Homeಮುಖಪುಟಬಾಹ್ಯ ಏಜೆನ್ಸಿಗಳಿಗೆ ಪ್ರವೇಶವಿಲ್ಲ, ಇವಿಎಂ ಪ್ರೋಗ್ರಾಮಿಂಗ್ ಪ್ರಕ್ರಿಯೆಯು ದೃಢವಾಗಿದೆ: ಚುನಾವಣಾ ಆಯೋಗ

ಬಾಹ್ಯ ಏಜೆನ್ಸಿಗಳಿಗೆ ಪ್ರವೇಶವಿಲ್ಲ, ಇವಿಎಂ ಪ್ರೋಗ್ರಾಮಿಂಗ್ ಪ್ರಕ್ರಿಯೆಯು ದೃಢವಾಗಿದೆ: ಚುನಾವಣಾ ಆಯೋಗ

- Advertisement -
- Advertisement -

ವಿದ್ಯುನ್ಮಾನ ಮತಯಂತ್ರಗಳ (ಇವಿಎಂ) ಬಳಕೆಯ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಇಂಡಿಯಾ (I.N.D.I.A.) ಒಕ್ಕೂಟದ ಸದಸ್ಯರು ಆಗಸ್ಟ್‌ನಲ್ಲಿ ಚುನಾವಣಾ ಆಯೋಗಕ್ಕೆ (ಇಸಿ) ಪತ್ರ ಬರೆದಿದ್ದರು. ಇವಿಎಂಗಳ ಕುರಿತು ಪದೇಪದೆ ಕೇಳಲಾಗುವ ಪ್ರಶ್ನೆಗಳ (ಎಫ್ಎಕ್ಯೂ) ಕುರಿತ ಪುಟವನ್ನು ಇದೀಗ ಆಯೋಗ ಪರಿಷ್ಕರಿಸಿದ್ದು, ‘ಜರ್ಮನಿಯಲ್ಲಿ ನಿಷೇಧಿತ ಇವಿಎಂಗಳಿಗಿಂತ ಭಾರತೀಯ ಇವಿಎಂಗಳು ಹೇಗೆ ಭಿನ್ನವಾಗಿವೆ; ಒಂದು ವೇಳೆ ವಿವಿ ಪ್ಯಾಟ್‌ಗಳು ಪ್ರೋಗ್ರಾಮೆಬಲ್ ಮೆಮೊರಿಯನ್ನು ಹೊಂದಿದ್ದರೆ ಹಾಗೂ ಇವಿಎಂ ತಯಾರಕರು ವಿದೇಶಿ ಮೈಕ್ರೋಚಿಪ್ ತಯಾರಕರೊಂದಿಗೆ ಸಾಫ್ಟ್ವೇರ್ ಅನ್ನು ಹಂಚಿಕೊಂಡರೆ ಏನಾಗುತ್ತದೆ’ ಎಂಬ ಬಗ್ಗೆ ತನ್ನ ಉತ್ತರವನ್ನು ಮತ್ತಷ್ಟು ವಿವರಿಸಿದೆ.

ನವೀಕರಿಸಿದ ಎಫ್ಎಕ್ಯೂಗಳನ್ನು ಆಗಸ್ಟ್ 23 ರಂದು ಅಪ್ಲೋಡ್ ಮಾಡಲಾಗಿದೆ. 76 ಪ್ರಶ್ನೆಗಳನ್ನು ಒಳಗೊಂಡಿದ್ದು, ಹಿಂದಿನ ಆವೃತ್ತಿಯು 39 ಪ್ರಶ್ನೆಗಳಿಗೆ ಉತ್ತರಿಸಲಾಗಿತ್ತು.

‘ಮೈಕ್ರೋಕಂಟ್ರೋಲರ್‌ಗಳನ್ನು ಬಿಇಎಲ್/ಇಸಿಐಎಲ್ ಕಂಪನಿಗಳು ಫರ್ಮ್‌ವೇರ್ ತಂತ್ರಜ್ಞಾನದ ಮೂಲಕ, ತಮ್ಮದೆ ಜಾಗದಲ್ಲಿ ಉನ್ನತ ಮಟ್ಟದ ಭದ್ರತೆ ಮತ್ತು ಸುರಕ್ಷತೆಗಳ ಅಡಿಯಲ್ಲಿ ಪೋರ್ಟ್ ಮಾಡಲಾಗುತ್ತದೆ. ನಾಲ್ಕು ಹಂತಗಳ ಸುರಕ್ಷಿತ ಉತ್ಪಾದನಾ ಪ್ರಕ್ರಿಯೆಯಲ್ಲಿ ಮೈಕ್ರೋಕಂಟ್ರೋಲರ್ಗಳನ್ನು ‘ಎಲ್-3’ ಪ್ರದೇಶದಲ್ಲಿ ಪೋರ್ಟ್ ಮಾಡಲಾಗುತ್ತದೆ. ಅಲ್ಲಿಗೆ ಪ್ರವೇಶ ಕಾರ್ಡ್‌ಗಳನ್ನು ಹೊಂದಿರುವ, ನಿಗದಿಪಡಿಸಿದ ಎಂಜಿನಿಯರ್‌ಗಳು ಮಾತ್ರ ಬಯೋಮೆಟ್ರಿಕ್ ಸ್ಕ್ಯಾನ್‌ರ್‌ಗಳ ಮೂಲಕ ಅಧಿಕೃತ ಪ್ರವೇಶವನ್ನು ಹೊಂದಿರುತ್ತಾರೆ. ಮೈಕ್ರೊ ನಿಯಂತ್ರಕಗಳಲ್ಲಿ ಫರ್ಮ್‌ವೇರ್ ಪ್ರೋಗ್ರಾಂ ಅನ್ನು ಲೋಡ್ ಮಾಡುವಾಗ ಯಾವುದೇ ಬಾಹ್ಯ ಏಜೆನ್ಸಿ, ಸ್ಥಳೀಯ ಅಥವಾ ವಿದೇಶಿ ಏಜೆನ್ಸಿಗಳು ತೊಡಗಿಸಿಕೊಂಡಿಲ್ಲ’ ಎಂದು ಆಯೋಗ ತನ್ನ ಉತ್ತರದಲ್ಲಿ ತಿಳಿಸಿದೆ.

ವಿವಿ ಪ್ಯಾಟ್ (ಮತದಾರರು ಪರಿಶೀಲಿಸಬಹುದಾದ ಕಾಗದದ ಆಡಿಟ್ ಟ್ರಯಲ್) ನಲ್ಲಿ, ಎರಡು ರೀತಿಯ ಖಚಿತ ಪ್ರಕ್ರಿಯೆ ಹೊಂದಿವೆ ಎಂದು ಬರೆದಿರುವ ಅಯೋಗ, ಪ್ರೋಗ್ರಾಂ ಸೂಚನೆಗಳನ್ನು ಮೈಕ್ರೋಕಂಟ್ರೋಲರ್‌ಗಳಿಗೆ ಒಂದೇ ಬಾರಿ ಪ್ರೋಗ್ರಾಮ್ ಮಾಡಬಹುದಾಗಿರುತ್ತದೆ. ಇನ್ನೊಂದರಲ್ಲಿ ಚಿತ್ರಗಳನ್ನು (ಚಿಹ್ನೆಗಳು) ಸಂಗ್ರಹಿಸಲಾಗುತ್ತದೆ. ಚಿಹ್ನೆಗಳನ್ನು ಅಭ್ಯರ್ಥಿಗಳು ಅಥವಾ ಅವರ ಪ್ರತಿನಿಧಿಗಳ ಉಪಸ್ಥಿತಿಯಲ್ಲಿ ಲೋಡ್ ಮಾಡಲಾಗುತ್ತದೆ’ ಎಂದು ವಿವರಿಸಿದೆ.

‘ಜರ್ಮನ್ ಸಾಂವಿಧಾನಿಕ ನ್ಯಾಯಾಲಯವು ನಿಷೇಧಿಸಿರುವ ಮತದಾನ ವ್ಯವಸ್ಥೆಗಳಿಗಿಂತ ಭಾರತದ ಇವಿಎಂಗಳು ಹೇಗೆ ಭಿನ್ನವಾಗಿವೆ?” ಎಂಬ ಪ್ರಶ್ನೆಗೆ, ‘ಇವಿಎಂಗಳನ್ನು ಕೇಂದ್ರ ಸರ್ಕಾರದ ಪಿಎಸ್ಯುಗಳು ಸುರಕ್ಷಿತ ಸೌಲಭ್ಯಗಳಲ್ಲಿ ತಯಾರಾಗುತ್ತಿದ್ದು, ಮೂರನೇ ವ್ಯಕ್ತಿಯ ಪರೀಕ್ಷೆಗೆ ಒಳಗಾಗುತ್ತವೆ. ಜರ್ಮನ್ಗಿಂತಲೂ ಭಾರತೀಯ ಇವಿಎಂಗಳು ದೃಢವಾಗಿರುತ್ತವೆ. ವಿಭಿನ್ನವಾದ, ಹೋಲಿಸಲಾಗದ ತಂತ್ರಜ್ಞಾನಗಳು ಮತ್ತು ಪ್ರಕ್ರಿಯೆಗಳನ್ನು ಕಾರ್ಯಗತಗೊಳಿಸುತ್ತವೆ. ದೇಶದ ಸುಪ್ರೀಂ ಕೋರ್ಟ್ ಮತ್ತು ವಿವಿಧ ಹೈಕೋರ್ಡ್‌ಗಳು ಯಂತ್ರಗಳನ್ನು ಮತ್ತೆ ಮತ್ತೆ ಪರಿಶೀಲಿಸಿವೆ. ಇಸಿಐ ಇವಿಎಂಗಳಲ್ಲಿ ತಮ್ಮ ವಿಶ್ವಾಸ ಮತ್ತು ನಂಬಿಕೆಯನ್ನು ಮರುಸ್ಥಾಪಿಸಿವೆ’ ಎಂದು ಆಯೋಗ ಹೇಳಿದೆ.

ಇವಿಎಂಗಳನ್ನು ಟ್ಯಾಂಪರಿಂಗ್ ಮಾಡುವ ಕುರಿತ ಹಲವಾರು ಪ್ರಶ್ನೆಗಳಿಗೆ ಉತ್ತರಿಸಿರುವ ಆಯೋಗ, ಸೆಲ್ಫೋನ್ ಅಥವಾ ಬ್ಲೂಟೂತ್ ಸಾಧನಗಳನ್ನು ಬಳಸಿಕೊಂಡು ಇವಿಎಂಗಳನ್ನು ಮ್ಯಾನಿಪುಲೇಟ್ ಮಾಡಬಹುದೆಂಬ ಪ್ರತಿಪಾದನೆಗೆ, ‘ಇದು ಆಧಾರರಹಿತ ಮತ್ತು ಅವೈಜ್ಞಾನಿಕವಾಗಿದೆ… ಮೈಕ್ರೋ ಕಂಟ್ರೋಲರ್‌ಗಳ ಕುರಿತು ತಾಂತ್ರಿಕ ಮಾಹಿತಿಯು ಸಾರ್ವಜನಿಕವಾಗಿ ಲಭ್ಯವಿದೆ. ಬೇಕಿದ್ದರೆ ಮೈಕ್ರೋಕಂಟ್ರೋಲರ್ ತಯಾರಕರ ವೆಬ್‌ಸೈಟ್ ಪ್ರವೇಶಿಸಿ ಪರಿಶೀಲಿಸಬಹುದು’ ಎಂದಿದೆ.

20 ಲಕ್ಷ ಇವಿಎಂಗಳು ನಾಪತ್ತೆಯಾಗಿವೆ ಎಂಬ ಮಾಧ್ಯಮ ವರದಿಗಳು ನಿಜವೇ ಎಂಬುದು ಮತ್ತೊಂದು ಪ್ರಶ್ನೆಯಾಗಿದೆ. ‘ಈ ವಿಷಯವು ನ್ಯಾಯಾಲಯದಲಲ್ಲಿದೆ. ಬಾಂಬೆ ಹೈಕೋರ್ಟಿಗೆ ಅಗತ್ಯ ಸ್ಪಷ್ಟೀಕರಣಗಳನ್ನು ಒದಗಿಸಲಾಗಿದೆ. ಪಟ್ಟಭದ್ರ ಹಿತಾಸಕ್ತಿಗಳಿಗೆ ಸತ್ಯಗಳನ್ನು ತಿರುಚುವುದು ದೊಡ್ಡ ವಿಷಯವಲ್ಲ’ ಎಂದು ಇಸಿ ಉತ್ತರಿಸಿದೆ.

ಇದನ್ನೂ ಓದಿ; ಮರಗಳ್ಳತನ ಪ್ರಕರಣ: ಬಿಜೆಪಿ ಸಂಸದ ಪ್ರತಾಪ್ ಸಿಂಹ ಸಹೋದರನ ಬಂಧನ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪಶ್ಚಿಮ ಬಂಗಾಳದ ಹೂಗ್ಲಿಯಲ್ಲಿ ಬಾಂಬ್ ಸ್ಫೋಟ: ಬಾಲಕ ಮೃತ್ಯು, ಇಬ್ಬರಿಗೆ ಗಂಭೀರ ಗಾಯ

0
ಪಶ್ಚಿಮ ಬಂಗಾಳದ ಹೂಗ್ಲಿ ಜಿಲ್ಲೆಯಲ್ಲಿ ಕಚ್ಚಾ ಬಾಂಬ್ ಸ್ಫೋಟ ಸಂಭವಿಸಿ ಏಳು ವರ್ಷದ ಬಾಲಕ ಸಾವನ್ನಪ್ಪಿದ್ದು, ಇತರ ಇಬ್ಬರು ಅಪ್ರಾಪ್ತ ಬಾಲಕರಿಗೂ ತೀವ್ರ ಗಾಯಗಳಾಗಿದೆ. ಮೃತ ಬಾಲಕನನ್ನು ರಾಜ್ ಬಿಸ್ವಾಸ್ ಎಂದು ಗುರುತಿಸಲಾಗಿದೆ. ಘಟನೆಯಲ್ಲಿ...