Homeಅಂತರಾಷ್ಟ್ರೀಯಗಾಝಾ ನೆರವಿಗೆ ಉತ್ತರ ಆಫ್ರೀಕಾ ದೇಶಗಳ ಜನರ ಕಾಲ್ನಡಿಗೆ ರ‍್ಯಾಲಿ | ತಡೆದ ಈಜಿಫ್ಟ್‌

ಗಾಝಾ ನೆರವಿಗೆ ಉತ್ತರ ಆಫ್ರೀಕಾ ದೇಶಗಳ ಜನರ ಕಾಲ್ನಡಿಗೆ ರ‍್ಯಾಲಿ | ತಡೆದ ಈಜಿಫ್ಟ್‌

- Advertisement -
- Advertisement -

ಪ್ಯಾಲೆಸ್ತೀನ್ ಮೇಲಿನ ಇಸ್ರೇಲ್‌ ದಿಗ್ಬಂಧನವನ್ನು ಪ್ರತಿಭಟಿಸಿ ಮತ್ತು ಪ್ಯಾಲೆಸ್ತೀನಿ ಜನರ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿ ಉತ್ತರ ಆಫ್ರಿಕಾದ ದೇಶಗಳ ಸುಮಾರು 2,000 ಹೋರಾಟಗಾರರ ”ಸುಮುದ್ ಕ್ಯಾನ್ವಾಯ್” ಎಂದು ಕರೆಯಲ್ಪಡುವ ರ‍್ಯಾಲಿಯನ್ನು ಈಜಿಫ್ಟ್‌ ಅಧಿಕಾರಿಗಳು ತಡೆದಿದ್ದಾರೆ ಎಂದು ಗುರುವಾರ ವರದಿಯಾಗಿದೆ. ರ‍್ಯಾಲಿಯಲ್ಲಿ ಭಾಗವಹಿಸಲು ಆಗಮಿಸಿದ ಹಲವಾರು ವ್ಯಕ್ತಿಗಳನ್ನು ಈಜಿಪ್ಟ್ ಅಧಿಕಾರಿಗಳು ತಡೆದು ಕೈರೋ ವಿಮಾನ ನಿಲ್ದಾಣದಿಂದ ಅವರನ್ನು ಹಿಂದಿರುಗಿಸಿದ್ದು, ಆದರೆ ಈಗಾಗಲೇ ಈಜಿಪ್ಟ್ ಪ್ರದೇಶವನ್ನು ಪ್ರವೇಶಿಸಿದ್ದ ಇತರರನ್ನು ಗಡೀಪಾರು ಮಾಡಲಾಯಿತು ಎಂದು ಸ್ವತಂತ್ರ ಮಾಧ್ಯಮವಾದ ಮಾಡಾ ಮಸ್ರ್ ಹೇಳಿದೆ. ಗಾಝಾ ನೆರವಿಗೆ ಉತ್ತರ

ಪ್ಯಾಲೆಸ್ತೀನ್ ಮೇಲಿನ ಇಸ್ರೇಲ್‌ ದಿಗ್ಬಂಧನವನ್ನು ಪ್ರತಿಭಟಿಸಿ ಮತ್ತು ಪ್ಯಾಲೆಸ್ತೀನಿ ಜನರ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸುವ ಸಾಂಕೇತಿಕ ಪ್ರಯತ್ನದ ಭಾಗವಾಗಿ ಉತ್ತರ ಆಫ್ರಿಕಾದ ದೇಶಗಳಾದ ಟುನೀಶಿಯಾ, ಅಲ್ಜೀರಿಯಾ, ಮೊರಾಕೊ, ಮಾರಿಟಾನಿಯಾ ಮತ್ತು ಲಿಬಿಯಾದ ಸುಮಾರು 2,000 ಹೋರಾಟಗಾರರನ್ನು ಹೊತ್ತ ಬಸ್‌ಗಳು ಮತ್ತು ಕಾರುಗಳ ”ಸುಮುದ್ ಕ್ಯಾನ್ವಾಯ್” ಸೋಮವಾರದಂದು ಹೊರಟಿತ್ತು.

ಇಸ್ರೇಲ್ ಆಕ್ರಮಿತ ಫ್ಯಾಲೆಸ್ತೀನ್‌ನ ರಫಾ ಮತ್ತು ಗಾಝಾಗೆ ನೆರವು ತಲುಪಿಸುವಲ್ಲಿ ವಿಫಲವಾಗಿರುವುದನ್ನು ಪ್ರತಿಭಟಿಸುವ ಉದ್ದೇಶವನ್ನು ಹೊಂದಿರುವ ಉತ್ತರ ಆಫ್ರಿಕಾದ ದೇಶಗಳ ಸ್ವಯಂಸೇವಕರ ಈ ರ‍್ಯಾಲಿಗೆ ವಿಶ್ವದಾದ್ಯಂತ ಜನರ ಬೆಂಬಲ ವ್ಯಕ್ತವಾಗಿದೆ. ಇಸ್ರೇಲ್ ವಿರೋಧದ ಹೊರತಾಗಿಯೂ ರ‍್ಯಾಲಿಯು ಬುಧವಾರ ಲಿಬಿಯಾ ಪ್ರದೇಶವನ್ನು ಪ್ರವೇಶಿಸಿತು.

ಈ ಬಗ್ಗೆ ಬುಧವಾರ ಪ್ರತಿಕ್ರಿಯಿಸಿದ್ದ ಪ್ಯಾಲೆಸ್ತೀನ್ ಆಕ್ರಮಿತ ಇಸ್ರೇಲ್‌ನ ರಕ್ಷಣಾ ಸಚಿವ ಯೋವ್ ಗ್ಯಾಲಂಟ್, ರ‍್ಯಾಲಿಯು ಗಾಝಾ ತಲುಪುವುದನ್ನು ತಡೆಯುವಂತೆ ಈಜಿಪ್ಟ್ ಅಧಿಕಾರಿಗಳನ್ನು ಒತ್ತಾಯಿಸಿದ್ದು, “ಈ ಹೆಜ್ಜೆಯನ್ನು ಅನುಮತಿಸಲಾಗುವುದಿಲ್ಲ” ಎಂದು ಒತ್ತಿ ಹೇಳಿದ್ದಾರೆ.

 

View this post on Instagram

 

A post shared by PeaceBrands (@peacebrands)

ರ‍್ಯಾಲಿಯು ಜೂನ್ 12 ರೊಳಗೆ ಈಜಿಫ್ಟ್‌ನ ಕೈರೋ ತಲುಪಿ, ನಂತರ ಮರುದಿನ ಬಸ್ ಮೂಲಕ ಅಲ್-ಅರಿಶ್‌ಗೆ ಪ್ರತ್ಯೇಕ ಗುಂಪುಗಳಲ್ಲಿ ಪ್ರಯಾಣಿಸುವುದಾಗಿ ರ‍್ಯಾಲಿಯನ್ನು ಆಯೋಜಿಸಿದ್ದ ”ಗ್ಲೋಬಲ್ ಮಾರ್ಚ್ ಟು ಗಾಝಾ” ಹೇಳಿತ್ತು. ಅಲ್ಲಿಂದ ಭಾಗವಹಿಸುವವರು ರಫಾಗೆ 48 ಕಿಲೋಮೀಟರ್ ಮೆರವಣಿಗೆಯನ್ನು ಪ್ರಾರಂಭಿಸುತ್ತಾರೆ ಎಂದು ಅದು ಸೂಚಿಸಿದೆ. ಹೋರಾಟಗಾರರು ಜೂನ್ 15 ರಿಂದ 19 ರವರೆಗೆ ಸ್ವಲ್ಪ ಸಮಯ ಗಾಝಾದ ರಫಾದಲ್ಲಿ ಉಳಿದು ನಂತರ ಕೈರೋಗೆ ಹಿಂತಿರುಗಲು ಉದ್ದೇಶಿಸಿದ್ದು, ಅದಕ್ಕಾಗಿ ಈಜಿಪ್ಟ್ ಸರ್ಕಾರದಿಂದ ಅನುಮೋದನೆಗಾಗಿ ಕಾಯುತ್ತಿದ್ದಾರೆ ಎಂದು ತುರ್ಕಿಟುಡೆ ಹೇಳಿದೆ.

ಜೂನ್ 11 ರಂದು ಈಜಿಪ್ಟ್ ವಿದೇಶಾಂಗ ಸಚಿವಾಲಯವು, ಪ್ಯಾಲೆಸ್ತೀನಿ ಹಕ್ಕುಗಳನ್ನು ಬೆಂಬಲಿಸುವ ಮತ್ತು ಗಾಝಾದಲ್ಲಿ ಇಸ್ರೇಲಿ ಆಕ್ರಮಣವನ್ನು ಖಂಡಿಸುವ ಅಂತರರಾಷ್ಟ್ರೀಯ ಮತ್ತು ಪ್ರಾದೇಶಿಕ ನಿಲುವುಗಳನ್ನು ಸ್ವಾಗತಿಸುವ ಅಧಿಕೃತ ಹೇಳಿಕೆಯನ್ನು ನೀಡಿತು. ಅದಾಗ್ಯೂ, ಈಜಿಪ್ಟ್ ಸಾರ್ವಭೌಮತ್ವವನ್ನು ಗೌರವಿಸುವ ಮತ್ತು ಭದ್ರತಾ ಅವಶ್ಯಕತೆಗಳನ್ನು ಪರಿಗಣಿಸುವ ಸಂದರ್ಭದಲ್ಲಿ, ವಿಶೇಷವಾಗಿ ವಿದೇಶಿ ಸಂದರ್ಶಕರಿಗೆ, ರಫಾ ಕ್ರಾಸಿಂಗ್ ಮತ್ತು ಗಡಿ ಪ್ರದೇಶಕ್ಕೆ ಭೇಟಿ ನೀಡಲು ಪೂರ್ವಾನುಮೋದನೆಗಳನ್ನು ಪಡೆಯುವುದು ಮೂಲಭೂತ ಷರತ್ತು ಎಂದು ಹೇಳಿಕೆ ಒತ್ತಿಹೇಳಿತ್ತು.

ಹೇಳಿಕೆ ಬಿಡುಗಡೆಯಾದ ಸ್ವಲ್ಪ ಸಮಯದ ನಂತರ, ಈಜಿಪ್ಟ್ ಅಧಿಕಾರಿಗಳು ”ಸುಮುದ್ ಕ್ಯಾನ್ವಾಯ್”ನಲ್ಲಿ ಭಾಗವಹಿಸುವ ಹಲವಾರು ಹೋರಾಟಗಾರರನ್ನು ಗಡೀಪಾರು ಮಾಡಲು ಪ್ರಾರಂಭಿಸಿದ್ದಾರೆ ಎಂಬ ವರದಿಗಳು ಹೊರಬಿದ್ದಿವೆ. ದೇಶವನ್ನು ಪ್ರವೇಶಿಸಲು ಅಗತ್ಯ ದಾಖಲೆಗಳು ಮತ್ತು ಅಧಿಕೃತ ಪರವಾನಗಿಗಳ ಕೊರತೆಯ ಕಾರಣಕ್ಕೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಈಜಿಫ್ಟ್‌ ಸರ್ಕಾರ ತನ್ನನ್ನು ಸಮರ್ಥಿಸಿಕೊಂಡಿದೆ.

ರ‍್ಯಾಲಿಯಲ್ಲಿ ಭಾಗವಹಿಸುವವರು ಈಜಿಪ್ಟ್‌ಗೆ ಬರದಂತೆ ತಡೆಯಲು ಸಂಬಂಧಪಟ್ಟ ದೇಶಗಳಲ್ಲಿನ ಸಂಬಂಧಿತ ಅಧಿಕಾರಿಗಳೊಂದಿಗೆ ಸಂವಹನ ನಡೆಸಲು ಸರ್ಕಾರ ಪ್ರಯತ್ನಿಸಿದೆ ಎಂದು ಸರ್ಕಾರಿ ಮೂಲವೊಂದನ್ನು ಉಲ್ಲೇಖಿಸಿ ಮಡಾ ಮಾಸ್ರ್‌ ವರದಿ ಮಾಡಿದೆ. ಸಾರ್ವಭೌಮತ್ವ ಮತ್ತು ಭದ್ರತಾ ಕಾರಣಗಳಿಂದಾಗಿ ಅವರಲ್ಲಿ ಯಾರಿಗೂ ರಫಾಗೆ ಹೋಗಲು ಅವಕಾಶವಿರುವುದಿಲ್ಲ ಎಂದು ಮೂಲವು ಹೇಳಿದೆ. ಈಜಿಫ್ಟ್ ವಿದೇಶಾಂಗ ಸಚಿವಾಲಯದ ಹೇಳಿಕೆಗೆ ಮುಂಚೆಯೇ, ಕೈರೋ ವಿಮಾನ ನಿಲ್ದಾಣದ ಅಧಿಕಾರಿಗಳು ಸಂಭಾವ್ಯ ಭಾಗವಹಿಸುವವರಲ್ಲಿ ಕೆಲವರನ್ನು ಬಂಧಿಸಿ ಹಿಂದಿರುಗಿಸಲು ಪ್ರಾರಂಭಿಸಿದ್ದರು, ಆದರೆ ಈಗಾಗಲೇ ದೇಶದೊಳಗೆ ಇದ್ದ ಇತರರನ್ನು ಗಡೀಪಾರು ಮಾಡಲಾಯಿತು ಎಂದು ವರದಿ ಹೇಳಿದೆ.

ಈಜಿಪ್ಟ್ ಭದ್ರತಾ ಪಡೆಗಳು ಗುರುವಾರ ಬೆಳಿಗ್ಗೆಯಿಂದ ಕೈರೋ ವಿಮಾನ ನಿಲ್ದಾಣದಲ್ಲಿ ಮೂವರು ವಕೀಲರು ಸೇರಿದಂತೆ 40 ಅಲ್ಜೀರಿಯಾದ ನಾಗರಿಕರನ್ನು ಬಂಧಿಸಿವೆ ಎಂದು ಅಲ್ಜೀರಿಯಾದ ವಕೀಲರಾದ ಫಾತಿಹಾ ರೂಯಿಬಿ ಆರೋಪಿಸಿದ್ದಾರೆ. ಅದೇ ರೀತಿ, ಮೊರೊಕ್ಕೊದ ಹತ್ತುಕ್ಕೂ ಹೆಚ್ಚು ಹೋರಾಟಗಾರರನ್ನು ಗಡೀಪಾರು ಮಾಡಿದ್ದಾರೆ ಎಂದು ವರದಿಯಾಗಿದ್ದು, ಜೊತೆಗೆ ಹಲವಾರು ಟರ್ಕಿಶ್ ನಾಗರಿಕರನ್ನು ಗಡೀಪಾರು ಮಾಡಲಾಗಿದೆ ಎಂದು ಅದು ತಿಳಿಸಿದೆ.

ಈಜಿಪ್ಟ್ ಸಾರ್ವಭೌಮತ್ವಕ್ಕೆ ಗೌರವ: ಪುನರುಚ್ಚರಿಸಿದ ಸಂಘಟಕರು

ಈ ನಡುವೆ ಗುರುವಾರದ ಪತ್ರಿಕಾಗೋಷ್ಠಿಯಲ್ಲಿ, 35 ಕ್ಕೂ ಹೆಚ್ಚು ದೇಶಗಳಿಂದ ಸುಮಾರು 4,000 ಹೋರಾಟಗಾರರನ್ನು ಕಾಲ್ನಡಿಗೆಯಲ್ಲಿ ರಫಾ ಕ್ರಾಸಿಂಗ್‌ಗೆ ಕರೆತರುವುದು, ಗಾಝಾದ ಮೇಲಿನ ಯುದ್ಧವನ್ನು ಕೊನೆಗೊಳಿಸಬೇಕೆಂದು ಒತ್ತಾಯಿಸುವುದು ಮತ್ತು ಸಾವಿರಾರು ನೆರವು ಟ್ರಕ್‌ಗಳಿಗೆ ಪ್ರವೇಶವನ್ನು ಅನುಮತಿಸುವುದು ತಮ್ಮ ಗುರಿಯಾಗಿದೆ ಎಂದು ಪುನರುಚ್ಚರಿಸಿದ್ದಾರೆ. ಇಸ್ರೇಲ್ ಮೇಲೆ ನಿರ್ಬಂಧಗಳನ್ನು ವಿಧಿಸಲು ತಮ್ಮ ಸರ್ಕಾರಗಳ ಮೇಲೆ ಒತ್ತಡ ಹೇರುವ ಗುರಿಯನ್ನು ಸಹ ಅವರು ಹೊಂದಿದ್ದಾರೆ.

ಸಂಘಟಕರು ಈಜಿಪ್ಟ್‌ನ ಭದ್ರತಾ ಆತಂಕಗಳನ್ನ ಗೌರವಿಸುವುದಾಗಿ ಹೇಳಿದ್ದು, ತಮ್ಮ ಮೆರವಣಿಗೆಯು ಈಜಿಪ್ಟ್‌ಗೆ ಯಾವುದೇ ಬೆದರಿಕೆಯನ್ನುಂಟುಮಾಡುವುದಿಲ್ಲ ಮತ್ತು ಕದನ ವಿರಾಮಕ್ಕಾಗಿ ಈಜಿಫ್ಟ್‌ನ ನಿಲುವಿಗೆ ತಮ್ಮ ಪ್ರಯತ್ನಗಳು ಹೊಂದಿಕೆಯಾಗುತ್ತದೆ ಎಂದು ಸ್ಪಷ್ಟಪಡಿಸುವ ಅಧಿಕೃತ ಪತ್ರಗಳನ್ನು ಈಜಿಪ್ಟ್ ಸರ್ಕಾರಕ್ಕೆ ಕಳುಹಿಸಿದ್ದೇವೆ ಎಂದು ಒತ್ತಿ ಹೇಳಿದ್ದಾರೆ. ಈಜಿಪ್ಟ್‌ನ ಆಂತರಿಕ ವಿಷಯಗಳಿಗೆ ಸಂಬಂಧಿಸಿ ಪ್ರತಿಕ್ರಿಯಿಸಿ, ಈಜಿಪ್ಟ್ ನಿಯೋಗಗಳನ್ನು ಮೆರವಣಿಗೆಯಿಂದ ಹೊರಗಿಡುವ ತಮ್ಮ ಬದ್ಧತೆಯನ್ನು ಅವರು ಒತ್ತಿ ಹೇಳಿದ್ದಾರೆ.

ಪಶ್ಚಿಮ ದೇಶಗಳ ಈ ಸುಮುದ್ ಕ್ಯಾನ್ವಾಯ್ ಸೋಮವಾರ ಟುನೀಶಿಯಾದ ರಾಜಧಾನಿಯಿಂದ ತನ್ನ ಪ್ರಯಾಣವನ್ನು ಪ್ರಾರಂಭಿಸಿತು ಮತ್ತು ಮಂಗಳವಾರದ ವೇಳೆಗೆ ಲಿಬಿಯಾದ ನಗರವಾದ ಜಾವಿಯಾವನ್ನು ತಲುಪಿದೆ. ಈಜಿಫ್ಟ್‌ ಮತ್ತು ಇಸ್ರೇಲ್ ಆಕ್ರಮಿತ ಪ್ಯಾಲೆಸ್ತೀನ್‌ನ ರಫಾ ಗಡಿಯ ಮೂಲಕ ಗಾಝಾ ತಲುಪುವ ಉದ್ದೇಶದಿಂದ ಹೊರಟಿರುವ ಈ ರ‍್ಯಾಲಿ ಲಿಬಿಯಾ ಮತ್ತು ಈಜಿಪ್ಟ್ ಮೂಲಕ ಮುಂದುವರಿಯುತ್ತದೆ ಎಂದು ಸಂಘಟಕರು ಹೇಳಿದ್ದರು.

ಜೂನ್‌ ಒಂದರಂದು ಫ್ರೀಡಂ ಫ್ಲೋಟಿಲ್ಲಾ ಒಕ್ಕೂಟ ಎಂಬ ಅಂತಾರಾಷ್ಟ್ರೀಯ ಹೋರಾಟಗಾರರ ಗುಂಪೊಂದು ಇಟಲಿಯ ಸಿಸಿಲಿಯ ಬಂದರಿನಿಂದ ಮೆಡಿಟರೇನಿಯನ್ ಸಮುದ್ರದಲ್ಲಿ ಗಾಝಾಕ್ಕೆ ಹಡಗಿನ ಮೂಲಕ ಹೊರಟಿತ್ತು. ಸುಮಾರು ಎಂಟು ದಿನಗಳ ಪ್ರಯಾಣದಲ್ಲಿ ಗಾಝಾ ತೀರಕ್ಕೆ 150 ಕಿ.ಮಿ. ದೂರದಲ್ಲಿ ಅಂತಾರಾಷ್ಟ್ರೀಯ ಜಲ ಪ್ರದೇಶದಲ್ಲಿ ಇರುವಾಗ ಇಸ್ರೇಲ್ ಹಡಗು ಮತ್ತು ಅದರಲ್ಲಿದ್ದ ಹೋರಾಟಗಾರರನ್ನು ಅಪಹರಣ ಮಾಡಿ, ಇಸ್ರೇಲ್‌ಗೆ ಕೊಂಡೊಯ್ದು ಗಡಿಪಾರು ಮಾಡಿತ್ತು.

ಗಾಝಾದ ಆರೋಗ್ಯ ಸಚಿವಾಲಯದ ಪ್ರಕಾರ, ಗಾಝಾದ ಮೇಲೆ ಇಸ್ರೇಲ್ ನಡೆಸುತ್ತಿರುವ ಹತ್ಯಾಕಾಂಡದಲ್ಲಿ ಕನಿಷ್ಠ 54,927 ಪ್ಯಾಲೆಸ್ತೀನಿಯರು ಸಾವನ್ನಪ್ಪಿದ್ದಾರೆ ಮತ್ತು 126,615 ಜನರು ಗಾಯಗೊಂಡಿದ್ದಾರೆ. ಅಕ್ಟೋಬರ್ 7, 2023 ರಂದು ಹಮಾಸ್ ನೇತೃತ್ವದ ದಾಳಿಯ ಸಮಯದಲ್ಲಿ ಇಸ್ರೇಲ್‌ನಲ್ಲಿ ಅಂದಾಜು 1,139 ಜನರು ಸಾವನ್ನಪ್ಪಿದ್ದಾರೆ ಮತ್ತು 200 ಕ್ಕೂ ಹೆಚ್ಚು ಜನರನ್ನು ಸೆರೆಹಿಡಿಯಲಾಗಿದೆ. ಜೊತೆಗೆ ಗಾಝಾದ ಮೇಲೆ ದಿಗ್ಬಂಧನ ಹೇರಿರುವ ಇಸ್ರೇಲ್ ಕಳೆದ ಎರಡು ತಿಂಗಳಿನಿಂದ ಅಲ್ಲಿನ ಜನರಿಗೆ ಆಹಾರ, ವೈದ್ಯಕೀಯ ನೆರವುಗಳನ್ನು ನಿರಾಕರಿಸುತ್ತಿವೆ. ಸುಮಾರು 20 ಲಕ್ಷ ಜನರಿರುವ ಪ್ರದೇಶದಲ್ಲಿ ಲಕ್ಷಾಂತರ ಜನರು ಹಸಿವನ್ನು ಎದುರಿಸುತ್ತಿದ್ದಾರೆ ಎಂದು ವಿಶ್ವಸಂಸ್ಥೆ ಸೇರಿದಂತೆ ಅಂತಾರಾಷ್ಟ್ರೀಯ ಸಂಘಟನೆಗಳು ಎಚ್ಚರಿಸಿವೆ. ಗಾಝಾ ನೆರವಿಗೆ ಉತ್ತರ

ಇಲ್ಲಿ ಕ್ಲಿಕ್ ಮಾಡಿ

ಇದನ್ನೂಓದಿ:  ನೆರವು ಹೊತ್ತು ಗಾಝಾದತ್ತ ತೆರಳಿದ್ದ ‘ಮದ್ಲೀನ್’ ಹಡಗನ್ನು ವಶಕ್ಕೆ ಪಡೆದ ಇಸ್ರೇಲಿ ಪಡೆ: ಅಪಹರಿಸಲಾಗಿದೆ ಎಂದ ಹೋರಾಟಗಾರರು

ನೆರವು ಹೊತ್ತು ಗಾಝಾದತ್ತ ತೆರಳಿದ್ದ ‘ಮದ್ಲೀನ್’ ಹಡಗನ್ನು ವಶಕ್ಕೆ ಪಡೆದ ಇಸ್ರೇಲಿ ಪಡೆ: ಅಪಹರಿಸಲಾಗಿದೆ ಎಂದ ಹೋರಾಟಗಾರರು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ನಾನು ಪ್ರೀತಿ-ವಿಶ್ವಾಸಗಳಿಗೆ ತಲೆಬಾಗುವವನೇ ಹೊರತು ಒತ್ತಡ-ಪ್ರಭಾವಗಳಿಗೆ ಒಳಗಾಗುವವನಲ್ಲ’: ವಿದಾಯ ಭಾಷಣದಲ್ಲಿ ಸಿದ್ದರಾಮಯ್ಯ

ಹೈಕಮಾಂಡ್ ಯಾವಾಗ ಸೂಚಿಸುತ್ತದೆಯೋ ಆಗ ರಾಜೀನಾಮೆ ಕೊಡುತ್ತೇನೆ ಎಂದು ಹೇಳಿದ್ದ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ 2026 ಮೇ 28 ರಂದು ಹೈಕಮಾಂಡ್ ಸೂಚನೆ ಮೇರೆಗೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಈ ಮೂಲಕ...

ಪಶ್ಚಿಮ ಬಂಗಾಳ| ಬಕ್ರೀದ್‌ ಹಬ್ಬಕ್ಕೂ ಮುನ್ನ ರೈತರಿಗೆ ಸಂಕಷ್ಟ; ಜಾನುವಾರು ಮಾರುಕಟ್ಟೆಗಳು ನಿರ್ಜನ

ಈದ್ ಅಲ್-ಅಧಾ ಹಬ್ಬದ ಮುನ್ನ ಉತ್ತರ ಬಂಗಾಳದಾದ್ಯಂತ ಜಾನುವಾರು ಮಾರುಕಟ್ಟೆಗಳು ಹೆಚ್ಚಾಗಿ ನಿರ್ಜನವಾಗಿದ್ದವು. ವ್ಯಾಪಾರಿಗಳು ಮತ್ತು ರೈತರು ಜಾನುವಾರು ಮಾರಾಟದ ಮೇಲಿನ ನಿರ್ಬಂಧಗಳಿಂದಾಗಿ ವ್ಯಾಪಾರದಲ್ಲಿ ಪ್ರಮುಖ ಕುಸಿತ ಕಂಡುಬಂದಿದೆ ಎಂದು ಅವಲತ್ತುಕೊಂಡಿದ್ದಾರೆ. ಮಾಲ್ಡಾ...

ಅತ್ಯಾಚಾರ – ಮಕ್ಕಳ ಮೇಲಿನ ಸಾಮೂಹಿಕ ಲೈಂಗಿಕ ದೌರ್ಜನ್ಯ ಪ್ರಕರಣ: ಸ್ವಯಂ ಘೋಷಿತ ದೇವಮಾನವ ಅಸಾರಾಂ ಖುಲಾಸೆ

ಸ್ವಯಂ ಘೋಷಿತ ದೇವಮಾನವ ಅಸಾರಾಂ ಬಾಪು ಅವರನ್ನು ಭಾರತೀಯ ದಂಡ ಸಂಹಿತೆ, ಪೋಕ್ಸೋ ಕಾಯ್ದೆಯಡಿಯಲ್ಲಿ ಸಾಮೂಹಿಕ ಅತ್ಯಾಚಾರ ಮತ್ತು ಮಕ್ಕಳ ಮೇಲಿನ ಸಾಮೂಹಿಕ ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದ ಆರೋಪಗಳಿಂದ ಖುಲಾಸೆಗೊಳಿಸಲಾಗಿದೆ. ಮೇ 27...

ಸಿದ್ದರಾಮಯ್ಯ ಅವರ ಮನವೊಲಿಸಿದ ಕಾಂಗ್ರೆಸ್‌ ಹೈಕಮಾಂಡ್; ಮುಖ್ಯಮಂತ್ರಿ ಸ್ಥಾನಕ್ಕೆ ನಾಳೆ ರಾಜೀನಾಮೆ?

ಕರ್ನಾಟಕದ ಮುಖ್ಯಮಂತ್ರಿ ಹುದ್ದೆಯ ಸುತ್ತಲಿನ ತೀವ್ರ ರಾಜಕೀಯ ನಾಟಕವು ಅಂತಿಮವಾಗಿ ನಿರ್ಣಾಯಕ ಹಂತ ತಲುಪಿದೆ. ನವದೆಹಲಿಯಲ್ಲಿ ಕಾಂಗ್ರೆಸ್ ಹೈಕಮಾಂಡ್‌ನ ನಿರಂತರ ಒತ್ತಡ ಮತ್ತು ಮಾತುಕತೆಗಳ ನಂತರ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಲು...

“ಎಚ್.ಎಸ್. ದೊರೆಸ್ವಾಮಿ ಭೌತಿಕವಾಗಿ ಇಲ್ಲದಿದ್ದರೂ ನಮ್ಮನ್ನು ಸದಾ ಪ್ರೇರೇಪಿಸುತ್ತಾರೆ”: ತೀಸ್ತಾ ಸೆಟಲ್ವಾಡ್

ಬೆಂಗಳೂರು: "ಹಿರಿಯ ಸ್ವಾತಂತ್ರ್ಯ ಹೋರಾಟಗಾರ, ದಿ. ಎಚ್.ಎಸ್. ದೊರೆಸ್ವಾಮಿ ಅವರು ದೈಹಿಕವಾಗಿ ನಮ್ಮೊಂದಿಗಿಲ್ಲದಿದ್ದರೂ, ಅವರ ಹೋರಾಟದ ಹಾದಿ ಮತ್ತು ಆದರ್ಶಗಳು ನಮ್ಮನ್ನು ಸದಾ ಪ್ರೇರೇಪಿಸುತ್ತಲೇ ಇರುತ್ತವೆ" ಎಂದು ಪ್ರಮುಖ ಮಾನವ ಹಕ್ಕುಗಳ ಹೋರಾಟಗಾರ್ತಿ...

ಕೇರಳ | ಆದಿವಾಸಿ ಯುವಕ ಮಧು ಗುಂಪು ಹತ್ಯೆ ಪ್ರಕರಣ : 12 ಮಂದಿ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿದ ಹೈಕೋರ್ಟ್

ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದ ಕೇರಳದ ಆದಿವಾಸಿ ಯುವಕ ಮಧು ಗುಂಪು ಹಲ್ಲೆ ಮತ್ತು ಹತ್ಯೆ ಪ್ರಕರಣದ 12 ಜನ ಅಪರಾಧಿಗಳಿಗೆ ಹೈಕೋರ್ಟ್ ಸೋಮವಾರ (ಮೇ.25) ಜೀವಾವಧಿ ಶಿಕ್ಷೆ ಮತ್ತು ತಲಾ 2...

“ನನ್ನ ಅನುಮತಿ ಇಲ್ಲದೆ ನನ್ನ ಮಗುವನ್ನು ಸುಡಲಾಗಿದೆ”: ಕೊಲೆಯಾದ ಕೊಯಮತ್ತೂರು ಬಾಲಕಿಯ ತಾಯಿ ಅಳಲು

ಕೊಯಮತ್ತೂರು ಬಳಿ ಲೈಂಗಿಕ ದೌರ್ಜನ್ಯಕ್ಕೊಳಗಾಗಿ ಕೊಲೆಯಾದ 10 ವರ್ಷದ ಬಾಲಕಿಯ ತಾಯಿ, ತನ್ನ ಮಗಳ ಮೃತದೇಹದ ಅಂತ್ಯಸಂಸ್ಕಾರಕ್ಕೆ ತಾನು ಅನುಮತಿ ನೀಡಿರಲಿಲ್ಲ ಎಂದು ಹೇಳಿದ್ದಾರೆ. ಮಗುವಿನ ಮರಣೋತ್ತರ ಪರೀಕ್ಷೆಯ ನಂತರ, ತನ್ನ ಪತಿ...

ಅಷ್ಟೊಂದು ‘ಸೆಂಟಿಮೆಂಟ್’ ಬೇಡ: ‘ಕಾಕ್ರೋಚ್ ಅಭಿಯಾನ’ದ ವಿರುದ್ಧದ ಅರ್ಜಿಗೆ ಸಿಜೆಐ ಪ್ರತಿಕ್ರಿಯೆ

"ವ್ಯವಸ್ಥೆಯ ಮೇಲೆ ದಾಳಿ ಮಾಡುವವರ" ಕುರಿತು ತಾವು ನೀಡಿದ್ದ ಹೇಳಿಕೆಗೆ ವ್ಯಂಗ್ಯದ ರೂಪದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಸೃಷ್ಟಿಯಾಗಿರುವ ‘ಕಾಕ್ರೋಚ್ ಜನತಾ ಪಾರ್ಟಿ’  ವಿವಾದವನ್ನು ಅಷ್ಟೊಂದು "ಭಾವನಾತ್ಮಕವಾಗಿ ತೆಗೆದುಕೊಳ್ಳಬೇಡಿ" ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ...

ನಾಳೆ ದಿ. ಎಚ್.ಎಸ್ ದೊರೆಸ್ವಾಮಿ ಅವರಿಗೆ ‘ಕರ್ನಾಟಕದ ಗೌರವಾರ್ಪಣೆ’

ಸ್ವಾತಂತ್ರ್ಯ ಸೇನಾನಿ ದಿ. ಎಚ್.ಎಸ್ ದೊರೆಸ್ವಾಮಿ ಅವರಿಗೆ 'ಕರ್ನಾಟಕದ ಗೌರವಾರ್ಪಣೆ' ಕಾರ್ಯಕ್ರಮವನ್ನು ನಾಳೆ, ಅಂದರೆ 2026 ಮೇ 26 ರಂದು ಬೆಳಿಗ್ಗೆ 10.30ಕ್ಕೆ ಬೆಂಗಳೂರಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ಆಯೋಜಿಸಲಾಗಿದೆ. ಎಚ್.ಎಸ್‌ ದೊರೆಸ್ವಾಮಿ ಸ್ಮಾರಕ ಪ್ರತಿಷ್ಠಾನ,...

FACT CHECK : ಕಾಕ್ರೋಚ್ ಜನತಾ ಪಾರ್ಟಿಯ ಹೆಚ್ಚಿನ ಫಾಲೋವರ್ಸ್ ಪಾಕಿಸ್ತಾನದವರಾ?

ಇತ್ತೀಚೆಗೆ ಹುಟ್ಟಿಕೊಂಡ ಕಾಕ್ರೋಚ್ ಜನತಾ ಪಕ್ಷದ (ಸಿಜೆಪಿ) ಇನ್‌ಸ್ಟಾಗ್ರಾಮ್ ಪೇಜ್ ಕಾಂಗ್ರೆಸ್‌ನ 13 ಮಿಲಿಯನ್ ಮತ್ತು ಬಿಜೆಪಿಯ 9 ಮಿಲಿಯನ್ ಫಾಲೋವರ್ಸ್‌ಗಳ ಗಡಿಯನ್ನು ದಾಟಿದ್ದು, ಬರೋಬ್ಬರಿ 23 ಮಿಲಿಯನ್ (ಮೇ 24ರಂತೆ) ಫಾಲೋವರ್ಸ್‌...