Homeಮುಖಪುಟದೆಹಲಿ ನಿರ್ಭಯ ಅಪರಾಧಿಗಳಿಗೆ ಮರಣ ದಂಡನೆ : ಗಣ್ಯರ ಪ್ರತಿಕ್ರಿಯೆ

ದೆಹಲಿ ನಿರ್ಭಯ ಅಪರಾಧಿಗಳಿಗೆ ಮರಣ ದಂಡನೆ : ಗಣ್ಯರ ಪ್ರತಿಕ್ರಿಯೆ

- Advertisement -
- Advertisement -

ದೆಹಲಿಯ ಚಲಿಸುತ್ತಿದ್ದ ಬಸ್‌ನಲ್ಲಿ ವಿದ್ಯಾರ್ಥಿನಿಯು ಸಾಮೂಹಿಕ ಅತ್ಯಾಚಾರ ಮತ್ತು ಚಿತ್ರಹಿಂಸೆಗೊಳಗಾದ ಏಳು ವರ್ಷಗಳ ನಂತರ, ಆಕೆಯ ನಾಲ್ಕು ಕೊಲೆಗಾರರನ್ನು ಇಂದು ಬೆಳಿಗ್ಗೆ 5.30 ಕ್ಕೆ ಗಲ್ಲಿಗೇರಿಸಲಾಯಿತು. ಅಪರಾಧಿಗಳ ಅಂತಿಮ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದ ಒಂದು ದಿನದ ನಂತರ ಮುಂಜಾನೆ ಮರಣದಂಡನೆ ನಡೆಯಿತು.

ಅಕ್ಷಯ್ ಠಾಕೂರ್ (31), ಪವನ್ ಗುಪ್ತಾ (25), ವಿನಯ್ ಶರ್ಮಾ (26) ಮತ್ತು ಮುಖೇಶ್ ಸಿಂಗ್ (32) ಅವರನ್ನು ದೆಹಲಿಯ ತಿಹಾರ್ ಜೈಲಿನಲ್ಲಿ ಗಲ್ಲಿಗೇರಿಸಲಾಯಿತು.

ಅಪರಾಧಿಗಳು ಮರಣ ದಂಡನೆಯಿಂದ ವಿನಾಯಿತಿಗಾಗಿ ಕಳೆದ ಕೆಲವು ತಿಂಗಳುಗಳಲ್ಲಿ ಅನೇಕ ಅರ್ಜಿಗಳನ್ನು ಸಲ್ಲಿಸಿದ್ದರು. “ಅವರನ್ನು ಭಾರತ-ಪಾಕಿಸ್ತಾನ ಗಡಿಗೆ ಅಥವಾ ಡೋಕ್ಲಾಮ್‌ಗೆ ಕಳುಹಿಸಿ (ಚೀನಾದ ಗಡಿಯಲ್ಲಿ), ಆದರೆ ಗಲ್ಲಿಗೇರಿಸಬೇಡಿ” ಎಂದು ಅಕ್ಷಯ್ ಠಾಕೂರ್ ಅವರ ವಕೀಲರು ಮನವಿ ಮಾಡಿದ್ದರು.

“ನಾವೆಲ್ಲರೂ ಈ ದಿನಕ್ಕಾಗಿ ಇಷ್ಟು ದಿನ ಕಾಯುತ್ತಿದ್ದೆವು. ಇಂದು ಭಾರತದ ಹೆಣ್ಣುಮಕ್ಕಳಿಗೆ ಹೊಸ ಉದಯವಾಗಿದೆ. ಮೃಗಗಳನ್ನು ಗಲ್ಲಿಗೇರಿಸಲಾಗಿದೆ” ಎಂದು ನಿರ್ಭಯ ತಾಯಿ ಆಶಾ ದೇವಿ ಹೇಳಿದರು. ಸುಪ್ರೀಂ ಕೋರ್ಟ್ ತೀರ್ಪಿನ ನಂತರ, ಅವರು ಮನೆಗೆ ಹೋಗಿ ಮಗಳ ಫೋಟೋವನ್ನು ತಬ್ಬಿಕೊಂಡೆ ಎಂದರು.

ಡಿಸೆಂಬರ್ 16, 2012 ರಂದು, 23 ವರ್ಷದ ನಿರ್ಭಯಾರನ್ನು ಆರು ಮಂದಿ ಸುಮಾರು ಒಂದು ಘಂಟೆಯವರೆಗೆ ಘೋರ ಹಿಂಸೆ ಮಾಡಿ ಅತ್ಯಾಚಾರಕ್ಕೆ ಒಳಪಡಿಸಿದ್ದರು. ಇದಾದ ಕೆಲವು ದಿನಗಳ ನಂತರ ಸಿಂಗಾಪುರ ಆಸ್ಪತ್ರೆಯಲ್ಲಿ ಸಂತ್ರಸ್ತೆ ನಿರ್ಭಯ ನಿಧನರಾಗಿದ್ದರು. ಅವರ ಕೊಲೆಗಾರರು ದಕ್ಷಿಣ ದೆಹಲಿಯ ಕೊಳೆಗೇರಿಯ ನಿವಾಸಿಗಳಾಗಿದ್ದಾರೆ.

ಬಂಧಿಸಲ್ಪಟ್ಟ ಆರು ಜನರಲ್ಲಿ ರಾಮ್ ಸಿಂಗ್ ಜೈಲು ಕೋಣೆಯಲ್ಲಿ ಶವವಾಗಿ ಪತ್ತೆಯಾಗಿದ್ದರು. 18 ಕ್ಕಿಂತ ಕಡಿಮೆ ವಯಸ್ಸಿನ ಅಪ್ರಾಪ್ತ ಬಾಲಕನನ್ನು ಮೂರು ವರ್ಷಗಳ ನಂತರ ರಿಮಾಂಡ್ ಹೋಮಿಂದ ಬಿಡುಗಡೆ ಮಾಡಲಾಗಿತ್ತು.

ಭೀಕರ ಸಾಮೂಹಿಕ ಅತ್ಯಾಚಾರ ಮತ್ತು ಹತ್ಯೆಯ ನಂತರ ಮಹಿಳೆಯರ ಮೇಲಿನ ಅಪರಾಧಗಳ ಬಗ್ಗೆ ಭಾರತ ಸರಕಾರ ತನ್ನ ಕಾನೂನುಗಳನ್ನು ಬದಲಾಯಿಸಿತು.

ನ್ಯಾಯ ಸಿಗಲು 7 ವರ್ಷಗಳು ಬೇಕಾಯಿತು. ಇಂದು, ಇದೇ ರೀತಿಯ ಘಟನೆ ಮತ್ತೆ ಸಂಭವಿಸುವುದಿಲ್ಲ ಎಂಬ ಪ್ರತಿಜ್ಞೆಯನ್ನು ನಾವು ತೆಗೆದುಕೊಳ್ಳಬೇಕಾಗಿದೆ. ಇತ್ತೀಚಿನವರೆಗೂ ಅಪರಾಧಿಗಳು ಕಾನೂನನ್ನು ಹೇಗೆ ನಿರ್ವಹಿಸಿದ್ದಾರೆಂದು ನಾವು ನೋಡಿದ್ದೇವೆ. ನಮ್ಮ ವ್ಯವಸ್ಥೆಯಲ್ಲಿ ಸಾಕಷ್ಟು ಲೋಪದೋಷಗಳಿವೆ, ನಾವು ವ್ಯವಸ್ಥೆಯನ್ನು ಸುಧಾರಿಸಬೇಕಾಗಿದೆ ಎಂದು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.

ಅಪರಾಧಿಗಳನ್ನು ಗಲ್ಲಿಗೇರಿಸಿದ ನಂತರ ಪ್ರಧಾನಮಂತ್ರಿ ನರೇಂದ್ರ ಮೋದಿ “ನ್ಯಾಯ ಮೇಲುಗೈ ಸಾಧಿಸಿದೆ” ಎಂದು ಪ್ರತಿಕ್ರಿಸಿದ್ದಾರೆ. ಮಹಿಳೆಯರ ಘನತೆ ಮತ್ತು ಸುರಕ್ಷತೆಯನ್ನು ಖಚಿತಪಡಿಸುವುದು ಅತ್ಯಂತ ಮಹತ್ವದ್ದಾಗಿದೆ. ನಮ್ಮ ನಾರಿ ಶಕ್ತಿ ಪ್ರತಿಯೊಂದು ಕ್ಷೇತ್ರದಲ್ಲೂ ಉತ್ತಮ ಸಾಧನೆ ಮಾಡಿದೆ. ಒಟ್ಟಾಗಿ, ನಾವು ಮಹಿಳಾ ಸಬಲೀಕರಣದ ಮೇಲೆ ಕೇಂದ್ರೀಕರಿಸುವ ರಾಷ್ಟ್ರವನ್ನು ನಿರ್ಮಿಸಬೇಕು, ಅಲ್ಲಿ ಸಮಾನತೆ ಮತ್ತು ಅವಕಾಶಗಳಿಗೆ ಒತ್ತು ನೀಡಲಾಗುತ್ತದೆ ಎಂದು ಟ್ವೀಟ್‌ ಮಾಡಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಅಮೇಥಿ ಕಾಂಗ್ರೆಸ್ ಕಚೇರಿ ಮೇಲೆ ದಾಳಿ, ಕಾರ್ಯಕರ್ತನಿಗೆ ಹಲ್ಲೆ: ಬಿಜೆಪಿ ಮುಖಂಡರು ಸೇರಿ 10...

0
ಉತ್ತರ ಪ್ರದೇಶದ ಅಮೇಥಿಯಲ್ಲಿ ಕಾಂಗ್ರೆಸ್ ಪಕ್ಷದ ಕಚೇರಿ ಮೇಲೆ ಭಾನುವಾರ (ಮೇ 5) ಮಧ್ಯರಾತ್ರಿ ಅಪರಿಚಿತ ದುಷ್ಕರ್ಮಿಗಳ ಗುಂಪೊಂದು ದಾಳಿ ಮಾಡಿದೆ. ಪಕ್ಷದ ಕಚೇರಿಯ ಹೊರಗೆ ನಿಲ್ಲಿಸಿದ್ದ ಹಲವು ವಾಹನಗಳನ್ನು ಧ್ವಂಸಗೊಳಿಸಿದ ದುಷ್ಕರ್ಮಿಗಳು,...