರ್‌ಗೆ ಚುನಾವಣಾ ಆಯೋಗದಿಂದ ನೋಟಿಸ್

ಅರ್ಥಶಾಸ್ತ್ರಜ್ಞ, ರಾಜಕೀಯ ವಿಶ್ಲೇಷಕ ಡಾ. ಪರಕಾಲ ಪ್ರಭಾಕರ್ ಅವರಿಗೂ ಈಗ ‘ವಿಶೇಷ ತೀವ್ರ ಪರಿಷ್ಕರಣೆ’ (SIR) ಪ್ರಕ್ರಿಯೆಯಡಿ ಚುನಾವಣಾ ಆಯೋಗದ ನೋಟಿಸ್ ಜಾರಿಯಾಗಿದೆ. ವೋಟರ್ ಐಡಿ ಪರಿಶೀಲನೆಯಲ್ಲಿ ‘Logical Discrepancy’ (ತಾರ್ಕಿಕ ಅಸಂಗತತೆ)...