PC: New Indian Express

ಮಹಿಳಾ ವಿಜ್ಞಾನಿ ಸೇರಿ ವಿಶ್ವದ ಆಳ ಗರ್ಭದಲ್ಲಿರುವ ರಹಸ್ಯಗಳನ್ನು ಅನಾವರಣ ಮಾಡಿದ ಮೂವರು ಭೌತವಿಜ್ಞಾನಿಗಳಿಗೆ ರಾಯಲ್‌ ಸ್ವೀಡಿಷ್‌ ಅಕಾಡೆಮಿ ಆಫ್‌ ಸೈನ್ಸ್‌ ನೀಡುವ ಪ್ರತಿಷ್ಠಿತ ಭೌತಶಾಸ್ತ್ರದ ನೊಬೆಲ್‌ ಪುರಸ್ಕಾರ ಲಭಿಸಿದೆ.

ಇಂಗ್ಲೆಂಡಿನ ಆಕ್ಸ್‌ಫರ್ಡ್‌ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿರುವ ರೋಜರ್‌ ಪೆನ್ರೋಸ್‌, ಆಲ್ಬರ್ಟ್‌ ಐನ್‌ಸ್ಟೀನ್‌ ಅವರ ಸಾಪೇಕ್ಷ ಸಿದ್ದಾಂತವನ್ನು ಅನ್ವೇಷಿಸುವುದಕ್ಕೆ ಗಣಿತದ ವಿನೂತನ ಪದ್ಧತಿಯನ್ನು ಕಂಡುಕೊಂಡವರು. ಈ ಪದ್ಧತಿಯ ಮೂಲಕ ಕಪ್ಪು ಕುಳಿ(black hole) ರೂಪ ಪಡೆಯುವ ಬಗೆಯನ್ನು ವಿವರಿಸಿದರು. ಇವರಿಗೆ ಪ್ರಶಸ್ತ್ರಿಯ ಒಂದು ಭಾಗವನ್ನು ನೀಡಲಾಗುತ್ತಿದೆ.

1965ರಲ್ಲಿ ರೋಜರ್‌ ಕಪ್ಪು ಕುಳಿಗಳು ನಿಜಕ್ಕೂ ಸೃಷ್ಟಿಯಾಗಬಹುದೆಂದು ನಿರೂಪಿಸಿದರು ಹಾಗೂ ಆ ಬಗ್ಗೆ ವಿವರವಾಗಿ ಉಲ್ಲೇಖಿಸಿದರು.

ಜರ್ಮನಿಯ ಮ್ಯಾಕ್ಸ್‌ಪ್ಲಾಂಕ್‌ ಇನ್‌ಸ್ಟ್ರಿಟ್ಯೂಟ್‌ ಆಫ್‌ ಎಕ್ಸ್‌ಟ್ರಾಟೆರಿಸ್ಟ್ರಿಯಲ್‌ ಫಿಸಿಕ್ಸ್‌ನಲ್ಲಿ ನಿರ್ದೇಶಕರಾಗಿರುವ ರೀನ್‌ಹಾರ್ಡ್‌ ಗೆಂಜೆಲ್‌ ಮತ್ತು ಲಾಸ್‌ ಏಂಜೆಲಿಸ್‌ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿರುವ ಆಂಡ್ರಿಯಾ ಘೆಜ್‌ ಪ್ರಶಸ್ತಿಯ ಇನ್ನೊಂದು ಭಾಗವನ್ನು ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ನೂತನ ಹೆಪಟೈಟಿಸ್‌ ‘ಸಿ’ ವೈರಸ್‌ ಬಗೆಗಿನ ಸಂಶೋಧನೆಗೆ 2020ರ ನೊಬೆಲ್‌ ಪ್ರಶಸ್ತಿ

ತೊಂಬತ್ತರ ದಶಕದಿಂದ ಈ ಇಬ್ಬರು ವಿಜ್ಞಾನಿಗಳು ತಮ್ಮದೇ ತಂಡದ ಮೂಲಕ ನಮ್ಮ ಸೌರಮಂಡಲದಲ್ಲಿರುವ ಮಿಲ್ಕಿ ವೇ ಗೆಲಾಕ್ಸಿಯನ್ನು ಅಧ್ಯಯನ ಮಾಡಲಾರಂಭಿಸಿದರು. ಈ ಇಬ್ಬರು ವಿಜ್ಞಾನಿಗಳ ತಂಡವು ಗೆಲಾಕ್ಸಿಯ ಕೇಂದ್ರದಲ್ಲಿ, ಅದೃಶ್ಯವೂ ಹಾಗೂ ಅತ್ಯಂತ ಭಾರತದ ಕಾಯವಿರುವುದನ್ನು ಗುರುತಿಸಿತು. ಇದು ಗೆಲಾಕ್ಸಿಯ ನಕ್ಷತ್ರಗಳನ್ನು ನಿಯಂತ್ರಿಸುತ್ತದೆ ಎಂಬುದು ತಿಳಿಯಿತು.

40 ಲಕ್ಷ ಸೂರ್ಯರ ಸಾಂದ್ರತೆಯನ್ನ ಒಟ್ಟು ಮಾಡಿದರೆ ಆಗಬಹುದಾದ ದೊಡ್ಡದಾದ ಕಾಯವಿದು ಎಂಬುದನ್ನು ಗೆಂಜೆಲ್‌ ಮತ್ತು ಘೆಜ್‌ ತಂಡಗಳು ಕಂಡುಕೊಂಡವು.

ವಿಶೇಷವೆಂದರೆ ಘೆಜ್‌ ಭೌತಶಾಸ್ತ್ರದಲ್ಲಿ ನೊಬೆಲ್‌ ಗೌರವಕ್ಕೆ ಭಾಜನರಾದ ನಾಲ್ಕನೆಯ ಮಹಿಳಾ ವಿಜ್ಞಾನಿಯಾಗಿದ್ದಾರೆ. 1903ರಲ್ಲಿ ಪೊಲ್ಯಾಂಡಿನ ಮೇರಿ ಸ್ಕೊಲೊಡೋಸ್ಕ್‌, 1963ರಲ್ಲಿ ಅಮೆರಿಕದ ಮಾರಿಯಾ ಗೋಪರ್ಟ್‌ ಮೇಯರ್‌, 2018ರಲ್ಲಿ ಕೆನಡಾದ ಡೊನಾ ಸ್ಟ್ರಿಕ್‌ಲ್ಯಾಂಡ್‌ ಈ ಗೌರವಕ್ಕೆ ಪಾತ್ರರಾಗಿದ್ದರು.

ಕೃಪೆ: ಟೆಕ್ ಕನ್ನಡ


 

ಇದನ್ನೂ ಓದಿ: ಕೊರೋನಾ – ಭಾರತದ ಆರ್ಥಿಕತೆ: ನೊಬೆಲ್ ಪುರಸ್ಕೃತ ಅರ್ಥಶಾಸ್ತ್ರಜ್ಞರು ಏನೇಳ್ತಾರೆ?

Donate

ನ್ಯಾಯದ ಜೊತೆಗಿರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ

ಜನಪರ ಸ್ವತಂತ್ರ ಪತ್ರಿಕೋದ್ಯಮವೇ ನಮ್ಮ ಆಶಯ. ನಿಮ್ಮಗಳ ಬೆಂಬಲವೇ ನಮಗೆ ಬಲ. ನ್ಯಾಯದ ಜೊತೆಗಿರಲು ಬಯಸುವ, ಸತ್ಯಪಥವನ್ನು ತುಳಿಯಲು ಪ್ರೋತ್ಸಾಹಿಸುವವರು ಬೆಂಬಲಿಸಿ. ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ ಪಾವತಿಸಬಹುದು.
ಧನ್ಯವಾದಗಳು

Independent journalism can’t be independent without your support, contribute by clicking below.

ಪ್ರತಿವಾರದ ವಿದ್ಯಮಾನಗಳ ವಿಶ್ಲೇಷಣೆಗಳು, ಅಂಕಣಗಳು ಹಾಗೂ ವಿಶೇಷ ಬರಹಗಳನ್ನು ಓದಲು ನ್ಯಾಯಪಥ ಪತ್ರಿಕೆಗೆ ಚಂದಾದಾರರಾಗಿ. ಚಂದಾ ಹಣವನ್ನು ಪಾವತಿಸಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ.
Avatar
ನಾನು ಗೌರಿ ಡೆಸ್ಕ್
+ posts

LEAVE A REPLY

Please enter your comment!
Please enter your name here